ಪ್ಯಾನ್ ಇಂಡಿಯಾ ಕಬ್ಜ ಚಿತ್ರದ (Kabzaa Movie) ಹಂಗಾಮ ಶುರು ಆಗಿದೆ. ಕನ್ನಡದಲ್ಲಿ ಇದರ ಕ್ರೇಜ್ ಸಣ್ಣಗೆ ಇದ್ದೇ ಇದೆ. ತೆಲುಗುದಲ್ಲೂ ಮೊನ್ನೆಯಿಂದಲೇ ಕಬ್ಜ ಚಿತ್ರದ ಬಗ್ಗೆ ಹೊಸ ಹೋಪ್ (Tanya Hope) ಹುಟ್ಟಿಕೊಂಡಿದೆ. ಬಾಲಿವುಡ್ನಲ್ಲಿ ಆರಂಭದಿಂದಲೂ ಇದ್ದೇ ಇದೆ. 2023 ರ ಬಹು ನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ಕಬ್ಜ ಇದೆ. ಇಂತಹ ಕನ್ನಡದ ಕಬ್ಜ ಚಿತ್ರದ ಬಗ್ಗೆ ದೊಡ್ಡ ಹೋಪ್ ಇದೆ. ಈ ಚಿತ್ರದಲ್ಲಿ ಮಲ್ಟಿ ಸ್ಟಾರ್ ಇರೋದು ವಿಶೇಷ. ಕಿಚ್ಚ ಸುದೀಪ್ ಪೊಲೀಸ್ ಆಫೀಸರ್ (Police Officer Sudeepa) ಆಗಿಯೇ ಬರ್ತಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ಇಲ್ಲಿ ರಿಯಲ್ ಭಾಯ್ ಆಗಿ ಕಂಗೊಳಿಸುತ್ತಿದ್ದಾರೆ. ಇವರ ಆಗಮನಕ್ಕೆ ಕೆಜಿಎಫ್ ಸಂಗೀತ ನಿರ್ದೇಶಕ ರವಿ ಬಸ್ರೂರು ಸಂಗೀತ (Ravi Basrur) ಚಿತ್ರದ ಗತ್ತು ಬದಲಿಸಿದೆ.
ಇದೇ ಚಿತ್ರದ ಇನ್ನೂ ಒಂದು ಮ್ಯಾಟರ್ ಈಗ ಹೊರ ಬಿದ್ದಿದೆ. ಸದ್ಯ ಅದೇ ಸುದ್ದಿ ಎಲ್ಲಾ ಕಡೆ ಇದೆ.
ಕಬ್ಜ ಚಿತ್ರದ ಹೊಸ ಅಪ್ಡೇಟ್ಸ್ ಏನು ಗೊತ್ತೇ?
ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಕಬ್ಜ ಚಿತ್ರದ ಹೊಸ ಹೊಸ ಸುದ್ದಿ ಹೊರ ಬೀಳುತ್ತಿವೆ. ಚಿತ್ರದ ಮೊದಲ ಹಾಡು ರಿಲೀಸ್ ಆಗೋ ಮುನ್ನ ಬೇರೆ ಏನೂ ವಿಷಯವೇ ಇರಲಿಲ್ಲ. ಆದರೆ ಚಿತ್ರದ ಮೊದಲ ಲಿರಿಕಲ್ ವಿಡಿಯೋ ರಿಲೀಸ್ ಆದ್ಮೇಲೆ ಕಬ್ಜ ಚಿತ್ರದ ಕ್ರೇಜ್ ಚೇಂಜ್ ಆಗಿದೆ.
ಕಬ್ಜ ಚಿತ್ರದಲ್ಲಿ ಹತ್ತು ಹಲವು ವಿಶೇಷತೆಗಳಿವೆ. ಅವುಗಳಲ್ಲಿ ಕಿಚ್ಚ ಸುದೀಪ್ ಮತ್ತು ರಿಯಲ್ ಸ್ಟಾರ್ ಉಪೇಂದ್ರ ಒಟ್ಟಿಗೆ ಮತ್ತೊಮ್ಮೆ ಬರ್ತಿರೋದು ಒಂದಾಗಿದೆ. ಹಾಡುಗಳಲ್ಲೂ ರವಿ ಬಸ್ರೂರು ಅವರೇ ಮಾಡ್ತಿದ್ದಾರೆ ಅನ್ನೋದು ಈ ಚಿತ್ರದ ಬೇಸಿಕ್ ಮಾಹಿತಿ ಆಗಿದೆ.
ಕಬ್ಜ ಚಿತ್ರದಲ್ಲಿ ಹೊಸ ಹೋಪ್ ಹೊಸ ಕ್ರೇಜ್
ಪ್ಯಾನ್ ಇಂಡಿಯಾ ಕಬ್ಜ ಚಿತ್ರದಲ್ಲಿ ಒಳ್ಳೆ ಹಾಡುಗಳೇ ಇವೆಯೇ? ಹೌದು ಒಳ್ಳೆ ಸಂಗೀತವೇ ಇದೆ ಎಂಬುದನ್ನ ಚಿತ್ರದ ಟೀಸರ್ ಕೂಡ ಹೇಳಿದೆ. ಮೊನ್ನೆ ಹೈದ್ರಾಬಾದ್ನಲ್ಲಿ ರಿಲೀಸ್ ಆದ ಲಿರಿಕಲ್ ವಿಡಿಯೋ ಕೂಡ ಇದನ್ನೆ ಹೇಳುತ್ತದೆ.
ಚಿತ್ರದ ಈ ಹಾಡು ಉಪ್ಪಿ ಪಾತ್ರದ ಖದರ್ ಕಟ್ಟಿಕೊಟ್ಟಿದೆ. ಸಂಗೀತದ ಜೊತೆಗೆ ಲಿರಿಕ್ಸ್ ಕೂಡ ರವಿ ಬಸ್ರೂರು ಬರೆದುಕೊಟ್ಟಿದ್ದಾರೆ. ಅದೇ ಹಾಡು ಈಗ ಎಲ್ಲೆಡೆ ಹಂಗಾಮ ಮಾಡುತ್ತಿದೆ. ಆದರೆ ನಾವು ಹೇಳ್ತಿರೋದು ಈ ವಿಷಯದ ಬಗ್ಗೆ ಅಲ್ಲವೇ ಅಲ್ಲ. ಇದು ಬ್ಯಾರೇನೆ ಐತಿ.
ಕಬ್ಜ ಚಿತ್ರದಲ್ಲಿ ತಾನ್ಯ ಹೋಪ್ ಇದು ನಿಮಗೆ ಗೊತ್ತೇ?
ಕಬ್ಜ ಸಿನಿಮಾದ ಒಂದೊಂದೆ ವಿಷಯ ರಿವೀಲ್ ಆಗುತ್ತಿದೆ. ಚಿತ್ರದ ಪ್ರಚಾರ ಆರಂಭವಾಗಿದ್ದೇ ತಡ, ಸಿನಿಮಾ ತಂಡ ಅಧಿಕೃತವಾಗಿ ಒಂದೊಂದೇ ವಿಷಯಗಳನ್ನ ಬಿಟ್ಟುಕೊಟ್ಟಿದೆ.
ಚಿತ್ರದ ಬಗ್ಗೆ ಈಗ ಇನ್ನೂ ಒಂದು ವಿಶೇಷ ವಿಷಯ ಕೂಡ ಕೇಳಿ ಬರುತ್ತಿದ್ದು ಅಮರ್ ಸಿನಿಮಾದ ಮೂಲಕ ಕನ್ನಡಗರ ಹೃದಯದಲ್ಲಿ ಹೊಸ ಜಾಗ ಮಾಡಿಕೊಂಡ ನಟಿ ತಾನ್ಯ ಹೋಪ್ ಪ್ಯಾನ್ ಇಂಡಿಯಾ ಕಬ್ಜ ಚಿತ್ರದಲ್ಲೂ ಅಭಿನಯಿಸುತ್ತಿದ್ದಾರೆ ಅನ್ನೋದೇ ಈಗೀನ ಹೊಸ ಮ್ಯಾಟರ್ ಆಗಿದೆ.
ಕಬ್ಜ ಚಿತ್ರದ ಸ್ಪೆಷಲ್ ಸಾಂಗ್ಲ್ಲಿ ಅಮರ್ ಬೆಡಗಿ ತಾನ್ಯ!
ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಕಬ್ಜ ಸಿನಿಮಾದಲ್ಲಿ ಒಂದು ವಿಶೇಷ ಸಾಂಗ್ ಪ್ಲಾನ್ ಮಾಡಲಾಗಿದೆ. ಚಿತ್ರದ ಈ ಒಂದು ಹಾಡನ್ನ ನಾಲ್ಕೈದು ದಿನ ಚಿತ್ರೀಕರಿಸೊ ಯೋಚನೆ ಕೂಡ ಇದೆ. ಕ್ಯಾಮೆರಾಮನ್ ಎ.ಜೆ.ಶೆಟ್ಟಿ ಈ ಹಾಡನ್ನ ಹೇಗೆಲ್ಲ ಚಿತ್ರೀಕರಿಸಬೇಕು ಅಂತಲೂ ಪ್ಲಾನ್ ಮಾಡುತ್ತಿದ್ದಾರೆ.
ಇನ್ನು ಈ ಹಾಡನ್ನ ಮುಂಬರೋ ವಾರದಲ್ಲಿ ಶೂಟ್ ಮಾಡಬೇಕು ಅನ್ನೋದು ಚಿತ್ರ ತಂಡದ ಪ್ಲಾನ್ ಆಗಿದೆ. ಈ ಬಗ್ಗೆ ಸದ್ಯಕ್ಕೆ ಎಲ್ಲೆಡೆ ಮಾಹಿತಿ ಹರಿದಾಡುತ್ತಿದೆ. ಆದರೆ ಇಲ್ಲಿವರೆಗೂ ಸಿನಿಮಾದ ಯಾರೊಬ್ಬರು ಅಧಿಕೃತ ಮಾಹಿತಿಯನ್ನ ಕೊಟ್ಟಿಲ್ಲ. ಇನ್ನುಳಿದಂತೆ ಈ ಚಿತ್ರದಲ್ಲಿ ಸುದೀಪ್ ಪಾತ್ರವೂ ವಿಶೇಷವಾಗಿಯೇ ಇದೆ.
ರಿಯಲ್ ಸ್ಟಾರ್ ಜೊತೆಗೆ ಅಮರ್ ಬೆಡಗಿ ತಾನ್ಯ
ಕಬ್ಜ ಚಿತ್ರದ ವಿಶೇಷ ಹಾಡಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಇರ್ತಾರೆ. ಇವರ ಜೋಡಿಯಾಗಿಯೇ ಈ ಒಂದು ಹಾಡಲ್ಲಿ ತಾನ್ಯ ಹೋಪ್ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ತಾನ್ಯ ಹೋಪ್ ಯಾವ ರೀತಿ ಕಾಣಿಸಿಕೊಳ್ಳಲಿದ್ದಾರೆ ಅನ್ನೋದೇ ಈಗೀನ ಕುತೂಹಲವಾಗಿದೆ.
ಇದನ್ನೂ ಓದಿ: Kabzaa Movie: ಕಬ್ಜ ಸಿನಿಮಾ KGF ಕಾಪಿನಾ? ಏನಂತಾರೆ ನಿರ್ದೇಶಕ ಆರ್.ಚಂದ್ರು?
ಕೆಜಿಎಫ್ ಚಿತ್ರದಲ್ಲೂ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಸ್ಪೆಷಲ್ ಹಾಡಿನಲ್ಲಿ ಕಾಣಿಸಿಕೊಂಡಿದ್ದರು. ಇದರಲ್ಲೂ ಅಂತಹದ್ದೇ ಒಂದು ಸ್ಪೆಷಲ್ ಸಾಂಗ್ ಇರುತ್ತದೆಯೇ ಅನ್ನೋ ಕುತೂಹಲ ಈಗ ಮೂಡಿದೆ. ಹಾಗೇನೆ ಇದು ಚಿತ್ರದ ಪ್ರಮೋಷನ್ ಸಾಂಗ್ ಕೂಡ ಆಗಿರಬಹುದು ಅಂತಲೂ ಅಂದಾಜು ಮಾಡಬಹುದೇನೋ ಗೊತ್ತಿಲ್ಲ. ಆದರೆ ಈ ಸುದ್ದಿ ಮಾತ್ರ ಸಖತ್ ಸದ್ದು ಮಾಡುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ