ರಿಯಲ್ ಸ್ಟಾರ್ ಉಪೇಂದ್ರ (Real Star Upendra) ಅಭಿನಯದ ಕಬ್ಜ ಕ್ರೇಜ್ ದಿನೇ ದಿನೇ ಮುಗಿಲು ಮುಟ್ಟುತ್ತಿದೆ. ಚಿತ್ರದ ಪ್ರತಿ ವಿಷಯವೂ ಈಗ ಕ್ರೇಜಿ ಆಗಿವೆ. ಶಿಡ್ಲಘಟ್ಟದಲ್ಲಿ ನಡೆದ (Kabzaa Movie) ಆಡಿಯೋ ರಿಲೀಸ್ ಕೂಡ ಅದ್ದೂರಿ ಆಗಿಯೇ ಇತ್ತು. ಚೆನ್ನೈನಲ್ಲಿ ನಡೆದ ಸಾಂಗ್ ರಿಲೀಸ್ ಸಹ ವಿಶೇಷವಾಗಿಯೇ ಇತ್ತು. ಪ್ಯಾನ್ ಇಂಡಿಯಾ (Pan India Cinema) ಸಿನಿಮಾ ಆಗಿರೋದ್ರಿಂದಲೇ ಡೈರೆಕ್ಟರ್ ಆರ್. ಚಂದ್ರು ಪಕ್ಕಾ ಪ್ಲಾನ್ ಮಾಡಿಕೊಂಡೇ ತಮ್ಮ ಚಿತ್ರದ ಕಂಟೆಂಟ್ಗಳನ್ನ ಪ್ರಮೋಟ್ ಮಾಡುತ್ತಿದ್ದಾರೆ. ಹೈದರಾಬಾದ್, ಚೆನ್ನೈ ಮತ್ತು ತಮ್ಮೂರು ಶಿಡ್ಲಘಟದಲ್ಲಿ ಅಷ್ಟೂ ಹಾಡುಗಳನ್ನ ರಿಲೀಸ್ ಮಾಡಿದ್ದಾರೆ. ಆದರೆ (Bollywood Movie) ಬಾಲಿವುಡ್ನ ವಿಷಯ ಏನೂ ಅನ್ನೋರಿಗೆ ಒಂದಷ್ಟು ಮಾಹಿತಿ ಇಲ್ಲಿದೆ ಓದಿ.
ಕನ್ನಡದ ಕಬ್ಜ ಖದರ್ ಊರೆಲ್ಲ ಖಬರ್!
ಕಬ್ಜ ಸಿನಿಮಾದ ಅದ್ದೂರಿತನ ಕೇವಲ ಪ್ರಚಾರದಲ್ಲಿದೆ ಅನ್ಕೋಬೇಡಿ. ಆರ್. ಚಂದ್ರು ಒಳ್ಳೆ ಕಥೆ ಮೂಲಕ ಪ್ಯಾನ್ ಇಂಡಿಯಾಗೆ ಕಾಲಿಡುತ್ತಿದ್ದಾರೆ. ಸುಮ್ನೆ ಏನೂ ಇಲ್ಲದೇ ಯಾರಾದರೂ ಚಿತ್ರವನ್ನ ವಿತರಿಸೋಕೆ ಸಾಧ್ಯವೇ ಇಲ್ಲ ಬಿಡಿ.
ಸಿನಿಮಾ ಮಂದಿಯ ಲೆಕ್ಕಾಚಾರದ ದೊಡ್ಡಮಟ್ಟದಲ್ಲಿಯೇ ಇರುತ್ತದೆ. ಸಿನಿಮಾಗೆ ಕೋಟಿ ಕೋಟಿ ದುಡ್ಡು ಹಾಕ್ತಿದ್ದೇವೆ ಅಂದ್ರೆ, ಹೀರೋ ಯಾರು? ಚಿತ್ರದಲ್ಲಿ ಕಂಟೆಂಟ್ ಮಾಸಾ? ಕ್ಲಾಸಾ? ಹೀಗೆ ಎಲ್ಲವನ್ನೂ ಅಳೆದು ತೂಗಿ ಸಿನಿಮಾ ತೆಗೆದುಕೊಳ್ತಾರೆ.
ಕಬ್ಜ ಚಿತ್ರದ ಕನಸು ಕಂಡ ಚಂದ್ರುಗೆ ಸಾಥ್ ಕೊಟ್ಟವರಾರು?
ಕಬ್ಜ ಚಿತ್ರ ಈ ವಿಷಯದಲ್ಲಿ ಈಗಾಗಲೇ ಪಾಸ್ ಆಗಿದೆ. ಡೈರೆಕ್ಟರ್ ಆರ್. ಚಂದ್ರು ಶ್ರಮದ ಫಲ ಈಗ ಎಲ್ಲೆಡೆ ಪ್ರಚಾರ ಪಡೆಯುತ್ತಿದೆ. ಸಂಗೀತ ನಿರ್ದೇಶಕ ರವಿ ಬಸ್ರೂರು ಮತ್ತು ಕಲಾ ನಿರ್ದೇಶಕ ಶಿವಕುಮಾರ್ ಅವರ ಕೆಲಸ ಇಲ್ಲಿ ಹೆಚ್ಚು ಮೆಚ್ಚುಗೆ ಪಡೆದಿದೆ.
ರಿಯಲ್ ಸ್ಟಾರ್ ಉಪೇಂದ್ರ ಈ ಬಗ್ಗೆ ಮೊನ್ನೆ ಶೀಡ್ಲಘಟ್ಟದಲ್ಲಿ ನಡೆದ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಈ ವಿಷಯವನ್ನ ಹೇಳಿಕೊಂಡಿದ್ದಾರೆ.
ಕಬ್ಜ ಟೀಸರ್ ಒಂದು ಲೆಕ್ಕ-ಟ್ರೈಲರ್ ಬೇರೆನೆ ಒಂದು ಲೆಕ್ಕ!
ಕಬ್ಜ ಸಿನಿಮಾ ಒಂದು ರೀತಿಯಲ್ಲಿ ಬೇರೆ ಲೆವಲ್ನ ಸಿನಿಮಾ ಅನ್ನುವ ಅಭಿಪ್ರಾಯವನ್ನ ಹಾಡುಗಳು ಈಗಾಗಲೇ ಮೂಡಿಸಿವೆ. ರಿಯಲ್ ಸ್ಟಾರ್ ಉಪ್ಪಿಯ ಜನ್ಮ ದಿನಕ್ಕೆ ಬಿಟ್ಟಿದ್ದ ಟೀಸರ್ ಅಷ್ಟೇನೂ ಒಳ್ಳೆ ಅಭಿಪ್ರಾಯ ಪಡೆದಿರಲಿಲ್ಲ.
ಇದಾದ್ಮೇಲೆ ಆರ್. ಚಂದ್ರು ತಮ್ಮ ಈ ಚಿತ್ರದ ಟ್ರೈಲರ್ ರಿಲೀಸ್ಗೆ ಪಕ್ಕಾ ಪ್ಲಾನ್ ಮಾಡಿಕೊಂಡಿದ್ದಾರೆ. ಈ ಟ್ರೈಲರ್ ರಿಲೀಸ್ಗೆ ಮುಂಬೈ ನಗರಿಯನ್ನ ಸೆಲೆಕ್ಟ್ ಮಾಡಿಕೊಂಡಿದ್ದಾರೆ.
ಮುಂಬೈ ನಗರಿಯಲ್ಲಿ ಕಬ್ಜ ಚಿತ್ರದ ದೊಡ್ಡ ಹವಾ
ಈ ಮೊದಲೇ ಹೇಳಿದಂತೆ, ಹೈದ್ರಾಬಾದ್, ಚೆನ್ನೈ, ತವರೂರು ಶೀಡ್ಲಘಟ್ಟ ಈಗ ಮುಂಬೈಯಲ್ಲಿ ಒಂದು ಪಕ್ಕಾ ಪ್ಲಾನ್ ಮಾಡಿಕೊಂಡಿದ್ದಾರೆ. ಈ ಒಂದು ಪ್ರಚಾರದ ಕೆಲಸಕ್ಕೆ ದಿನವೂ ಫಿಕ್ಸ್ ಆಗಿದೆ.
ಇದನ್ನೂ ಓದಿ: Vijay Movie Leo: ದಳಪತಿ ವಿಜಯ್ಗೆ ಭರ್ಜರಿ ಡಿಮ್ಯಾಂಡ್; ಶೂಟಿಂಗ್ ಮುಗಿಸೋ ಮುನ್ನವೇ 400 ಕೋಟಿ ಕಲೆಕ್ಷನ್ ಮಾಡಿದ ಲಿಯೋ!
ಮಾರ್ಚ್-02 ರಂದು ಮುಂಬೈಯಲ್ಲಿ ಕಬ್ಜ ಚಿತ್ರದ ಟ್ರೈಲರ್ ರಿಲೀಸ್ ಆಗುತ್ತಿದೆ. ವಿಶೇಷವಾಗಿ ಈ ಒಂದು ಪ್ರಚಾರದಲ್ಲಿ ಕಬ್ಜ ಚಿತ್ರದ ಇಡೀ ಸ್ಟಾರ್ ಕ್ಯಾಸ್ಟ್ ಹಾಜರಾಗಿರುತ್ತದೆ.
ದೊಡ್ಡಮಟ್ಟದಲ್ಲಿ ಕಬ್ಜ ಟ್ರೈಲರ್ ರಿಲೀಸ್
ನಿರ್ಮಾಪಕ-ನಿರ್ದೇಶಕ ಆರ್. ಚಂದ್ರು ಹಾಗೂ ಮುಂಬೈ ಚಿತ್ರ ವಿತರಣಾ ಸಂಸ್ಥೆ ಜಂಟಿಯಾಗಿಯೇ ಈ ಒಂದು ದೊಡ್ಡ ಇವೆಂಟ್ ಪ್ಲಾನ್ ಮಾಡಿದೆ. ಮಾರ್ಚ್-17ರ ಮುಂಚೆ ಏನೆಲ್ಲ ಸಾಧ್ಯವೋ ಎಲ್ಲ ರೀತಿಯ ಇವೆಂಟ್ಗಳನ್ನ ಪ್ರಚಾರದ ಕೆಲಸಗಳನ್ನ ಆರ್.ಚಂದ್ರು ಮಾಡುತ್ತಿದ್ದಾರೆ.
ಪವರ್ ಸ್ಟಾರ್ ಪುನೀತ ಜನ್ಮ ದಿನ ಮಾರ್ಚ್-17 ರಂದು ತಮ್ಮ ಈ ಚಿತ್ರವನ್ನ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಮಾಡುತ್ತಿದ್ದಾರೆ. ಕನ್ನಡದ ಕಬ್ಜ ಮತ್ತೊಂದು ಭರವಸೆಯ ಸಿನಿಮಾ ಆಗಿದೆ. ಕಾಂತಾರದ ಬಳಿಕ ಕಬ್ಜ, ಮಾರ್ಟಿನ್ ಸಿನಿಮಾಗಳು ಹೊಸ ಭರವಸೆಯನ್ನ ಮೂಡಿಸಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ