Kabzaa Song: ರಿಯಲ್ ಸ್ಟಾರ್​ಗೆ ರಾಯಲ್ ಪ್ರೇಯಸಿ-ಶ್ರಿಯಾ ಶರಣ್​ ನೃತ್ಯ

ನಮಾಮಿ ಹಾಡಿನಲ್ಲಿ ನಟರಾಜನ ಆರಾಧನೆ ವೈಭವ

ನಮಾಮಿ ಹಾಡಿನಲ್ಲಿ ನಟರಾಜನ ಆರಾಧನೆ ವೈಭವ

ರೆಟ್ರೋ ಕಾಲದಲ್ಲಿ ರಾಜಮನೆತನದ ಮನೆಗಳು ಹಿಂಗೆ ಇರುತ್ತಿದ್ದವು ಅನ್ನೋದನ್ನ ಕೂಡ ನಾವು ಗೆಸ್ ಮಾಡಬಹುದೇನೋ. ಆದರೆ ಇಲ್ಲಿ ನಟರಾಜನ ಆರಾಧನೆಯೂ ಇದೆ.

  • News18 Kannada
  • 3-MIN READ
  • Last Updated :
  • Bangalore [Bangalore], India
  • Share this:

ಸ್ಯಾಂಡಲ್​ವುಡ್​ ಕಬ್ಜ ಚಿತ್ರದ ಸಂಗೀತ (Ravi Basrur Music Direction) ನಿರ್ದೇಶಕ ರವಿ ಬಸ್ರೂರು ಹೊಸ ಭರವಸೆ ಮೂಡಿಸಿದ್ದಾರೆ. ಕಬ್ಜ ಚಿತ್ರದ ಹಾಡುಗಳನ್ನ ಕೆಜಿಎಫ್ (Kabzaa Movie) ಚಿತ್ರಕ್ಕೆ ಹೋಲಿಸೋರಿಗೆ ಸರಿಯಾದ ಉತ್ತರ ಕೊಟ್ಟಂತಿರೋ ನಮಾಮಿ ಹಾಡಿನ ಬೇರೆ ಲೆವಲ್​​ಗೆ ಇದೆ. ಇಲ್ಲಿವರೆಗೂ ಒಂದು ಲೆಕ್ಕ ಈಗ ಇನ್ನೂ ಒಂದು ಲೆಕ್ಕ ಅನ್ನುವ ಹಾಗೆ ಚಿತ್ರದ ಈ ಒಂದು ಗೀತೆ ಇದೆ. ಬಹು ಭಾಷಾ (Shriya Saran) ನಟಿ ಶ್ರೀಯಾ ಶರಣ್ ಅಭಿನಯದ ಒಂದು ಝಲಕ್ ಈ ಗೀತೆಯಲ್ಲಿ ನಿಮಗೆ ಸಿಗುತ್ತದೆ. ಭೂಗತ ಜಗತ್ತಿನ ಕಥೆಯಲ್ಲಿ ಈ ಒಂದು ಪಾತ್ರ ಬೇರೆ ರೀತಿ ಇದೆ. ಇದರ ರೂಪವೇ ಬೇರೆ ಅನ್ನೋದರ ಸಣ್ಣ (Namaami Song Release) ಚಿತ್ರಣ ನಿಮಗೆ ಸಿಗುತ್ತದೆ.


ರವಿ ಬಸ್ರೂರು ಹಾಡಿಗೆ ಕಿನ್ನಾಳ್ ರಾಜ್ ಸಾಹಿತ್ಯ


ಡೈರೆಕ್ಟರ್ ರವಿ ಬಸ್ರೂರು ಚಿತ್ರದ ಈ ಒಂದು ವಿಶೇಷ ಹಾಡಿಗೆ ಬೇರೆ ರೀತಿಯ ಸಂಗೀತ ಮಾಡಿದ್ದಾರೆ. ಕೆಜಿಎಫ್ ಹ್ಯಾಂಗೋವರ್​ನಲ್ಲಿದ್ದೋರಿಗೆ ರವಿ ಬಸ್ರೂರು ಇಲ್ಲಿ ಬೇರೆ ಫೀಲ್ ಕೊಟ್ಟಿದ್ದಾರೆ.


Kannada Kabzaa Movie Namaami Song Create New Buzz
ಶ್ರೀಮಂತ ಸೆಟ್​​ಲ್ಲಿ ನಮಾಮಿ ಹಾಡಿನ ವೈಭವ


ಕೆಜಿಎಫ್​​ ಚಿತ್ರದಲ್ಲಿ ಅಮ್ಮನ ಹಾಡು ಬರೆದಿದ್ದ ಅದೇ ಕಿನ್ನಾಳ್ ರಾಜ್ ಈ ಒಂದು ನಮಾಮಿ ಹಾಡನ್ನ ಬರೆದುಕೊಟ್ಟಿದ್ದಾರೆ. ಐಶ್ವರ್ಯ ರಂಗರಾಜನ್ ಈ ಗೀತೆಗೆ ಜೀವ ತುಂಬಿದ್ದು ಕೇಳೋರಿಗೆ ಇದು ವಿಶೇಷ ಭಾವನೆ ಮೂಡಿಸುತ್ತದೆ.
ಶ್ರೀಮಂತ ಸೆಟ್​​ಲ್ಲಿ ನಮಾಮಿ ಹಾಡಿನ ವೈಭವ


ಇದರ ಮೇಕಿಂಗ್ ಅಂತೂ ತುಂಬಾ ರಿಚ್ ಆಗಿದೆ. ಶ್ರೀಮಂತ ಅನಿಸೋ ಸೆಟ್​​ನಲ್ಲಿಯೇ ಇಡೀ ಹಾಡನ್ನ ತೆಗೆಯಲಾಗಿದೆ. ಆರ್ಟ್​ ಡೈರೆಕ್ಟರ್ ಶಿವಕುಮಾರ್ ಕಲ್ಪನೆಯಲ್ಲಿ ಇಡಿ ನೃತ್ಯ ಸಭಾಂಗಣ ಸೃಷ್ಟಿ ಆಗಿರೋದು ಇಲ್ಲಿ ವಿಶೇಷವೆನಿಸುತ್ತದೆ.


ರೆಟ್ರೋ ಕಾಲದಲ್ಲಿ ರಾಜಮನೆತನದ ಮನೆಗಳು ಹಿಂಗೆ ಇರುತ್ತಿದ್ದವು ಅನ್ನೋದನ್ನ ಕೂಡ ನಾವು ಗೆಸ್ ಮಾಡಬಹುದೇನೋ. ಆದರೆ ಇಲ್ಲಿ ನಟರಾಜನ ಆರಾಧನೆನೂ ಕೂಡ ಇದೆ.


ಕಬ್ಜ ಚಿತ್ರದಲ್ಲಿ ಶ್ರೀಯಾ ಶರಣ್ ಪಾತ್ರ ಏನು?


ಹಾಗಾಗಿಯೇ ಇದನ್ನ ರಾಜಮನತನ ಮನೆ ಅಂತ ಹೇಳೋಕೆ ಆಗೋದಿಲ್ಲ. ಅಂದಿನ ಕೋಟೆವಾಲಿ ಅಂತೀವಲ್ಲ ಆ ರೀತಿಯ ಭಾವನೆ ಈ ಒಂದು ಹಾಡನ್ನ ನೋಡಿದಾಗ ಬರುತ್ತದೆ.


ಬಹು ಭಾಷಾ ನಟಿ ಶ್ರಿಯಾ ಶರಣ್ ಈ ಗೀತೆಯಲ್ಲಿ ನಟರಾಜನ ಆರಾಧನೆಯಲ್ಲಿ ತೊಡಗಿರೋದು ಕಂಡು ಬರುತ್ತದೆ. ಅದೇ ಆರಾಧನೆ ಬಳಿಕವೇ ನಮಾಮಿ ಹಾಡು ಶುರು ಆಗುತ್ತದೆ.


ನಮಾಮಿ ಹಾಡಿನಲ್ಲಿ ನಟರಾಜನ ಆರಾಧನೆ ವೈಭವ
ಅಬ್ಬರವಿಲ್ಲದ, ಯಾವುದೇ ಅಶ್ಲೀಲತೆಯೂ ಇಲ್ಲದೇ, ಶೃಂಗಾರ ರಸದ ಭಾವಗಳೂ ಇಲ್ಲದೇ ಅದ್ಭುತ ನೃತ್ಯ ಪ್ರದರ್ಶನದಂತೆ ಈ ಒಂದು ಗೀತೆ ಕಾಣುತ್ತಿದೆ.
ಈ ಮೂಲಕ ಚಿತ್ರದ ನಿರ್ದೇಶಕ-ನಿರ್ಮಾಪಕ ಆರ್​. ಚಂದ್ರು ತಮ್ಮ ಕಬ್ಜ ಚಿತ್ರದ ನಾಯಕಿ ಪರಿಚಯ ಮಾಡಿಸಿದ್ದಾರೆ. ನಾಯಕನ ಪರಿಚಯದ ಹಾಡುಗಳನ್ನ ರಿಲೀಸ್ ಮಾಡಿದಾಗ, ಎಲ್ಲರಲ್ಲೂ ಕೆಜಿಎಫ್ ರೀತಿನೇ ಕಂಡಿದ್ದು ಸುಳ್ಳಲ್ಲ. ಆದರೆ ಶ್ರಿಯಾ ಶರಣ್ ನೃತ್ಯದ ದೃಶ್ಯ ಮತ್ತು ಪಾತ್ರಗಳನ್ನ ನೋಡಿದವ್ರಿಗೆ ಕಬ್ಜ ಬೇರೆ ರೀತಿಯ ಸಿನಿಮಾ ಅನಿಸೋಕೆ ಶುರು ಆಗಿದೆ.​


Kannada Kabzaa Movie Namaami Song Create New Buzz
ಕಬ್ಜ ಚಿತ್ರದ ಖದರ್ ಬದಲಿಸಿದ ನಮಾಮಿ ಹಾಡು


ಕಬ್ಜ ಚಿತ್ರದ ಖದರ್ ಬದಲಿಸಿದ ನಮಾಮಿ ಹಾಡು
ಚಿತ್ರದ ಈ ಗೀತೆಯನ್ನ ಎಲ್ಲ ಭಾಷೆಯಲ್ಲಿ ಕೂಡ ರಿಲೀಸ್ ಮಾಡಲಾಗಿದೆ. ಎಲ್ಲ ಭಾಷೆಯಲ್ಲೂ ಶ್ರೀಮಂತವಾಗಿಯೆ ನಮಾಮಿ ಹಾಡು ಕೇಳಿಸುತ್ತಿದೆ. ನೋಡುವ ಕಂಗಳಿಗೆ ಇದು ಬೇರೆ ಭರವಸೆ ಕೊಡುತ್ತಿದೆ.


ಇದನ್ನೂ ಓದಿ:  Actress Sonam: 14 ವರ್ಷದಲ್ಲೇ ನಟನೆ, 19 ವರ್ಷಕ್ಕೆ ಗರ್ಭಿಣಿಯಾದ ಸೋನಂ


ಚಿತ್ರದಲ್ಲಿ ಬರುವ ವಿಶೇಷ ಹಾಡಿನ ಚಿತ್ರೀಕರಣ ಕೂಡ ನಡೆಯುತ್ತಿದೆ. ಜಾನಿ ಮಾಸ್ಟರ್ ಒಳ್ಳೆ ಕಂಪೋಸಿಷನ್ ಮಾಡಿದ್ದಾರೆ. ಉಪ್ಪಿ ಕೂಡ ಸಖತ್ ಖುಷಿಯಿಂದಲೇ ಈ ಗೀತೆಯಲ್ಲಿ ತಲ್ಲೀನರಾಗಿದ್ದಾರೆ. ಅಮರ್ ಚಿತ್ರದ ನಾಯಕಿ ತಾನ್ಯ ಹೋಪ್ ಈ ಒಂದು ಗೀತೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

First published: