ಸ್ಯಾಂಡಲ್ವುಡ್ ನಲ್ಲಿ "ಕ" ಅಕ್ಷರ ಚಾಲ್ತಿಯಲ್ಲಿದೆ. ಕಾಂತಾರ (Kantara Movie) ಮಾಡಿದ ಮೋಡಿ ಇನ್ನೂ ಇದೆ. ಇದರ ಬೆನ್ನಲ್ಲಿಯೇ ಕ ಅಕ್ಷರದ ಕಬ್ಜ ಚಿತ್ರ ಮೋಡಿ ಶುರು (Kabzaa Song Review) ಮಾಡಿದೆ. ಕಾಂತಾರ ಚಿತ್ರಕ್ಕೆ ಸಿಂಗಾರ ಸಿರಿಯೇ ಅಂತ ಹಾಡು ಬರೆದ ಯುವ ಲಿರಿಕ್ ರೈಟರ್ ಪ್ರಮೋದ್ ಮರವಂತೆ ಕಬ್ಜ ಚಿತ್ರದಲ್ಲೂ ಒಂದು ಹಾಡನ್ನ ಬರೆದಿದ್ದಾರೆ. ಇದು ಕೂಡ ಸೂಪರ್ (Pramod Maravante) ಆಗಿಯೇ ಬಂದಿದೆ. ಕಾಂತಾರ ಹಾಡಲ್ಲಿ ಅದ್ಭುತ ಪದಗಳ ಬಳಕೆ ಇತ್ತು. ಕಬ್ಜ ಚಿತ್ರದ ಹಾಡಲ್ಲಿ ಮೋಹಕ, ಮಾದಕತೆಯ ರಸವತ್ತಾದ (Pramod New Song Released) ಪದಗಳನ್ನೆ ಬಳಕೆ ಮಾಡಿದ್ದಾರೆ. ಚುಮ್ ಚುಮ್ ಚಳಿಯಲ್ಲಿ ಅಂತ ಶುರು ಆಗೋ ಈ ಗೀತೆ ಮಜಾ ಕೊಡ್ತಿದೆ. ಇದರ ರಿವ್ಯೂ ಇಲ್ಲಿದೆ
ಕಬ್ಜ ಚಿತ್ರದ ಹಾಡುಗಳು ಇಡೀ ಚಿತ್ರದ ಬಗೆಗಿನ ಅಭಿಪ್ರಾಯ ಬದಲಿಸುತ್ತಿವೆ. ಕೆಜಿಎಫ್ ಚಿತ್ರದ ಕಾಪಿ ಅಂತ ಹೇಳಿದವ್ರಿಗೆ ಕಬ್ಜ ಸಿನಿಮಾದ ಹಾಡುಗಳು ಸರಿಯಾಗಿಯೇ ಉತ್ತರ ಕೊಡ್ತಾ ಇವೆ.
ಕಬ್ಜ ಚಿತ್ರದ ಬಗೆಗಿನ ಅಭಿಪ್ರಾಯ ಬದಲಿಸಿದ ನಮಾಮಿ!
ಶ್ರೀಯಾ ಸರಣ್ ನೃತ್ಯದ ನಮಾಮಿ ಹಾಡು ಚಿತ್ರದ ಹೊಸ ವಿಷಯವನ್ನ ತಿಳಿಸಿದೆ. ಇದರ ಗುಂಗು ಇರೋವಾಗಲೇ, ಹೊಸ ರೀತಿಯ ಸಾಂಗ್ವೊಂದು ಈಗ ಹೊಸ ಮೋಡಿ ಮಾಡುತ್ತಿದೆ.
ಪ್ರಮೋದ್ ಮರವಂತೆ ಬರೆದ ಈ ಗೀತೆಯಲ್ಲಿ ಮಾದಕತೆಯ ಉತ್ತುಂಗವೂ ಇದೆ. ಹೆಣ್ಣಿನ ವರ್ಣನೆಯ ವಿಭಿನ್ನ ರೂಪಕವೂ ಇಲ್ಲಿ ಕಂಡು ಬರುತ್ತವೆ. ಪ್ರತಿ ಸಾಲಿನಲ್ಲೂ ರಸವತ್ತತೆಯ ರಸದೌತಣವೇ ಇದೆ.
ಕಾಂತಾರದ ಕವಿ ಪ್ರಮೋದ ಮರವಂತೆ ಹೊಸ ಗೀತೆ
ಪ್ರಮೋದ್ ಮರವಂತೆ ಈ ಹಿಂದೆ ಕಾಂತಾರ ಚಿತ್ರಕ್ಕೆ ಹಾಡು ಬರೆದಿದ್ದಾರೆ. ಸಿಂಗಾರ ಸಿರಿಯೇ ಅಂತ ಬರೆದು ಸಪ್ತಮಿ ಗೌಡರನ್ನ ವರ್ಣಿಸಿದ್ದರು. "ಕ" ಅಕ್ಷರದ ಕಬ್ಜ ಚಿತ್ರದಲ್ಲಿ ಪ್ರಮೋದ್ ಮರವಂತೆ ಬರವಣಿಗೆಯ ಇನ್ನೊಂದು ರೂಪ ಕಂಡು ಬರುತ್ತದೆ.
ಯುವ ಬರಹಗಾರಲ್ಲಿರೋ ಮನ್ಮಥನನ್ನ ಹೊರಗೆ ತೆಗೆಸಿದಂತಿದೆ. ಅದಕ್ಕೋ ಏನೋ, ಸಿಂಗಾರ ಸಿರಿಯೇ ಬರೆದ ಪ್ರಮೋದ್ ಮರವಂತೆ ಇಲ್ಲಿ ಹೆಣ್ಣಿಗೂ ಗನ್ನಿಗೂ ಇರೋ ವ್ಯತ್ಯಾಸವನ್ನ ತುಂಬಾ ಚೆನ್ನಾಗಿಯೇ ಹೇಳಿದ್ದಾರೆ. ಅವು ಇಂತಿವೆ ನೋಡಿ.
ಕುಡಿಯೋ ಎಣ್ಣೆಗೂ, ಕುಣಿಯೋ ಹಣ್ಣಿಗೂ
ನಶೆಯು ಒಂದೇ, ಕುಡಿಯೋದ್ಯಾಕೆ
ಸುಡುವ ಗನ್ನಿಗೂ ಮಾದಕ ಕಣ್ಣಿಗೂ
ಬಿಸಿಯು ಒಂದೇನೆ ಸುಡುವುದು
ಯಾತಕೋ?
ಎಣ್ಣೆಗೂ, ಹೆಣ್ಣಿಗೂ, ನಶೆಗೂ ಹೊಸ ಅರ್ಥದ ಹಾಡು!
ಇವುಗಳನ್ನ ಹೊಸ ರೀತಿಯ ಕಲ್ಪನೆ ಅಂತಲೇ ಹೇಳಬಹುದು. ಎಣ್ಣೆ, ನಶೆ, ಗನ್, ಹೆಣ್ಣು ಹೀಗೆ ಇವುಗಳನ್ನ ವಿಶೇಷವಾಗಿಯೇ ಪ್ರಮೋದ್ ಇಲ್ಲಿ ಬರೆದುಕೊಟ್ಟಿದ್ದಾರೆ.
ಇದಲ್ಲದೇ ಇಲ್ಲಿ ಇನ್ನೂ ಒಂದಷ್ಟು ಸಾಲುಗಳು ಬರುತ್ತವೆ. ಇವು ಸುಂದರಿಯು ತನ್ನ ತಾನೇ ಮೆಚ್ಚಿಕೊಂಡು ಹೇಳುವ ಸಾಲುಗಳೇ ಇವಾಗಿವೆ. ತನ್ನ ಸೌಂದರ್ಯಕ್ಕೆ ಮರುಳಾದವರು ಹಿಂದೆ ಬೀಳ್ತಾರೆ ಅನ್ನೋದು ಇದೆ. ಅದನ್ನ ಪ್ರಮೋದ್ ಹೀಗೆ ಹೇಳ್ತಾರೆ ಓದಿ.
ನೋಡಿದ್ದನ್ನೇ ನೋಡ್ತಾರೆ
ಮಾಡಿದ್ದನ್ನೇ ಮಾಡ್ತಾರೆ
ಆದರೂ ಕೂಡ ನಾನೇ
ಬೇಕು ಅಂತಾರೆ
ಇವೆಲ್ಲ ಹಾಡಿನ ಚರಣದಲ್ಲಿ ಬರುವ ಸಾಲುಗಳಾಗಿವೆ. ಆದರೆ ಪ್ರಮೋದ್ ಮರವಂತೆ ಈ ಗೀತೆಯ ಪಲ್ಲವಿಯನ್ನ ಬೇರೆ ರೀತಿ ಬರೆದುಕೊಟ್ಟಿದ್ದಾರೆ. ಆ ಸಾಲುಗಳೂ ತುಂಬಾ ಕ್ಯಾಚಿ ಆಗಿವೆ. ಹೀಗೆ
ಚುಮ್ ಚುಮ್ ಚಳಿ ಚಳಿ
ತಬ್ಕೋ ಚಳುವಳಿ
ಮಾಡು ಗಿಲಿ ಗಿಲಿ
ಕರೆದು ನೀ ಸೈಡಲಿ
ಪಲ್ಲವಿಯ ಸಾಲುಗಳು ಈ ರೀತಿ ನಿಮ್ಮ ಗಮನ ಸೆಳೆಯುತ್ತವೆ. ಇಂತಹ ಸಾಲುಗಳಿಗೆ ರವಿ ಬಸ್ರೂರು ಒಳ್ಳೆ ಸಂಗೀತ ಕೊಟ್ಟಿದ್ದಾರೆ. ಒಬ್ಬರಲ್ಲ ಇಬ್ಬರಲ್ಲ ಈ ಒಂದೇ ಗೀತೆಯನ್ನ ಮೂವರು ಗಾಯಕರು ಹಾಡಿದ್ದಾರೆ.
ಹುಚ್ಚು ಹಿಡಿಸೋ ಹಂಗಿದೆ ಚುಮ್ ಚುಮ್ ಕಬ್ಜ ಹಾಡು
ಇವರಲ್ಲಿ ಐರಾ ಉಡುಪಿ ಧ್ವನಿ ಹುಚ್ಚು ಹಿಡಿಸುತ್ತದೆ. ಸಂತೋಷ್ ವೆಂಕಿ, ಮನಿಷ್ ದಿನಕರ್ ಇಡೀ ಹಾಡಿಗೆ ಮತ್ತಷ್ಟು ಪೂರಕವಾಗಿಯೇ ಇವೆ. ಇಂತಹ ಈ ಗೀತೆಯ ಲಿರಿಕಲ್ ವಿಡಿಯೋ ಮಾತ್ರ ಡೈರೆಕ್ಟರ್ ಆರ್. ಚಂದ್ರು ಈಗ ರಿಲೀಸ್ ಮಾಡಿದ್ದಾರೆ.
ಇದೇ ಹಾಡಿನಲ್ಲಿ ನಟಿ ತಾನ್ಯ ಹೋಪ್ ವಿಶೇಷವಾಗಿಯೇ ಕಬ್ಜ ಚಿತ್ರದಲ್ಲಿ ಎಂಟ್ರಿ ಕೊಟ್ಟಿದ್ದಾರೆ. ರಿಯಲ್ ಸ್ಟಾರ್ ಉಪೆಂದ್ರ ಮತ್ತು ತಾನ್ಯ ಹೋಪ್ ಈ ಗೀತೆಯಲ್ಲಿ ಸಖತ್ ಕಿಕ್ ಏರಿಸಿದ್ದಾರೆ. ಜಾನಿ ಮಾಸ್ಟರ್ ಈ ಹಾಡಿಗೆ ಕೋರಿಯೋಗ್ರಾಫಿ ಮಾಡಿದ್ದಾರೆ.
ಇದನ್ನೂ ಓದಿ: Shah Rukh Khan: ಅಜ್ಜಿಯ ವೀಡಿಯೋ ನೋಡಿ ಕಿಂಗ್ ಖಾನ್ ಭಾವುಕ! ಏನಿತ್ತು ಅದರಲ್ಲಿ?
ಚಿತ್ರದ ಎಲ್ಲ ಹಾಡುಗಳು ಶೀಡ್ಲಘಟದಲ್ಲಿ ಅದ್ದೂರಿಯಾಗಿಯೇ ರಿಲೀಸ್ ಆಗಿವೆ.
ಮಾರ್ಚ್-17 ರಂದು ಪ್ಯಾನ್ ಇಂಡಿಯಾ ಲೆವಲ್ಗೆ ರಿಲೀಸ್ ಆಗುತ್ತಿದೆ. ಬಹು ಕೋಟಿ ವೆಚ್ಚದ ಕಬ್ಜ ಸಿನಿಮಾ ದೊಡ್ಡ ನಿರೀಕ್ಷೆಯನ್ನ ಈಗಾಗಲೇ ಹುಟ್ಟುಹಾಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ