ಕನ್ನಡದಲ್ಲಿ ಕಬ್ಜ ಚಿತ್ರದ (Kabzaa Movie) ಚರ್ಚೆ ಜಾಸ್ತಿ ಆಗುತ್ತಿದೆ. ಸದ್ಯದ ಲೆಕ್ಕದ ಪ್ರಕಾರ ಇದೊಂದೇ ಪ್ಯಾನ್ ಇಂಡಿಯಾ ಚಿತ್ರ ಆಗಿದೆ. ನಿರ್ಮಾಪಕ-ನಿರ್ದೇಶಕ ಆರ್.ಚಂದ್ರು ತಮ್ಮ ಈ ಚಿತ್ರವನ್ನು ತುಂಬಾ ಚೆನ್ನಾಗಿಯೇ ಪ್ರಮೋಟ್ (Kabzaa Promotion) ಮಾಡುತ್ತಿದ್ದಾರೆ. ಚಿತ್ರ ಜೀವನದಲ್ಲಿ ಅತಿ ದೊಡ್ಡ ಸಿನಿಮಾ ಮಾಡ್ತಿರೋ ಖುಷಿಯಲ್ಲಿದ್ದಾರೆ. ಆದರೆ ಈ ಚಿತ್ರದ ಯಾವುದೇ ವಿಷಯ ಹೊರ ಬಂದ್ರೂ ಸರಿಯೇ, ಅದನ್ನ ನೇರವಾಗಿ ಕೆಜಿಎಫ್ (KGF Comparison) ಚಿತ್ರಕ್ಕೆ ಹೋಲಿಕೆ ಮಾಡಲಾಗುತ್ತಿದೆ. ಇದರಿಂದ ಆರ್. ಚಂದ್ರು ಬೇಸರ ಮಾಡಿಕೊಂಡಂತೆ ಕಾಣೋದಿಲ್ಲ. ಹಾಗೆ ಹೇಳುವವರಿಗೆ ಚಂದ್ರು ತುಂಬಾ ಬ್ಯೂಟಿಫುಲ್ ಆಗಿಯೇ ಉತ್ತರ ಕೊಟ್ಟಿದ್ದಾರೆ. ಈ ವಿಷಯದಲ್ಲಿ ರಿಯಲ್ ಸ್ಟಾರ್ ಉಪೇಂದ್ರ (Real Star Upendra) ಕೂಡ ಸುಮ್ನೆ ಕೂತಿಲ್ಲ. ಅವರು ಸರಿಯಾಗಿಯೇ ಈಗ ಉತ್ತರ ಕೊಡುತ್ತಿದ್ದಾರೆ.
ಕನ್ನಡದ ಕಬ್ಜ ಸಿನಿಮಾ ಅಸಲಿನಾ ಕೆಜಿಎಫ್ ಕಾಪಿನಾ?
ಕಬ್ಜ ಚಿತ್ರದ ಚರ್ಚೆ ದಿನೇ ದಿನೇ ಜಾಸ್ತಿ ಆಗುತ್ತಿದೆ. ಸಿನಿಮಾದ ರಿಲೀಸ್ ದಿನಗಳು ಸನಿಹಕ್ಕೆ ಬರ್ತಿರೋದ್ರಿಂದಲೇ ಸಿನಿಮಾ ತಂಡ ಪ್ರಚಾರ ಕಾರ್ಯವನ್ನ ಕೂಡ ಆರಂಭಿಸಿದ್ದಾರೆ. ಮೊನ್ನೆ ಹೈದ್ರಾಬಾದ್ ನಲ್ಲಿ ದೊಡ್ಡಮಟ್ಟದಲ್ಲಿ ಲಿರಿಕಲ್ ವಿಡಿಯೋ ರಿಲೀಸ್ ಮಾಡಿದ್ದಾರೆ.
ಇದರ ಬೆನ್ನಲ್ಲಿಯೇ ಮತ್ತೆ ಅದೇ ಕಮೆಂಟ್ಸ್ ಕೇಳಿ ಬರುತ್ತಿವೆ. ಕನ್ನಡದ ಕಬ್ಜ ಸಿನಿಮಾದ ಹಾಡು ಕೂಡ ಕೆಜಿಎಫ್ ಚಿತ್ರದ ಹಾಡಿನ ರೀತಿ ಇದೆ ಅನ್ನೊದೇ ಒಟ್ಟು ಕಾಮೆಂಟ್ಗಳ ತಾತ್ಪರ್ಯ ಆಗಿದೆ. ಇದರಿಂದ ಸಿನಿಮಾ ತಂಡವೇನೂ ಬೇಸರಗೊಂಡಿಲ್ಲ. ಡೈರೆಕ್ಟರ್ ಆರ್. ಚಂದ್ರು ಕೂಡ ಎಲ್ಲೂ ಬೇಸರ ವ್ಯಕ್ತಪಡಿಸಿಲ್ಲ ಬಿಡಿ.
ಕಬ್ಜ ಚಿತ್ರ ಯಾಕೆ ಕೆಜಿಎಫ್ ರೀತಿ ಕಾಣುತ್ತದೆ ಗೊತ್ತೆ?
ಕಬ್ಜ ಚಿತ್ರಕ್ಕೆ ಹಾಲಿವುಡ್ ಸ್ಪೂರ್ತಿ ಇದೆ. ಕೆಜಿಎಫ್ ಚಿತ್ರಕ್ಕೂ ಹಾಲಿವುಡ್ ಮತ್ತು ಬಾಲಿವುಡ್ ಚಿತ್ರಗಳ ಸ್ಪೂರ್ತಿ ಇದ್ದೇ ಇದೆ ಬಿಡಿ. ಆದರೆ ಕೆಜಿಎಫ್ ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅತಿ ಹೆಚ್ಚು ಗಮನ ಸೆಳೆದಿದೆ. ದಾಖಲೆಯನ್ನು ಬರೆದು ಇತಿಹಾಸ ಸೃಷ್ಟಿಸಿದೆ.
ಕಬ್ಜ ಚಿತ್ರವೂ ಅದೇ ಹಾದಿಯಲ್ಲಿಯೇ ರೆಡಿ ಆಗಿದೆ. ಹಾಲಿವುಡ್ ರೀತಿಯ ಟಿಂಟ್ ಈ ಚಿತ್ರಕ್ಕೂ ಇದೆ. ಅದಕ್ಕೂ ಹೆಚ್ಚಾಗಿ ಚಿತ್ರ ದೃಶ್ಯ ಮತ್ತು ಸಂಗೀತ ನಿರ್ದೇಶನದಲ್ಲೂ ಒಂದಷ್ಟು ಸಾಮ್ಯತೆ ಕಂಡು ಬರುತ್ತದೆ. ಹೀಗಾಗಿಯೇ ಕಬ್ಜ ಚಿತ್ರ ಕೆಜಿಎಫ್ ಚಿತ್ರ ರೀತಿ ಕಾಣುತ್ತಿದೆ.
ಕಬ್ಜ ಡೈರೆಕ್ಟರ್ ಆರ್. ಚಂದ್ರು ಕಾಮೆಂಟ್ಸ್ಗೆ ಕೊಟ್ಟ ಉತ್ತರ ಏನು?
ಡೈರೆಕ್ಟರ್ ಆರ್. ಚಂದ್ರು ಬೇಸರ ಪಟ್ಟುಕೊಂಡಿಲ್ಲ. ಅವರು ಹೆಮ್ಮೆ ಪಡುತ್ತಿದ್ದಾರೆ. ತಮ್ಮ ಚಿತ್ರವನ್ನ ಕನ್ನಡದ ಕೆಜಿಎಫ್ ಚಿತ್ರಕ್ಕೆ ಹೋಲಿಕೆ ಮಾಡುತ್ತಿದ್ದಾರೆ. ಇದು ಖುಷಿ ವಿಷಯ ಅಲ್ವ? ಎಂದು ಆರ್. ಚಂದ್ರು ಪ್ರಶ್ನೆ ಕೇಳುತ್ತಾರೆ.
ಕನ್ನಡದ ಕೆಜಿಎಫ್ ದೊಡ್ಡ ದಾಖಲೆ ಮಾಡಿದೆ. ಅದಕ್ಕೆ ನಮ್ಮ ಕಬ್ಜ ಚಿತ್ರ ಹೋಲಿಕೆ ಮಾಡ್ತಿರೋದೇ ಒಂದು ಹೆಮ್ಮೆ ಆಗಿದೆ. ಅದುವೇ ಅಲ್ಲವೇ ನಮ್ಮ ಚಿತ್ರದ ಮೊದಲ ಸಾಧನೆ ಅಂತಲೇ ಆರ್. ಚಂದ್ರು ಪ್ರಶ್ನೆ ಕೇಳಿದ್ದಾರೆ.
ಕಬ್ಜ ಚಿತ್ರವನ್ನ ಕೆಜಿಎಫ್ ಚಿತ್ರಕ್ಕೆ ಹೋಲಿಸುವವರಿಗೆ ಉಪ್ಪಿ ಮಾತು!
ಕಬ್ಜ ಚಿತ್ರವನ್ನ ಕೆಜಿಎಫ್ ಚಿತ್ರದ ಸ್ಪೂರ್ತಿಯಿಂದಲೇ ಮಾಡಲಾಗಿದೆ. ಈ ವಿಷಯವನ್ನ ಆರ್. ಚಂದ್ರು ಹೇಳಿಕೊಂಡಿದ್ದಾರೆ. ಇನ್ನು ಚಿತ್ರದ ಮೇಲ್ನೋಟಕ್ಕೆ ಕೆಜಿಎಫ್ ರೀತಿ ಕಾಣ್ತಿದೆ ಅಂದ್ರೆ ಕಥೆ ಅದೇ ರೀತಿ ಇಲ್ವೇ ಇಲ್ಲ. ಕೆಜಿಎಫ್ ಕಥೆ ಬೇರೆ ಇದೆ. ಕಬ್ಜ ಸಿನಿಮಾದ ಕಥೆ ಬೇರೆ ಇದೆ ಅಂತಲೇ ಉಪ್ಪಿ ಹೇಳ್ತಾರೆ.
ಕಬ್ಜ ಚಿತ್ರದ ಹಾಡು ಕೆಜಿಎಫ್ ಥರ ಯಾಕೆ ಇದೆ?
ಕಬ್ಜ ಸಿನಿಮಾದ ಲಿರಿಕ್ ವಿಡಿಯೋ ವಿಶೇಷವಾಗಿಯೇ ಇದೆ. ಇಲ್ಲಿ ಬಳಸಿದ ಪದಗಳಲ್ಲಿ ಬೇರೆ ಫೀಲ್ ಇದೆ. ಆದರೆ ಎಲ್ಲೋ ಒಂದು ಕಡೆಗೆ ಈ ಚಿತ್ರದ ಹಾಡು ಕೆಜಿಎಫ್ ರೀತಿ ಕೇಳಿಸಬಹುದು. ಆದರೆ ಇಡೀ ವಿಡಿಯೋ ಹಾಡನ್ನ ನೋಡಿದಾಗ ಬೇರೆ ಫೀಲ್ ಆಗೋದು ಗ್ಯಾರಂಟಿ ಅಂತಲೇ ಹೇಳಬಹುದು.
ಇದನ್ನೂ ಓದಿ: Rashmika Mandanna: ಎಲ್ಲಕ್ಕಿಂತ ಮುಖ್ಯವಾದ್ದು ನಿಮ್ಮ ಖುಷಿ! ಕಿರಿಕ್ ಚೆಲುವೆಯ ಭರವಸೆಯ ಪಾಠ
ಇದಕ್ಕೂ ಹೆಚ್ಚಾಗಿ ಕೆಜಿಎಫ್ ಚಿತ್ರಕ್ಕೆ ಸಂಗೀತ ಕೊಟ್ಟಿದ್ದ ರವಿ ಬಸ್ರೂರು ಅವರೇ ಕಬ್ಜ ಚಿತ್ರಕ್ಕೂ ಸಂಗೀತ ಕೊಟ್ಟಿದ್ದಾರೆ. ವಿಶೇಷವಾಗಿ ರಿಲೀಸ್ ಆದ ಹಾಡನ್ನೂ ಬರೆದುಕೊಟ್ಟಿದ್ದಾರೆ. ಹಾಗೆ ಡಬಲ್ ಡಬಲ್ ಕೆಲಸ ಮಾಡಿರೋ ರವಿ ಬಸ್ರೂರು ಅವರು ಕಬ್ಜ ಚಿತ್ರಕ್ಕೆ ಕೆಜಿಎಫ್ ರೇಂಜ್ಗೆ ಹಾಡು ಮಾಡಿಕೊಟ್ಟಿದ್ದಾರೆ ಅಂತಲೇ ಹೇಳಬಹುದು.
ಅಪ್ಪು ಜನ್ಮ ದಿನ ಮಾರ್ಚ್-17 ರಂದು ಕನ್ನಡದ ಕಬ್ಜ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿದೆ. ಇದರ ಬಗ್ಗೆ ನಿರೀಕ್ಷೆ ಕೂಡ ದಿನೇ ದಿನೇ ಹೆಚ್ಚಾಗುತ್ತಿದೆ. ಉಪ್ಪಿ ಮತ್ತು ಸುದೀಪ್ ಫ್ಯಾನ್ಸ್ ಕೂಡ ಈ ಚಿತ್ರಕ್ಕಾಗಿ ಈಗ ಕಾಯುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ