ರಿಯಲ್ ಸ್ಟಾರ್ ಉಪೇಂದ್ರ (Real Star Upendra Movie) ಅಭಿನಯದ ಕಬ್ಜ ಸಿನಿಮಾದ ಬಿಗ್ ಅಪ್ಡೇಟ್ ಹೊರ ಬೀಳುವ ಸಮಯ ಬಂದಿದೆ. ಕನ್ನಡ ನಾಡಿನ ಹೆಮ್ಮೆಯ ಸಿನಿಮಾಗಳ ಸಾಲಿನಲ್ಲಿ ಕನ್ನಡದ ಕಬ್ಜ (Kannada Kabzaa Movie) ಚಿತ್ರವೂ ಇದೆ. ಈ ಚಿತ್ರವನ್ನ ಡೈರೆಕ್ಟರ್ ಆರ್. ಚಂದ್ರು (Director R Chandru) ದೊಡ್ಡಮಟ್ಟದಲ್ಲಿ ರಿಲೀಸ್ ಮಾಡೋಕೆ ಪ್ಲಾನ್ ಮಾಡಿದ್ದಾರೆ. ಬೇರೆ ಬೇರೆ ಭಾಷೆಯಲ್ಲಿ ಕಬ್ಜ ಸಿನಿಮಾ ರಿಲೀಸ್ ಆಗುತ್ತಿದೆ. ಆದರೆ ಈ ಚಿತ್ರದ ರಿಲೀಸ್ ಡೇಟ್ (Kabzaa Release Date Soon) ಮಾತ್ರ ಇನ್ನು ರಿಲೀಸ್ ಆಗಿಲ್ವೇ, ಅಂತ ರಿಯಲ್ ಸ್ಟಾರ್ ಮತ್ತು ಕಿಚ್ಚ ಸುದೀಪ್ ಫ್ಯಾನ್ಸ್ ಕಾಯುತ್ತಿದ್ದಾರೆ. ಈ ಒಂದು ನಿರೀಕ್ಷೆಗೆ ಇದೇ 24 ರಂದು ಉತ್ತರ ಸಿಗಲಿದೆ.
ಈ ಉತ್ತರವನ್ನ ಚಿತ್ರದ ನಿರ್ಮಾಪಕ ಆರ್.ಚಂದ್ರು ಅವರೇ ಕೊಡಲಿದ್ದಾರೆ. ಈ ಬಗೆಗಿನ ಇನ್ನಷ್ಟು ಮಾಹಿತಿ ಇಲ್ಲಿದೆ.
ಬಿಗ್ ಸಿನಿಮಾ ಬಿಗ್ ಅಪ್ಡೇಟ್ಸ್ ಏನು ಗೊತ್ತೇ?
ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಕಬ್ಜ ಸಿನಿಮಾ ಭಾರೀ ನಿರೀಕ್ಷೆ ಹುಟ್ಟುಹಾಕಿದೆ. ಚಿತ್ರದ ಮೇಕಿಂಗ್ ಈಗಾಗಲೇ ಜನರಲ್ಲಿ ಅತಿ ಹೆಚ್ಚು ಕುತೂಹಲ ಮೂಡಿಸಿದೆ.
ಕಿಚ್ಚ ಸುದೀಪ್ ಮತ್ತು ರಿಯಲ್ ಸ್ಟಾರ್ ಉಪೇಂದ್ರ ಸ್ಕ್ರೀನ್ ಶೇರ್ ಮಾಡಿರೋ ಈ ಚಿತ್ರದ ನಿರೀಕ್ಷೆ ಡಬಲ್ ಟ್ರಿಪಲ್ ಆಗಿಯೇ ಇದೆ. ಕನ್ನಡ ನಾಡಿನ ಇಬ್ಬರು ಸೂಪರ್ ಸ್ಟಾರ್ಗಳು ಈ ಒಂದೇ ಚಿತ್ರದಲ್ಲಿ ಬರ್ತಿರೋದ್ರಿಂದಲೇ ಈ ಚಿತ್ರದ ಬಗ್ಗೆ ಕ್ರೇಜ್ ಹೆಚ್ಚಾಗಿದೆ.
ಕಬ್ಜ ಸಿನಿಮಾ ಹೊಸ ಅಪ್ಡೇಟ್ಸ್ ಈಗೇನಿದೆ?
ನಿರ್ದೇಶಕ ಮತ್ತು ನಿರ್ಮಾಪಕ ಆರ್. ಚಂದ್ರು ತಮ್ಮ ಈ ಚಿತ್ರವನ್ನ ದೊಡ್ಡಮಟ್ಟದಲ್ಲಿ ರಿಲೀಸ್ ಮಾಡಲು ಪ್ಲಾನ್ ಮಾಡಿದ್ದಾರೆ. ಈ ಪ್ಲಾನ್ ಪ್ರಕಾರವೇ ಎಲ್ಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಅದರ ಮಧ್ಯೆ ಚಿತ್ರದ ರಿಲೀಸ್ ಡೇಟ್ ಬಗ್ಗೇನೂ ಒಂದು ಕುತೂಹಲ ಮೂಡಿದೆ.
ಈ ಹಿನ್ನೆಲೆಯಲ್ಲಿ ಕಬ್ಜ ಚಿತ್ರದ ರಿಲೀಸ್ ಬಗ್ಗೆನೂ ಒಂದು ಕುತೂಹಲದ ನೋಟ ಇದ್ದೇ ಇದೆ. ಬಹು ನಿರೀಕ್ಷಿತ ಕನ್ನಡದ ಈ ಚಿತ್ರವನ್ನ ಯಾವಾಗ ರಿಲೀಸ್ ಮಾಡ್ತಾರೆ ಅನ್ನೋದೇ ಆ ನಿರೀಕ್ಷೆ ಆಗಿದೆ. ಆದರೆ ಸಿನಿಮಾ ತಂಡದ ಕ್ಯಾಪ್ಟನ್ ಆರ್.ಚಂದ್ರು ತಮ್ಮ ಈ ಚಿತ್ರದ ರಿಲೀಸ್ ದಿನವನ್ನ ಅನೌನ್ಸ್ ಮಾಡಲು ಒಂದು ದಿನ ಈಗ ಫಿಕ್ಸ್ ಮಾಡಿದ್ದಾರೆ.
ಇದೇ 24 ರಂದು ಕಬ್ಜ ಚಿತ್ರದ ಬಿಗ್ ಅಪ್ಡೇಟ್ಸ್ !
ಇದೇ ಜನವರಿ 24 ರಂದು ಚಿತ್ರದ ರಿಲೀಸ್ ದಿನವನ್ನ ಅನೌನ್ಸ್ ಮಾಡಲಿದ್ದಾರೆ. ಆದರೆ, ಅದ್ಯಾವ ರೀತಿ ಮಾಡಲಿದ್ದಾರೆ ಅನ್ನೋದು ಮಾತ್ರ ಇನ್ನು ಬಿಟ್ಟುಕೊಟ್ಟಿಲ್ಲ.
ಚಿತ್ರದ ಪೋಸ್ಟರ್ ಮೂಲಕ ರಿಲೀಸ್ ಡೇಟ್ ಅನೌನ್ಸ್ ಮಾಡ್ತಾರಾ? ಇಲ್ಲವೇ ಚಿತ್ರದ ರಿಲೀಸ್ ದಿನ ಹೇಳಲಿಕ್ಕೆ ವಿಶೇಷವಾದ ಟೀಸರ್ ಅಥವಾ ಟ್ರೈಲರ್ ಏನಾದರೂ ರೆಡಿ ಮಾಡಿಕೊಂಡಿದ್ದಾರಾ? ಸದ್ಯಕ್ಕೆ ಏನೂ ಹೇಳೋಕೆ ಆಗೋದಿಲ್ಲ. ಇದನ್ನ ತಿಳಿಯಲು 24 ರವರೆಗೂ ಕಾಯಬೇಕಿದೆ.
ಕನ್ನಡದ ಕಬ್ಜ 2023 ರ ಬಹು ನಿರೀಕ್ಷಿತ ಸಿನಿಮಾ
ಕಬ್ಜ ಚಿತ್ರ ಬಹು ಭಾಷೆಯಲ್ಲಿ ರಿಲೀಸ್ ಆಗುತ್ತಿದೆ. ಕೆಜಿಎಫ್, ಕಾಂತಾರ, ಚಾರ್ಲಿ 777, ವಿಕ್ರಾಂತ್ ರೋಣ ಚಿತ್ರದ ಹಾಗೇನೆ ಈ ಚಿತ್ರವನ್ನ ದೊಡ್ಡಮಟ್ಟದಲ್ಲಿ ರಿಲೀಸ್ ಮಾಡಲಾಗುತ್ತಿದೆ. ಇದಕ್ಕೆ ಬೇಕಾಗೋ ಎಲ್ಲ ಸಿದ್ದತೆಗಳನ್ನು ನಿರ್ದೇಶಕ ಆರ್. ಚಂದ್ರು ವಿತರಕರ ಜೊತೆಗೆ ಮಾಡುತ್ತಾರೆ.
ಎಲ್ಲವೂ ಫೈನಲ್ ಅದ್ಮೇಲೆ ರಿಲೀಸ್ ಡೇಟ್ ಅನೌನ್ಸ್ ಮಾಡ್ತೀನಿ ಅಂತಲೂ ಈ ಹಿಂದೇನೆ ಹೇಳಿಕೊಂಡಿದ್ದರು. ಅದರಂತೆ ಕನ್ನಡದ ಕಬ್ಬ ಎಲ್ಲೆಡೆ ರಿಲೀಸ್ ಆಗುತ್ತಿದೆ. ಅದಕ್ಕೂ ಮೊದಲೇ ಕನ್ನಡದ ಕಬ್ಜ, 2023ರ ಬಹು ನಿರೀಕ್ಷಿತ ಚಿತ್ರಗಳ IMDB ಲಿಸ್ಟ್ನಲ್ಲಿ ಸ್ಥಾನ ಪಡೆದು ಗಮನ ಸೆಳೆದಿದೆ.
ಇದನ್ನೂ ಓದಿ: Star Suvarna: ಗಾನ ಬಜಾನದಲ್ಲಿ ಲೀಲಾ ಮೋಡಿ, ಮತ್ತೆ ಗೆಲ್ಲೋಕೆ ಬಂದ್ರು ಸಪ್ತಮಿ ಗೌಡ!
ಇನ್ನುಳಿದಂತೆ ದಿನೇ ದಿನೇ ಈ ಚಿತ್ರ ನಿರೀಕ್ಷೆ ಮೂಡಿಸುತ್ತಿದೆ. ಚಿತ್ರದ ಕಿಚ್ಚನ ಮತ್ತು ಉಪ್ಪಿಯ ಪಾತ್ರಗಳು ಕೂಡ ಹೆಚ್ಚು ಕುತೂಹಲ ಮೂಡಿಸುತ್ತಿವೆ. ಚಿತ್ರದಲ್ಲಿ ಈ ನಾಯಕ ನಟರ ಮೋಡಿ ಹೇಗಿರುತ್ತದೆ ಅನ್ನೋದೇ ಈಗೀನ ಕ್ಯೂರಿಯೆಸ್ ಕ್ವಶ್ಚನ್ ಅಂತಲೇ ಹೇಳಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ