ರಿಯಲ್ ಸ್ಟಾರ್ ಉಪೇಂದ್ರ (Real Star Upendra Movie) ಅಭಿನಯದ ಕಬ್ಜ ಚಿತ್ರದ ಕುತೂಹಲ ಹೆಚ್ಚಾಗುತ್ತಲೇ ಇದೆ. ಮೊನ್ನೆ ಮೊನ್ನೆ ಚಿತ್ರದ ನಿರ್ದೇಶಕ ಆರ್. ಚಂದ್ರು ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದರು. ಮಾರ್ಚ್-17 ರಂದು (Power Star puneeth Rajkumar) ಅಪ್ಪು ಜನ್ಮ ದಿನ ಇದೆ. ಆ ದಿನವೇ ನಮ್ಮ ಸಿನಿಮಾ ರಿಲೀಸ್ ಆಗುತ್ತಿದೆ. ಇದು ನಮ್ಮ ದೇವರು ಅಪ್ಪು ಅವರಿಗೆ ಅರ್ಪಣೆ ಅಂತಲೇ ಹೇಳಿಕೊಂಡಿದ್ದರು. ಅದೇ ಆರ್. ಚಂದ್ರು (Director R Chandru) ಅವರು ಈ ತಮ್ಮ ಚಿತ್ರದಲ್ಲಿರೋ ಹಾಡುಗಳನ್ನ ಕೂಡ ವಿಶೇಷವಾಗಿಯೇ ಪ್ರಮೋಟ್ (Movie Promotion) ಮಾಡಲು ನಿರ್ಧರಿಸಿದ್ದಾರೆ. ಅದನ್ನ ಅನೌನ್ಸ್ ಮಾಡಲು ಕೂಡ ಈಗೊಂದು ದಿನವನ್ನ ಫಿಕ್ಸ್ ಮಾಡಿದ್ದಾರೆ. ಅದನ್ನ ಪ್ರಕಟಿಸಲು ಮತ್ತೊಂದು ಪೋಸ್ಟರ್ ಕೂಡ ಮಾಡಿದ್ದಾರೆ.
ಕಬ್ಜ ಚಿತ್ರದ ಆಡಿಯೋ ರಿಲೀಸ್ ಬಗ್ಗೆ ಹೊಸ ಅಪ್ಡೇಟ್ಸ್
ಕನ್ನಡ ಚಿತ್ರರಂಗದಲ್ಲಿ ಕಬ್ಜ ಚಿತ್ರ ಭಾರೀ ಸಂಚಲನ ಮೂಡಿಸುತ್ತಿದೆ. ಚಿತ್ರದ ಪ್ರಚಾರ ಕೂಡ ಬಲು ಜೋರಾಗಿಯೇ ನಡೆಯುತ್ತಿದೆ. ಸಿನಿಮಾ ಪ್ರೇಮಿಗಳಲ್ಲಿ ಕೂಡ ಈ ಚಿತ್ರದ ಬಗ್ಗೆ ಕುತೂಹಲ ಮೂಡಿಸುತ್ತಿದೆ. ಕಬ್ಜ ಸಿನಿಮಾ ಮೂಲಕ ಉಪ್ಪಿಯ ಹೊಸ ರೂಪವನ್ನ ಎದುರು ನೋಡ್ತಿರೋ ಉಪ್ಪಿ ಅಭಿಮಾನಿಗಳಲ್ಲಿ ಈಗಲೇ ಭಾರೀ ನಿರೀಕ್ಷೆ ಮೂಡಿಸಿದೆ.
ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಈ ಸಿನಿಮಾ ಕನ್ನಡದ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಆಗಿದೆ. ಬಹು ಭಾಷೆಯಲ್ಲಿ ರಿಲೀಸ್ ಆಗುತ್ತಿರೋ ಈ ಚಿತ್ರಕ್ಕೆ ಬಹು ಕೋಟಿ ಬಜೆಟ್ ಅನ್ನು ಹಾಕಲಾಗಿದೆ. ಈ ಕಾರಣಕ್ಕೇನೆ ಚಿತ್ರ ಭರ್ಜರಿಯಾಗಿ ಮೂಡಿ ಬಂದಿದೆ.
ಕಬ್ಜ ಚಿತ್ರಕ್ಕೆ ಕೆಜಿಎಫ್ ಸಂಗೀತ ನಿರ್ದೇಶಕರ ಅದ್ಭುತ ಸ್ಪರ್ಶ
ಕನ್ನಡದ ಕೆಜಿಎಫ್ ಸಿನಿಮಾ ದೇಶ-ವಿದೇಶದಲ್ಲೂ ಹೆಸರು ಮಾಡಿದೆ. ಪ್ಯಾನ್ ಇಂಡಿಯಾ ಹಾದಿಯನ್ನ ಕೂಡ ಕನ್ನಡದ ಇತರ ಚಿತ್ರಕ್ಕೆ ತೋರಿಸಿದೆ. ಇಷ್ಟೇ ಅಲ್ಲ, ಈ ಚಿತ್ರಕ್ಕೆ ಸಂಗೀತ ಕೊಟ್ಟಿದ್ದ ಸಂಗೀತ ನಿರ್ದೇಶಕ ರವಿ ಬಸ್ರೂರು ಕೂಡ ಪ್ಯಾನ್ ಇಂಡಿಯಾ ಸಂಗೀತ ನಿರ್ದೇಶಕರೇ ಆಗಿದ್ದಾರೆ.
ಪ್ಯಾನ್ ಇಂಡಿಯಾ ಸಂಗೀತ ನಿರ್ದೇಶಕ ರವಿ ಬಸ್ರೂರು ಸಕಸ್ಸ್ ಸ್ಟೋರಿ ಕನ್ನಡದಲ್ಲಿ ಅಷ್ಟೇ ವಿಶೇಷವಾಗಿ ಮುಂದುವರೆದಿದೆ. ಕನ್ನಡದ ಇತರ ಚಿತ್ರಗಳಿಗೆ ಸಂಗೀತ ಕೊಡ್ತಿರೋ ರವಿ ಬಸ್ರೂರು, ಕನ್ನಡದ ಮತ್ತೊಂದು ಪ್ಯಾನ್ ಇಂಡಿಯಾ ಕಬ್ಜ ಚಿತ್ರಕ್ಕೆ ಸಂಗೀತ ಕೊಟ್ಟಿದ್ದಾರೆ. ಕೆಜಿಎಫ್ ರೀತಿನೇ ಈ ಚಿತ್ರಕ್ಕೂ ಅದ್ಭುತ ಸಂಗೀತ ಕೊಟ್ಟಿದ್ದಾರೆ.
ಆನಂದ್ ಆಡಿಯೋ ಕಂಪನಿಗೆ ಕಬ್ಜ ಆಡಿಯೋ ಸೇಲ್?
ಕಬ್ಜ ಚಿತ್ರ ಆಡಿಯೋ ಬಗ್ಗೆ ಆನಂದ್ ಆಡಿಯೋ ಶೀಘ್ರದಲ್ಲಿಯೇ ಎಲ್ಲವನ್ನೂ ಹೇಳಲಿದೆ. ಈ ಬಗ್ಗೆ ಸ್ವತಃ ಚಿತ್ರ ತಂಡವೇ ಪೋಸ್ಟರ್ ಮೂಲಕ ಮಾಹಿತಿ ನೀಡಿದೆ. ಶೀಘ್ರದಲ್ಲಿಯೇ ಎಲ್ಲ ಮಾಹಿತಿಯನ್ನ ಆನಂದ್ ಆಡಿಯೋ ಕೊಡಲಿದೆ ಅಂತಲೂ ಸಿನಿಮಾ ತಂಡ ಹೇಳಿಕೊಂಡಿದೆ.
ಕಬ್ಜ ಚಿತ್ರದ ಆಡಿಯೋ ಅಪ್ಡೇಟ್ ಶೀಘ್ರದಲ್ಲಿಯೇ ರಿವೀಲ್
ಚಿತ್ರದ ಆಡಿಯೋ ಬಗ್ಗೆ ಶೀಘ್ರದಲ್ಲಿಯೇ ಅಧಿಕೃತ ಮಾಹಿತಿ ಹೊರ ಬೀಳುತ್ತದೆ. ಅದನ್ನ ಅಧಿಕೃತವಾಗಿ ನೀವು ಆನಂದ್ ಆಡಿಯೋ ಯುಟ್ಯೂಬ್ನಲ್ಲಿ ನೋಡಬಹುದು ವೇಟ್ ಮಾಡಿ ಎಂದು ಪೋಸ್ಟರ್ ಮೂಲಕ ಈ ಮಾಹಿತಿಯನ್ನ ಈಗಾಗಲೇ ಸಿನಿಮಾ ತಂಡ ಎಲ್ಲರಿಗೂ ತಿಳಿಸಿದೆ.
ಇದನ್ನೂ ಓದಿ: Vishnuvardhan: ವಿಷ್ಣು ಸ್ಮಾರಕದಲ್ಲಿ ಏನೇನಿದೆ ಗೊತ್ತಾ? ವಿಶೇಷತೆಗಳೇನು?
ಮಾರ್ಚ್-17 ರಂದು ರಿಯಲ್ ಸ್ಟಾರ್ ಕಬ್ಜ ರಿಲೀಸ್
ಅಪ್ಪು ಜನ್ಮ ದಿನದಂದು ಕಬ್ಜ ಸಿನಿಮಾ ರಿಲಿಸ್ ಆಗುತ್ತಿದೆ. ಈ ಬಗ್ಗೆ ಅಧಿಕೃತವಾಗಿ ಸಿನಿಮಾ ತಂಡ ಅನೌನ್ಸ್ ಮಾಡಿದೆ. ಪುನೀತ್ ಜನ್ಮ ದಿನದಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿದೆ. ಸದ್ಯಕ್ಕೆ ಚಿತ್ರದ ಆಡಿಯೋ ಅಪ್ಡೇಟ್ಸ್ ಬರಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ