ಕನ್ನಡದಲ್ಲಿ ಒಳ್ಳೆ ಸಿನಿಮಾಗಳು (Kannada Newcomer Movie) ಬರ್ತಾನೇ ಇವೆ. ಕೆಲವು ಥಿಯೇಟರ್ ನಲ್ಲಿ ನಿಲ್ಲುತ್ತವೆ. ಕಡಿಮೆ ಸಮಯದಲ್ಲಿಯೇ ಜನರನ್ನ ರೀಚ್ ಆಗುತ್ತಿವೆ. ಇನ್ನು ಕೆಲವು ಸಿನಿಮಾಗಳು ಹಾಗೆ ಬಂದು ಹೀಗೆ ಹೋಗಿ (Kannada Star Supporting Newcomer Movie) ಬಿಡುತ್ತವೆ. ಹಾಗೆ ತೆರೆಗೆ ಬರುವ ಮುನ್ನ ಭಾರೀ ಪ್ರಚಾರಗಳನ್ನೂ ಕೆಲವು ಸಿನಿಮಾಗಳು ಮಾಡೋದಿದೆ. ಇನ್ನು ಕೆಲವು ಚಿತ್ರಗಳ ಪ್ರಚಾರ ನಿಜಕ್ಕೂ ಕ್ರಿಯೇಟಿವ್ ಆಗಿಯೇ ಇರುತ್ತವೆ. ಆ ಲೆಕ್ಕದಲ್ಲಿ "ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ" ಸಿನಿಮಾ (Hostel Hudugaru Bekagiddare) ಬೇಜಾನ್ ಸೌಂಡ್ ಮಾಡುತ್ತಿದೆ. ತನ್ನ ಕ್ರಿಯೇಟಿವ್ ಪ್ರಚಾರದ ವಿಡಿಯೋ ಮೂಲಕ ಗಮನ ಸೆಳೆಯುತ್ತಿದೆ. ಇಂತಹ ವಿಶೇಷ ಚಿತ್ರಕ್ಕೆ ಕನ್ನಡ ಸ್ಟಾರ್ ನಟರೆಲ್ಲ (Star Support) ಸಪೋರ್ಟ್ ಮಾಡ್ತಿದ್ದಾರೆ.
ಈಗ ನಾಲ್ಕು ಜನ ಸ್ಟಾರ್ ನಟರು ಈ ಚಿತ್ರದ ಬೆನ್ನಿಗೆ ನಿಂತಿದ್ದಾರೆ. ಆ ಮಾಹಿತಿ ಇಲ್ಲಿದೆ ಓದಿ.
ಹಾಸ್ಟೆಲ್ ಹುಡುಗರಿಗೆ ಕನ್ನಡದ ಸ್ಟಾರ್ ನಟರ ಸಪೋರ್ಟ್
ಕನ್ನಡದ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರಕ್ಕೆ ಎಲ್ಲರೂ ಸಪೋರ್ಟ್ ಮಾಡ್ತಿದ್ದಾರೆ. ಚಿತ್ರದಲ್ಲಿರೋ ಹೊಸಬರ ಈ ಚಿತ್ರದ ಕಂಟೆಂಟ್ ಚೆನ್ನಾಗಿದೆ ಅನ್ನೋ ಕಾರಣಕ್ಕೆ ಎಲ್ಲರೂ ಬೆನ್ನಿಗೆ ನಿಂತಂತಿದೆ. ಸ್ಟಾರ್ ನಟರು ಸುಮ್ನೆ ಯಾವುದನ್ನೂ ಒಪ್ಪಿಕೊಳ್ಳುವುದಿಲ್ಲ.
ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರದಲ್ಲಿ ವಿಷಯ ಇದೆ. ಇದನ್ನ ಅರ್ಥ ಮಾಡಿಕೊಂಡಿರೋ ನಟರು ಈ ಚಿತ್ರಕ್ಕೆ ತಮ್ಮದೇ ರೀತಿಯಲ್ಲಿಯೇ ಬೆಂಬಲ ಕೊಡ್ತಿದ್ದಾರೆ.
ರಿಷಬ್ ಶೆಟ್ಟಿ-ರಕ್ಷಿತ್ ಶೆಟ್ಟಿ-ಡಾಲಿ-ಧ್ರುವ ಸಪೋರ್ಟ್
ಹಾಸ್ಟೆಲ್ ಹುಡುಗರು ಚಿತ್ರಕ್ಕೆ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ, ಡಾಲಿ ಧನಂಜಯ್, ರಿಷಬ್ ಶೆಟ್ರು, ರಕ್ಷಿತ್ ಶೆಟ್ಟಿ ಇವರೆಲ್ಲ ಸಪೋರ್ಟ್ ಮಾಡ್ತಿದ್ದಾರೆ.
ಈ ಸ್ಟಾರ್ ನಟರು ಹಾಸ್ಟೆಲ್ ಹುಡುಗರು ಚಿತ್ರದ ಒಂದು ಹಾಡನ್ನ ರಿಲೀಸ್ ಮಾಡುತ್ತಿದ್ದಾರೆ. ಚಿತ್ರದ "ಪ್ರೋಟೆಸ್ಟ್" ವಿಡಿಯೋ ಸಾಂಗ್ ರಿಲೀಸ್ ಮಾಡುತ್ತಿದ್ದಾರೆ.
ಸ್ಟಾರ್ ನಟರಿಂದ ಏಕಕಾಲಕ್ಕೆ ಪ್ರೋಟೆಸ್ಟ್ ಸಾಂಗ್ ರಿಲೀಸ್
ಕನ್ನಡದ ಸ್ಟಾರ್ ನಟರೆಲ್ಲ ಈಗ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಪ್ರತ್ಯೇಕವಾಗಿ ಒಂದೊಂದು ಪೇಜ್ ಅನ್ನೂ ಹೊಂದಿದ್ದಾರೆ. ಅದೇ ಪೇಜ್ ನಲ್ಲಿಯೆ ಏಕಕಾಲದಲ್ಲಿಯೇ ಸಿನಿಮಾದ ವಿಡಿಯೋ ಸಾಂಗ್ ಅನ್ನ ರಿಲೀಸ್ ಮಾಡುತ್ತಿದ್ದಾರೆ.
ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಹಾಡು ಜನವರಿ-05 ರಂದು ಮಧ್ಯಾಹ್ನ 12 ಗಂಟೆಗೆ ರಿಲೀಸ್ ಆಗುತ್ತದೆ. ಇದನ್ನ ರಿಲೀಸ್ ಮಾಡೋ ಮೂಲಕ ಕನ್ನಡದ ಸ್ಟಾರ್ ನಟರು ಈ ಒಂದು ಚಿತ್ರಕ್ಕೆ ತಮ್ಮದೇ ರೀತಿಯಲ್ಲಿ ಸಪೋರ್ಟ್ ಮಾಡುತ್ತಿದ್ದಾರೆ.
ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ
ಹೊಸಬರ ಈ ಚಿತ್ರಕ್ಕೆ ಕಾಂತಾರ ಚಿತ್ರ ಖ್ಯಾತಿಯ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ ಮಾಡಿದ್ದಾರೆ. ನಿತಿನ್ ಕೃಷ್ಣಮೂರ್ತಿ ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ.
ಹಾಸ್ಟೆಲ್ ಹುಡುಗರಿಗೆ ಪುನೀತ್ ರಾಜ್ ಕುಮಾರ್ ಸಪೋರ್ಟ್
ಹಾಸ್ಟೆಲ್ ಹುಡುಗರು ಚಿತ್ರಕ್ಕೆ ನಿಜಕ್ಕೂ ಒಳ್ಳೆ ಬೆಂಬಲ ಸಿಕ್ಕಿದೆ. ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಕೂಡ ಈ ಚಿತ್ರಕ್ಕೆ ಸಪೋರ್ಟ್ ಮಾಡಿದ್ದರು. ಚಿತ್ರಕ್ಕೆ ಸಂಬಂಧಿಸಿದಂತೆ ತಮ್ಮದೇ ರೀತಿಯಲ್ಲಿಯೇ ಪ್ರೋತ್ಸಾಹ ನೀಡಿದ್ದರು.
ಚಿತ್ರಕ್ಕೆ ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಸಪೋರ್ಟ್
ಕನ್ನಡದ ಈ ಚಿತ್ರಕ್ಕೆ ಎಲ್ಲರೂ ಪ್ರೋತ್ಸಾಹ ಕೊಡ್ತಿದ್ದಾರೆ. ನಟಿ ರಮ್ಯಾ ಅಂತೂ ಚಿತ್ರದ ಪ್ರಚಾರದ ವಿಡಿಯೋದಲ್ಲಿಯೇ ಅಭಿನಯಿಸಿದ್ದಾರೆ. ಈ ಮೂಲಕ ಸಿನಿಮಾಕ್ಕೆ ಸಾಥ್ ಕೊಟ್ಟಿದ್ದಾರೆ.
ಇದನ್ನೂ ಓದಿ: Rishab Shetty: ರಿಷಬ್ ಶೆಟ್ಟಿ ಹೊಸ ಪ್ರಾಜೆಕ್ಟ್ ಅನೌನ್ಸ್, ಶೀಘ್ರದಲ್ಲೇ ಬಿಡುಗಡೆಗೆ ರೆಡಿ!
ಇದೇ ರೀತಿ ಇತರ ಕಲಾವಿದರು ಆ್ಯಕ್ಟ್ ಮಾಡಿದ್ದಾರೆ. ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಕೂಡ ಚಿತ್ರಕ್ಕೆ ಸಾಥ್ ಕೊಟ್ಟಿದ್ದಾರೆ. ಚಿತ್ರದ ತಮ್ಮ ಸಂಗೀತಕ್ಕೆ ಸಂಬಂಧಿಸಿದ ವಿಷಯವನ್ನ ಪ್ರಚಾರ ಮಾಡೋಕೆ ಮಾಡಿದ ವೀಡಿಯೋದಲ್ಲಿ ಆ್ಯಕ್ಟ್ ಕೂಡ ಮಾಡಿದ್ದಾರೆ.
ಇನ್ನು ಚಿತ್ರದ ರಿಲೀಸ್ ಡೇಟ್ ಇನ್ನೂ ಅನೌನ್ಸ್ ಆಗಿಲ್ಲ. ಆದರೆ, ಸಿನಿಮಾ ತಂಡ ಅದನ್ನ ಶೀಘ್ರದಲ್ಲಿ ಅನೌನ್ಸ್ ಮಾಡಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ