• Home
 • »
 • News
 • »
 • entertainment
 • »
 • O Film: ಓ ಚಿತ್ರದಲ್ಲಿ ರೊಮ್ಯಾಂಟಿಕ್ ಹಾಡು ಹಾಡಿರುವ ಅಪ್ಪು, ಪುನೀತ್ ನೆನೆದ ಚಿತ್ರತಂಡ

O Film: ಓ ಚಿತ್ರದಲ್ಲಿ ರೊಮ್ಯಾಂಟಿಕ್ ಹಾಡು ಹಾಡಿರುವ ಅಪ್ಪು, ಪುನೀತ್ ನೆನೆದ ಚಿತ್ರತಂಡ

ಓ ಚಿತ್ರದಲ್ಲಿ ರೊಮ್ಯಾಂಟಿಕ್ ಹಾಡು ಹಾಡಿರುವ ಅಪ್ಪು

ಓ ಚಿತ್ರದಲ್ಲಿ ರೊಮ್ಯಾಂಟಿಕ್ ಹಾಡು ಹಾಡಿರುವ ಅಪ್ಪು

ಹಾರರ್ ಚಿತ್ರವಾದ ಓ ಗೆ ಪುನೀತ್ ಅವರು ಹಾಡು ಹೇಳಿದ್ದಾರೆ. ಏನೋ ಆಗಿದೆ, ಜಾದೂ ಆಗಿದೆ ಎಂದು ತಮ್ಮ ದನಿಯಲ್ಲಿ ಜಾದು ಮಾಡಿದ್ದಾರೆ.

 • News18 Kannada
 • Last Updated :
 • Karnataka, India
 • Share this:

  ಜೀ ಕನ್ನಡದಲ್ಲಿ (Zee Kannada) ಪ್ರಸಾರವಾಗುತ್ತಿರುವ ಪಾರು ಧಾರಾವಾಹಿ (Serial) ಎಲ್ಲರಿಗೂ ಗೊತ್ತೇ ಇದೆ. ಅದರಲ್ಲಿ ಹೀರೋ ತಮ್ಮ ಪ್ರೀತು ಪಾತ್ರ ಮಾಡುತ್ತಿರುವ ನಟ ಸಿದ್ದು ಮೂಲಿಮನಿ  ಅವರು ಓ (O) ಎಂಬ ಚಿತ್ರದಲ್ಲಿ ನಟಿಸಿದ್ದಾರೆ. ಇದೊಂದು ಹಾರರ್ (Horror ) ಚಿತ್ರವಾಗಿದ್ದು. ನಟಿಯರಾಗಿ ಮಿಲನಾ ನಾಗರಾಜ್, ಅಮೃತಾ ಅಯ್ಯಂಗಾರ್ ಪಾತ್ರ ನಿರ್ವಹಿಸಿದ್ದಾರೆ. ಇದರಲ್ಲಿ ಇಬ್ಬರು ಅಕ್ಕ ತಂಗಿಯರಂತೆ. ಓ ಚಿತ್ರದಲ್ಲಿ ಮಾಸ್ಟರ್ ಆಲಾಪ್ ಸಹ ಅಭಿನಯಿಸಿದ್ದಾರೆ. ಅಲ್ಲದೇ ಓ ಚಿತ್ರಕ್ಕೆ ರೊಮ್ಯಾಂಟಿಕ್ ಹಾಡೊಂದನ್ನು ಪುನೀತ್ ರಾಜ್‍ಕುಮಾರ್ (Punit Rajkumar) ಅವರು ಹೇಳಿದ್ದಾರೆ. ಈ ಹಾಡು (Song) ಇತ್ತೀಚೆಗಷ್ಟೇ ರಿಲೀಸ್ ಆಗಿದೆ. ಈ ಮೂಲಕ ಅಪ್ಪು ಅವರು ಹೊಸಬರ ಸಿನಿಮಾಗಳಿಗೆ ಸಾಥ್ ನೀಡುತ್ತಿದ್ದಿದ್ದು ಮತ್ತೊಮ್ಮೆ ಬಯಲಾಗಿದೆ.


  ಏನೋ ಆಗಿದೆ, ಜಾದೂ ಆಗಿದೆ


  ಪುನೀತ್ ರಾಜ್ ಕುಮಾರ್ ಕೇವಲ ನಟನೆಯಿಂದ ಮಾತ್ರವಲ್ಲ, ಹಾಡು ಹೇಳುವುದಲ್ಲೂ ಎತ್ತಿದ ಕೈ. ಅದರಲ್ಲೂ ಹೊಸಬರ ಸಿನಿಮಾಗಳಿಗೆ ನೋ ಎನ್ನದೇ ಹಾಡುಗಳನ್ನು ಹೇಳುತ್ತಾ ಇದ್ದರು. ಹಾರರ್ ಚಿತ್ರವಾದ ಓ ಗೆ ಪುನೀತ್ ಅವರು ಹಾಡು ಹೇಳಿದ್ದಾರೆ. ಏನೋ ಆಗಿದೆ, ಜಾದೂ ಆಗಿದೆ ಎಂದು ತಮ್ಮ ದನಿಯಲ್ಲಿ ಜಾದು ಮಾಡಿದ್ದಾರೆ.


  ಓ ಒಂದು ಹಾರರ್ ಸಿನಿಮಾ
  ಮಹೇಶ್ ಸಿ.ಅಮ್ಮಲ್ಲಿದೊಡ್ಡಿ ಅವರು ಓ ಚಿತ್ರಕ್ಕೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ನಟ ಸಿದ್ದು ಮೂಲಿಮನಿ, ನಟಿಯರಾಗಿ ಮಿಲನಾ ನಾಗರಾಜ್, ಅಮೃತಾ ಅಯ್ಯಂಗಾರ್. ಇಬ್ಬರು ಅಕ್ಕ ತಂಗಿಯರಾಗಿ ನಟಿಸಿದ್ದಾರೆ. ಇದೊಂದು ವಿಭಿನ್ನ ಪ್ರೇಮಕಥಾಹಂದರ ಇರುವ ಹಾರರ್ ಚಿತ್ರ. ಇತ್ತೀಚೆಗಷ್ಟೇ ಈ ಚಿತ್ರದ ಟ್ರೈಲರ್ ಬಿಡುಗಡೆಯಾಗಿ ವೈರಲ್ ಆಗಿತ್ತು.


  ಅಪ್ಪು ಅವರು ಹಾಡಿರುವ ಏನೋ ಆಗಿದೆ, ಜಾದೂ ಆಗಿದೆ ಎಂಬ ಹಾಡಿನ ಬಿಡುಗಡೆ ಸಮಾರಂಭ ಚಲನಚಿತ್ರ ಕಲಾವಿದರ ಸಂಘದ ಆವರಣದಲ್ಲಿ ನಡೆದಿದೆ. ಭರ್ಜರಿ ಚೇತನ್ ಈ ಹಾಡಿಗೆ ಸಾಹಿತ್ಯ ರಚಿಸಿದ್ದಾರೆ.


  ಇದನ್ನೂ ಓದಿ: Gattimela: ತಮ್ಮನನ್ನು ಕಾಪಾಡೋಕೆ ಟೈಟ್ ಸೆಕ್ಯೂರಿಟಿ! ವೇದಾಂತ ತಮ್ಮ ದ್ರುವನಿಗೆ ಪ್ರಾಣಾಪಾಯ


  ನಿರ್ಮಾಪಕ ಕಿರಣ್ ತಲಕಾಡು ಹೇಳಿದ್ದೇನು?
  ಏನೋ ಆಗಿದೆ, ಜಾದೂ ಆಗಿದೆ ಹಾಡನ್ನು ಪುನೀತ್ ರಾಜ್‍ಕುಮಾರ್ ಅವರಿಂದ ಹಾಡಿಸಿದೆವು. ಹಾಡಿನ ಬಿಡುಗಡೆಗೆ ಅವರೇ ಬರಬೇಕಿತ್ತು. ಏಕಾಕ್ಷರ ಬ್ಯಾನರ್ ಅಡಿಯಲ್ಲಿ ಓ ಚಿತ್ರ ಮಾಡಿದ್ದೇವೆ. ಚಿತ್ರ ಅದ್ಭುತ ಅನುಭವ ನೀಡುತ್ತದೆ. ಜನರಿಗೆ ಖಂಡಿತ ಇಷ್ಟವಾಗುತ್ತದೆ. ಸೆನ್ಸಾರ್ ಮಂಡಳಿಯವರು ಸಹ ಸಿನಿಮಾ ನೋಡಿ ಚಿತ್ರ ಚೆನ್ನಾಗಿ ಬಂದಿದೆಯೆದು ಹೇಳಿದ್ದಾರೆ ಎಂದು ನಿರ್ಮಾಪಕ ಕಿರಣ್ ತಲಕಾಡು ಹೇಳಿದ್ದಾರೆ.


  kannada horror film, punit rajkumar sing one song of o, appu support new films, ಓ ಚಿತ್ರದಲ್ಲಿ ರೊಮ್ಯಾಂಟಿಕ್ ಹಾಡು ಹಾಡಿರುವ ಅಪ್ಪು, ಪುನೀತ್ ನೆನೆದ ಚಿತ್ರತಂಡ, kannada news, karnataka news,
  ಓ ಚಿತ್ರತಂಡ


  ಅಮೃತಾ ಅಯ್ಯಂಗಾರ್ ಏನ್ ಹೇಳಿದ್ರು?
  ನಾನು ಚಿಕ್ಕಂದಿನಿಂದಲೇ ಪುನೀತ್ ಅವರ ಅಭಿಮಾನಿ. ಅವರು ಇಲ್ಲದೇ ಇರುವುದು ತುಂಬಾ ಬೇಸರ. ಅವರನ್ನು ನಾವೆಲ್ಲ ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ. ನಮ್ಮ ಚಿತ್ರದಲ್ಲಿ ಹಾರರ್ ಎಫೆಕ್ಟ್ ತುಂಬಾ ಚೆನ್ನಾಗಿ ಮೂಡಿಬಂದಿದೆ ಎಲ್ಲರೂ ನೋಡಿ ಎಂದು ಅಮೃತಾ ಅಯ್ಯಂಗಾರ್ ಹೇಳಿದ್ದಾರೆ.


  kannada horror film, punit rajkumar sing one song of o, appu support new films, ಓ ಚಿತ್ರದಲ್ಲಿ ರೊಮ್ಯಾಂಟಿಕ್ ಹಾಡು ಹಾಡಿರುವ ಅಪ್ಪು, ಪುನೀತ್ ನೆನೆದ ಚಿತ್ರತಂಡ, kannada news, karnataka news,
  ಓ ಚಿತ್ರತಂಡ


  ಇದನ್ನೂ ಓದಿ: Kannadathi: ಹರ್ಷ ಅಮ್ಮಮ್ಮನ ಬಳಿ ಮಾತನಾಡುವಾಗಲೇ ಕೋಮಾಗೆ ಜಾರಿದ ರತ್ನಮಾಲಾ! 


  ಮತ್ತೊಮ್ಮೆ ಪುನೀತ್ ಹಾಡು ಕೇಳಬಹುದು
  ಅಪ್ಪು ನಮ್ಮನ್ನು ಅಗಲಿ ಒಂದು ವರ್ಷ ಆಗುತ್ತಾ ಬಂತು. ಆದ್ರೆ ಅವರ ನೆನಪು ಮಾತ್ರ ಮಾಸಿಲ್ಲ. ಅವರ ಸಿನಿಮಾಗಳ ಮೂಲಕ ಅವರು ಜೀವಂತ ಇದ್ದಾರೆ. ಅವರ ನಟನೆಯಲ್ಲಿ ಅವರು ಬದುಕಿದ್ದಾರೆ. ಅಭಿಮಾನಿಗಳಿಗೆ ಚಿತ್ರಗಳ ಮೂಲಕ ಒಳ್ಳೆಯ ಸಂದೇಶ ಸಾರಿದ್ದಾರೆ. ಪುನೀತ್ ಇಲ್ಲ ಎನ್ನುವುದನ್ನು ಇನ್ನೂ ನಂಬಲು ಆಗುತ್ತಿಲ್ಲ. ಅವರು ಧ್ವನಿಯನ್ನು ನಾವು ಈ ಚಿತ್ರದ ಮೂಲಕ ಮತ್ತೊಮ್ಮೆ ಕೇಳಬಹುದು. ವಿ ಆಲ್ ಮಿಸ್ ಯು ಅಪ್ಪು ಸರ್.

  Published by:Savitha Savitha
  First published: