ಮೊದಲೆಲ್ಲ ಸಿಂಗಲ್ (Kannada Hit Movies Re-Release) ಥಿಯೇಟರ್‌ಗಳೇ ಹೆಚ್ಚು. ಶುಕ್ರವಾರ ಬಂದ್ರೆ ಸಾಕು, ಹೊಸ ಸಿನಿಮಾಗಳ ಅಬ್ಬರ ಇಲ್ಲಿ ಇನ್ನಿಲ್ಲದಂತೆ ರಂಗೇರುತ್ತವೆ. ಆದರೆ ಮಲ್ಟಿಪ್ಲೆಕ್ಸ್ ಥಿಯೇಟರ್ (Hit Movies are Re-Release) ಬಂದ್ಮೇಲೆ ಸಿಂಗಲ್ ಥಿಯೇಟರ್ ಕ್ರೇಜ್ ಕಡಿಮೆ ಆಗಿದೆ. ಮಲ್ಟಿಪ್ಲೆಕ್ಸ್‌ನಲ್ಲಿ ಒಳ್ಳೆ ವ್ಯವಸ್ಥೆ ಇರುತ್ತವೆ. ಆದರೆ ಅಲ್ಲಿ ನಮ್ಮ ನೆಚ್ಚಿನ ಕನ್ನಡ ಸಿನಿಮಾಗಳೇ ಬರೋದಿಲ್ವೇ? ಬಂದ್ರು (Kannada Hit Movies News) ಬೇಜಾನ್ ದುಡ್ಡು ಕಿತ್ತುಕೊಳ್ತಾರೆ ಅನ್ನುವ ಒಂದು ದೂರು ಇದ್ದೇ ಇದೆ. ಕನ್ನಡ ಸಿನಿಮಾಗಳು ಮಲ್ಟಿಪ್ಲೆಕ್ಸ್‌ನಲ್ಲಿ ಓಡೋದಿಲ್ಲ ಅನ್ನವು ಮಾತು ಮಲ್ಟಿಪ್ಲೆಕ್ಸ್ (Sandalwood Film Update) ಥಿಯೇಟ್‌ಗಳಿಂದ ಕೇಳಿ ಬರ್ತಾನೇ ಇದೆ. ಆದರೆ ಇದೇ ಮಲ್ಟಿಪ್ಲೆಕ್ಸ್ ಥಿಯೇಟರ್‌ಗಳು ಈಗೊಂದು ಹೊಸ ಐಡಿಯಾ ಮಾಡಿವೆ. ಅದೇನೂ ಅನ್ನೋದು ಹೇಳ್ತಿವಿ ಓದಿ.
ಬೆಂಗಳೂರಿನ ಪಿವಿಆರ್ ಮತ್ತು ಐನಾಕ್ಸ್ ಈಗೊಂದು ಐಡಿಯಾ ಮಾಡಿವೆ. ಇದರಿಂದ
ಕನ್ನಡ ಸಿನಿಮಾ ಪ್ರೇಮಿಗಳು ಫುಲ್ ಖುಷಿ ಆಗಿರೋದಂತೂ ನಿಜ, ಆ ಹೊಸ ಯೋಚನೆ ಒಂದೇ ದಿನಕ್ಕೆ ಮುಗಿಯೋದಿಲ್ಲ. ಒಂದು ವಾರ ಕಾಲ ಜಾರಿಯಲ್ಲಿರುತ್ತದೆ.
ಮಲ್ಟಿಪ್ಲೆಕ್ಸ್‌ನಲ್ಲಿ ಪದರ್ಶನ ಆಗುವ ಕನ್ನಡ ಸಿನಿಮಾ ಯಾವವು?
ಒಂದು ವಾರಗಳ ಕಾಲ ಕನ್ನಡ ಸಿನಿಮಾಗಳನ್ನ ಪ್ರದರ್ಶನ ಮಾಡೋಕೆ ಪಿವಿಆರ್ ಮತ್ತು ಐನಾಕ್ಸ್ ಡಿಸೈನ್ ಮಾಡಿವೆ. ಮಲ್ಟಿಪ್ಲೆಕ್ಸ್‌ನಲ್ಲಿ ಇಡೀ ಒಂದು ವಾರ ಕನ್ನಡದ ಸಿನಿಮಾಗಳ ಅಬ್ಬರ ಇರುತ್ತದೆ. ನಿಮಗಿಷ್ಟವಾದ ಸಿನಿಮಾವನ್ನ ಇಲ್ಲಿ ವೀಕ್ಷಿಸಿ ಎಂಜಾಯ್ ಮಾಡಬಹುದು.
ಅಂದ್ಹಾಗೆ ಕನ್ನಡದ ಸಿನಿಮಾಗಳಲ್ಲಿ ಯಾವ ಯಾವ ಸಿನಿಮಾಗಳು ಒಂದು ವಾರ ಇಲ್ಲಿ ಪ್ರದರ್ಶನ ಆಗುತ್ತವೆ ಅನ್ನುವ ಒಂದು ಪ್ರಶ್ನೆಗೆ ಇಲ್ಲಿದೆ ಉತ್ತರ.
ರಾಜಕುಮಾರ
ಕೆಜಿಎಫ್-1
ಮಫ್ತಿ
ಮಾಸ್ಟರ್ ಪೀಸ್
ಗಂಧದ ಗುಡಿ
ಗರುಡ ಗಮನ ವೃಷಭ ವಾಹನ
ಇಷ್ಟು ಸಿನಿಮಾಗಳು ಒಂದು ವಾರಗಳ ಕಾಲ ಪಿವಿಆರ್ ಮತ್ತು ಐನಾಕ್ಸ್ ಮಲ್ಟಿಪ್ಲೆಕ್ಸ್ ಥಿಯೇಟರ್‌ನಲ್ಲಿ ರಿಲೀಸ್ ಆಗುತ್ತಿವೆ. ಹಾಗೆ ಈ ಸಿನಿಮಾ ಪ್ರದರ್ಶನ ಎಲ್ಲಿಂದ ಎಲ್ಲಿವರೆಗೂ ಗೊತ್ತೇ? ಇಲ್ಲಿದೆ ನೋಡಿ.
ಇದೇ ಮೇ-19 ರಿಂದ ಮೇ-25 ರವರೆಗೂ ಕನ್ನಡ ಸಿನಿಮಾ ಪ್ರದರ್ಶನ ವಾರ
ರಾಜಕುಮಾರ- ಶುಕ್ರವಾರ
ಕೆಜಿಎಫ್-1- ಭಾನುವಾರ
ಮಫ್ತಿ- ಸೋಮವಾರ
ಮಾಸ್ಟರ್ ಪೀಸ್-ಮಂಗಳವಾರ
ಗಂಧದ ಗುಡಿ-ಬುಧವಾರ
ಗರುಡ ಗಮನ ವೃಷಭ ವಾಹನ-ಗುರುವಾರ
ಅಪ್ಪು ಎರಡು ಸಿನಿಮಾ-ಯಶ್ ಸಿನಿಮಾ ಮರು ಪ್ರದರ್ಶನ
ಒಂದೊಂದು ದಿನ ಒಂದು ಸಿನಿಮಾ ಮಲ್ಲಿಪ್ಲೆಕ್ಸ್‌ನಲ್ಲಿ ಹೀಗೆ ರಿಲೀಸ್ ಆಗುತ್ತಿವೆ. ಹಾಗೆ ಪುನೀತ್ ರಾಜ್‌ಕುಮಾರ್ ಎರಡು ಸಿನಿಮಾಗಳು ಮತ್ತು ಯಶ್ ಎರಡು ಸಿನಿಮಾಶಗಳು ಇಲ್ಲಿ ಮರು ಪ್ರದರ್ಶನ ಆಗುತ್ತಿವೆ.
ಕನ್ನಡದ ಸಿನಿಮಾಗಳಿಗೆ ಟಿಕೆಟ್ ದರ 99 ರೂಪಾಯಿಂದ ಶುರು
ಟಿಕೆಟ್ ರೇಟ್ ಕೂಡ ಕಡಿಮೆ ಮಾಡಲಾಗಿದೆ. 99 ರಿಂದಲೇ ಟಿಕೇಟ್ ರೇಟ್ ಶುರು ಆಗುತ್ತವೆ. ಕನ್ನಡ ಸಿನಿಮಾ ಪ್ರೇಮಿಗಳು ತಮ್ಮ ನೆಚ್ಚಿನ ನಾಯಕ ನಟರ ಚಿತ್ರಗಳನ್ನ ಮತ್ತೊಮ್ಮೆ ಇಲ್ಲಿ ವೀಕ್ಷಿಸಿ ಎಂಜಾಯ್ ಮಾಡಬಹುದಾಗಿದೆ.
ಆದರೆ ಈ ಒಂದು ಆಫರ್ ಎಲ್ಲ ತಿಂಗಳು ಇರುತ್ತದೆಯೇ? ಅಂದ್ಹಾಗೆ ಈಗ ಯಾಕೆ ಈ ಅಫರ್ ಕೊಡಲಾಗಿದೆ. ಇಲ್ಲಿವರೆಗೂ ಕನ್ನಡ ಸಿನಿಮಾಗಳಿಗೆ ಇಂತಹ ಚಾನ್ಸ್ ಇರಲೇ ಇಲ್ಲ. ದಿಢೀರನೇ ಈ ಒಂದು ಆಫರ್ ಯಾಕೆ? ಈ ಎಲ್ಲ ಪ್ರಶ್ನೆಗೆ ಉತ್ತರ ಇಲ್ವೇ ಇಲ್ಲ ಬಿಡಿ.
ಇದನ್ನೂ ಓದಿ: Darling Krishna: ಲವ್ ಮಾಕ್ಟೆಲ್ ಜೋಡಿಯ ಪ್ಯಾರಿಸ್ ಪ್ರಣಯ, ಇದು ರೀಲ್ ಅಲ್ಲ ರಿಯಲ್!
ಕನ್ನಡ ಸಿನಿಮಾಗಳಿಗೆ ಯಾಕೆ ಸ್ಪೆಷಲ್ ಆಫರ್ ಸದಾ ಕೊಡಬಾರದು?
ಆದರೂ ತಾತ್ಕಾಲಿಕ ಸ್ಪೆಷಲ್ ಆಫರ್ ನಿಜಕ್ಕೂ ಕನ್ನಡ ಸಿನಿಪ್ರೇಮಿಗಳಿಗೆ ಖುಷಿಕೊಟ್ಟಿದೆ. ಹಿಟ್ ಆಗಿರೋ ಸಿನಿಮಾಗಳನ್ನ ರಿಲೀಸ್ ಮಾಡೋ ಬದಲು, ಹೊಸ ಸಿನಿಮಾಗಳಿಗೆ ಹೀಗೆ ಒಂದು ವಾರಗಳ ಕಾಲ ಆಫರ್ ಕೊಟ್ರೆ ಕನ್ನಡ ಸಿನಿಮಾಗಳು ಬೆಳೆಯುತ್ತವೆ. ಕನ್ನಡ ಸಿನಿ ಪ್ರೇಮಿಗಳು ಎಲ್ಲ ಸಿನಿಮಾಗಳನ್ನ ಮಲ್ಟಿಪ್ಲೆಕ್ಸ್‌ನಲ್ಲಿ ನೋಡಿ ಖುಷಿ ಪಡಬಹುದು ಅಲ್ವೇ?
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ