ನಂದಮೂರಿ ಬಾಲಕೃಷ್ಣಗೆ ಜೊತೆಯಾದ ಕನ್ನಡತಿ ಶ್ರದ್ಧಾ ಶ್ರೀನಾಥ್​!

ಬಾಲಿವುಡ್​ನಲ್ಲಿ ತೆರೆಕಂಡ 'ಪಿಂಕ್​' ಚಿತ್ರದ ತಮಿಳು ರಿಮೇಕ್​ನಲ್ಲಿ ತಾಪ್ಸೀ ಪನ್ನು ನಿರ್ವಹಿಸಿದ್ದ ಪಾತ್ರದಲ್ಲಿ ಶ್ರದ್ಧಾ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ಅಜಿತ್​ ಮುಖ್ಯಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ. ರಾಣಾ ದಗ್ಗುಬಾಟಿ ನಿರ್ಮಾಣದ ಸಿನಿಮಾಕ್ಕೂ ಶ್ರದ್ಧಾ ನಾಯಕಿ. ಹೀಗಿರುವಾಗಲೇ ಅವರು ಮತ್ತೊಂದು ಚಿತ್ರದಲ್ಲಿ ಚಾನ್ಸ್​ ಗಿಟ್ಟಿಸಿಕೊಂಡಿರುವುದು ವಿಶೇಷ. 

Rajesh Duggumane | news18
Updated:February 3, 2019, 11:04 AM IST
ನಂದಮೂರಿ ಬಾಲಕೃಷ್ಣಗೆ ಜೊತೆಯಾದ ಕನ್ನಡತಿ ಶ್ರದ್ಧಾ ಶ್ರೀನಾಥ್​!
ಶ್ರದ್ಧಾ-ಬಾಲಯ್ಯ
Rajesh Duggumane | news18
Updated: February 3, 2019, 11:04 AM IST
ನಟಿ ಶ್ರದ್ಧಾ ಶ್ರೀನಾಥ್​ ಕೈಯಲ್ಲಿ ಈಗ ಸಾಕಷ್ಟು ಚಿತ್ರಗಳಿವೆ. ಕನ್ನಡದ ‘ಯು ಟರ್ನ್​​’ ಚಿತ್ರದ ನಂತರ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿರುವ ಅವರು, ಪರಭಾಷೆಗೂ ಕಾಲಿಟ್ಟಿದ್ದಾರೆ. ಬಾಲಿವುಡ್, ಕಾಲಿವುಡ್​, ಟಾಲಿವುಡ್​ನಲ್ಲಿ ಶ್ರದ್ಧಾ ಬಣ್ಣ ಹಚ್ಚುತ್ತಿದ್ದಾರೆ. ಈ ಮಧ್ಯೆ ತೆಲುಗು ಚಿತ್ರರಂಗದಲ್ಲಿ ಹೊಸದೊಂದು ಸುದ್ದಿ ಹರಿದಾಡಿದೆ. ಅದೇನೆಂದರೆ, ಶ್ರದ್ಧಾ ತೆಲುಗು ಸೂಪರ್​ಸ್ಟಾರ್​ ನಂದಮೂರಿ ಬಾಲಕೃಷ್ಣ ಅವರ ಜೊತೆಯಾಗಿ ನಟಿಸುತ್ತಿದ್ದಾರಂತೆ.

‘ಎನ್​ಟಿಆರ್​’ ಚಿತ್ರದಲ್ಲಿ ಬಾಲಯ್ಯ ನಟಿಸಿದ್ದು, ಈಗಾಗಲೇ ಒಂದು ಚಾಪ್ಟರ್​ ತೆರೆಕಂಡಿದೆ. ಮತ್ತೊಂದು ಚಾಪ್ಟರ್​ ಇದೇ ವಾರ ತೆರೆಗೆ ಬರುತ್ತಿದೆ. ಬಾಲಕೃಷ್ಣ ತಮ್ಮ ಮುಂದಿನ ಚಿತ್ರಕ್ಕಾಗಿ ಬೋಯಪತಿ ಶ್ರೀನು ಜೊತೆ ಕೈಜೋಡಿಸಿದ್ದಾರೆ. ಈ ಚಿತ್ರಕ್ಕಾಗಿ  ನಾಯಕಿಯ ಹುಡುಕಾಟದಲ್ಲಿರುವ ಚಿತ್ರತಂಡ, ಶ್ರದ್ಧಾ ಜೊತೆ ಮಾತುಕತೆ ನಡೆಸಿದೆ.

ಈಗಾಗಲೇ ‘ಸಿಂಹ’ ಹಾಗೂ ‘ಲೆಜೆಂಡ್​’ ಚಿತ್ರಗಳಲ್ಲಿ ಬಾಲಯ್ಯ ಹಾಗೂ ಶ್ರೀನು ಒಟ್ಟಿಗೆ ಕೆಲಸ ಮಾಡಿದ್ದರು. ಇವೆರಡೂ ಸಿನಿಮಾಗಳಲ್ಲಿ ಒಬ್ಬರಿಗಿಂತ ಹೆಚ್ಚಿನ ನಾಯಕಿಯರಿದ್ದರು. ಹಾಗಾಗಿ, ಈ ಚಿತ್ರದಲ್ಲಿ ಶ್ರದ್ಧಾ ಸೋಲೋ ಹೀರೋಯಿನ್​ ಆಗಿ ಕಾಣಿಸಿಕೊಳ್ಳಲಿದ್ದಾರೋ ಅಥವಾ ಮತ್ತೊಬ್ಬ ಹೀರೋಯಿನ್​ ಚಿತ್ರದಲ್ಲಿ ಇರಲಿದ್ದಾರೋ ಎನ್ನುವ ಪ್ರಶ್ನೆ ಕಾಡಿದೆ.

ಇದನ್ನೂ ಓದಿ: ಎಲ್ಲೆಲ್ಲೂ 'ನಟಸಾರ್ವಭೌಮ'ನ ಕ್ರೇಜ್​; ಊರ್ವಶಿಯಲ್ಲಿ ಮೊದಲ ಶೋನ ಎಲ್ಲಾ ಟಿಕೆಟ್​ ಖರೀದಿಸಿದ ಅಭಿಮಾನಿ ಬಳಗ!

ಸದ್ಯ ಶ್ರದ್ಧಾ ಬಾಲಿವುಡ್​ನ ‘ಮಿಲನ್​ ಟಾಕೀಸ್​’ ಚಿತ್ರದಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಈಗಾಗಲೇ ಚಿತ್ರದ ಶೂಟಿಂಗ್​ ಪೂರ್ಣಗೊಂಡಿದೆ. ಅಂತೆಯೇ, ಬಾಲಿವುಡ್​ನಲ್ಲಿ ತೆರೆಕಂಡ 'ಪಿಂಕ್'​ ಚಿತ್ರದ ತಮಿಳು ರಿಮೇಕ್​ನಲ್ಲಿ ತಾಪ್ಸೀ ಪನ್ನು ನಿರ್ವಹಿಸಿದ್ದ ಪಾತ್ರದಲ್ಲಿ ಶ್ರದ್ಧಾ ಕಾಣಿಸಿಕೊಳ್ಳುತ್ತಿದ್ದಾರೆ. ರಾಣಾ ದಗ್ಗುಬಾಟಿ ನಿರ್ಮಾಣದ ಸಿನಿಮಾಕ್ಕೂ ಶ್ರದ್ಧಾ ನಾಯಕಿ. ಹೀಗಿರುವಾಗಲೇ ಅವರು ಮತ್ತೊಂದು ಚಿತ್ರದಲ್ಲಿ ಚಾನ್ಸ್​ ಗಿಟ್ಟಿಸಿಕೊಂಡಿರುವುದು ವಿಶೇಷ.

First published:February 3, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ