• Home
  • »
  • News
  • »
  • entertainment
  • »
  • Head Bush: ದಾವಣಗೆರೆಗೆ ಬರ್ತಿದಾರೆ ಡಾನ್ ಜಯರಾಜ್! ಮೋಹಕತಾರೆ ರಮ್ಯ, ಡಿಂಪಲ್ ಕ್ವೀನ್ ರಚಿತಾ ರಾಮ್ ಸಾಥ್!

Head Bush: ದಾವಣಗೆರೆಗೆ ಬರ್ತಿದಾರೆ ಡಾನ್ ಜಯರಾಜ್! ಮೋಹಕತಾರೆ ರಮ್ಯ, ಡಿಂಪಲ್ ಕ್ವೀನ್ ರಚಿತಾ ರಾಮ್ ಸಾಥ್!

ದಾವಣಗೆರೆಗೆ ಬರ್ತವ್ರೆ ಡಾನ್ ಧನಂಜಯ್

ದಾವಣಗೆರೆಗೆ ಬರ್ತವ್ರೆ ಡಾನ್ ಧನಂಜಯ್

ಕನ್ನಡದ ಮೋಹಕ ತಾರೆ ರಮ್ಯ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ಕೂಡ ಹೆಡ್ ಬುಷ್ ಸಿನಿಮಾದ Pre-Release Event ಗೆ ಬರುತ್ತಿದ್ದಾರೆ. ಸಿನಿಮಾ ತಂಡದ ಈ ಒಂದು ಬಿಗೆಸ್ಟ್ ಇವೆಂಟ್​ಗೆ ಎಲ್ಲ ತಾರೆಯರು ಇಲ್ಲಿಗೆ ಬಂದು ತಂಡಕ್ಕೆ ಗುಡ್ ಲಕ್ ಹೇಳಲಿದ್ದಾರೆ.

  • News18 Kannada
  • Last Updated :
  • Bangalore [Bangalore], India
  • Share this:

ಕನ್ನಡದ ಹೆಡ್ ಬುಷ್ (Head Bush Cinema) ಸಿನಿಮಾ ಇಂಡಸ್ಟ್ರೀಯಲ್ಲಿ ಹೊಸ ಸಂಚಲನ ಮೂಡಿಸೋ ಹಾಗಿದೆ. ರಿಯಲ್ ಡಾನ್ ಜಯರಾಜ್ ಜೀವನದ (Real Story) ಅಸಲಿ ಕಥೆಯನ್ನೆ ಆಧರಿಸಿ ಈ ಚಿತ್ರ ತಯಾರಾಗಿದೆ. ಈ ಹಿನ್ನೆಲೆಯಲ್ಲಿ ಸಿನಿಮಾ ಬಗ್ಗೆ ಭಾರೀ ಕುತೂಹಲ ಹುಟ್ಟಿಕೊಂಡಿದೆ. ಅಗ್ನಿಶ್ರೀಧರ್ ಚಿತ್ರಕ್ಕೆ ಸ್ಕ್ರಿಪ್ಟ್ ಮಾಡಿದ್ದಾರೆ. ಶೂನ್ಯ ನಿರ್ದೇಶನದ ಈ ಚಿತ್ರದ ಪ್ರಚಾರದ (Promotion) ಕೆಲಸ ಭರ್ಜಿಯಾಗಿಯೇ ಇದೆ. ದುಬೈಗೂ (Dubai) ಹೋಗಿ ನಟ ಡಾಲಿ ಧನಂಜಯ್ ಚಿತ್ರವನ್ನ ಪ್ರಚಾರ ಮಾಡಿ ಬಂದಿದ್ದಾರೆ. ಅಕ್ಟೋಬರ್​-21 ರಂದು ರಿಲೀಸ್ ಆಗುತ್ತಿರೊ ಈ ಚಿತ್ರದ Pre-Release Event ಒಂದು ಪ್ಲಾನ್ ಆಗಿದೆ. ಈ ಒಂದು ಕಾರ್ಯಕ್ರಮಕ್ಕೆ ಇಡೀ ಕನ್ನಡದ ಚಿತ್ರರಂಗದ ತಾರೆಯರನ್ನೆಲ್ಲ ಆಹ್ವಾನಿಸಲಾಗಿದೆ.


DON ಜಯರಾಜ್ ಕಮ್ಮಿಂಗ್-ಇದು ಸುಳ್ಳಲ್ಲ ರಿಯಲ್
ಹೆಡ್ ಬುಷ್ ಚಿತ್ರದ ನಿರೀಕ್ಷೆ ಎಲ್ಲ ಚಿತ್ರಗಳ ಹಾಗೆ ಇಲ್ಲ. ಬೆಂಗಳೂರಿನ ಭೂಗತ ಜಗತ್ತಿನ ಅಸಲಿ ಕಥೆಯನ್ನ ಹೊತ್ತುಕೊಂಡು ಈ ಚಿತ್ರ ಬರ್ತಾಯಿದೆ. ಆ ದಿನಗಳನ್ನ ಅಷ್ಟೇ ಅಚ್ಚುಕಟ್ಟಾಗಿಯೇ ತೆರೆ ಮೇಲೆ ತರ್ತಿರೋದು ಈಗಲೇ ಗೊತ್ತಾಗುತ್ತದೆ.


Kannada Kannada Head Bush Film Pre-Release Event Organized on this Sunday 16th at Davanagere Bush Film Pre-Release Event Organized on this Sunday 16th at Davanagere
ಒಬ್ರೇ ಬರ್ತಿಲ್ಲ ಎಲ್ಲ ತಾರೆಯರು ಬರ್ತವ್ರೆ


ಹೆಡ್ ಬುಷ್ ಸಿನಿಮಾ ಇದೇ ತಿಂಗಳ 21 ರಂದು ರಿಲೀಸ್ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ನಾಯಕ-ನಿರ್ಮಾಪಕ ಡಾಲಿ ಧನಂಜಯ್ ಪ್ರಚಾರದ ಸಖತ್ ಪ್ಲಾನ್​ಗಳನ್ನೆ ಮಾಡಿದ್ದಾರೆ. ಡಾನ್ ಜಯರಾಜ್ ಪಾತ್ರವನ್ನೇ ನಿರ್ವಹಿಸ್ತಿರೋ ಧನಂಜಯ್, ಆ ದಿನಗಳ ಕಾಸ್ಟೂಮ್ ತೊಟ್ಟು ಸಖತ್ ಆಗಿಯೇ ಮಿಂಚಿ ಚಿತ್ರವನ್ನ ಕೂಡ ಪ್ರಚಾರ ಮಾಡಿದರು.


ದುಬೈ ನಲ್ಲೂ ಹೆಡ್ ಬುಷ್ ಡಾಲಿ ಧನಂಜಯ್ ಪ್ರಚಾರ
ರಾಜ್​ ಕಪ್ ಪಂದ್ಯಕ್ಕಾಗಿ ದುಬೈಗೂ ಹೋಗಿದ್ದರು. ಆಗಲೂ ಹೆಡ್ ಬುಷ್ ಕಾಸ್ಟೂಮ್​ ನಲ್ಲಿಯೇ ಹೋಗಿದ್ರು. ಎಲ್ಲರ ಗಮನವನ್ನೂ ಸೆಳೆದರು. ಈ ರೀತಿ ತಮ್ಮ ಚಿತ್ರವನ್ನ ಪ್ರಚಾರ ಮಾಡ್ತಿರೋ ಡಾಲಿ ಧನಂಜಯ್, ಈಗ Pre-Release Event ಅನ್ನ ಸಖತ್ ಆಗಿಯೇ ಪ್ಲಾನ್ ಮಾಡಿದ್ದಾರೆ.


ಇದನ್ನುಓದಿ: Ram Sethu Trailer Release: ರಾಮ ಸೇತು ನಾಶ ಮಾಡಲು ಹೊರಟ ಸರ್ಕಾರಕ್ಕೆ ಟಕ್ಕರ್ ನೀಡಿದ ನಟ ಅಕ್ಷಯ್!


ಹೆಡ್ ಬುಷ್ ಚಿತ್ರದ ಅದ್ಧೂರಿ Pre-Release Event
ಹೆಡ್ ಬುಷ್ ಚಿತ್ರಕ್ಕಾಗಿಯೇ ಬೆಂಗಳೂರಿನಿಂದ ಕನ್ನಡ ತಾರೆಯರೆಲ್ಲ ದಾವಣಗೆರೆಗೆ ಬರ್ತಾಯಿದ್ದಾರೆ. ಇದೇ ಭಾನುವಾರ ದಾವಣಗೆರೆಯ ಎಂಬಿಎ ಗ್ರೌಂಡ್ಸ್ ನಲ್ಲಿ ಅದ್ಧೂರಿ ಕಾರ್ಯಕ್ರಮ ಆಯೋಜನೆ ಆಗಿದೆ. ಸಂಜೆ 5.30 ರ ಹೊತ್ತಿಗೆ ಆರಂಭಗೊಳ್ಳುವ ಈ ಚಿತ್ರ ರಿಲೀಸ್ ಮುಂಚಿನ ಸಂಭ್ರಮದಲ್ಲಿ ಕನ್ನಡದ ಬಹುತೇಕ ಕಲಾವಿದರು ಭಾಗಿ ಆಗುತ್ತಿದ್ದಾರೆ.


ಸೋಷಿಯಲ್ ಮೀಡಿಯಾದಲ್ಲಿ ಹೆಡ್ ಬುಷ್ ಹವಾ
ಹೆಡ್ ಬುಷ್ ಸಿನಿಮಾದ Pre-Release Event ನಲ್ಲಿ "ನಾನೂ ಬರ್ತಾ ಇದ್ದೇನೆ. ನೀವೂ ಬನ್ನಿ ಸಿಗೋಣ" ಅಂತಲೇ ನಟ-ನಟಿಯರು ಪೋಸ್ಟ್​ಗಳನ್ನ ತಮ್ಮ ತಮ್ಮ ಅಧಿಕೃತ ಖಾತೆಯಲ್ಲಿ ಶೇರ್ ಮಾಡುತ್ತಿದ್ದಾರೆ.


ಹೆಡ್ ಬುಷ್ Pre-Release Event ಗೆ ರಮ್ಯಾ-ರಚಿತಾ ಕಮ್ಮಿಂಗ್
ಕನ್ನಡದ ಮೋಹಕ ತಾರೆ ರಮ್ಯ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ಕೂಡ ಹೆಡ್ ಬುಷ್ ಸಿನಿಮಾದ Pre-Release Event ಗೆ ಬರುತ್ತಿದ್ದಾರೆ. ಸಿನಿಮಾ ತಂಡದ ಈ ಒಂದು ಬಿಗೆಸ್ಟ್ ಇವೆಂಟ್​ಗೆ ಎಲ್ಲ ತಾರೆಯರು ಇಲ್ಲಿಗೆ ಬಂದು ಹೆಡ್ ಬುಷ್ ತಂಡಕ್ಕೆ ಗುಡ್ ಲಕ್ ಹೇಳಲಿದ್ದಾರೆ.


Kannada Kannada Head Bush Film Pre-Release Event Organized on this Sunday 16th at Davanagere Bush Film Pre-Release Event Organized on this Sunday 16th at Davanagere
ದಾವಣಗೆರೆಗೆ ಬರ್ತವ್ರೆ ಡಿಂಪಲ್ ಕ್ವೀನ್ ರಚಿತಾ


ಹೆಡ್ ಬುಷ್ ಸಿನಿಮಾದ ಈ ಒಂದು ಸಡಗರದಲ್ಲಿ, ನೀನಾಸಂ ಸತೀಸ್, ಗುಲ್ಟು ಚಿತ್ರದ ನಟ ನವೀನ್, ಸಲಗ ಚಿತ್ರದ ನಟಿ ಸಂಜನಾ ಆನಂದ್, ಹೆಡ್ ಬುಷ್ ಚಿತ್ರದ ಹಬೀಬಿ ಹಾಡಿಗೆ ನೃತ್ಯ ಮಾಡಿದ ಪಾಯಲ್ ರಜಪೂತ್,ಕಾಂತಾರ ಚಿತ್ರದ ಸಪ್ತಮಿ ಗೌಡ, ನಟ ನಾಗಭೂಷಣ್, ಹೀಗೆ ಎಲ್ಲರೂ ಈ ಒಂದು ಇವೆಂಟ್​ಗೆ ಬರ್ತಾಯಿದ್ದಾರೆ.


ಇದೇ 21 ರಂದು ಹೆಡ್ ಬುಷ್ ಎಲ್ಲೆಡೆ ರಿಲೀಸ್
ಹೆಡ್ ಬುಷ್ ರಿಯಲ್ ಕಥೆಯ ಚಿತ್ರ ಅನ್ನೊದೇ ವಿಶೇಷ. ಅದರಲ್ಲೂ ಭೂಗತ ಜಗತ್ತಿನ ಅಸಲಿ ಕಥೆ ಅನ್ನೋದು ಇನ್ನೂ ಒಂದು ಸತ್ಯ. ಎಲ್ಲವೂ ರಿಯಲ್ ಆಗಿಯೇ ಇಲ್ಲಿ ಬರ್ತದೆ ಅನ್ನೋ ನಿರೀಕ್ಷೆನೂ ಇದೆ.


ಇದನ್ನೂ ಓದಿ: Ghost Film Shooting: ಚಿತ್ರದ ಹೆಸರು ಘೋಸ್ಟ್! ಇಲ್ಲಿ ದೆವ್ವಗಳಿಲ್ಲ, ಮತ್ತೇನು?


ಅದರಂತೆ ಇದೇ ತಿಂಗಳ 21 ರಂದು ಹೆಡ್ ಬುಷ್ ಸಿನಿಮಾ ರಿಲೀಸ್ ಆಗುತ್ತಿದೆ. ಚರಣ್​ ರಾಜ್ ಸಂಗೀತದ ಹಾಡುಗಳು ಹಿಟ್ ಆಗಿವೆ. ಶೂನ್ಯ ನಿರ್ದೇಶನದಲ್ಲಿ ಬರ್ತಿರೊ ಈ ಚಿತ್ರಕ್ಕೆ ಅಗ್ನಿಶ್ರೀಧರ್ ಸ್ಕ್ರಿಪ್ಟ್ ಇದೆ. ಇನ್ನುಳಿದಂತೆ ಸಿನಿಮಾ ಬಂದ್ಮೇಲೆ ಬೇರೆ ಟಾಕ್ ಶುರು ಆಗುತ್ತವೆ ವೇಟ್ ಮಾಡಿ.

First published: