• Home
  • »
  • News
  • »
  • entertainment
  • »
  • Daali Dhananjay: ಉನ್ಮಾದದ ಲಿರಿಕ್ಸ್ ಬರೆದ ಡಾಲಿ ಧನಂಜಯ್! ಇದು ಹೆಡ್ ಬುಷ್ ಹಬೀಬಿ!

Daali Dhananjay: ಉನ್ಮಾದದ ಲಿರಿಕ್ಸ್ ಬರೆದ ಡಾಲಿ ಧನಂಜಯ್! ಇದು ಹೆಡ್ ಬುಷ್ ಹಬೀಬಿ!

ಧನಂಜಯ್ ಬರೆದ ಹಬೀಬಿ ಹಾಡು ರಿಲೀಸ್

ಧನಂಜಯ್ ಬರೆದ ಹಬೀಬಿ ಹಾಡು ರಿಲೀಸ್

ಧನಂಜಯ್ ಈ ಒಂದೇ ಒಂದು ಹಬೀಬಿ ಪದದ ಜೊತೆಗೆ ಅದ್ಭುತ ಸಾಲುಗಳನ್ನೇ ಇಲ್ಲಿ ಹೇಳುತ್ತಾ ಹೋಗಿದ್ದಾರೆ. ಆದರೆ ಎಲ್ಲವೂ ಇಲ್ಲಿ ಕಾಮ ದಾಹದ ಉತ್ತುಂಗದ ಸ್ಥಿತಿಯನ್ನೇ ಬಿಂಬಿಸುವಂತೇನೆ ಇವೆ.

  • Share this:

ಕನ್ನಡದ ಡಾಲಿ ಧನಂಜಯ್ (Dhananjaya) ಸಾಹಿತ್ಯ ಆಸಕ್ತಿ ಇರೋ ನಾಯಕ ನಟ. ವಿಶೇಷ ಅನಿಸುತ್ತದೆ ಅಲ್ವೇ? ಇದು ಸಹಜವಾಗಿ ಎಲ್ಲರಿಗೂ ಗೊತ್ತೇ ಇದೆ. ಧನಂಜಯ್ ಒಳ್ಳೆ ಕವಿತೆಗಳನ್ನ (Poems) ಬರೆಯುತ್ತಾರೆ ಅನ್ನೋ ವಿಷಯ ತಿಳಿದು ಹೋಗಿದೆ. ಖಾಸಗಿ ವಾಹಿನಿಯ ಕಾರ್ಯಕ್ರಮದಲ್ಲಿ ಅಮ್ಮನ ಬಗ್ಗೆ ಹೇಳಿರೋ ಕವಿತೆಯನ್ನು ಈಗಲೂ ನೀವು ನೋಡಬಹುದು. ಓದು, ಬರವಣಿಗೆ, ಸಾಹಿತ್ಯ ಹೀಗೆ ಈ ಆಸಕ್ತಿಯನ್ನೂ ಧನಂಜಯ್ ಬೆಳೆಸಿಕೊಂಡು ಬಂದಿದ್ದಾರೆ. ಇವರ ಸಾಹಿತ್ಯ ಆಸಕ್ತಿ ಶೃಂಗಾರ ರಸದ ಕವಿತೆಯನ್ನೂ ಬರೆಯೋ ಹಂತಕ್ಕೂ ಇದೆ. ತಮ್ಮ ನಿರ್ದೇಶನದ ಹೆಡ್ ಬುಷ್ ಸಿನಿಮಾದಲ್ಲಿ ಡಾಲಿ ಧನಂಜಯ್ (Daali Dhananjaya) ಈ ಒಂದು ಪ್ರಯೋಗ ಮಾಡಿದ್ದಾರೆ. ಈ ಹಾಡಿಗೆ ಅರೆಬಿಕ್ ಟಚ್ ಇರೋದು ವಿಶೇಷ.


ಹೆಡ್ ಬುಷ್ ಕ್ಲಬ್ ಹಾಡು ಬಲು ಹಾಟ್ ನೋಡು
ಹೆಡ್ ಬುಷ್ ಸಿನಿಮಾದ ಒಂದು ಹಾಟ್ ಹಾಡು ರಿಲೀಸ್ ಆಗಿದೆ. ಕ್ಲಬ್ ಒಂದರಲ್ಲಿ ನೃತ್ಯಗಾರ್ತಿ ಹಾಡುವ ಹಾಡು ಇದಾಗಿದೆ. ಡಾನ್ ಜಯರಾಜ್ ಪಾತ್ರಧಾರಿ ಧನಂಜಯ್ ಈ ಹಾಡಲ್ಲಿ ಬರುತ್ತಾರೆ.


ವಿಶೇಷವೆಂದ್ರೆ ಈ ಹಾಡಿನ ಪ್ರತಿ ಲೈನ್ ಕೂಡ ತುಂಬಾ ಹಾಟ್ ಆಗಿಯೇ ಇವೆ. ಶೃಂಗಾರ ರಸದ ಅಷ್ಟೂ ಶಕ್ತಿಯನ್ನೂ ನಟ-ನಿರ್ಮಾಪಕ-ಲಿರಿಕ್ ರೈಟರ್ ಧನಂಜಯ್ ಈ ಒಂದು ಹಾಡಲ್ಲಿ ಇಳಿಸಿದಂತಿದೆ.


Kannada Head Bush Film Habibi Song Lyrical Video Now Release
ಹೆಡ್ ಬುಷ್ ಹಬೀಬಿ ಸಾಂಗ್ ಸ್ಟಿಲ್


ಹಬೀಬಿ ಹಾಡಿನ ಮೂಲಕ ಕನ್ನಡಕ್ಕೆ ಪಾಯಲ್ ರಜಪೂತ್ ಎಂಟ್ರಿ
ಹಾಡಿನ ಸಾಲು ಹಬೀಬಿ ಅಂತಲೇ ಶುರು ಆಗುತ್ತಿದೆ. ಹಬೀಬಿ ಅಂತ ಬಂದ್ರೆ ಇದು ಅರೆಬಿಕ್ ಫೀಲ್ ಕೊಡುವ ಗೀತೆ ಅಂತ ನೀವು ಗೆಸ್ ಮಾಡಿರುತ್ತೀರಿ. ನಿಜ, ಇದು ಅರೆಬಿಕ್ ಫೀಲ್ ಇರೋ ಹಾಡೇ ಆಗಿದೆ.
ಧನಂಜಯ್ ಈ ಒಂದೇ ಒಂದು ಹಬೀಬಿ ಪದದ ಜೊತೆಗೆ ಅದ್ಭುತ ಸಾಲುಗಳನ್ನೇ ಇಲ್ಲಿ ಹೇಳುತ್ತಾ ಹೋಗಿದ್ದಾರೆ. ಆದರೆ ಎಲ್ಲವೂ ಇಲ್ಲಿ ಕಾಮ ದಾಹದ ಉತ್ತುಂಗದ ಸ್ಥಿತಿಯನ್ನೇ ಬಿಂಬಿಸುವಂತೇನೆ ಇವೆ.


ಹಬೀಬಿ ಹಾಡಲ್ಲಿ ಬಾಲಿವುಡ್ ನಟಿ ಪಾಯಲ್ ರಜಪೂತ್ ಅಭಿನಯಿಸಿದ್ದು, ಈ ಮೂಲಕ ಕನ್ನಡಕ್ಕೂ ಪಾಯಲ್ ಕಾಲಿಟ್ಟಿದ್ದಾರೆ. ಈ ಹಾಡಲ್ಲಿ ಹಾಟ್ ಹಾಟ್ ಆಗಿಯೇ ಪಾಯಲ್ ಕಾಣಿಸಿಕೊಂಡಿದ್ದಾರೆ.


ಆ ದಿನಗಳ ಅಸಲಿ ಕಥೆ, ಆ ದಿನಗಳ ಕಬ್ಲ್, ಆ ದಿನಗಳ ಶೋಕಿ
ಹಬೀಬಿ ಹಾಡನ್ನ ರೆಟ್ರೋ ಸ್ಟೈಲ್​ ನಲ್ಲಿಯೇ ಚಿತ್ರೀಕರಿಸಲಾಗಿದೆ. ಈ ಚಿತ್ರದ ಕಥೆ ಕೂಡ ಆ ದಿನಗಳ ಕಥೆ ಅಲ್ವೇ? ಅದಕ್ಕೇನೆ ಇಡೀ ಹಾಡು ರೆಟ್ರೋ ಸ್ಟೈಲ್​ ನಲ್ಲಿಯೇ ಇದೆ.


ಇದಕ್ಕಾಗಿಯೇ ಆ ದಿನಗಳ ಕ್ಲಬ್​ ಸೆಟ್​ ಅನ್ನೂ ಇಲ್ಲಿ ಕ್ರಿಯೇಟ್ ಮಾಡಿರೋದು ವಿಶೇಷ ಅನಿಸುತ್ತದೆ. ಇದೇ ಕ್ಲಬ್ ಸೆಟ್ ಅಲ್ಲಿಯೇ ಹಬೀಬಿ ಹಾಡನ್ನ ಚಿತ್ರೀಕರಿಸಲಾಗಿದೆ. ಜಾನಿ ಮಾಸ್ಟರ್ ಕೋರಿಯೋಗ್ರಾಫಿಯಲ್ಲಿಯೇ ಈ ಹಾಡು ಬಂದಿದೆ.


ಉನ್ಮಾದದ ಸಾಲುಗಳಲ್ಲಿ ಕಾಮ ದಾಹದ ಉತ್ತುಂಗ
ಹಾಡಿನ ಸಾಲಿನ ಬಗ್ಗೆ ಹೇಳೋದಾದರೆ, ಈ ಹಾಡಲ್ಲಿ "ಚೆಲುವನ್ನ ಉಂಡು ಝೇಂಕರಿಸು, ನಾನು ಯಾರು ಗೊತ್ತೇ, ಮನ್ಮಥನ ಪ್ರೇಮ ಸ್ವತ್ತೆ" ಅನ್ನೋ ಸಾಲುಗಳು ಬರುತ್ತವೆ.


ಐಶ್ವರ್ಯ ರಂಗರಾಜನ್-ವಾಗು ಮಾಜನ್ ಕಂಠಸಿರಿ
ಆದರೆ ಈ ಒಂದು ಹಾಡನ್ನ ಐಶ್ವರ್ಯ ರಂಗರಾಜನ್ ಹಾಗೂ ವಾಗು ಮಾಜನ್ ಹಾಡಿದ್ದಾರೆ. ಒಳ್ಳೆ ಹಾಡಿನಲ್ಲಿ ಎಲ್ಲ ಪದಗಳು ಸಡನ್​ ಆಗಿ ಅರ್ಥ ಆಗೋದಿಲ್ಲ ಅಂತಲೂ ಅನಿಸುತ್ತದೆ.


ಚರಣ್ ರಾಜ್ ಅವರ ಸಂಗೀತದ ಹಾಡಲ್ಲಿ ಎಂದಿನಂತೆ ಕಿಕ್ ಇದೆ. ಅರೆಬಿಕ್ ಶೈಲಿಯ ಹಾಡು ಇದಾಗಿರೋದ್ರಿಂದ ಈ ಹಿಂದಿನ ಅರೆಬಿಕ್ ಹಾಡಿನ ಫೀಲ್ ಇಲ್ಲೂ ಇದೆ.
ಇದಕ್ಕೂ ಹೆಚ್ಚಾಗಿ ಈ ಲಿರಿಕಲ್ ಸಾಂಗ್ ನಲ್ಲಿ ಒಂದಷ್ಟು ಫೋಟೋಸ್ ಒಂದಷ್ಟು ವೀಡಿಯೋಗಳನ್ನೂ ಬಳಸಲಾಗಿದೆ. ಎಲ್ಲವು ಸೇರಿ ಈ ಒಂದು ಲಿರಿಕಲ್ ವೀಡಿಯೋ ಕಲರ್ ಫುಲ್ ಮಜಾ ಕೊಡುತ್ತದೆ.


ಇದನ್ನೂ ಓದಿ: Kantara Hero Rishab Shetty: ಮಗಳ ಮುದ್ದಾಗ ಫೋಟೋ ಶೇರ್ ಮಾಡಿದ ರಿಷಬ್! ಕಂದನ ಹೆಸರೇನು ಗೊತ್ತಾ?


ಅದರೆ ಅದ್ಯಾಕೋ ಏನೋ, ಈ ಹಾಡಿನ ಎಲ್ಲ ಸಾಲುಗಳು ಬೇಗ ಅರ್ಥ ಆಗೋದಿಲ್ಲ ಅನಿಸುತ್ತದೆ. ಗಾಯಕಿಯ ಆಯ್ಕೆ ತಪ್ಪಾಯಿತೇ ಅನ್ನೋ ಫೀಲ್ ಕೂಡ ಬರುತ್ತದೆ.


ಹಬೀಬಿ ಹಾಡಿನಲ್ಲಿ ಯೋಗಿ ಪಾತ್ರದ ಸಖತ್ ಮೋಜು
ಇದರ ಹೊರತಾಗಿ ಧನಂಜಯ್ ಈ ಹಾಡಲ್ಲಿ ಸಖತ್ ಡಾನ್ ಗಿರಿ ತೋರಿದ್ದಾರೆ. ಸಖತ್ ಖದರ್ ಆಗಿಯೂ ಹಬೀಬಿ ಹಾಡಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನೂ ಒಂದು ವಿಶೇಷ ಅಂದ್ರೆ, ಲೂಸ್ ಮಾದ ಯೋಗಿ ಪಾತ್ರವೂ ಈ ಒಂದು ಗೀತೆಯಲ್ಲಿ ಕಾಣಿಸುತ್ತದೆ.


ಹಬೀಬಿ ಹಾಡಿಗೆ ಬಾದಲ್ ನಂಜುಂಡಸ್ವಾಮಿ ಕಲಾ ನಿರ್ದೇಶನ
ಅಂದಿನ ಕಾಲದ ಕ್ಲಬ್ ಅನ್ನ ನೆನಪಿಗೆ ತರೋ ಈ ಹಬೀಬಿ ಹಾಡು ಮಜವಾಗಿಯೇ ಇದೆ. ಕಲಾ ನಿರ್ದೇಶಕ ಬಾದಲ್ ನಂಜುಂಡಸ್ವಾಮಿ ಕಲಾ ಸ್ಪರ್ಶದಲ್ಲಿ ಇಡೀ ಹಾಡು ರೆಟ್ರೋ ದಿನಗಳಿಗೆ ನಿಮ್ಮನ್ನ ಕರೆದುಕೊಂಡು ಹೋಗುತ್ತದೆ.


ಹೆಡ್ ಬುಷ್ ಸಿನಿಮಾದ ಪ್ರಚಾರ ಕೆಲಸವೂ ಈಗ ಶುರು ಆಗಿದೆ. ರೆಟ್ರೋ ಗೆಟಪ್​ ನಲ್ಲಿ ಡಾಲಿ ಧನಂಜಯ್ ಕಾಣಿಸಿಕೊಳ್ಳುತ್ತಿದ್ದಾರೆ. ಮೊನ್ನೆ ದುಬೈಗೂ ಇದೇ ಗೆಟಪ್​ ನಲ್ಲಿ ಧನಂಜಯ್ ರಾಜ್ ಕಪ್ ಪಂದ್ಯ ವೀಕ್ಷಿಸಿ ಬಂದ್ರು.


ಇದನ್ನೂ ಓದಿ: Shraddha Das: ಸ್ಯಾಂಡಲ್​ವುಡ್ ಚೆಲುವೆಯ ದೇಸಿ ಲುಕ್! ಲಂಗ-ದಾವಣಿಯಲ್ಲಿ ಪಡ್ಡೆ ಹುಡುಗರ ನಿದ್ದೆ ಕದ್ದ ಚೆಲುವೆ


ಇನ್ನು ಸಿನಿಮಾ ಇದೇ ತಿಂಗಳ 21 ರಂದು ಎಲ್ಲೆಡೆ ರಿಲೀಸ್ ಆಗುತ್ತಿದೆ. ಅಗ್ನಿಶ್ರೀಧರ್ ಅವರ ಸ್ಕ್ರಿಪ್ಟ್ ಇರೋ ಈ ಸಿನಿಮಾ ಡಾನ್ ಜಯರಾಜ್ ರಿಯಲ್ ಬದುಕನ್ನೆ ಕಟ್ಟಿಕೊಡುತ್ತದೆ. ಉಳಿದಂತೆ ಈ ಸಿನಿಮಾ ಒಂದು ನಿರೀಕ್ಷೆ ಹುಟ್ಟುಹಾಕಿದೆ.

First published: