• Home
 • »
 • News
 • »
 • entertainment
 • »
 • Puttanna Kanagal: ಅಂದು ಆ ಇಬ್ಬರು ಯುವಕರನ್ನ ಕಂಡು ನೀವು ಸೂಪರ್ ಸ್ಟಾರ್ ಆಗ್ತೀರಿ ಅಂದಿದ್ದರು ಪುಟ್ಟಣ್ಣ ಕಣಗಾಲ್!

Puttanna Kanagal: ಅಂದು ಆ ಇಬ್ಬರು ಯುವಕರನ್ನ ಕಂಡು ನೀವು ಸೂಪರ್ ಸ್ಟಾರ್ ಆಗ್ತೀರಿ ಅಂದಿದ್ದರು ಪುಟ್ಟಣ್ಣ ಕಣಗಾಲ್!

ನೀವು ಸೂಪರ್ ಸ್ಟಾರ್ ಆಗ್ತೀರಾ ಅಂದಿದ್ದರು ಪುಟ್ಟಣ್ಣ ಕಣಗಾಲ್

ನೀವು ಸೂಪರ್ ಸ್ಟಾರ್ ಆಗ್ತೀರಾ ಅಂದಿದ್ದರು ಪುಟ್ಟಣ್ಣ ಕಣಗಾಲ್

ರೆಬಲ್ ಸ್ಟಾರ್ ಅಂಬರೀಶ್ ಈ ಕಥೆಯನ್ನ ಆಗಾಗ ಹೇಳುತ್ತಿದ್ದರು. ಪಟ್ಟಣ್ಣಜೀ ತಮ್ಮ ಜೀವನದಲ್ಲಿ ಎಷ್ಟು ಮಹತ್ವದ ಪಾತ್ರ ನಿರ್ವಹಿಸಿದ್ದರು ಅನ್ನೋದನ್ನೂ ತಮ್ಮದೇ ಶೈಲಿಯಲ್ಲಿ ಹೇಳಿಕೊಳ್ತಾಯಿದ್ರು. ಅಂಬರೀಶ್ ಅವರ ಇನ್ನೂ ಒಂದು ಕಥೆ ಹೇಳ್ತಾಯಿದ್ರು. ಅದು ಕೂಡ ಇಂಟ್ರಸ್ಟಿಂಗ್ ಆಗಿಯೇ ಇತ್ತು.

ಮುಂದೆ ಓದಿ ...
 • News18 Kannada
 • 5-MIN READ
 • Last Updated :
 • Bangalore [Bangalore], India
 • Share this:

ಕನ್ನಡ ಚಿತ್ರರಂಗದಲ್ಲಿ ಅದ್ಭುತ ಕಲಾವಿದರಿದ್ದಾರೆ. ಪುಟ್ಟಣ್ಣನವರ (Puttanna Kanagal) ಗರಡಿಯಿಂದ ಬಂದ ಕಲಾವಿದರ ಹೆಸರು ಈಗಲೂ ಇವೆ. ಅಂತಹ ಕಲಾವಿದರ ಸಿನಿಮಾಗಳು ಕ್ಲಾಸಿಕ್ (Kannada Director Puttanna Kanagal) ಲಿಸ್ಟ್​ ನಲ್ಲಿಯೇ ಇವೆ. ಕನ್ನಡ ಸಿನಿಮಾಗಳ ಲಿಸ್ಟ್ ತೆಗೆದು ನೋಡಿದರೆ, ಅಲ್ಲಿ ಪುಟ್ಟಣ್ಣವರ ಶಿಷ್ಯರ ಚಿತ್ರಗಳೇ ಹೆಚ್ಚು ಸಿಗುತ್ತವೆ. ಇದು ಎಲ್ಲರಿಗೂ ಗೊತ್ತಿರುವ ವಿಷಯವೇ ಆಗಿದೆ. ಪುಟ್ಟಣ್ಣನವರ ಅನ್ವೇಷಣೆಯ ನಟರು-ನಟಿಯರು ಚಿತ್ರ ಜೀವನದಲ್ಲಿ (Rebel Star Ambareesh) ಮೈಲಿಗಲ್ಲು ಸಾಧಿಸಿದ್ದಾರೆ. ಆ ಲಿಸ್ಟ್​ ನಲ್ಲಿ ದೊಡ್ಡ ದೊಡ್ಡ ಸ್ಟಾರ್​ಗಳ ಹೆಸರು ಇರೋದು ಅಷ್ಟೇ ವಿಶೇಷ. ಆದರೆ ಅಂದು ಪುಟ್ಟಣ್ಣ ಕಣಗಾಲ್ ಆ ಇಬ್ಬರು ಕಲಾವಿದರನ್ನ ಕಂಡು (Sahasa Simha Vishnuvardhan) ನೀವು ಸ್ಟಾರ್ ಆಗ್ತೀರಾ? ನಿಮಗೆ ದೊಡ್ಡ ಭವಿಷ್ಯ ಇದೆ ಅಂದಿದ್ದರು.


ಈ ಮಾತುಗಳನ್ನ ಈ ಸ್ಟಾರ್​ಗಳು ಆಗಾಗ ಹೇಳ್ತಾನೇ ಇದ್ದರು. ವಿಷಾದದ ಸಂಗತಿ ಅಂದ್ರೆ ಇಂದು ಇವರಾರೂ ಇಲ್ಲ. ಇವರ ಕಥೆ ಮಾತ್ರ ಸದಾ ಜೀವಂತ. ಆ ಕಥೆಯನ್ನ ಮತ್ತೆ ನೆನಸಿಕೊಳ್ಳೋಣ ಬನ್ನಿ.


Kannada Great Director Puttanna Kanagal Stories
ಡೈರೆಕ್ಟರ್ ಪುಟ್ಟಣ್ಣ ಅವರಿಗೆ ಅಂದು ಜಲೀಲ ಸಿಕ್ಕೇ ಬಿಟ್ಟ!


ಪುಟ್ಟಣ್ಣಜೀ ಅಂದು ಒಂದು ವಿಶೇಷ ಆಡಿಷನ್ ನಡೆಸಿದ್ದರು
ಆ ಒಂದು ಚಿತ್ರಕ್ಕಾಗಿ ಡೈರೆಕ್ಟರ್ ಪುಟ್ಟಣ್ಣಜೀ ಸಾಕಷ್ಟು ಆಡಿಷನ್ ಮಾಡಿದ್ದರು. ಆದರೆ ಅವರ ಕಲ್ಪನೆಯ ಕಲಾವಿದ ಇವರ ಕಣ್ಣಿಗೆ ಬಿದ್ದಿರಲೇ ಇಲ್ಲ. ಆದರೂ ಆಡಿಷನ್ ನಡೀತಾನೇ ಇತ್ತು. ಅಂದುಕೊಂಡ ನಟರೇ ಸಿಗ್ತಿಲ್ವೇ ಅಂತ ಹೇಳುತ್ತಲೇ ಹೊರಗಡೆ ಕುಳಿತ್ತಿದ್ದರು ಡೈರೆಕ್ಟರ್ ಪುಟ್ಟಣ್ಣಜೀ.


ಆದರೆ ಇನ್ನೇನು ಆಡಿಷನ್ ಮುಗಿಸಿ ಮೇಲೆ ಏಳಬೇಕು ಅನ್ನೋ ಹೊತ್ತಿಗೆ ಅಲ್ಲಿ ಇಬ್ಬರು ಯುವಕರು ಬಂದೇ ಬಿಟ್ಟರು. ಬಂದವರಲ್ಲಿ ಒಬ್ಬ ಯುವಕ ಇವರು ನನ್ನ ಗೆಳೆಯ. ಅಂಬರೀಶ್ ಅಂತ ಈತನ ಹೆಸರು. ಚೆನ್ನಾಗಿಯೇ ಅಭಿನಯಿಸ್ತಾನೆ. ಒಮ್ಮೆ ನೋಡಿ ಅಂದ್ರು.
ಬಾಲಿವುಡ್ ನಟ ಶತ್ರುಘ್ನ ಸಿನ್ಹಾ ತರವೇ ಆ ಯುವಕ ಕಾಣ್ತಿದ್ದ
ಆ ಅಂಬರೀಶ್ ಥೇಟ್ ಬಾಲಿವುಡ್​ ನ ಶತ್ರುಘ್ನ ಸಿನ್ಹಾ ರೀತಿನೇ ಇದ್ದರು. ಅವತ್ತು ನಡೆದ ಆಡಿಷನ್​ನಲ್ಲಿ ಅಂಬರೀಶ್ ಹೋಗೋಲೋ ರಾಮಾಚಾರಿ ಅಂತ ಡೈಲಾಗ್ ಹೊಡೆದರು. ಕೊನೆಗೆ ಬಾಯಿಗೆ ಸ್ಟೈಲ್ ಆಗಿ ಸಿಗರೇಟ್ ಕೂಡ ಸೇದಿದ್ರು. ಅಲ್ಲಿಗೆ ಪುಟ್ಟಣ್ಣಜೀ ಬರೆದ ಜಲೀಲ ಪಾತ್ರಕ್ಕೆ ಸೂಕ್ತ ನಟ ಸಿಕ್ಕಿಯೇ ಬಿಟ್ಟರು.


ಹೌದು, ರೆಬಲ್ ಸ್ಟಾರ್ ಅಂಬರೀಶ್ ಈ ಕಥೆಯನ್ನ ಆಗಾಗ ಹೇಳುತ್ತಿದ್ದರು. ಪುಟ್ಟಣ್ಣಜೀ ತಮ್ಮ ಜೀವನದಲ್ಲಿ ಎಷ್ಟು ಮಹತ್ವದ ಪಾತ್ರ ನಿರ್ವಹಿಸಿದ್ದರು ಅನ್ನೋದನ್ನೂ ತಮ್ಮದೇ ಶೈಲಿಯಲ್ಲಿ ಹೇಳಿಕೊಳ್ತಾಯಿದ್ರು. ಅಂಬರೀಶ್ ಅವರ ಇನ್ನೂ ಒಂದು ಕಥೆ ಹೇಳ್ತಾಯಿದ್ರು. ಅದು ಕೂಡ ಇಂಟ್ರಸ್ಟಿಂಗ್ ಆಗಿಯೇ ಇತ್ತು.


ಡೈರೆಕ್ಟರ್ ಪುಟ್ಟಣ್ಣ ಅವರಿಗೆ ಅಂದು ಜಲೀಲ ಸಿಕ್ಕೇ ಬಿಟ್ಟ
ನಾಗರಹಾವು ಚಿತ್ರದ ಜಲೀಲನ ಪಾತ್ರಕ್ಕೆ ಆಯ್ಕೆ ಆದ ಅಂಬರೀಶ್ ಅವರಿಗೆ ಲೆಟರ್ ಕೂಡ ಬಂದಿತ್ತು. ನೀವು ಚಿತ್ರದ ಜಲೀಲನ ಪಾತ್ರಕ್ಕೆ ಆಯ್ಕೆ ಆಗಿದ್ದೀರಿ. ಚಿತ್ರದುರ್ಗದಲ್ಲಿ ಸಿನಿಮಾ ಶೂಟಿಂಗ್ ಇರುತ್ತದೆ. ಇಷ್ಟು ದಿನ ಅಂತಲೇ ಬರೆಯಲಾಗಿತ್ತು.


ಈ ಲೆಟರ್ ಪ್ರಕಾರ ಅಂಬರೀಶ್ ಚಿತ್ರೀಕರಣಕ್ಕಾಗಿಯೇ ಚಿತ್ರದುರ್ಗಕ್ಕೂ ಬಂದಿದ್ದರು. ಅಂಬಿ ಒಪ್ಪಿದ ಪಾತ್ರ ಚಿಕ್ಕದೇ ಆಗಿತ್ತು. ಬಹಳ ದಿನ ಚಿತ್ರೀಕರಣವೂ ಇರಲಿಲ್ಲ. ಆದರೆ ಅಷ್ಟೊತ್ತಿಗಾಗಲೇ ಅಂಬರೀಶ್ ಮತ್ತು ಚಿತ್ರದ ನಾಯಕ ನಟ ವಿಷ್ಣುವರ್ಧನ್ ಸ್ನೇಹಿತರಾಗಿದ್ರು. ಪುಟ್ಟಣ್ಣನವರ ಜೊತೆಗೆ ಸಣ್ಣದೊಂದು ಸಲುಗೇನು ಬೆಳೆದಿತ್ತು.


ನೀವು ಸೂಪರ್ ಸ್ಟಾರ್ ಆಗ್ತೀರಾ ಅಂದಿದ್ದರು ಪುಟ್ಟಣ್ಣ ಕಣಗಾಲ್
ಒಂದು ದಿನ ಚಿತ್ರೀಕರಣ ಮುಗಿಸಿಕೊಂಡು ಊರೊಳಗೆ ಕಾರ್​ ಮೂಲಕ ಬರ್ತಾಯಿದ್ದರು. ಹಿಂದಿನ ಸೀಟ್​ನಲ್ಲಿ ಒಂದು ಕಡೆಗೆ ವಿಷ್ಣುವರ್ಧನ್ ಇನ್ನೂ ಒಂದು ಕಡೆಗೆ ಅಂಬರೀಶ್, ಮಧ್ಯದಲ್ಲಿ ಪುಟ್ಟಣ್ಣ ಕಣಗಾಲ್ ಕುಳಿತಿದ್ದರು. ಆಗಲೇ ಪುಟ್ಟಣ್ಣಜಿ ಒಂದು ಭವಿಷ್ಯ ನುಡಿದರು.


Kannada Great Director Puttanna Kanagal Stories
ಬಾಲಿವುಡ್ ನಟ ಶತ್ರುಘ್ನ ಸಿನ್ಹಾ ತರವೇ ಆ ಯುವಕ ಕಾಣ್ತಿದ್ದ


ನೀವು ದೊಡ್ಡ ಸ್ಟಾರ್​ ಆಗ್ತೀರಾ, ನಿಮಗೆ ಒಳ್ಳೆ ಭವಿಷ್ಯ ಇದೆ. ಎಂದೂ ದಾರಿ ತಪ್ಪಬೇಡಿ ಅಂತಲೇ ಹೇಳಿದ್ದರು. ಆ ಕೂಡಲೇ ಅಂಬರೀಶ್ ಅವ್ರು ಕೇಳಿಯೇ ಬಿಟ್ಟರು.


ರೆಬಲ್ ಸ್ಟಾರ್ ಅಂಬರೀಶ್ ಏನ್ ಹೇಳಿದ್ದರು ಗೊತ್ತೇ?
ಅಲ್ಲಾ ಸಾರ್, ವಿಷ್ಣುವರ್ಧನ್ ಚಿತ್ರದ ಹೀರೋ ಅವನಿಗೆ ಭವಿಷ್ಯ ಇದೆ. ಸ್ಟಾರ್​ ಆಗ್ತಾನೇ ಸರಿ. ನಾನು ಚಿಕ್ಕ ಪಾತ್ರ ಮಾಡಿದ್ದೇನೆ. ಒಂದೆರಡು ಸೀನ್​​ನಲ್ಲಿ ಮಾತ್ರ ಬರುತ್ತೇನೆ. ನಾನು ಸ್ಟಾರ್ ಆಗಲು ಹೇಗೆ ಸಾಧ್ಯ ಅಂತಲೇ ಕೇಳಿದ್ದರು.


ಇದನ್ನೂ ಓದಿ: Pathaan Controversy: ಬೇಷರಂ ಹಾಡಿನ ಕೇಸರಿ ವಿವಾದ! ಶಾರುಖ್ ಮೊದಲ ಪ್ರತಿಕ್ರಿಯೆ


ಆದರೆ ಪುಟ್ಟಣ್ಣ ಕಣಗಾಲ್ ಅವ್ರು ಆಗ ಮತ್ತೆ ಹೇಳಿದ್ದರು. ಹಾಗೇನೂ ಇಲ್ಲ, ನನಗೆ ಹಾಗೆ ಅನಿಸುತ್ತಿದೆ. ನೀವು ಸ್ಟಾರ್ ಆಗ್ತೀರಾ ಅಂತಲೇ ಹೇಳಿದ್ದರು. ಅಲ್ಲಿಗೆ ಪುಟ್ಟಣ್ಣಜೀ ಹೇಳಿದ ಭವಿಷ್ಯ ನಿಜವೇ ಆಯಿತು. ಸಾಹಸ ಸಿಂಹ ವಿಷ್ಣುವರ್ಧನ್ ಮತ್ತು ರೆಬಲ್ ಸ್ಟಾರ್ ಅಂಬರೀಶ್ ಕನ್ನಡ ಚಿತ್ರರಂಗ ಕಂಡ ಮಹಾನ್ ನಟರಾಗಿಯೇ ಬೆಳೆದರು.


ಪುಟ್ಟಣ್ಣನವರ ಗರಡಿಯ ಕಲಾವಿದರೆಲ್ಲ ಬೆಳೆದವರೇ
ಪುಟ್ಟಣ್ಣನವರ ಗರಡಿಯಲ್ಲಿ ಬೆಳೆದ ಈ ಕಲಾವಿದರು ಸೂಪರ್ ಸ್ಟಾರ್ ಆಗಿ ಬೆಳೆದು ನಿಂತದ್ದು ಇತಿಹಾಸವೇ ಸರಿ. ಆರತಿ, ಶ್ರೀನಾಥ್, ರಾಮಕೃಷ್ಣ, ಜೈಜಗದೀಶ್ ಇವರಲ್ಲದೇ ಪುಟ್ಟಣ್ಣ ಕಣಗಾಲ್ ಅವರ ಗರಡಿಯಿಂದಲೇ ಬಂದವ್ರೆ. ಇವರೂ ದೊಡ್ಡ ಹೆಸರು ಮಾಡಿರೋದು ಕೂಡ ಎಲ್ಲರಿಗೂ ತಿಳಿದಿರೋ ವಿಷಯವೇ ಅಲ್ವೇ?

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು