Roberrt: ದರ್ಶನ್​ ಸಿನಿಮಾಗೆ ಕನ್ನಡತಿ ಎಂಟ್ರಿ: ರಾಬರ್ಟ್ ಚಿತ್ರದ ನಾಯಕಿ ಹೆಸರು ಬಹಿರಂಗ..!

Darshan: ರಾಬರ್ಟ್​ ಸಿನಿಮಾದಲ್ಲಿ ದಚ್ಚು ಜತೆಗೆ ನಾಯಕಿಯಾಗಿ ಯಾರು ಅಭಿನಯಿಸಲಿದ್ದಾರೆ ಅನ್ನೋದೇ ದೊಡ್ಡ ಸುದ್ದಿಯಾಗಿದೆ. ಕೆಲವು ದಿನಗಳಿಂದ ಗಾಂಧಿನಗರದ ಗಲ್ಲಿ ಸೇರಿದಂತೆ ಸಾಮಾಜಿಕ ಜಾಲತಾಣದ ಅಡ್ಡಾಗಳಲ್ಲಿ ಇದೇ ಸುದ್ದಿ ಹರಿದಾಡುತ್ತಿತ್ತು. ದರ್ಶನ್​ ಅವರ ನಾಯಕಿಯಾಗಿ ಯಾರು ಅಭಿನಯಿದಸಲಿದ್ದಾರೆ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. 

Anitha E | news18-kannada
Updated:September 5, 2019, 10:51 AM IST
Roberrt: ದರ್ಶನ್​ ಸಿನಿಮಾಗೆ ಕನ್ನಡತಿ ಎಂಟ್ರಿ: ರಾಬರ್ಟ್ ಚಿತ್ರದ ನಾಯಕಿ ಹೆಸರು ಬಹಿರಂಗ..!
Darshan: ರಾಬರ್ಟ್​ ಸಿನಿಮಾದಲ್ಲಿ ದಚ್ಚು ಜತೆಗೆ ನಾಯಕಿಯಾಗಿ ಯಾರು ಅಭಿನಯಿಸಲಿದ್ದಾರೆ ಅನ್ನೋದೇ ದೊಡ್ಡ ಸುದ್ದಿಯಾಗಿದೆ. ಕೆಲವು ದಿನಗಳಿಂದ ಗಾಂಧಿನಗರದ ಗಲ್ಲಿ ಸೇರಿದಂತೆ ಸಾಮಾಜಿಕ ಜಾಲತಾಣದ ಅಡ್ಡಾಗಳಲ್ಲಿ ಇದೇ ಸುದ್ದಿ ಹರಿದಾಡುತ್ತಿತ್ತು. ದರ್ಶನ್​ ಅವರ ನಾಯಕಿಯಾಗಿ ಯಾರು ಅಭಿನಯಿದಸಲಿದ್ದಾರೆ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. 
  • Share this:
- ಅನಿತಾ ಈ, 

'ಕುರುಕ್ಷೇತ್ರ' ಚಿತ್ರದ ಯಶಸ್ಸಿನಲ್ಲಿರುವ ದರ್ಶನ್​ ಅವರ ಬಹುನಿರೀಕ್ಷಿತ ಹಾಗೂ 53ನೇ ಸಿನಿಮಾ 'ರಾಬರ್ಟ್​'. ಹೌದು, ಈ ಚಿತ್ರದ ಮೇಲೆ ದಚ್ಚು ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ನಿರೀಕ್ಷೆ ಇದೆ. ಇದರಲ್ಲಿ ದರ್ಶನ್​ ವಿಭಿನ್ನ ಪಾತ್ರ ಹಾಗೂ ಲುಕ್​ನಲ್ಲಿ ಕಾಣಿಸಿಕೊಳ್ಳಲಿದ್ದು, ಅದಕ್ಕಾಗಿ ತಮ್ಮ ಲುಕ್​ ಅನ್ನೇ ಬದಲಾಯಿಸಿಕೊಂಡಿದ್ದಾರೆ.

ಈ ಸಿನಿಮಾದಲ್ಲಿ ದಚ್ಚು ಜತೆಗೆ ನಾಯಕಿಯಾಗಿ ಯಾರು ಅಭಿನಯಿಸಲಿದ್ದಾರೆ ಅನ್ನೋದೇ ದೊಡ್ಡ ಸುದ್ದಿಯಾಗಿದೆ. ಕೆಲವು ದಿನಗಳಿಂದ ಗಾಂಧಿನಗರದ ಗಲ್ಲಿ ಸೇರಿದಂತೆ ಸಾಮಾಜಿಕ ಜಾಲತಾಣದ ಅಡ್ಡಾಗಳಲ್ಲಿ ಇದೇ ಸುದ್ದಿ ಹರಿದಾಡುತ್ತಿತ್ತು. ದರ್ಶನ್​ ಅವರ ನಾಯಕಿಯಾಗಿ ಯಾರು ಅಭಿನಯಿದಸಲಿದ್ದಾರೆ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ.

Asha Bhat is selected for Roberrt movie
'ರಾಬರ್ಟ್'​ ಸಿನಿಮಾದ ನಟಿ ಆಶಾ ಭಟ್​


ಹೌದು, 'ರಾಬರ್ಟ್​' ಸಿನಿಮಾದ ನಿರ್ದೇಶಕ ತರುಣ್​ ಸುದೀರ್​ ಖುದ್ದು ತಮ್ಮ ಟ್ವಿಟರ್​ನಲ್ಲಿ ಈ ಸುದ್ದಿ ನೀಡಿದ್ದಾರೆ. ಆಶಾ ಭಟ್​ ಎಂಬಾಕೆ ದರ್ಶನ್​ ಪಕ್ಕ ರಾಬರ್ಟ್​ ಸಿನಿಮಾದಲ್ಲಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

Finally here it is...the big surprise..Welcome our Kannadathi, Miss SupraNational @StarAshaBhat to the Family Of #Roberrt *ing #BoxOfficeSultan #ChallengingStar #DBoss @dasadarshan. Produced under #UmapathyFilms Banner 😊 @umap30071 pic.twitter.com/Z1aSSUWf0r


ಅದರಲ್ಲೂ ವಿಶೇಷತೆ ಎಂದರೆ ಆಶಾ ಭಟ್​ ನಮ್ಮ ಕರುನಾಡಿನ ಕನ್ನಡಿತಿಯಾಗಿರುವುದು. ಅದಕ್ಕೆ ತರುಣ್​ ಸುದೀರ್​ ನಮ್ಮ ಕನ್ನಡತಿ ಮಿಸ್​ ಸುಪ್ರನ್ಯಾಷನಲ್​ ಆಶಾ ಭಟ್​ ಅವರಿಗೆ 'ರಾಬರ್ಟ್​' ಕುಟುಂಬಕ್ಕೆ ಸ್ವಾಗತ ಎಂದು ಟ್ವೀಟ್​ ಮಾಡಿದ್ದಾರೆ.

ಇನ್ನು ಈ ವಿಷಯವನ್ನು ಆಶಾ ಸಹ ತಮ್ಮ ಟ್ವಿಟರ್​ನಲ್ಲಿ ಖುಷಿಯಿಂದ ಹಂಚಿಕೊಂಡಿದ್ದಾರೆ.

Blessed 😇 ಕನ್ನಡತಿ ಆಶಾ ಭಟ್​ Miss SupraNational 2014ರ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದಾರೆ. ಹುಟ್ಟೂರು ಭದ್ರಾವತಿ, ಬೆಂಗಳೂರಿನ ಆರ್​.ವಿ. ಕಾಲೇಜಿನಲ್ಲಿ ಎಂಜಿನಿಯರಿಂಗ್​ ಮುಗಿಸಿರುವ ಆಶಾ, ಇದೇ ವರ್ಷ ತೆರೆಕಂಡ ಬಾಲಿವುಡ್​ ಸಿನಿಮಾ 'ಜಂಗ್ಲಿ'ಯಲ್ಲಿ ಪತ್ರಕರ್ತೆಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಇದನ್ನೂ ಓದಿ: ಶತಕೋಟಿ ಸರದಾರನಾದ ದರ್ಶನ್ : ದಚ್ಚು ಈಗ ಹಲವು ಬಿರುದುಗಳ `ಒಡೆಯ' !

ಸದ್ಯ ಮುಂಬೈನಲ್ಲಿ ಸಿನಿಮಾ ಹಾಗೂ ಮಾಡೆಲ್​ ಮಾಡಿಕೊಂಡು ಅಲ್ಲೇ ನೆಲೆಸಿರುವ ಕನ್ನಡತಿ ಆಶಾ 'ರಾಬರ್ಟ್​' ಮೂಲಕ ಸ್ಯಾಂಡಲ್​ವುಡ್​ಗೆ ಕಾಲಿಡಲಿದ್ದಾರೆ. ಈ ಹಿಂದೆ ಈ ಸಿನಿಮಾದ ನಾಯಕಿ ಪಾತ್ರಕ್ಕೆ ಕೀರ್ತಿ ಸುರೇಶ್​ ಹಾಗೂ ಮೆಹರೀನ್ ಪಿರ್ಜಾದಾ ಅವರ ಹೆಸರು ಕೇಳಿ ಬಂದಿತ್ತು.

ಇದನ್ನೂ ಓದಿ: Kurukshetra Collection: ಕುರುಕ್ಷೇತ್ರ ಸಿನಿಮಾದ ಯಶಸ್ಸನ್ನು ಗೆಳೆಯರೊಂದಿಗೆ ಸಂಭ್ರಮಿಸಿದ ದರ್ಶನ್​..!

 

Regina Cassandra: ಹೊಸ ಫೋಟೋಶೂಟ್​ನಲ್ಲಿ ಮಿಂಚಿದ ಎವರು ಸಿನಿಮಾ ಖ್ಯಾತಿಯ ಹಾಟ್​ ನಟಿ ರೆಜಿನಾ..!
 
First published:September 4, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading