Gichi Giligili: ಗಿಚ್ಚಿ ಗಿಲಿಗಿಲಿ ಶೋನಿಂದ ಹೊರಬಂದ ಮಂಜು ಪಾವಗಡ, ಶೋ ಮುಗಿಯೋವರಗೂ ನಾನು ಸಿಂಗಲ್ ಎಂದ ನಿರಂಜನ್

ಕನ್ನಡದ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಗಿಚ್ಚಿ ಗಿಲಿಗಿಲಿ‘ (Gichi Giligili) ರಿಯಾಲಿಟಿ ಶೋನ ನಿರೂಪಕರಾದ ಮಂಜು ಪಾವಗಡ (Manju Pavagada) ಮತ್ತು ರೀನಾ ಡಿಸೋಜ (Reena Dsouza) ಶೋ ನಿಂದ ಹೊರನಡೆದಿದ್ದಾರೆ.

ಗಿಚ್ಚಿ ಗಿಲಿಗಿಲಿ ರಿಯಾಲಿಟಿ ಶೋ

ಗಿಚ್ಚಿ ಗಿಲಿಗಿಲಿ ರಿಯಾಲಿಟಿ ಶೋ

  • Share this:
ಕನ್ನಡದ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಗಿಚ್ಚಿ ಗಿಲಿಗಿಲಿ‘ (Gichi Giligili) ರಿಯಾಲಿಟಿ ಶೋನ ನಿರೂಪಕರಾದ ಮಂಜು ಪಾವಗಡ (Manju Pavagada) ಮತ್ತು ರೀನಾ ಡಿಸೋಜ (Reena Dsouza) ಶೋ ನಿಂದ ಹೊರನಡೆದಿದ್ದಾರೆ. ಹೌದು, ಇವರಿಬ್ಬರ ಜಾಗಕ್ಕೆ ಇದೀಗ ಹೊಸದಾಗಿ ನಿರಂಜನ್ ದೇಶಪಾಂಡೆ (Niranjan Deshpande) ಬಂದಿದ್ದು, ತಮ್ಮ ಪತ್ನಿಯೇ ಶೋ ನಲ್ಲಿ ಇರುವುದರಿಂದ ಈ ಶೋ ಮುಗಿಯುವ ತನಕ ನಾನು ಸಿಂಗಲ್, ಯಶಸ್ವಿನಿಗೂ ನನಗೂ ಸಂಬಂಧ ಇಲ್ಲ ಎಂದಿದ್ದಾರೆ. ಇದಲ್ಲದೇ ಗಿಚ್ಚಿ ಗಿಲಿಗಿಲಿ ಶೋ ನಲ್ಲಿ ಪತ್ನಿ ಸ್ಪರ್ಧಿ ಹಾಗೂ ಪತಿ ನಿರೂಪಕರಾಗಿ ಕೆಲಸ ಮಾಡುತ್ತಿರುವುದು ವಿಭಿನ್ನವಾಗಿದೆ. ಹೀಗಾಗಿ ನಿರೂಪಕ ನಿರಂಜನ್ ತಮ್ಮ ಪತ್ನಿ ಯಶಸ್ವಿನಿ ಈ ಶೋ ನಲ್ಲಿ ಇರುವವರಗೂ ನಾನು ಸಿಂಗಲ್ ಎಂದು ಇದ್ದು ಬಿಡುತ್ತೇನೆ ಎನ್ನುವ ಮೂಲಕ ಶೋನ ವಿಭಿನ್ನ ಒ್ರಯತನ್ಕ್ಕೆ ಸಾಥ್ ನೀಡಿದ್ದಾರೆ.

ಶೋ ನಿಂದ ಹೊರಬಂದ ಮಂಜು ಪಾವಗಡ:

ಇನ್ನು, ಗಿಚ್ಚಿ ಗಿಲಿಗಿಲಿ ರಿಯಾಲಿಟಿ ಶೋ ಆರಂಭವಾದಾಗಿನಿಂದ ಮಂಜು ಪಾವಗಡ ಮತ್ತು ರೀನಾ ಡಿಸೋಜ ಇಬ್ಬರು ನಿರೂಪಕರಾಗಿ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದರು. ಆದರೆ ಇದೀಗ ಇವರಿಬ್ಬರಿಗೂ ಬೇರೆ ಬೇರೆ ಕಮಿಟ್‌ಮೆಂಟ್ ಇರೋದರಿಂದ ಶೋನಿಂದ ಹೊರಬಂದಿರುವುದಾಗಿ ತಿಳಸಿದ್ದಾರೆ. ಇನ್ನು, ಮಂಜು ಪಾವಗಡ ಹಾಗೂ ರೀನಾ ಅವರ ಇಬ್ಬರ ಕಾಂಬಿನೇಶನ್ ತುಂಬ ಮಜವಾಗಿರುತ್ತಿತ್ತು. ಅಲ್ಲದೇ ಶೋನಲ್ಲಿ ಹೆಚ್ಚಿನ ಆಸಕ್ತಿಯನ್ನೂ ಸ್ಪರ್ಧಿಗಳು ನಿರೀಕ್ಷಿಸಿದ್ದರು. ಅವರಿಬ್ಬರ ಕಾಂಬಿನೇಶನ್‌ ಹೇಗಿತ್ತು ಎಂದು ವೀಕ್ಷಕರು ಹೇಳಬೇಕಿದೆ.

ಇದನ್ನೂ ಓದಿ: ಹಾಲಿವುಡ್​ ರೇಂಜ್​ನಲ್ಲಿ ಇರುತ್ತಂತೆ KGF 3, ವಿಜಯ್ ಕಿರಗಂದೂರು ಹೇಳೋದನ್ನ ಕೇಳಿದ್ರೆ ಶಾಕ್ ಆಗ್ತಿರಾ ನೀವು!

ನಾನು ಸಿಂಗಲ್ ಎಂದ ನಿರಂಜನ್:

ಇನ್ನು, ಮಂಜು ಮತತ್ಉ ರೀನಾ ಶೊ ನಿರೂಪಣೆಯಿಂದ ಹೊರನಡೆದ ನಂತರ ನಿರೂಪಕನಾಗಿ ಹೊಸದಾಗಿ ನಿರಂಜನ್ ದೇಶಪಾಂಡೆ ಶೋ ನಲ್ಲಿ ಕಾಣಿಸಕೊಳ್ಳಲಾರಂಭಿಸಿದ್ದಾರೆ. ಇದಲ್ಲದೇ ವಿಶೇಷ ಎಂಬಂತೆ ಈ ಶೋ ನಲ್ಲಿ ನಿರಂಜನ್ ಪತ್ನಿ ಯಶಸ್ವಿನಿ ಸಹ ಸ್ಪರ್ಧಿಸುತ್ತಿದ್ದು, ಪತಿ- ಪತ್ನಿಇಬ್ಬರೂ ಒಂದೇ ಶೋ ನಲ್ಲಿ ಇರುವುದರಿಂದ ನಿಂರಂಜನ್, ಈ ಶೋ ಮುಗಿಯುವ ತನಕ ನನಗೂ, ನನ್ನ ಪತ್ನಿ ಯಶಸ್ವಿನಿಗೂ ಯಾವುದೇ ಸಂಬಂಧವಿಲ್ಲ, ನಾನು ಸಿಂಗಲ್ ಎಂದು ಹೇಳಿದ್ದಾರೆ. ಇನ್ನು, ನಿರಂಜನ್ ದೇಶಪಾಂಡೆ ಅವರು 'ಗಿಚ್ಚಿ ಗಿಲಿಗಿಲಿ' ಶೋಗೆ ಎಂಟ್ರಿ ನೀಡುವುದರ ಮೂಲಕ ಕಲರ್ಸ್ ವಾಹಿನಿಗೆ ಕಂಬ್ಯಾಕ್ ಮಾಡಿದ್ದಾರೆ.

ಗಿಚ್ಚಿ ಗಿಲಿಗಿಲಿ ಶೋ ಗೆ ಸರ್ಪ್ರೈಸ್ ಎಂಟ್ರಿ ಕೊಟ್ಟ ನಿವೇದಿತಾ ಗೌಡ:

ಹೌದು, ಗಿಚ್ಚಿ ಗಿಲಿಗಿಲಿ ಶೋನಲ್ಲಿ ರ್ಯಾಪರ್ ಚಂದನ್ ಶೆಟ್ಟಿ ಆಗಮಿಸಿದ್ದು, ಪತ್ನಿ ನಿವೇದಿತಾ ಗೌಡ ಭಿಕ್ಷುಕಿ ಪಾತ್ರದಲ್ಲಿ ನೋಡಿ ಚಂದನ್ ಫುಲ್ ಸರ್ಪ್ರೈಸ್ ಆಗಿದ್ದಾರೆ. ಇನ್ನು ಅಲ್ಲಿಯೇ ನಿವೇದಿತಾ ಗೌಡ ಅವರ ಹುಟ್ಟುಹಬ್ಬವನ್ನೂ ಕೂಡ ಆಚರಿಸಲಾಗಿತ್ತು.

ಇದನ್ನೂ ಓದಿ: Kannadathi Serial: ಕೊನೆಗೂ ಭುವಿಗೆ ಮುತ್ತು ನೀಡಿದ ಹರ್ಷ, ಮದುವೆ ನಿಲ್ಲಿಸಲು ವರೂಧಿನಿ ಪ್ರಯತ್ನ!

ಏನಿದು ಗಿಚ್ಚಿ ಗಿಲಿಗಿಲಿ ಶೋ ವಿಶೇಷತೆ:

ಈ ಶೋನಲ್ಲಿ ವಂಶಿಕಾ ಅಂಜನಿ ಕಶ್ಯಪ, ಮಜಾ ಭಾರತ ಶೋನಲ್ಲಿ ಭಾಗವಹಿಸಿದ್ದ ಜಗ್ಗಪ್ಪ, ಕಿಶೋರ್, ಸುಷ್ಮಿತಾ, ಚಂದ್ರಪ್ರಭಾ, ಮಾನಸಾ, 'ರಾಜಾ ರಾಣಿ' ಶೋನ ಶ್ರೀಕಾಂತ್, ಎನ್ ಸಿ ಅಯ್ಯಪ್ಪ, ಜೋಗಿ ಸುನೀತಾ, ಯಶಸ್ವಿನಿ ನಿರಂಜನ್ ದೇಶಪಾಂಡೆ ಮುಂತಾದವರು ಭಾಗವಹಿಸಿದ್ದಾರೆ. ಇನ್ನು ಶ್ರುತಿ, ಸೃಜನ್ ಲೋಕೇಶ್ ಅವರು ಈ ಶೋನಲ್ಲಿ ನಿರ್ಣಾಯಕರಾಗಿ ಕೆಲಸ ಮಾಡುತ್ತಿದ್ದಾರೆ.
Published by:shrikrishna bhat
First published: