Rajkumar: ಶಿವರಾಜ್ ಕುಮಾರ್ ಘೋಸ್ಟ್ ಸಿನಿಮಾದಲ್ಲಿ ರಾಜ್​ಕುಮಾರ್​; ಇದು ಹೇಗೆ ಸಾಧ್ಯ?

ಶಿವಣ್ಣನ ಘೋಸ್ಟ್ ಚಿತ್ರದಲ್ಲಿ ರಾಜ್‌ ಅಭಿನಯ!

ಶಿವಣ್ಣನ ಘೋಸ್ಟ್ ಚಿತ್ರದಲ್ಲಿ ರಾಜ್‌ ಅಭಿನಯ!

ಡೈರೆಕ್ಟರ್ ಶ್ರೀನಿ ಸಖತ್ ಐಡಿಯಾ ಮಾಡಿದ್ದಾರೆ. ತಮ್ಮ ಚಿತ್ರಕ್ಕೆ ಅಣ್ಣಾವ್ರನ್ನ ಕರೆತಂದಿದ್ದಾರೆ. ಹೌದು ಶಿವರಾಜ್ ಕುಮಾರ್ ಅಭಿನಯದ ಘೋಸ್ಟ್ ಸಿನಿಮಾದಲ್ಲಿ ರಾಜ್‌ ಕುಮಾರ್ ಅಭಿನಯಿಸಿದ್ದಾರೆ.

  • News18 Kannada
  • 2-MIN READ
  • Last Updated :
  • Bangalore [Bangalore], India
  • Share this:

ಡಾಕ್ಟರ್ ರಾಜ್‌ಕುಮಾರ್ ಜನ್ಮ ದಿನವನ್ನ (Raj in Ghost Movie) ಇಡೀ ಕನ್ನಡ ಇಂಡಸ್ಟ್ರೀ ಇವತ್ತು ಸೆಲೆಬ್ರೆಟ್ ಮಾಡುತ್ತಿದೆ. ತಮ್ಮದೇ ರೀತಿಯಲ್ಲಿ ಎಲ್ಲರೂ ರಾಜಣ್ಣನ ಜನ್ಮ ದಿನಕ್ಕೆ ಶುಭಾಷಯ ತಿಳಿಸುತ್ತಿದ್ದಾರೆ. ತಮ್ಮ (Ghost Movie Latest Video) ಚಿತ್ರದ ಪೋಸ್ಟ್‌ನಲ್ಲಿ ರಾಜ್‌ಕುಮಾರ್ ಅವರ ವಿವಿಧ ಪಾತ್ರಗಳ ಪೋಟೋ ಹಾಕೋ ಮೂಲಕ ಅಣ್ಣನಿಗೆ ಹುಟ್ಟುಹಬ್ಬದ ಶುಭಾಷಯ ತಿಳಿಸುತ್ತಿದ್ದಾರೆ. ಆದರೆ (Kannada Movie Latest News) ಹ್ಯಾಟ್ರಿಕ್ ಹೀರೋ ಶಿವರಾಜ್‌ ಕುಮಾರ್ ಅಭಿನಯದ ಘೋಸ್ಟ್ ಸಿನಿಮಾ ತಂಡ ಒಂದು ಹೆಜ್ಜೆ ಮುಂದೆ ಹೋಗಿದೆ. ಸಿನಿಮಾದಲ್ಲಿ ರಾಜಣ್ಣನ್ನೆ ಕರೆದುಕೊಂಡು (Rajkumar Special Video) ಬಂದಿದೆ. ಆ ವಿಡಿಯೋ ಇದೀಗ ವೈರಲ್ ಆಗುತ್ತಿದೆ ನೋಡಿ.


ಘೋಸ್ಟ್ ಸಿನಿಮಾದಲ್ಲಿ ರಾಜ್ ಅಭಿನಯ ಇದು ಸಾಧ್ಯವೇ?


ಡೈರೆಕ್ಟರ್ ಶ್ರೀನಿ ಸಖತ್ ಐಡಿಯಾ ಮಾಡಿದ್ದಾರೆ. ಸದ್ಯದ ಅಡ್ವಾನ್ಸ್ ಟೆಕ್ನಾಲಜಿ ಬಳಿಸಿಕೊಂಡು ತಮ್ಮ ಚಿತ್ರಕ್ಕೆ ಅಣ್ಣಾವ್ರನ್ನ ಕರೆತಂದಿದ್ದಾರೆ. ಹೌದು, ಶಿವರಾಜ್ ಕುಮಾರ್ ಅಭಿನಯದ ಘೋಸ್ಟ್ ಸಿನಿಮಾದಲ್ಲಿ ರಾಜ್‌ಕುಮಾರ್ ಅಭಿನಯಿಸಿದ್ದಾರೆ.


Kannada Ghost Movie Special Video on Rajkumar Birth Anniversary now got Viral
ಅನುಪಮ್ ಖೇರ್ ಜೊತೆಗೆ ರಾಜ್‌ಕುಮಾರ್ ಅಭಿನಯ!


ಈ ಮಾತು ಕೇಳಲು ಬಹಳ ಚೆನ್ನಾಗಿದೆ. ಆದರೆ ಪ್ರಾಕ್ಟಿಕಲಿ ಅದು ಸಾಧ್ಯವಾದ ಮಾತು ಅನ್ನೋ ಮಾತು ಇದೆ. ಆದರೆ ಟೆಕ್ನಕಲಿಯ ಸೂಕ್ತ ಬಳಕೆಯಿಂದ ಎಲ್ಲವೂ ಸಾಧ್ಯವಾಗುತ್ತದೆ ಅನ್ನೋದನ್ನ ಘೋಸ್ಟ್ ಸಿನಿಮಾ ತಂಡ ಇದೀಗ ತೋರಿಸಿದೆ.




ಅನುಪಮ್ ಖೇರ್ ಜೊತೆಗೆ ರಾಜ್‌ಕುಮಾರ್ ಅಭಿನಯ!


ಘೋಸ್ಟ್ ಸಿನಿಮಾದ ಅನುಪಮ್ ಖೇರ್ ಅಭಿನಯದ ದೃಶ್ಯದಲ್ಲಿ ರಾಜ್‌ ಕುಮಾರ್ ಅಭಿನಯಿಸಿದ್ದಾರೆ. ಇದನ್ನ ವಿಡಿಯೋದಲ್ಲೂ ನೋಡಬಹುದಾಗಿದೆ. ರಾಜ್‌ಕುಮಾರ್ ಅಭಿನಯಸೋಕೆ ಸಾಧ್ಯವೇ ಅಂತ ಕೇಳಿದ್ರೆ, ಹೌದು, ರಾಜ್‌ಕುಮಾರ್ ಅಭಿನಯಿಸಿದ್ದಾರೆ ಅಂತಲೇ ಹೇಳಬಹುದು.


ಘೋಸ್ಟ್ ಸಿನಿಮಾ ತಂಡ ಈ ಒಂದು ಪ್ರಯೋಗ ಮಾಡಿದೆ. ರಾಜ್‌ಕುಮಾರ್ ಜನ್ಮ ದಿನದ ಹಿನ್ನೆಲೆಯಲ್ಲಿ ಈ ಒಂದು ಪ್ರಯೋಗ ಮಾಡಿದೆ. ಶಿವರಾಜ್ ಕುಮಾರ್ ಹಾಗೂ ಅನುಪಮ್ ಖೇರ್ ಅಭಿನಯದ ದೃಶ್ಯದಲ್ಲಿ ಶಿವರಾಜ್‌ ಕುಮಾರ್ ಮುಖಕ್ಕೆ ರಾಜ್‌ಕುಮಾರ್ ಮುಖವನ್ನ ಇಡಲಾಗಿದೆ.



ಶಿವಣ್ಣನ ಘೋಸ್ಟ್ ಚಿತ್ರದಲ್ಲಿ ರಾಜ್‌ ಅಭಿನಯ


ಇದರಿಂದ ರಾಜ್‌ಕುಮಾರ್ ಅವರೇ ಘೋಸ್ಟ್ ಸಿನಿಮಾದಲ್ಲಿ ಅಭಿನಯಿಸಿರೋ ಭಾವ ಮೂಡುತ್ತಿದೆ. ರಾಜ್‌ ಕುಮಾರ್ ಜನ್ಮ ದಿನದ ಅಂಗವಾಗಿ ಈ ಒಂದು ಪ್ರಯೋಗವನ್ನ ಮಾಡಲಾಗಿದೆ. ಘೋಸ್ಟ್ ಚಿತ್ರಕ್ಕೆ ಹೊಸ ರೀತಿ ಟೆಕ್ನಾಲಜಿಯನ್ನ ಕೂಡ ಬಳಸಲಾಗಿದೆ.


ಈ ಹಿನ್ನೆಲೆಯಲ್ಲಿ ಈ ಒಂದು ಟೆಕ್ನಾಲಜಿಯನ್ನ ಬಳಸಿಕೊಂಡೇ, ರಾಜ್‌ಕುಮಾರ್ ಅವರ ಜನ್ಮ ದಿನಕ್ಕೆ ಘೋಸ್ಟ್ ಟೀಮ್ ಸ್ಪೆಷಲ್ ಆಗಿಯೇ ಹುಟ್ಟುಹಬ್ಬದ ಶುಭಾಷಯ ತಿಳಿಸಿದೆ. ಈ ಪ್ರಯೋಗ ಮಾಡಿರೋ ಡೈರೆಕ್ಟರ್ ಶ್ರೀನಿ ಕೂಡ ಫುಲ್ ಖುಷ್ ಆಗಿದ್ದಾರೆ.


ರಾಜ್‌ ಕುಮಾರ್ ಜನ್ಮ ದಿನಕ್ಕೆ ಘೋಸ್ಟ್ ಸ್ಪೆಷಲ್ ಶುಭಾಶಯ


ಅಣ್ಣಾವ್ರ ಜನ್ಮ ದಿನಕ್ಕೆ ಘೋಸ್ಟ್ ತಂಡದಿಂದ ಈ ಒಂದು ಪ್ರಯೋಗ ಮಾಡಿದ್ದೇವೆ. ಈ ಮೂಲಕ ರಾಜ್‌ಕುಮಾರ್ ಅವರಿಗೆ ವಿಶೇಷವಾಗಿ ಜನ್ಮ ದಿನದ ಶುಭಾಷಯ ತಿಳಿಸಿದ್ದೇವೆ ಅಂತಲೂ ಡೈರೆಕ್ಟರ್ ಶ್ರೀನಿ ಹೇಳಿಕೊಂಡಿದ್ದಾರೆ.


Kannada Ghost Movie Special Video on Rajkumar Birth Anniversary now got Viral
ಘೋಸ್ಟ್ ಸಿನಿಮಾದಲ್ಲಿ ರಾಜ್ ಅಭಿನಯ ಇದು ಸಾಧ್ಯವೇ?


ರಾಜ್‌ಕುಮಾರ್ ಅವರು ಎಲ್ಲರ ನೆಚ್ಚಿನ ಧ್ರುವ ತಾರೆ ಅನ್ನೋದು ಗೊತ್ತೇ ಇದೆ. ಹಾಗಾಗಿಯೇ ಫಿಲ್ಮಂ ಇಂಡಸ್ಟ್ರೀಯ ಬಹುತೇಕರು ಅಣ್ಣಾವ್ರ ಜನ್ಮ ದಿನ ಸೆಲೆಬ್ರೇಟ್ ಮಾಡಿದ್ದಾರೆ. ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ತಂಡವೂ ಸ್ಪೆಷಲ್ ಆಗಿಯೇ ರಾಜ್‌ಕುಮಾರ್ ಅವರ ಜನ್ಮ ದಿನಕ್ಕೆ ಶುಭಾಷಯ ತಿಳಿಸಿದೆ.


ಇದನ್ನೂ ಓದಿ: Dr Rajkumar: ರಾಜ್ ಸ್ಮಾರಕಕ್ಕೆ ಕುಟುಂಬಸ್ಥರಿಂದ ಪೂಜೆ; ಸವಿನೆನಪು ಹಂಚಿಕೊಂಡ್ರು ಅಣ್ಣಾವ್ರ ಮುದ್ದಿನ ಸೊಸೆ ಅಶ್ವಿನಿ

top videos


    Sಹೀಗೆ ಇನ್ನೂ ಅನೇಕರು ತಮ್ಮದೇ ರೀತಿಯಲ್ಲಿ ಅಣ್ಣಾವ್ರ ಜನ್ಮ ದಿನ ಸೆಲೆಬ್ರೇಟ್ ಮಾಡಿದ್ದಾರೆ ಅಂತಲೇ ಹೇಳಬಹುದು.

    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು