• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Ghost Movie Viral News: ಘೋಸ್ಟ್ ಚಿತ್ರದ ಶಿವಣ್ಣನ ವೈರಲ್ ಪೋಸ್ಟರ್ ನಕಲಿನಾ-ಅಸಲಿನಾ? ಡೈರೆಕ್ಟರ್ ಶ್ರೀನಿ ಏನ್ ಹೇಳ್ತಾರೆ?

Ghost Movie Viral News: ಘೋಸ್ಟ್ ಚಿತ್ರದ ಶಿವಣ್ಣನ ವೈರಲ್ ಪೋಸ್ಟರ್ ನಕಲಿನಾ-ಅಸಲಿನಾ? ಡೈರೆಕ್ಟರ್ ಶ್ರೀನಿ ಏನ್ ಹೇಳ್ತಾರೆ?

ಘೋಸ್ಟ್ ಚಿತ್ರದ ಡೈರೆಕ್ಟರ್ ಶ್ರೀನಿ ಏನು ಹೇಳುತ್ತಾರೆ?

ಘೋಸ್ಟ್ ಚಿತ್ರದ ಡೈರೆಕ್ಟರ್ ಶ್ರೀನಿ ಏನು ಹೇಳುತ್ತಾರೆ?

ಘೋಸ್ಟ್ ಚಿತ್ರದ ಡೈರೆಕ್ಟರ್ ಶ್ರೀನಿಗೂ ಈ ವಿಷಯ ಗಮನಕ್ಕೆ ಬಂದಿದೆ. ಇದನ್ನ ನೋಡಿರೋ ಶ್ರೀನಿ ಸುಮ್ನೆ ಕುಳಿತಿಲ್ಲ. ಅಸಲಿ ವಿಷಯವನ್ನ ಹೇಳಿಕೊಂಡಿದ್ದಾರೆ. ಈ ಡಿಸೈನ್ ಹಿಂದಿನ ಆ ಕ್ರಿಯೇಟರ್ ಯಾರೂ ಅನ್ನೋದನ್ನ ಕೂಡ ಹೇಳಿಕೊಂಡಿದ್ದಾರೆ.

  • News18 Kannada
  • 3-MIN READ
  • Last Updated :
  • Bangalore [Bangalore], India
  • Share this:

ಹ್ಯಾಟ್ರಿಕ್ ಹೀರೋ ಶಿವರಾಜ್​ ಕುಮಾರ್ (Shiva Rajkumar) ಅಭಿನಯದ ಘೋಸ್ಟ್ ಸಿನಿಮಾದ ಪೋಸ್ಟರ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಯಂಗ್ ಗ್ಯಾಂಗಸ್ಟರ್ ಲುಕ್​ಲ್ಲಿ ಶಿವಣ್ಣ (Shivanna) ಹೀಗೆ ಕಾಣುತ್ತಾರೆ ಅನ್ನೋದೇ ಈ ಪೋಸ್ಟರ್​​ನ (Ghost Movie Poster) ಅಸಲಿ ವಿಚಾರ ಆಗಿದೆ. ಇದಕ್ಕಾಗಿಯೇ ಸಿನಿಮಾ ನಿರ್ದೇಶಕ ಶ್ರೀನಿ ಹೊಸ ಹೊಸ ಡಿಸೈನ್​ಗಳನ್ನ ಕೂಡ ಟ್ರೈ ಮಾಡುತ್ತಿದ್ದಾರೆ. ಆ ಲೆಕ್ಕದಲ್ಲಿಯೇ ಯಂಗ್ ಗ್ಯಾಂಗಸ್ಟರ್ ಲುಕ್​ನ ಒಂದು ಲುಕ್ ಫೈನಲ್ (Final Look) ಆಗಿದ್ದು, ಅದನ್ನೆ ಸಿನಿಮಾ ತಂಡ ರಿಲೀಸ್ ಕೂಡ ಮಾಡಿತ್ತು. ಅದನ್ನ ಜನ ಕೂಡ ಮೆಚ್ಚಿಕೊಂಡಿದ್ದರು. ಎಲ್ಲೆಡೆ ಅದೇ ಪೋಸ್ಟರ್ ವೈರಲ್ ಕೂಡ ಆಗಿತ್ತು. ಅಷ್ಟೇ ಆಕರ್ಷಕವಾಗಿಯೇ ಇರೋ ಈ ಪೋಸ್ಟರ್ ಈಗ ನಕಲಿನಾ? ಅಸಲಿನಾ ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ. 


ಘೋಸ್ಟ್ ಚಿತ್ರದ ಶಿವಣ್ಣನ ಪೋಸ್ಟರ್ ಅಸಲಿನಾ?
ಘೋಸ್ಟ್ ಚಿತ್ರಕ್ಕೂ ಇಂಗ್ಲೀಷ್ ಸ್ಕೆರ್ಫೆಸ್​ಗೂ ಲಿಂಕ್ ಇದಿಯಾ ಅನ್ನೋ ಪ್ರಶ್ನೆ ಈಗ ಎದ್ದಿದೆ. ಇದಕ್ಕೆ ಕಾರಣ ಏನೂ ಅನ್ನೋದು ಕೂಡ ಈಗ ರಿವೀಲ್ ಆಗಿದೆ. ಘೋಸ್ಟ್ ಚಿತ್ರದ ಒಂದೇ ಒಂದು ಪೋಸ್ಟರ್ ರಿಲೀಸ್ ಆಗಿದ್ದೇ ತಡ, ಇದು ಜನರ ಮನಸ್ಸಿಗೆ ಇಷ್ಟ ಆಗಿದೆ. ಇದನ್ನೆ ನೋಡಿ ಅದೆಷ್ಟೋ ಜನ ಕೊಂಡಾಡಿದ್ದು ಇದೆ.


Kannada Ghost Movie Shiva Rajkumar Gangster Look Poster Viral News
ಘೋಸ್ಟ್ ಚಿತ್ರದ ಶಿವಣ್ಣನ ಪೋಸ್ಟರ್ ಅಸಲಿನಾ?


ಸ್ಕೆರ್ಫೆಸ್ ಚಿತ್ರ 1983 ರಲ್ಲಿ ಬಂದಿತ್ತು. ಇದು ಒಂದು ಕ್ರೈಮ್ ಆಧರಿಸಿದ ಕಥೆಯ ಚಿತ್ರವೇ ಆಗಿತ್ತು. ಡಾನ್ ಇಲ್ಲವೇ ಗ್ಯಾಂಗಸ್ಟರ್ ಅಂದ್ರೆ ಹೀಗೆ ಇರಬೇಕು ಅನ್ನೋ ರೀತಿಯಲ್ಲಿ ನಟ ಅಲ್ ಪಸಿನೋ (Al Pacino) ಅಭಿನಯಿಸಿದ್ದರು.




ಶಿವಣ್ಣನ ಲುಕ್​ಗೆ ಸ್ಕೆರ್ಫೆಸ್ ಚಿತ್ರದ ಸ್ಪೂರ್ತಿ ಇದಿಯೇ?
ಘೋಸ್ಟ್ ಚಿತ್ರದ ಯಾವುದೇ ವಿಷಯವೂ ಈ ಸ್ಕೆರ್ಫೆಸ್ ಚಿತ್ರಕ್ಕೆ ಹೋಲಿಕೆ ಆಗೋದಿಲ್ಲ ಅಂತಲೇ ಹೇಳಬಹುದೇನೋ. ಆದರೆ ಸ್ಕೆರ್ಫೆಸ್ ಚಿತ್ರ ಅನೇಕ ನಿರ್ದೇಶಕರಿಗೆ ಸ್ಪೂರ್ತಿ ಆಗಿದೆ. ಒಂದು ವೇಳೆ ಅಲ್ಲಿಂದ ಕಾಪಿ ಮಾಡಿದ್ರೂ ಏನು ತಪ್ಪು ಅನ್ನೋರು ಇದ್ದಾರೆ.


ಆದರೆ ಈಗ ವಿಷಯ ಇದು ಅಲ್ವೇ ಅಲ್ಲ. ವಿಷಯ ಇರೋದು ಪೋಸ್ಟರ್ ಬಗ್ಗೆ ಅಂತಲೇ ಹೇಳಬಹುದೇನೋ. ಅದರಂತೆ ಶಿವಣ್ಣನ ಯಂಗ್ ಗ್ಯಾಂಗಸ್ಟರ್ ಲುಕ್ ಕಾಪಿ ಮಾಡಲಾಗಿದೆ. ಸ್ಕೆರ್ಫೆಸ್ ಚಿತ್ರದ ನಟ ಅಲ್​ ಪಸಿನೋ ಸ್ಟೈಲ್​ ಅನ್ನೆ ಇಲ್ಲಿ ಕಾಪಿ ಮಾಡಲಾಗಿದೆ ಅನ್ನೋದು ಈಗೀನ ವಾದ ಆಗಿದೆ.


ಘೋಸ್ಟ್ ಚಿತ್ರದ ಡೈರೆಕ್ಟರ್ ಶ್ರೀನಿ ಏನು ಹೇಳುತ್ತಾರೆ?
ಘೋಸ್ಟ್ ಚಿತ್ರದ ಡೈರೆಕ್ಟರ್ ಶ್ರೀನಿಗೂ ಈ ವಿಷಯ ಗಮನಕ್ಕೆ ಬಂದಿದೆ. ಇದನ್ನ ನೋಡಿರೋ ಶ್ರೀನಿ ಸುಮ್ನೆ ಕುಳಿತಿಲ್ಲ. ಅಸಲಿ ವಿಷಯವನ್ನ ಹೇಳಿಕೊಂಡಿದ್ದಾರೆ. ಈ ಡಿಸೈನ್ ಹಿಂದಿನ ಆ ಕ್ರಿಯೇಟರ್ ಯಾರೂ ಅನ್ನೋದನ್ನ ಕೂಡ ಹೇಳಿಕೊಂಡಿದ್ದಾರೆ.


"ಇದನ್ನ ನನ್ನ ಗಮನಕ್ಕೆ ತಂದವರಿಗೆ ಧನ್ಯವಾದಗಳು. ಇದು ಕೇವಲ ಒಂದು ಸ್ಕೆಚ್ ಆಗಿದೆ. ಲುಕ್​ ಟೆಸ್ಟ್ ಟೀಮ್​​ನ ಕಲಾವಿದ ಯತೀಶ್ ಈ ಒಂದು ಡಿಸೈನ್ ಮಾಡಿದ್ದಾರೆ. ಈ ಒಂದು ಲುಕ್ ತರಲು ಯತೀಶ್ ಸಾಕಷ್ಟು ಸಾಫ್ಟ್​ವೇರ್ಸ್ ಬಳಸುತ್ತಿದ್ದಾರೆ. ಏನೆ ಇರಲಿ, ನಾವು ತುಂಬಾ ಎಚ್ಚರಿಕೆಯಿಂದಲೇ ಕೆಲಸ ಮಾಡುತ್ತಿದ್ದೇವೆ " ಎಂದು ಘೋಸ್ಟ್ ಡೈರೆಕ್ಟರ್ ಶ್ರೀನಿ ತಿಳಿಸಿದ್ದಾರೆ.


Kannada Ghost Movie Shiva Rajkumar Gangster Look Poster Viral News
ಘೋಸ್ಟ್ ಚಿತ್ರದ ಶಿವಣ್ಣನ ವೈರಲ್ ಪೋಸ್ಟರ್ ನಕಲಿನಾ-ಅಸಲಿನಾ?


ಘೋಸ್ಟ್ ಚಿತ್ರದ ಎರಡು ಹಂತದ ಚಿತ್ರೀಕರಣ ಆಗಿದೆ. ಈ ಎರಡು ಹಂತದಲ್ಲಿ ಇಲ್ಲಿವರೆಗೂ ಯಾವುದೇ ರೀತಿಯ ನಕಲಿ-ಅಸಲಿ ಅನ್ನೋ ವಿಷಯದ ಚರ್ಚೆನೆ ಆಗಿಲ್ಲ ಅನಿಸುತ್ತದೆ. ಆದರೆ ಶಿವಣ್ಣನ ಯಂಗ್ ಲುಕ್ ವೈರಲ್ ಆಗಿದ್ದಕ್ಕೋ ಏನೋ? ಇದು ಹೆಚ್ಚು ಜನರ ಗಮನಕ್ಕೆ ಬರುತ್ತಿದೆ.


ಇದನ್ನೂ ಓದಿ:  Milana Nagaraj: ಸ್ಯಾಂಡಲ್‍ವುಡ್ ನಟಿ ಮಿಲನಾ ಅವರ AI ಫೋಟೋಸ್ ನೋಡಿ!


ಇನ್ನು ಚಿತ್ರದ ಕೊನೆಯ ಹಂತದ ಚಿತ್ರೀಕರಣ ಇದೇ ತಿಂಗಳ 10 ರಿಂದಲೇ ಶುರು ಆಗುತ್ತಿದೆ. ಅಷ್ಟರಲ್ಲಿಯೇ ಈ ಒಂದು ಫೋಸ್ಟರ್ ಅಸಲಿ-ನಕಲಿ ವಿಷಯ ಹೆಚ್ಚು ಗಮನಕ್ಕೆ ಬರುತ್ತಿದೆ ಅಂತಲೇ ಹೇಳಬಹುದು.

First published: