Cinematic Universe ಟ್ರೆಂಡ್ ಶುರು! ಘೋಸ್ಟ್ ಡೈರೆಕ್ಟರ್ ಶ್ರೀನಿ ಹೊಸ ಪ್ರಯೋಗ

ಘೋಸ್ಟ್ ಚಿತ್ರದಲ್ಲಿ ಶಿವಣ್ಣನ ಮೀಟ್ ಆಗ್ತಾರೆ ಮಿಸ್ಟರ್ ಬೀರ್​ಬಲ್!

ಘೋಸ್ಟ್ ಚಿತ್ರದಲ್ಲಿ ಶಿವಣ್ಣನ ಮೀಟ್ ಆಗ್ತಾರೆ ಮಿಸ್ಟರ್ ಬೀರ್​ಬಲ್!

ಘೋಸ್ಟ್ ಸಿನಿಮಾದಲ್ಲಿ ಈ ಒಂದು ಪ್ರಯೋಗ ಸಕ್ಸಸ್ ಆದ್ರೆ, ಜನಕ್ಕೆ ಇಷ್ಟ ಆದ್ರೆ, ಮೋಸ್ಟ್ಲಿ ಕನ್ನಡದಲ್ಲೂ ಇದು ಅತಿ ಹೆಚ್ಚು ಬಳಕೆ ಆಗಬಹುದಾಗಿದೆ. ಕನ್ನಡದಲ್ಲಿ ಈ ರೀತಿ ಮಾಡಲು ಸಾಕಷ್ಟು ಹಿಟ್ ಪಾತ್ರಗಳು, ಪಾತ್ರಧಾರಿಗಳು ಇವೆ.

  • News18 Kannada
  • 3-MIN READ
  • Last Updated :
  • Bangalore [Bangalore], India
  • Share this:

ಕನ್ನಡ ಚಿತ್ರರಂಗ ಹೊಸ ಹೊಸ (Sandalwood Cinematic Universe Trend) ಟ್ರೆಂಡ್​​ಗಳಿಗೆ ಒಗ್ಗಿಕೊಂಡಿದೆ. ಕೋಟಿ ಕೋಟಿ ದುಡ್ಡು ಹಾಕಿಸಿ ಸದಭಿರುಚಿಯ ಚಿತ್ರ ಮಾಡೋರು ಹೆಚ್ಚಾಗಿದೆ. ರಿಮೇಕ್ (Remake Movie) ಹಾವಳಿ ಹಾರಿ ಹೋಗಿದೆ. ಕಾಪಿ ಮಾಡೋರು ಸಿಗೋದು ಕಡಿಮೇನೆ ಬಿಡಿ. ವ್ಯಾಪಾರಿ ದೃಷ್ಠಿಯಿಂದ ಈ ಎಲ್ಲ ಟ್ರಿಕ್​ಗಳು ಈಗ ವರ್ಕ್ ಆಗೋದಿಲ್ಲ. ಜನಕ್ಕೆ ಹೊಸ ರೀತಿಯ (Kannada Stories) ಕಥೆಯ ಚಿತ್ರವೇ ಬೇಕಾಗಿದೆ. ಲಾಕ್​ ಡೌನ್ ಟೈಮ್​​ಲ್ಲಿ ಮನೆಯಲ್ಲಿ ಹೆಚ್ಚು ಸಮಯ ಕಳೆದ ಜನ ವಿಶ್ವದ ಎಲ್ಲ ಸಿನಿಮಾಗಳನ್ನ ನೋಡಿದ್ದಾರೆ. ಇದರಿಂದ  ಅಭಿರುಚಿ ಮತ್ತು ಸಿನಿಮಾ ಆಸಕ್ತಿ ಬೇರೆ ಲೆವಲ್​ಗೆ ಇದೆ. ಇದನ್ನ ಅರ್ಥ ಮಾಡಿಕೊಂಡಿರೋ ಫಿಲ್ಮ್​ ಮೇಕರ್ಸ್ ಹೊಸ  ವಿಷಯವನ್ನ ಸಿನಿಮಾದಲ್ಲಿ ಅಳವಡಿಸುತ್ತಿದ್ದಾರೆ. ಆ ವಿಷಯದಲ್ಲಿ Cinematic Universe  ಹೆಚ್ಚು ಚಾಲ್ತಿಯಲ್ಲಿದೆ.


Cinematic Universe ಎಂಬ ಹೊಸ ಟ್ರೆಂಡ್!
ಹಾಲಿವುಡ್​ಗೆ ಮಾತ್ರ ಸೀಮಿತವಾಗಿದ್ದ ಈ ಒಂದು ಸಿನಿಮ್ಯಾಟಿಕ್​ ಯುನಿವರ್ಸ್​ ಬಾಲಿವುಡ್​​ಗೂ ಕಾಲಿಟ್ಟಾಗಿದೆ. ಬಾಲಿವುಡ್​ನ ಸಿಂಬ ಚಿತ್ರದಲ್ಲೂ ಇದನ್ನ ನೋಡಿದ್ದೇವೆ. ಅದೇ ರೀತಿ ಇತ್ತೀಚಿಗೆ ಬಂದ ಪಠಾಣ್ ಚಿತ್ರದಲ್ಲೂ ಇದನ್ನ ನೋಡಬಹುದು.


Kannada Ghost Movie Director Srini using Cinematic Universe in Ghost Movie
ಪಠಾಣ್ ಚಿತ್ರದಲ್ಲಿ ಶಾರುಕ್ ಮೀಟ್ಸ್ ಸಲ್ಮಾನ್ ಖಾನ್


ಇದರ ಬಗ್ಗೆ ಕೊಂಚ ವಿಸ್ತಾರವಾಗಿ ಹೇಳೋದಾದ್ರೆ, ಸೂಪರ್ ಹಿಟ್ ಚಿತ್ರಗಳ ಪಾತ್ರಗಳು ಮುಂದಿನ ಚಿತ್ರದಲ್ಲೂ ಮುಂದುವರೆಯೋದಾಗಿದೆ. ಇಲ್ಲವೇ ಬೇರೆ ಚಿತ್ರದ ಕಥೆಯಲ್ಲಿ ಸೂಪರ್ ಹಿಟ್ ಕ್ಯಾರೆಕ್ಟರ್​ನ್ನ ತರೋದು ಈ ಒಂದು ಸಿನಿಮ್ಯಾಟಿಕ್ ಯುನಿವರ್ಸ್​ನ ಮೂಲ ಮಂತ್ರ ಅಂತಲೇ ಹೇಳಬಹುದು.




ಅಜಯ್, ರಣವೀರ್, ಅಕ್ಷಯ್ ಮುಖಾ-ಮುಖಿ!
ಇದರ ಬಗ್ಗೆ ಈಗ ಹೆಚ್ಚು ಚರ್ಚೆ ಕೂಡ ಆಗುತ್ತಿದ್ದು, ಬಾಲಿವುಡ್​ನ ಸೂರ್ವವಂಶಿ ಚಿತ್ರದಲ್ಲಿ ಅಕ್ಷಯ್ ಕುಮಾರ್ ಇದ್ದರು. ಸಿಂಗಂ ಚಿತ್ರ ಖ್ಯಾತಿಯ ನಟ ಅಜಯ್ ದೇವಗನ್ ಈ ಚಿತ್ರದಲ್ಲಿ ಸಿಂಗಂ ಆಗಿಯೇ ಬಂದಿದ್ದರು. ಸಿಂಬ ಪಾತ್ರಧಾರಿ ರಣವೀರ್ ಸಿಂಗ್ ಕೂಡ ಸಿಂಬ ರೋಲ್​ನಲ್ಲಿಯೇ ಬಂದು ಶಾಕ್ ಕೊಟ್ಟಿದ್ದರು.


ಹಾಗೇ ಒಂದೇ ಚಿತ್ರದಲ್ಲಿ ಎಲ್ಲ ಸೂಪರ್ ಹಿಟ್ ಪಾತ್ರಗಳು ಕಾಣಿಸಿಕೊಂಡು ಪ್ರೇಕ್ಷಕರಿಗೆ ಹೊಸ ಅನುಭವ ಕೊಟ್ಟಿದ್ದರು. ಅದೇ ರೀತಿನೇ ಮೊನ್ನೆ ಮೊನ್ನೆ ಬಂದ ಪಠಾಣ್ ಚಿತ್ರದಲ್ಲಿ ರಾ ಏಜೆಂಟ್ ಪಾತ್ರಧಾರಿ ಟೈಗರ್ ಸಲ್ಮಾನ್ ಖಾನ್ ಕೂಡ ಬಂದಿದ್ದರು.


ಪಠಾಣ್ ಚಿತ್ರದಲ್ಲಿ ಶಾರುಕ್ ಮೀಟ್ಸ್ ಸಲ್ಮಾನ್ ಖಾನ್
ಪಠಾಣ್ ಚಿತ್ರದಲ್ಲಿ ಶಾರುಖ್ ಖಾನ್ ರಾ ಏಜೆಂಟ್ ಪಾತ್ರ ಮಾಡಿದ್ದರು. ಅದೇ ಪಾತ್ರವನ್ನ ಸಲ್ಮಾನ್ ಖಾನ್ ಟೈಗರ್ ಪಾತ್ರ ಮೀಟ್ ಆಗೋ ಸೀನ್ ಇತ್ತು. ಹೀಗೆ ಆಯಾ ಹಿಟ್ ಪಾತ್ರಗಳು ಈಗ ಮತ್ತ ಮತ್ತೆ ಬರುವ ಟ್ರೆಂಡ್ ಶುರು ಆಗಿದೆ.


ಇದೇ ಟ್ರೆಂಡ್​ನ್ನ ಕನ್ನಡದಲ್ಲಿ ತರುವ ಪ್ರಯತ್ನ ಆಗುತ್ತಿದೆ. ಕನ್ನಡದ ಯುವ ನಿರ್ದೇಶಕ ಎಂ. ಜೆ. ಶ್ರೀನಿವಾಸ ಈ ಒಂದು ಕೆಲಸ ಮಾಡುತ್ತಿದ್ದಾರೆ. ತಾವೇ ನಿರ್ದೇಶನ ಮಾಡಿ ನಟಿಸಿದ್ದ ಬೀರ್​ಬಲ್ ಚಿತ್ರದ ವಕೀಲನ ಪಾತ್ರದ ಜೊತೆಗೆ ಈ ಒಂದು ಪ್ರಯೋಗ ಮಾಡುತ್ತಿದ್ದಾರೆ.


ಕನ್ನಡದ ಘೋಸ್ಟ್ ಚಿತ್ರದಲ್ಲಿ ಹೊಸ ಪ್ರಯೋಗ
ಈ ಪಾತ್ರ ನೇರವಾಗಿ ಘೋಸ್ಟ್ ಚಿತ್ರದಲ್ಲಿ ಶಿವಣ್ಣನ ಮೀಟ್ ಆಗಲಿದೆ. ವಿಶೇಷವೆಂದ್ರೆ, ಘೋಸ್ಟ್​ ಚಿತ್ರವನ್ನ ಡೈರೆಕ್ಟರ್ ಶ್ರೀನಿ ಡೈರೆಕ್ಷನ್ ಮಾಡುತ್ತಿದ್ದಾರೆ. ಶ್ರೀನಿ ಸಿನಿಮ್ಯಾಟಿಕ್ ಯುನಿರ್ವಸ್ ಅಂತಲೇ ಈಗ ಈ ಒಂದು ಪ್ರಯೋಗದ ಮೇಲೆ ಕೆಲಸ ಆರಂಭಿಸಿದ್ದಾರೆ.


ತಮ್ಮ ಈ ಒಂದು ಪ್ರಯೋಗದ ಬಗ್ಗೆ ವಿಡಿಯೋ ಮೂಲಕ ವಿವರಿಸೋ ಕೆಲಸ ಕೂಡ ಮಾಡಿದ್ದಾರೆ. ಅದರಂತೆ ಶ್ರೀನಿ ಸೃಷ್ಟಿಸಿದ್ದ ಬೀರ್​ಬಲ್​ ಪಾತ್ರ ಘೋಸ್ಟ್ ಶಿವಣ್ಣನ ಹ್ಯಾಂಡ್​ ಶೇಕ್ ಮಾಡೋ ವಿಡಿಯೋ ಇದಾಗಿದೆ ಅಂತಲೇ ಹೇಳಬಹುದು.


Kannada Ghost Movie Director Srini using Cinematic Universe in Ghost Movie
ಅಜಯ್, ರಣವೀರ್, ಅಕ್ಷಯ್ ಮುಖಾ-ಮುಖಿ!


ಘೋಸ್ಟ್ ಚಿತ್ರದಲ್ಲಿ ಶಿವಣ್ಣನ ಮೀಟ್ ಆಗ್ತಾರೆ ಮಿಸ್ಟರ್ ಬೀರ್​ಬಲ್!
ಘೋಸ್ಟ್ ಸಿನಿಮಾದಲ್ಲಿ ಈ ಒಂದು ಪ್ರಯೋಗ ಸಕ್ಸಸ್ ಆದ್ರೆ, ಜನಕ್ಕೆ ಇಷ್ಟ ಆದ್ರೆ, ಮೋಸ್ಟ್ಲಿ ಕನ್ನಡದಲ್ಲೂ ಇದು ಅತಿ ಹೆಚ್ಚು ಬಳಕೆ ಆಗಬಹುದಾಗಿದೆ. ಕನ್ನಡದಲ್ಲಿ ಈ ರೀತಿ ಮಾಡಲು ಸಾಕಷ್ಟು ಹಿಟ್ ಪಾತ್ರಗಳು, ಪಾತ್ರಧಾರಿಗಳು ಇವೆ.


ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಓಂ ಸಿನಿಮಾ ಇದಕ್ಕೆ ದಿ ಬೆಸ್ಟ್ ಎಕ್ಸಾಂಪಲ್ ಅಂತಲೇ ಹೇಳಬಹುದು. ಆದರೆ ಇದರ ಬೆನ್ನಲ್ಲಿಯೇ ಕಬ್ಜ ಸಿನಿಮಾದಲ್ಲಿ ಓಂ ಚಿತ್ರದ ಸತ್ಯ ಪಾತ್ರ ಇಲ್ಲಿ ರಿಯಲ್ ಭಾಯ್ ಮೀಟ್ ಆಗ್ತಾರಾ ಅನ್ನೋ ಅನುಮಾನವೂ ಇದೆ.


ಕಬ್ಜ ಚಿತ್ರದಲ್ಲಿ ಉಪ್ಪಿಯನ್ನ ಓಂ ಸತ್ಯ ಮೀಟ್ ಆಗ್ತಾರಾ?
ಇದಕ್ಕೆ ಕಾರಣ ಏನೂ ಅಂದ್ರೆ, ಕಬ್ಜ ಚಿತ್ರದಲ್ಲಿರೋ ಪಾತ್ರಗಳಲ್ಲಿ ಶಿವಣ್ಣನ ಪಾತ್ರವೂ ಇದೆ. ಅದು ವಿಶೇಷವಾಗಿಯೇ ಇಲ್ಲಿ ಬರುತ್ತದೆ ಅನ್ನುವ ಸುದ್ದಿ ದಿನೇ ದಿನೇ ವೈರಲ್ ಆಗುತ್ತಿದೆ.


ಇದನ್ನೂ ಓದಿ:  Kichcha Sudeepa: ಕಿಚ್ಚ ಅಭಿಮಾನಿಗಳ ಸಾಧನೆ! ಫ್ಯಾನ್ಸ್ ಪೇಜ್​ಗೆ ಸಿಕ್ತು ಬ್ಲೂ ಟಿಕ್


ಆದರೆ ಈ ಬಗ್ಗೆ ಯಾರೂ ಎಲ್ಲೂ ಇನ್ನು ಏನೂ ಹೇಳಿಕೊಂಡಿಲ್ಲ. ಇನ್ನುಳಿದಂತೆ ಸದ್ಯ ಘೋಸ್ಟ್ ಚಿತ್ರದ ಡೈರೆಕ್ಟರ್ ಶ್ರೀನಿ ತಮ್ಮ ಬೀರ್​ಬಲ್ ಪಾತ್ರವನ್ನ ಘೋಸ್ಟ್ ಶಿವಣ್ಣನಿಗೆ ಮೀಟ್ ಮಾಡಿಸೋಕೆ ತಯಾರಿ ಮಾಡಿಕೊಳ್ತಿದ್ದಾರೆ.

First published: