Shanti Kranti: ಶಾಂತಿ ಕ್ರಾಂತಿ ಮಾಡುವಾಗ ಪಟ್ಟ ಕಷ್ಟ ಅಷ್ಟಿಷ್ಟಲ್ಲ! ಕನ್ನಡದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಬಗ್ಗೆ ಕ್ರೇಜಿಸ್ಟಾರ್ ಹೇಳಿದ್ದೇನು?

Ravichandran: ಯಾವುದೇ ಸಿನಿಮಾವನ್ನು ಮಾಡಬೇಕು ಎಂದರೆ ಬಹಳ ಪರಿಶ್ರಮ ಅಗತ್ಯವಿರುತ್ತದೆ. ಒಂದು ಸಿನಿಮಾ ಮಾಡಲು ಕಥೆ ಬಹಳ ಮುಖ್ಯ, ಆದರೆ ಅದಕ್ಕಿಂತ ಹೆಚ್ಚಾಗಿ ಅದಕ್ಕೆ ಹಣವೂ ಮುಖ್ಯ.

ಶಾಂತಿ ಕ್ರಾಂತಿ

ಶಾಂತಿ ಕ್ರಾಂತಿ

  • Share this:
ಕನ್ನಡದಲ್ಲಿ ಪ್ಯಾನ್​ ಇಂಡಿಯಾ (Pan India) ಸಿನಿಮಾಗಳ ಹಾವಳಿ ಆರಂಭವಾಗಿದೆ. ಕೆಜಿಎಫ್​ 1 (KGF) ಮತ್ತು 2 ರ ನಂತರ ಬಹುತೇಕ ಸ್ಟಾರ್​ಗಳು ಪ್ಯಾನ್​ ಇಂಡಿಯಾ ಸಿನಿಮಾದತ್ತ ಮುಖ ಮಾಡಿದ್ದಾರೆ. ಜನರಿಂದ ಉತ್ತಮ ಪ್ರತಿಕ್ರಿಯೆ ಪಡೆದ ರಕ್ಷಿತ್ ಶೆಟ್ಟಿ ಅಭಿನಯದ ಚಾರ್ಲಿ ಇರಬಹುದು, ಬಹು ನಿರೀಕ್ಷಿತ ಕಿಚ್ಚ ಸುದೀಪ್ ಅವರ ವಿಕ್ರಾಂತ್ ರೋಣವಿರಬಹುದು. ಎಲ್ಲರ ಕಣ್ಣು ಪ್ಯಾನ್​ ಇಂಡಿಯಾ ಮೇಲಿದೆ. ಆದರೆ ಕನ್ನಡದಲ್ಲಿ ಈ ಮೊದಲು ಪ್ಯಾನ್​ ಇಂಡಿಯಾ ಸಿನಿಮಾ ಬಿಡುಗಡೆಯಾಗಿದೆ.

ನಾಲ್ಕು ಭಾಷೆಯಲ್ಲಿ ತಯಾರಾಗಿತ್ತು ಸಿನಿಮಾ

ಹೌದು,  ಜನರಿಗೆ ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಈ ಸಿನಿಮಾದ ಸಮಯದ ಕೆಲ ವಿಚಾರಗಳನ್ನು ಕ್ರೇಜಿಸ್ಟಾರ್ ರವಿಚಂದ್ರನ್ ಸೇರಿದಂತೆ ಕೆಲ ಕಲಾವಿದರು ಹಂಚಿಕೊಂಡಿದ್ದಾರೆ.  ಶಾಂತಿ – ಕ್ರಾಂತಿ ಸಿನಿಮಾ ಯಾರಿಗೆ ತಾನೇ ಗೊತ್ತಿಲ್ಲ. ದಕ್ಷಿಣ ಭಾರತದ ಸ್ಟಾರ್ ನಟ ನಟಿಯರು ಇದ್ದ ಸಿನಿಮಾ ಅದು. ರವಿಚಂದ್ರನ್ ರಜನಿ ಕಾಂತ್, ನಾಗಾರ್ಜುನ, ಜೂಹಿ ಚಾವ್ಲಾ, ಖುಷ್ಬೂ, ರಮೇಶ್​ ಅರವಿಂದ್, ಅನಂತ್ ನಾಗ್ ಹೀಗೆ ಅದ್ಬುತ ಕಲಾವಿದರ ದಂಡೇ ಇದ್ದ ಸಿನಿಮಾ ಇದು.

ಆಗಿನ ಕಾಲದಲ್ಲಿ ನಾಲ್ಕು ಭಾಷೆಗಳಲ್ಲಿ ಕನ್ನಡ, ತೆಲುಗು, ತಮಿಳು,ಹಿಂದಿಯಲ್ಲಿ ಬಿಡುಗಡೆಯಾದ ಚಿತ್ರ ಇದು. ಕನ್ನಡಕ್ಕೆ ಹೆಮ್ಮೆಯ ವಿಚಾರ. ಆದರೆ ಈ ಸಿನಿಮಾ ಮಾಡುವುದು ಸುಲಭವಾಗಿರಲಿಲ್ಲ.  ಈ ಸಿನಿಮಾದ ನಿರ್ಮಾಣವನ್ನು ರವಿಚಂದ್ರನ್ ಅವರ ತಂದೆ ವೀರಸ್ವಾಮಿ ಅವರು ಮಾಡುತ್ತಿದ್ದರು. ಅದರಲ್ಲೂ ಆ ಸಮಯದಲ್ಲಿ ಡಿಜಿಟಲ್​ ಕ್ಯಾಮೆರಾಗಳಿರಲಿಲ್ಲ, ರೀಲ್ಸ್​ಗಳ ಮೇಲೆ ಅವಲಂಬಿತವಾಗಿರಬೇಕಿತ್ತು. ಈ ಸಿನಿಮಾವನ್ನು ಬಹಳ ಕಷ್ಟಪಟ್ಟು ಮಾಡಲಾಗಿದೆಯಂತೆ.

ಇದನ್ನೂ ಓದಿ: ಪ್ಯಾಂಟ್​ ಹಾಕಿ, ಬಟನ್ ಹಾಕೋದು ಮರೆತಳು! ಏನಪ್ಪಾ ಇವ್ಳ ಟಾರ್ಚರ್​​- ಬಿಟ್ಬಿಡಮ್ಮಾ ತಾಯಿ ಎಂದ ನೆಟ್ಟಿಗರು

ಯಾವುದೇ ಸಿನಿಮಾವನ್ನು ಮಾಡಬೇಕು ಎಂದರೆ ಬಹಳ ಪರಿಶ್ರಮ ಅಗತ್ಯವಿರುತ್ತದೆ. ಒಂದು ಸಿನಿಮಾ ಮಾಡಲು ಕಥೆ ಬಹಳ ಮುಖ್ಯ, ಆದರೆ ಅದಕ್ಕಿಂತ ಹೆಚ್ಚಾಗಿ ಅದಕ್ಕೆ ಹಣವೂ ಮುಖ್ಯ. ಇತ್ತೀಚಿನ ದಿನಗಳಲ್ಲಿ ಸಿನಿಮಾ ಮಾಡುವುದು ಎಂದರೆ ಕೋ , ಕೋಟಿ ಲೆಕ್ಕದಲ್ಲಿ ಮಾಡಲಾಗುತ್ತದೆ. ಎಲ್ಲವೂ ಈಗ ಕೋಟಿ ಲೆಕ್ಕಾಚಾರದಲ್ಲಿ ಮಾಡಲಾಗುತ್ತದೆ. ಆದರೆ ಮೊದಲೆಲ್ಲ ಸಿನಿಮಾ ಮಾಡಲು ಸಾವಿರದ ಲೆಕ್ಕ ಇದ್ದರೂ ಬಹಳ ಕಷ್ಟಪಡಬೇಕಿತ್ತು. ಕೆಲವೊಂದು ಸಿನಿಮಾ ಸೆಟ್ಟೇರದೇ ಹಾಗೆಯೇ ಉಳಿದಿರುವ ಹಲವಾರು ಉದಾಹರಣೆಗಳಿವೆ. ಇನ್ನೂ ಕೆಲವೊಂದು ಚಿತ್ರಗಳು ಹಣದ ಕೊರತೆಯಾಗಿ ಅರ್ಧಕ್ಕೆ ನಿಂತಿವೆ. ಹೀಗೆ ಒಂದೊಂದು ಸಿನಿಮಾಗೂ ಒಂದೊಂದು ಕಥೆಯಿದೆ.

ಕಷ್ಟ ಅನುಭವಿಸಿದ್ದರಂತೆ ರವಿಚಂದ್ರನ್

ಈ ಸಿನಿಮಾ ಆರಂಭ ಮಾಡಿದ ಸ್ವಲ್ಪ ದಿನಗಳಲ್ಲಿ ರವಿಚಂದ್ರನ್ ಅವರಿಗೆ ಇದು ನನ್ನಿಂದ ಸಾಧ್ಯವಿಲ್ಲ ಎನಿಸಿತ್ತಂತೆ. ಅಲ್ಲದೇ ಈ ಸಿನಿಮಾ ಮಾಡಲು ಸುಮಾರು 3 ರಿಂದ ನಾಲ್ಕು ವರ್ಷಗಳ ಸಮಯ ಹಿಡಿದಿತ್ತು. ಅಲ್ಲದೇ ಇಂಡಸ್ಟ್ರಿಯಿಂದ ರವಿಚಂದ್ರನ್ ಬಹಳ ಕಷ್ಟ ಅನುಭವಿಸಿದ್ದರಂತೆ.  ಕ್ರೇಜಿ ಸ್ಟಾರ್ ಹೇಳುವ ಪ್ರಕಾರ ಈ ರೀತಿಯ ಸಿನಿಮಾಗಳಿಗೆ ಒಂದು ದಿನ ಸಮಸ್ಯೆಯಾದರೂ ಸಹ ಅದು ವರ್ಷಾನುಗಟ್ಟಲೆ ಮುಂದೆ ಹೋಗುವ ಸಾಧ್ಯತೆ ಇರುತ್ತದೆ. ಈ ಸಿನಿಮಾದಲ್ಲಿ ಸಹ ರಜನಿಕಾಂತ್, ನಾಗಾರ್ಜುನ, ಜೂಹಿ ಚಾವ್ಲಾ ಅವರ ಕಾಲ್​ ಶೀಟ್ ಪಡೆಯಲು ಕಷ್ಟವಾಗಿತ್ತಂತೆ. ಒಂದೇ ಸಮಯದಲ್ಲಿ ಸರಿಯಾಗಿ ಎಲ್ಲರೂ ಸಿಗುವುದು ಸುಲಭವಾಗಿರಲಿಲ್ಲ.

ಅಲ್ಲದೇ, ಒಮ್ಮೆ ಸ್ಯಾಂಡಲ್​ವುಡ್​ನಲ್ಲಿ ಯಾವುದೋ ಕಾರಣಕ್ಕೆ ಸ್ಟ್ರೈಕ್​ ಮಾಡಿದ್ದರಂತೆ, ರವಿಚಂದ್ರನ್ ಎಷ್ಟೇ ಹೋಗಿ ಕೇಳಿಕೊಂಡರೂ ಸಹ ಯಾರೂ ಕೇರ್ ಮಾಡಿಲ್ಲವಂತೆ. ಆ ಕಷ್ಟದ ದಿನಗಳನ್ನು ನೆನೆದಿದ್ದಾರೆ.  ಅಲ್ಲದೇ, ಈ ಸಿನಿಮಾದ ಸಮಯದಲ್ಲಿ ಟಿಕೆಟ್​ ಬೆಲೆಯನ್ನು ಸ್ವಲ್ಪ ಹೆಚ್ಚಿಸಿಕೊಡಿ ಎಂದು ಕೇಳಿಕೊಂಡರೂ ಅದನ್ನು ಮಾಡಿಕೊಟ್ಟಿರಲಿಲ್ಲ. ದೊಡ್ಡ ಬಜೆಟ್​ನ ಸಿನಿಮಾ ಇದಾಗಿರುವುದರಿಂದ, ನಿರೀಕ್ಷೆ ಮಾಡಿದ ಮಟ್ಟಕ್ಕೆ ಸಿನಿಮಾ ಗಳಿಸಲಿಲ್ಲ ಎಂಬುದು ಸಹ ಸತ್ಯ.

ಇದನ್ನೂ ಓದಿ: ಈ ಬಾರಿ ಎರಡೆರಡು ಬಿಗ್​ಬಾಸ್​ ಅಂತೆ, ಸದ್ಯದಲ್ಲಿಯೇ ಸ್ಟಾರ್ಟ್ ಆಗುತ್ತೆ ಶೋ

ಅಲ್ಲದೇ, ಸಮಯದಲ್ಲಿ ರೀಲ್ಸ್ ಬಳಕೆ ಮಾಡಲಾಗುತ್ತಿತ್ತು. ಹೆಚ್ಚು ಟೇಕ್ ತೆಗೆದುಕೊಳ್ಳುವುದು ಸಾಧ್ಯವಿರಲಿಲ್ಲ. ಬಹಳ ನಾಜೂಕಿನಿಂದ ಮಾಡಬೇಕಿತ್ತು. ಬಹಳಷ್ಟು ಕಷ್ಟಪಟ್ಟು ಮಾಡಿದ  ಈ ಸಿನಿಮಾ ಸ್ಯಾಂಡಲ್​ವುಡ್​ನಲ್ಲಿ ಸಿನಿಪ್ರಿಯರ ಮನದಲ್ಲಿ ಅಚ್ಚಳಿಯದೇ ನೆನಪಿನಲ್ಲಿ ಉಳಿದಿದೆ.
Published by:Sandhya M
First published: