• Home
  • »
  • News
  • »
  • entertainment
  • »
  • Big Cinema Big Friday: ಕನ್ನಡದ ಕಾಂತಾರ, ತೋತಾಪುರಿಗೆ ಬೀಳುತ್ತಾ ಪೊನ್ನಿಯಿನ್ ಸೆಲ್ವನ್ ಏಟು?

Big Cinema Big Friday: ಕನ್ನಡದ ಕಾಂತಾರ, ತೋತಾಪುರಿಗೆ ಬೀಳುತ್ತಾ ಪೊನ್ನಿಯಿನ್ ಸೆಲ್ವನ್ ಏಟು?

ಒಂದೇ ದಿನ ಮೂರು ಮೂರು ಚಿತ್ರ ರಿಲೀಸ್

ಒಂದೇ ದಿನ ಮೂರು ಮೂರು ಚಿತ್ರ ರಿಲೀಸ್

ಕನ್ನಡ ಸಿನಿಮಾಗಳಿಗೆ ಯಾವಾಗಲೂ ಬಿಗ್ ಸಿನಿಮಾಗಳ ಟಕ್ ಇದ್ದೇ ಇರುತ್ತದೆ. ಎಂತಹ ಸಿನಿಮಾ ಬಂದ್ರೂ, ಕನ್ನಡದ ಮಾರುಕಟ್ಟೆಯಲ್ಲಿ ಕನ್ನಡ ಚಿತ್ರಗಳಿಗೇನೆ ಏಟು ಬೀಳುತ್ತದೆ. ಈಗ ಅಂತಹದ್ದೇ ಸ್ಥಿತಿಯಲ್ಲಿ ಕನ್ನಡದ ಎರಡು ಸಿನಿಮಾಗಳು ಎದುರಿಸೋ ಹಾಗೆ ಕಾಣುತ್ತಿದೆ.

  • Share this:

ಕನ್ನಡ ಸಿನಿಮಾಗಳಿಗೆ (Kannada Cinema) ಯಾವಾಗಲೂ ಬಿಗ್ ಸಿನಿಮಾಗಳ ಟಕ್ಕರ್ ಇದ್ದೇ ಇರುತ್ತದೆ. ಎಂತಹ ಸಿನಿಮಾ ಬಂದ್ರೂ, ಕನ್ನಡದ ಮಾರುಕಟ್ಟೆಯಲ್ಲಿ ಕನ್ನಡ ಚಿತ್ರಗಳಿಗೇನೆ ಏಟು ಬೀಳುತ್ತದೆ. ಈಗ ಅಂತಹದ್ದೇ ಸ್ಥಿತಿಯಲ್ಲಿ ಕನ್ನಡದ ಎರಡು ಸಿನಿಮಾಗಳು ಎದುರಿಸೋ ಹಾಗೆ ಕಾಣುತ್ತಿದೆ. ಹೌದು, ಕನ್ನಡ ಪ್ರೇಮಿಗಳನ್ನ ರಂಜಿಸಲು ತುಂಬಾ ದಿನ ಕಾದು ತೆರೆಗೆ ಬರ್ತಿರೊ ತೋತಾಪುರಿ ಸಿನಿಮಾ ಒಂದು ಕಡೆ ಇದೆ, ಇನ್ನೊಂದು ಕಡೆಗೆ ದಂತಕಥೆ ಹೇಳೋಕೆ ನಟ-ನಿರ್ದೇಶಕ ರಿಷಬ್ ಶೆಟ್ಟಿ (Rishabh Shetty) ಕಾಂತಾರ ಮೂಲಕ ಬರ್ತಿದ್ದಾರೆ. ಇವರಡನ್ನೂ ನುಂಗಿ ಹಾಕೋ ಹಾಗೆ, ದೊಡ್ಡಮಟ್ಟದಲ್ಲಿಯೇ ಮಣಿರತ್ನಂ (Director Mani Ratnam) ನಿರ್ದೇಶನದ ಪೊನ್ನಿಯಿನ್ ಸೆಲ್ವನ್ ಸಿನಿಮಾ ರಿಲೀಸ್ ಆಗುತ್ತಿದೆ. ಒಂದೇ ದಿನ ಹೀಗೆ ಈ ವಾರ 30ಕ್ಕೆ ಮೂರು ಸಿನಿಮಾ ರಿಲೀಸ್ ಆಗುತ್ತಿವೆ.

ಒಂದೇ ದಿನ ಮೂರು ಮೂರು ಸಿನಿಮಾ ರಿಲೀಸ್
ಕನ್ನಡದಲ್ಲಿ ನವರಸ ನಾಯಕ ಜಗ್ಗೇಶ್ ಅಭಿನಯದ ತೋತಾಪುರಿ ಸಿನಿಮಾ ಭಾರೀ ಸೌಂಡ್ ಮಾಡುತ್ತಿದೆ. ಅಳೆದು-ತೂಗಿಯೇ ಸಿನಿಮಾವನ್ನ ಪಕ್ಕಾ ಪ್ಲಾನ್ ಮಾಡಿಯೇ ನಿರ್ಮಾಪಕ ಸುರೇಶ್ ಅವರು ಇದೇ 30ಕ್ಕೆ ರಿಲೀಸ್ ಮಾಡುತ್ತಿದ್ದಾರೆ.


ತೋತಾಪುರಿ ನಿರ್ದೇಶಕ ವಿಜಯ್ ಪ್ರಸಾದ್ ಒಂದ್ ಒಳ್ಳೆ ಎಂಟರಟೈನಮೆಂಟ್ ಸಿನಿಮಾನೇ ಕೊಟ್ಟಿದ್ದಾರೆ. ನೀರ್​ದೋಸೆ ಸಿನಿಮಾದಂತ ಚಿತ್ರ ಕೊಟ್ಟ ಅದೇ ವಿಜಯ್ ಪ್ರಸಾದ್, ಈ ಮೂಲಕ ಮತ್ತೊಮ್ಮೆ ಕನ್ನಡಿಗರನ್ನ ರಂಜಿಸೋಕೆ ಸಖತ್ ತಯಾರಿನೇ ಮಾಡಿಕೊಂಡು ಬಂದಿದ್ದಾರೆ. ಕಾಮಿಡಿ ಕಿಕ್ ಕೊಡ್ತಾನೇ ಪ್ರಸ್ತುತ ವಿಷಯದ ಮೇಲೂ ಬೆಳಕು ಚೆಲ್ಲೋ ಕೆಲಸವನ್ನು ಈ ಸಿನಿಮಾ ಮಾಡುತ್ತದೆ.


This Friday 4 films Are going to Release in Karnataka and other place
ಮಣಿರತ್ನಂ ನಿರ್ದೇಶನದ ಪೊನ್ನಿಯಿನ್ ಸೆಲ್ವನ್ ಸಿನಿಮಾ


ತೋತಾಪುರಿ ಚಿತ್ರದಲ್ಲಿ ಕಾಮಿಡಿಯ ಸಖತ್ ಕಿಕ್
ಅಂದ್ಹಾಗೆ ಈ ಚಿತ್ರದಲ್ಲಿ ನವರಸ ನಾಯಕ ಜಗ್ಗೇಶ್ ಅವರಿಗೆ ಈ ಚಿತ್ರದಲ್ಲಿ ಅದಿತಿ ಪ್ರಭುದೇವ ಜೊತೆಯಾಗಿದ್ದಾರೆ. ಮುಸ್ಲಿಂ ಪಾತ್ರದ ಮೂಲಕವೇ ಅದಿತಿ ಈ ಚಿತ್ರದಲ್ಲಿ ಬೇರೆ ಸಂದೇಶವನ್ನೆ ಕೊಡ್ತಿರೋ ಹಾಗೆ ಕಾಣುತ್ತಿದೆ. ಹಾಗೇನೆ ಚಿತ್ರದ ಇತರ ಪಾತ್ರಗಳೂ ಟ್ರೈಲರ್-ಟೀಸರ್ ಮೂಲಕ ಸಖತ್ ಕಿಕ್ ಅನ್ನು ಕೊಟ್ಟಿವೆ.


ಇದನ್ನೂ ಓದಿ: Sunny Leone: ಸೈಕಲ್ ಜೊತೆ ಸನ್ನಿ ಲಿಯೋನ್, ಟಯರ್ ನೋಡಿ ನೆಟ್ಟಿಗರು ಹೇಳಿದ್ದೇನು?


ರಿಷಬ್ ಶೆಟ್ಟಿ ಕಾಂತಾರ ಸಿನಿಮಾದ ಹೊಸ ದಂತ ಕಥೆ
ಡೈರೆಕ್ಟರ್ ರಿಷಬ್ ಶೆಟ್ಟಿ ಹೊಸದೊಂದು ಕಥೆಯನ್ನೆ ಹೇಳೋಕೆ ಬರ್ತಿದ್ದಾರೆ. ಕಾಂತಾರ ಅನ್ನೋ ವಿಶೇಷ ಟೈಟಲ್ ಮೂಲಕವೇ ಹೊಸ ದಂತ ಕಥೆಯನ್ನೇ ಕಟ್ಟಿಕೊಡ್ತಿದ್ದಾರೆ. ನಾಯಕ ಹಾಗೂ ನಿರ್ದೇಶನದ ಜವಾಬ್ದಾರಿ ಹೊತ್ತು ಈ ಚಿತ್ರ ಕೂಡ ಇದೇ 30 ಕ್ಕೆ ರಿಲೀಸ್ ಆಗುತ್ತಿದೆ.


This Friday 4 films Are going to Release in Karnataka and other place
ಇದೇ 30ಕ್ಕೆ ತೋತಾಪುರಿ ಸಿನಿಮಾ ರಿಲೀಸ್


ಈ ಚಿತ್ರದಲ್ಲಿ ಸಪ್ತಮಿ ಗೌಡ ನಾಯಕ ನಟ ರಿಷಬ್ ಶೆಟ್ಟಿಗೆ ಸಾಥ್ ಕೊಟ್ಟಿದ್ದಾರೆ. ಫಾರೆಸ್ಟ್ ಗಾರ್ಡ್ ಆಗಿಯೇ ಅಭಿನಯಸಿದ್ದಾರೆ. ಕರಾವಳಿಯ ಆ ದಿನಗಳ ಪ್ರತಿಬಿಂಬದಂತೇನೆ ಇರೋ ಈ ಸಿನಿಮಾ, ಪ್ರೇಕ್ಷಕರನ್ನ ಬೇರೆ ಲೋಕಕ್ಕೇನೆ ಕರೆದುಕೊಂಡು ಹೋಗುವ ಹಾಗೇನೆ ಕಾಣುತ್ತಿದೆ.


ಇದನ್ನೂ ಓದಿ: BBK Season 9: ಕಾವ್ಯಶ್ರೀ ಲಿಪ್‍ಸ್ಟಿಕ್ ಮೇಲೆ ಅರುಣ್ ಸಾಗರ್ ಕಣ್ಣು! ಆದರೆ ಈ ರೀತಿ ಕಮೆಂಟ್ ಮಾಡಬಾರದಿತ್ತು


ಮಣಿರತ್ನಂ ಬಹು ಕೋಟಿ ಪೊನ್ನಿಯಿನ್ ಸೆಲ್ವನ್ ಇದೇ 30ಕ್ಕೆ ರಿಲೀಸ್
ಇಂತಹ ಈ ಚಿತ್ರ ರಿಲೀಸ್ ಆಗೋ ದಿನವೇ ಮನಿರತ್ನಂ ನಿರ್ದೇಶನದ ಪೊನ್ನಿಯಿನ್ ಸೆಲ್ವನ್ ಸಿನಿಮಾ ಕೂಡ ಇದೇ 30ಕ್ಕೆ ರಿಲೀಸ್ ಆಗುತ್ತಿದೆ. ಹೊಯ್ಸಳ ಕಥೆ ಹೇಳೋಕೆ ಬರ್ತಿರೊ ಈ ಚಿತ್ರದಲ್ಲಿ ಬಹುತಾರೆಯರೇ ಇದ್ದಾರೆ. ಚಿಯಾನ್ ವಿಕ್ರಮ್, ಐಶ್ವರ್ಯ ರೈ, ತ್ರಿಷಾ, ಕಾರ್ತಿಕ್, ಜಯಂ ರವಿ ಹೀಗೆ ಬಹು ತಾರೆಯರ ಈ ಚಿತ್ರ ಭಾರೀ ಕ್ರೇಜ್ ಹುಟ್ಟಸಿದೆ.


This Friday 4 films Are going to Release in Karnataka and other place
ಇದೇ 30ಕ್ಕೆ ಕಾಂತಾರ ಸಿನಿಮಾ ರಿಲೀಸ್


ಇದರ ಜೊತೆಗೆ ತಮಿಳು ನಟ ಧನುಷ್ ಅಭಿನಯದ ನಾನ್ ವರುವೇನ್ (Naane Varuvean) ಸಿನಿಮಾ ಕೂಡ ರಿಲೀಸ್ ಆಗುತ್ತಿದೆ. ಇದು ಸೈಕಾಲಜಿಕಲ್ ಥ್ರಿಲ್ಲರ್ ಸಿನಿಮಾ ಆಗಿದ್ದು ಸೆಪ್ಟೆಂಬರ್-30ಕ್ಕೆ ಬರ್ತಿಲ್ಲ, ಬದಲಾಗಿ 29ಕ್ಕೇನೆ ರಿಲೀಸ್ ಆಗುತ್ತಿದೆ. ಅಲ್ಲಿಗೆ ಈ ಶುಕ್ರವಾರ ಎರಡು ಕನ್ನಡ ಎರಡು ತಮಿಳು ಸಿನಿಮಾ ರಿಲೀಸ್ ಆಗುತ್ತಿರೋದು ವಿಶೇಷ.

First published: