Wheel Chair Romeo: ರೋಮಿಯೋನೇ ಆದ್ರೆ ಇವ್ನು ಎಲ್ಲರಂತಲ್ಲ, ಹೊಸಬರಿಗೆ ಕಿಚ್ಚ ಸುದೀಪ್ ಸಾಥ್

Sandalwood: ಇನ್ನು ಇಲ್ಲಿನ ಪಾತ್ರಗಳ ವಿಷಯಕ್ಕೆ ಬರುವುದಾದರೆ, ಪ್ರತಿಯೊಬ್ಬರು ಅದ್ಭುತವಾಗಿ ಅಭಿನಯಿಸಿದ್ದಾರೆ. ಎಲ್ಲದಕ್ಕಿಂತ ಹೆಚ್ಚಾಗಿ ಇದರಲ್ಲಿ ಡೈಲಾಗ್​ಗೆ ಹೆಚ್ಚು ಪ್ರಾಮುಖ್ಯತೆ ಕೊಡಲಾಗಿದೆ.

ಚಿತ್ರದ ಪೋಸ್ಟರ್

ಚಿತ್ರದ ಪೋಸ್ಟರ್

  • Share this:
ವ್ಹೀಲ್ ಚೇರ್ ರೋಮಿಯೋ (Wheel Chair Romeo) ಈ ಚಿತ್ರ ಸದ್ಯ ಬಹಳಷ್ಟು ಸುದ್ದಿಯಲ್ಲಿದೆ. ಅದರ ಕಥೆ ಜನರಿಗೆ ಬಹಳ ಇಷ್ಟವಾಗಿದೆ. ಹೊಸಬರೇ ಸೇರಿ ಮಾಡಿರುವ ಈ ಚಿತ್ರ ಸ್ಯಾಂಡಲ್​ವುಡ್​ನಲ್ಲಿ (Sandalwood) ಒಳ್ಳೆ ಪ್ರತಿಕ್ರಿಯೆ ಪಡೆಯುತ್ತಿದೆ. ಸಾಮಾನ್ಯವಾಗಿ ಜನರಿಗೆ ಒಂದು ಚಿತ್ರದ ಮೇಲೆ ಅಥವಾ ಅದರರ ಹೀರೋ (Hero) ಮೇಲೆ ನಿರೀಕ್ಷೆ ಇರುತ್ತದೆ. ಆದರೆ ಈ ಚಿತ್ರದಲ್ಲಿ ಎಲ್ಲವೂ ವಿಭಿನ್ನ. ಎಲ್ಲವೂ ಉಲ್ಟಾ. ಇಲ್ಲಿ ಹೀರೋ ಬದುಕಿನಲ್ಲಿ, ಹೀರೋಯಿನ್ ಪ್ರವೇಶವಾಗುವುದೇ ಒಂದು ರೀತಿ ವಿಚಿತ್ರವಾಗಿ. ಇದರ ಚಿತ್ರಕಥೆ ಒಂಥರ ಡಿಫರೆಂಟ್​ ಎನ್ನಬಹುದು.  

ಇದೇ ಮೇ 27ರಂದು ಬಿಡುಗಡೆಯಾದ ಈ ವ್ಹೀಲ್ ಚೇರ್ ರೋಮಿಯೋಗೆ ಈಗಾಗಲೇ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಸಿನಿಮಾ ವಿಮರ್ಶಕರು ಕೂಡ ಚಿತ್ರದ ಬಗ್ಗೆ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅಪರೂಪದಲ್ಲಿ ಅಪರೂಪದ ಕತೆ ಇದು

ಸಾಮಾನ್ಯವಾಗಿ ನಾವು ಸಿನಿಮಾಗಳಲ್ಲಿ ಹೀರೋ ಅಥವಾ ಹೀರೋಯಿನ್​ಗೆ ಅಂಗವೈಕಲ್ಯ ಇರುವ ಕತೆಗಳನ್ನು ಕೇಳಿರುತ್ತೇವೆ. ಅದರಿಂದ ಅನುಭವಿಸುವ ಸಮಸ್ಯೆಗಳನ್ನು ಸಹ ನೋಡಿರುತ್ತೇವೆ. ಆದರೆ ಇಲ್ಲಿ ಹೀರೋ ಅಂಗವಿಕಲನಾದರೂ ಅವನ ತಂದೆ ಮಗನಿಗಾಗಿ ಮಾಡುವ ಕೆಲಸ ನಿಜಕ್ಕೂ ಮನಕಲಕುವಂತಹದ್ದು.

ಬಾಲ್ಯದಿಂದಲೇ ಮೂಳೆ ಕಾಯಿಲೆಗೆ ಒಳಗಾದ ನಾಯಕನ ಕಾಲಿನಲ್ಲಿ ಬಲವಿರುವುದಿಲ್ಲ. ಎದ್ದು ಓಡಾಡುವ ಪ್ರಶ್ನೆಯೇ ಇಲ್ಲ. ಒಮದರ್ಥದಲ್ಲಿ ಯಾವುದೇ ಸಣ್ಣ ಕೆಲಸಕ್ಕೂ ಇತರರ ಸಹಾಯ ಆತನಿಗೆ ಬೇಕೇ ಬೇಕು. ಇಂತಹ ಪರಿಸ್ಥಿತಿ ನಾಯಕನದ್ದು. ನಾಯಕನ ಅಪ್ಪನ ಪಾತ್ರದಲ್ಲಿ ಸುಚೇಂದ್ರ ಪ್ರಸಾದ್ ನಟಿಸಿದ್ದು, ನಿಜಕ್ಕೂ ಅಸಹಾಯಕ ಅಪ್ಪನ ಮಾತ್ರಕ್ಕೆ ನ್ಯಾಯ ನೀಡಿದ್ದಾರೆ.

ಇದನ್ನೂ ಓದಿ: ಕ್ಯಾನ್​ನಲ್ಲಿ ದೀಪಿಕಾ ಉಟ್ಟಿದ್ದ ಬಿಳಿ ರಫಲ್ ಸೀರೆ ನಿಮಗೂ ಬೇಕಾ? ಎಲ್ಲೆಲ್ಲಿ ಸಿಗುತ್ತೆ, ಫುಲ್ ಡೀಟೆಲ್ಸ್ ಇಲ್ಲಿದೆ

ಇನ್ನು ಹೀರೋ ಅಂಗವೈಕಲ್ಯದ ಕಾರಣದಿಂದ ಯಾರೂ ಹೆಣ್ಣು ಕೊಡುವುದಿಲ್ಲ. ಬಹಳಷ್ಟು ಕಷ್ಟಪಡಬೇಕಾಗುತ್ತದೆ. ಹಾಗಾದ್ರೆ ಮುಂದೆ ಅಪ್ಪ ಮಗ ಏನು ಮಾಡುತ್ತಾರೆ?. ಅವನಿಗೆ ಹುಡುಗಿ ಸಿಗುತ್ತಾಳೊ ಇಲ್ಲವೋ ಎಂಬುದು ಕುತೂಹಲ ಮೂಡಿಸುತ್ತದೆ. ಇದು ಈ ಸಿನಿಮಾದ ಮುಖ್ಯ ಕತೆ. ಆದರೆ ಎಲ್ಲಕ್ಕಿಂತ ಹೆಚ್ಚಾಗಿ ತಂದೆಯೇ ಮಗನ್ನ ವೈಶ್ಯೆಯ ಮನೆಗೆ ಕರೆದೊಯ್ಯುವುದು ಕಣ್ಣಲ್ಲಿ ನೀರು ತರಿಸುತ್ತದೆ.

ಪಾತ್ರಗಳಿಗೆ ಜೀವ ತುಂಬಿರುವ ಕಲಾವಿದರು

ಇನ್ನು ಇಲ್ಲಿನ ಪಾತ್ರಗಳ ವಿಷಯಕ್ಕೆ ಬರುವುದಾದರೆ, ಪ್ರತಿಯೊಬ್ಬರು ಅದ್ಭುತವಾಗಿ ಅಭಿನಯಿಸಿದ್ದಾರೆ. ಎಲ್ಲದಕ್ಕಿಂತ ಹೆಚ್ಚಾಗಿ ಇದರಲ್ಲಿ ಡೈಲಾಗ್​ಗೆ ಹೆಚ್ಚು ಪ್ರಾಮುಖ್ಯತೆ ಕೊಡಲಾಗಿದೆ. ಮೊದಲಾರ್ಧ ಬಹಳ ಬೇಗ ಸಾಗುತ್ತದೆ. ಎಲ್ಲಿಯೂ ಕತೆ ಬೋರ್ ಹೊಡೆಸುವುದಿಲ್ಲ. ಸಂಗೀತ ಕೂಡ ಬಹಳ ಅದ್ಬುತವಾಗಿ ಮೂಡಿ ಬಂದಿದ್ದು, ಜನರಿಗೆ ಎಲ್ಲಾ ರೀತಿಯಲ್ಲೂ ಇಷ್ಟವಾಗುವ ಒಂದು ಚಿತ್ರ ಎನ್ನಬಹುದು.

ಇನ್ನು ಕಾಮಿಡಿ ವಿಭಾಗಕ್ಕೆ ಬಂದರೆ ರಂಗಾಯಣ ರಘು ಇದ್ದಾರೆ. ಅವರು ಎಲ್ಲಿಯೂ ಅತಿ ಎನಿಸುವುದಿಲ್ಲ, ಹಾಗೆ ಸಪ್ಪೆ ಸಹ ಅನಿಸುವುದಿಲ್ಲ. ಈ ಎಮೋಷನಲ್ ಚಿತ್ರದಲ್ಲಿ ಅವರ ಕಾಮಿಡಿ ನಿಜಕ್ಕೂ ಅಗತ್ಯವಿತ್ತು ಎನಿಸುತ್ತದೆ.

ಇದನ್ನೂ ಓದಿ: ಚಾರ್ಲಿ ಈ ಇಂಗ್ಲಿಷ್ ಸಿನಿಮಾದಿಂದ ಕದ್ದ ಕತೆಯಾ? ಸಿನಿಮಾ ಬಗ್ಗೆ ಗೊತ್ತಿಲ್ಲ, ಟ್ರೇಲರ್ ಮಾತ್ರ ಸಖತ್ ಕಾಪಿ! ವಿಡಿಯೋ ನೋಡಿ

ಬಿಡುಗಡೆಯಾದ ದಿನದಿಂದಲೇ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿರುವ ಈ ಚಿತ್ರಕ್ಕೆ ಸ್ಯಾಂಡಲ್​ವುಡ್​ನಲ್ಲಿ ಸ್ಟಾರ್ ನಟರು ಸಪೋರ್ಟ್​ ಮಾಡುತ್ತಿದ್ದಾರೆ. ಇದೀಗ ಬಾದ್ ಶಾ ಕಿಚ್ಚ ಸುದೀಪ್​ ಕೂಡ ಕಿಚ್ಚ ಸುದೀಪ್ 'ವ್ಹೀಲ್ ಚೇರ್ ರೋಮಿಯೋ ಚಿತ್ರದ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಾಕಿಕೊಂಡಿದ್ದು,  'ವ್ಹೀಲ್ ಚೇರ್ ರೋಮಿಯೋ' ಸಿನಿಮಾ ಇಡೀ ಟೀಂಗೆ ಶುಭವಾಗಲಿ. ಎಲ್ಲಾ ಕಡೆಯಿಂದಲೂ ಈ ಸಿನಿಮಾಗೆ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ ಎಂದು  ಬರೆದುಕೊಂಡಿರುವ ಅವರು ಈ ಚಿತ್ರದ ನಿರ್ದೇಶಕ ನಟರಾಜ್, ನಟಿ ಮಯೂರಿ, ನಟ ರಾಮ್ ಚೇತನ್ ಅವರಿಗೆ ಟ್ಯಾಗ್ ಮಾಡಿ, ಶುಭ ಹಾರೈಸಿದ್ದಾರೆ.
Published by:Sandhya M
First published: