• Home
  • »
  • News
  • »
  • entertainment
  • »
  • Totapuri Promotion In Train: ರೈಲು ಪ್ರಚಾರ-ತೋತಾಪುರಿ ಪ್ರಯೋಗ, ಬೆಂಗಳೂರು ಟು ಮೈಸೂರು ಮಸ್ತ್ ಪ್ರಯಾಣ

Totapuri Promotion In Train: ರೈಲು ಪ್ರಚಾರ-ತೋತಾಪುರಿ ಪ್ರಯೋಗ, ಬೆಂಗಳೂರು ಟು ಮೈಸೂರು ಮಸ್ತ್ ಪ್ರಯಾಣ

ತೋತಾಪುರಿ ಟ್ರೈನ್ ಪ್ರಯಾಣ-ಪ್ರಚಾರ

ತೋತಾಪುರಿ ಟ್ರೈನ್ ಪ್ರಯಾಣ-ಪ್ರಚಾರ

ಮೊಟ್ಟ ಮೊದಲ ಬಾರಿಗೆ ಟ್ರೈನ್ ಪ್ರಯಾಣದ ಮೂಲಕ ತೋತಾಪುರಿ ಚಿತ್ರ ತಂಡ ಪ್ರಚಾರ ಮಾಡುತ್ತಿದೆ. ಈ ಒಂದು ಪ್ರಯಾಣದಲ್ಲಿ ನಾಯಕ ನಟ ನವರಸ ನಾಯಕ ಜಗ್ಗೇಶ್, ನಾಯಕಿ ಅದಿತಿ ಪ್ರಭುದೇವ, ನಟಿ ಸುಮನ್ ರಂಗನಾಥ್ ಎಲ್ಲರೂ ಇದ್ದಾರೆ.

  • Share this:

ಸ್ಯಾಂಡಲ್​ವುಡ್​ ನ ನವರಸ ನಾಯಕ ಜಗ್ಗೇಶ್ (Jaggesh) ಅವ್ರು ತಮ್ಮ ಚಿತ್ರದ ಪ್ರಚಾರವನ್ನ ಈಗ ವಿಶೇಷವಾಗಿಯೇ ಮಾಡುತ್ತಿದ್ದಾರೆ. ಇದೇ ವಾರ 30ಕ್ಕೆ ತೆರೆಗೆ ಬರ್ತಿರೋ ತೋತಾಪುರಿ (Totapuri Cinema) ಸಿನಿಮಾದ ಪ್ರಚಾರವನ್ನ ಟ್ರೈನ್​ ನಲ್ಲಿಯೇ ಮಾಡುತ್ತಿರೋದು ವಿಶೇಷ. ಇದಕ್ಕಾಗಿಯೇ ಜಗ್ಗೇಶ್ ಸೇರಿದಂತೆ ಇಡೀ ಸಿನಿಮಾ ಟೀಮ್, ಬೆಂಗಳೂರಿನಿಂದ (Bangalore to Mysore) ಮೈಸೂರು ವರೆಗೂ ಟ್ರೈನ್​ನಲ್ಲಿಯೇ ಪ್ರಯಾಣ ಆರಂಭಿಸಿದೆ. ಇದರೊಟ್ಟಿಗೆ ಈ ಮೂಲಕ ಪ್ರಚಾರ ಮಾಡ್ತಿರೋ ತೋತಾಪುರಿ ಸಿನಿಮಾ ತಂಡ, ಮಾಧ್ಯಮಗಳಿಗೂ ಟ್ರೈನ್​ನಲ್ಲಿಯೇ ಸಂದರ್ಶನ ಕೊಡುವ ಪ್ಲಾನ್ ಕೂಡ ಹಾಕಿಕೊಂಡಿದೆ. ಈಗಾಗಲೇ ನವರಸ ನಾಯಕ ಜಗ್ಗೇಶ್ ಮತ್ತು ಅದಿತಿ ಪ್ರಭುದೇವ ಅಭಿನಯದ ಈ ತೋತಾಪುರಿ ಸಿನಿಮಾ ತನ್ನದೇ ರೀತಿಯಲ್ಲಿ ಗಮನ ಸೆಳೆಯುತ್ತಿದೆ. ಸಿನಿಮಾದ ಕಾಮಿಡಿ ಕಂಟೆಂಟ್ ಏನೂ ಅನ್ನೋದು ಒಂಚೂರು ಈಗಾಗಲೇ ಜನರಿಗೆ ತಿಳಿದಿದೆ. ಟ್ರೈಲರ್ ಮತ್ತು ಹಾಡು ಇದನ್ನ ತಿಳಿಸುವ ಕೆಲಸವನ್ನ ಮಾಡಿವೆ.


ಪ್ರಯಾಣ-ಪ್ರಚಾರ-ತೋತಾಪುರಿ ಟ್ರೈನ್ ಪ್ರಮೋಷನ್


ತೋತಾಪುರಿ ಸಿನಿಮಾದ ತಾರಾ ಬಳಗ ದೊಡ್ಡದಿದೆ. ಹೆಸರಾಂತ ಕಲಾವಿದರೆಲ್ಲ ಈ ಚಿತ್ರದಲ್ಲಿ ಅಭಿನಯಿಂಸಿದ್ದಾರೆ. ಸಿನಿಮಾ ಪ್ರೇಮಿಗಳನ್ನ ರಂಜಿಸಲು ಬರ್ತಿರೋ ಈ ಕಲಾವಿದರೆಲ್ಲ ತಮ್ಮ ಚಿತ್ರದ ಪ್ರಚಾರದಲ್ಲೂ ಈಗ ತೊಡಗಿಕೊಂಡಿದ್ದಾರೆ. ಇದಕ್ಕಾಗಿಯೇ ಈಗ ರೈಲು ಹತ್ತಿ ಮೈಸೂರಿಗೂ ಪ್ರಯಾಣ ಬೆಳೆಸಿದ್ದಾರೆ.


ಹಾಸ್ಯಭರಿತ ತೋತಾಪುರಿ ಚಿತ್ರದ ವಿಶೇಷ ಪ್ರಯಾಣ ಪ್ರಚಾರ
ತೋತಾಪುರಿ ಸಿನಿಮಾದ ನಿರ್ದೇಶಕ ವಿಜಯ್ ಪ್ರಸಾದ್ ಅವ್ರು, ತಮ್ಮ ಈ ಚಿತ್ರದ ಮೂಲಕ ಮತ್ತೊಮ್ಮೆ ವಿಶೇಷವಾಗಿಯೇ ಪ್ರೇಕ್ಷಕರನ್ನ ರಂಜಿಸೋಕೆ ಬರುತ್ತಿದ್ದಾರೆ. ಹಾಸ್ಯಭರಿತ ಡೈಲಾಗ್​​ಗಳ ಚೌಕಟ್ಟಿನಲ್ಲಿಯೇ ಪ್ರೇಕ್ಷಕರ ಮನರಂಜಿಸೋ ಕೆಲಸ ಮಾಡಿದ್ದಾರೆ.


ಇದನ್ನೂ ಓದಿ: Alia Bhatt-Ranbir Kapoor: ಹೆಂಡ್ತಿ ಆಲಿಯಾ ಭಟ್ ಜೊತೆ ಮಲಗೋ ಬಗ್ಗೆ ರಣಬೀರ್ ಮಾತು! ನಟ ಬಿಚ್ಚಿಟ್ಟ ಸೀಕ್ರೆಟ್ ಏನು?


ತೋತಾಪುರಿ ಚಿತ್ರದ ಕಥೆಯನ್ನ ಎರಡು ಭಾಗದಲ್ಲಿಯೇ ತಯಾರಿಸಲಾಗಿದೆ.ಈಗ ಇದೇ 30ಕ್ಕೆ ಮೊದಲ ಭಾಗ ಮಾತ್ರ ರಿಲೀಸ್ ಆಗುತ್ತಿದೆ. ರಾಜ್ಯದೆಲ್ಲೆಡೆ ತೋತಾಪುರಿ ಸಿನಿಮಾ ರಿಲೀಸ್ ಆಗುತ್ತದೆ.


Kannada Film Totapuri Film Started Film Promotion on Train
ಇದೇ 30ಕ್ಕೆ ತೋತಾಪುರಿ ಸಿನಿಮಾ ರಿಲೀಸ್


ಮೊಟ್ಟ ಮೊದಲ ಬಾರಿ ಟ್ರೈನ್​ನಲ್ಲಿ ಪ್ರಚಾರ ಮಾಡ್ತಿರೋ ಕಲಾವಿದರು
ಈ ಹಿನ್ನೆಲೆಯಲ್ಲಿಯೇ ಸಿನಿಮಾ ತಂಡ ಮೊಟ್ಟ ಮೊದಲ ಬಾರಿಗೆ ಟ್ರೈನ್ ಪ್ರಯಾಣದ ಮೂಲಕ ಪ್ರಚಾರ ಮಾಡುತ್ತಿದೆ. ಈ ಒಂದು ಪ್ರಯಾಣದಲ್ಲಿ ನಾಯಕ ನಟ ನವರಸ ನಾಯಕ ಜಗ್ಗೇಶ್, ನಾಯಕಿ ಅದಿತಿ ಪ್ರಭುದೇವ, ನಟಿ ಸುಮನ್ ರಂಗನಾಥ್ ಎಲ್ಲರೂ ಇದ್ದಾರೆ.


ಚಿತ್ರದ ನಿರ್ದೇಶಕ ವಿಜಯ್ ಪ್ರಸಾದ್, ನಿರ್ಮಾಪಕ ಸುರೇಶ್ ಇವರೂ ಕೂಡ ಟ್ರೈನ್ ಪ್ರಚಾರದಲ್ಲಿ ಭಾಗಿ ಆಗಿದ್ದಾರೆ. ಟ್ರೈನ್​ ನಲ್ಲಿಯೇ ತಮ್ಮ ಸಿನಿಮಾದ ಬಗ್ಗೆ ಮಾಧ್ಯಮಗಳಿಗೆ ಸಂದರ್ಶನ ಕೊಡೋ ಪ್ಲಾನ್ ಹಾಕಿದ್ದಾರೆ.


ಬೆಂಗಳೂರು ಯಶವಂತಪುರದಿಂದ ಮೈಸೂರು ವರೆಗೂ ಟ್ರೈನ್ ಪ್ರಯಾಣ
ಸಿನಿಮಾಗಳ ಪ್ರಚಾರ ಈಗೀಗ ಟ್ರೈನ್ ಬೋಗಿಗಳ ಮೇಲೂ ಕಂಡು ಬರುತ್ತದೆ. ಇಡೀ ಒಂದು ಟ್ರೈನ್ ಬೋಗಿ ಮೇಲೆ ಸಿನಿಮಾದ ಪೋಸ್ಟರ್ ಇರುತ್ತದೆ. ಆದರೆ ತೋತಾಪುರಿ ಸಿನಿಮಾ ತಂಡ ಒಂದು ಹೆಜ್ಜೆ ಮುಂದೇ ಹೋಗಿದೆ.


ಇದನ್ನೂ ಓದಿ: Bhavana Rao: ಗಾಳಿಪಟದ ಭಾವನಾ ರಾವ್ ಎಲ್ಲಿದ್ದಾರೆ? ಏನ್ ಮಾಡ್ತಿದ್ದಾರೆ ಕನ್ನಡದ ಈ ಪಾವನಿ


ಹೌದು, ತೋತಾಪುರಿ ಸಿನಿಮಾದ ಪೋಸ್ಟರ್​ಗಳು ಎರಡು ಬೋಗಿ ಮೇಲೆ ಇರೋದಲ್ಲದೇ, ತಾರೆಯರೇ ಟ್ರೈನ್​ ನಲ್ಲಿ ಪ್ರಯಾಣ ಮಾಡೋದರ ಮೂಲಕ ಚಿತ್ರ ಪ್ರಚಾರ ಹೀಗೂ ಮಾಡಬಹುದು ಅಂತಲೇ ಹೊಸ ಹಾದಿ ತೋರಿಸಿಕೊಟ್ಟಿದ್ದಾರೆ.


Kannada Film Totapuri Film Started Film Promotion on Train
ತೋತಾಪುರಿ ಸಿನಿಮಾ ಟ್ರೈನ್ ಪ್ರಮೋಷನ್


ಚಾಮುಂಡೇಶ್ವರಿ ದರ್ಶನ ಪಡೆಯಲಿದೆ ತೋತಾಪುರಿ ಟೀಮ್
ತೋತಾಪುರಿ ಸಿನಿಮಾ ತಂಡ ಬೆಂಗಳೂರಿನ ಯಶವಂತಪುರ ನಿಲ್ದಾಣದಿಂದ ಮಧ್ಯಾಹ್ನವೇ ಮೈಸೂರಿಗೆ ಟ್ರೈನ್ ಪ್ರಯಾಣ ಬೆಳೆಸಿದೆ. ಮೈಸೂರಿನಲ್ಲಿ ಚಾಮುಂಡೇಶ್ವರಿಯ ದರ್ಶನ ಪಡೆಯುತ್ತಾರೆ.


ಇಲ್ಲಿಯ ಪ್ರಚಾರದ ಕೆಲಸ ಮುಗಿಸಿಕೊಂಡ ಸಿನಿಮಾ ತಂಡ, ಈಗಾಗಲೇ ಪ್ರಚಾರಕ್ಕೆ ರೆಡಿ ಆಗಿರೋ ಬಸ್​ ನಲ್ಲಿಯೇ ವಾಪಸ್ ಬೆಂಗಳೂರಿಗೂ ಪ್ರಯಾಣ ಬೆಳೆಸುತ್ತಿದ್ದಾರೆ. ಹೀಗೆ ತೋತಾಪುರಿ ತಂಡ ತಮ್ಮ ಚಿತ್ರವನ್ನ ವಿಶೇಷವಾಗಿಯೇ ಪ್ರಮೋಟ್ ಮಾಡುತ್ತಿದೆ.

First published: