Producer B.Vijayakumar: ಸಿಂಹಾದ್ರಿಯ ಸಿಂಹ ಸಿನಿಮಾ ಖ್ಯಾತಿಯ ನಿರ್ಮಾಪಕ ಬಿ. ವಿಜಯ್ ಕುಮಾರ್ ವಿಧಿವಶ

ಜಯನಗರದಲ್ಲಿ ಅಂತ್ಯಕ್ರಿಯೆ ಮಾಡುವುದಾಗಿ ವಿಜಯ್​​ಕುಮಾರ್​ ಅವರ ಪುತ್ರ ಪವನ್  ನ್ಯೂಸ್ 18 ಕನ್ನಡಕ್ಕೆ ಮಾಹಿತಿ ನೀಡಿದ್ದಾರೆ.

ನಿರ್ಮಾಪಕ ಬಿ. ವಿಜಯ್ ಕುಮಾರ್

ನಿರ್ಮಾಪಕ ಬಿ. ವಿಜಯ್ ಕುಮಾರ್

  • Share this:
    ಬೆಂಗಳೂರು:  ಚಂದನವನದ ಹಿರಿಯ ನಿರ್ಮಾಪಕ ಬಿ. ವಿಜಯ್ ಕುಮಾರ್ ವಿಧಿವಶರಾಗಿದ್ದಾರೆ. ಹೃದಯಾಘಾತದಿಂದ ಇಂದು ರಾತ್ರಿ 9.20ಕ್ಕೆ ಕೊನೆಯುಸಿರೆಳೆದಿದ್ದಾರೆ. ಹೃದಯಾಘಾತ ಸಂಭವಿಸಿದ ತಕ್ಷಣ ಅವರನ್ನು ಸಾಗರ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಅಷ್ಟರಲ್ಲಿ ಅವರು ಉಸಿರು ಚೆಲ್ಲಿದ್ದರು. ನಾಳೆ(ಸೋಮವಾರ) ಬೆಳಗ್ಗೆ ಜಯನಗರದಲ್ಲಿ ಅಂತ್ಯಕ್ರಿಯೆ ಮಾಡುವುದಾಗಿ ವಿಜಯ್​​ಕುಮಾರ್​ ಅವರ ಪುತ್ರ ಪವನ್  ನ್ಯೂಸ್ 18 ಕನ್ನಡಕ್ಕೆ ಮಾಹಿತಿ ನೀಡಿದ್ದಾರೆ.    ವಿಜಯ್​​ಕುಮಾರ್ ಅವರು ಸಿಂಹಾದ್ರಿಯ ಸಿಂಹ, ಲಯನ್ ಜಗಪತಿ ರಾವ್, ಮೌನಗೀತೆ, ಜಗದೇಕ ವೀರ, ಸ್ವಚ್ಛ ಭಾರತ ಸೇರಿದಂತೆ ಹಲವು ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿ, ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ಫಿಲ್ಮ್ ಫೆಡರೇಷನ್ ಆಫ್ ಇಂಡಿಯಾದ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
    Published by:Kavya V
    First published: