ಸ್ಯಾಂಡಲ್ವುಡ್ ನಲ್ಲಿ "ಪದವಿ ಪೂರ್ವ" ಸಿನಿಮಾ (Padavi Poorva Film Trailer Review) ಸಣ್ಣಗೆ ಸದ್ದು ಮಾಡೋಕೆ ಶುರು ಮಾಡಿದೆ. ಇದೇ ಸಿನಿಮಾದ ಹುಡುಗರು ಅವತಾರ್ ಚಿತ್ರದ ರೂಪ ತಾಳಿ ಚಿತ್ರ ಪ್ರಚಾರ ಮಾಡಿದರು. ಇದರ ಬೆನ್ನಲ್ಲಿಯೇ ಎಲ್ಲೆಡೆ ಹೋಗಿ ಹುಡುಗರು (Padavi Poorva Film Trailer Analysis) ಚಿತ್ರ ಪ್ರಚಾರ ಮಾಡಿದ್ದರು. ಅದೇ ಚಿತ್ರದ ಹಾಡುಗಳು ಈಗಾಗಲೇ ಗಮನ ಸೆಳೆದಿವೆ. ಆದರೆ ಚಿತ್ರದ ಟ್ರೈಲರ್ ಇಲ್ಲಿವರೆಗೂ ರಿಲೀಸ್ ಆಗಿರಲಿಲ್ಲ. ಅದು ರಿಲೀಸ್ ಆಗುತ್ತಿದ್ದಂತೇನೆ, (Padavi Poorva Film Trailer) ಸಿನಿಮಾದ ಇತರ ಎಮೋಷನ್ಸ್ ಕೂಡ ಈಗ ರಿವೀಲ್ ಆಗಿವೆ. ಇಲ್ಲಿ ಕೇವಲ ಕಾಲೇಜು-ಲವ್ವು, ಹುಡುಗ-ಹುಡುಗಿ (Padavi Poorva love story College) ಮಾತ್ರ ಇಲ್ಲ. ಇಲ್ಲೊಂದು ಅಪ್ಪ-ಮಗನ ಕನಸಿನ ಕಥೆನೂ ಇದೆ.
ಪದವಿ ಪೂರ್ವ ಚಿತ್ರದಲ್ಲೊಂದು ಎಮೋಷ್ನಲ್ ಕಥೆ
ಕನ್ನಡದ ಯೋಗರಾಜ್ ಭಟ್ಟರ ಪದವಿ ಪೂರ್ವ ಚಿತ್ರದಲ್ಲಿ ಒಂದು ಅದ್ಭುತ ಕಥೆ ಇದೆ. ಈ ಕತೆಯ ಬಗ್ಗೆ ಸಿನಿಮಾ ಟೀಮ್ ಹೆಚ್ಚು ಏನೂ ಹೇಳಿಕೊಂಡಂತಿರಲಿಲ್ಲ. ಆದರೆ ಈಗ ರಿಲೀಸ್ ಆಗಿರೋ ಟ್ರೈಲರ್ನಲ್ಲಿ ಒಂದಷ್ಟು ಅಂಶಗಳನ್ನ ಡೈರೆಕ್ಟರ್ ಹರಿಪ್ರಸಾದ್ ಜಯಣ್ಣ ಬಿಟ್ಟುಕೊಟ್ಟಿದ್ದಾರೆ.
ಸಿನಿಮಾದಲ್ಲಿ ಇಲ್ಲಿವರೆಗೂ ನಾವು ಒಂದು ಕಾಲೇಜ್ ಕಥೆ ಮಾತ್ರ ಇದೆ ಅಂದುಕೊಂಡಿದ್ದೇವು. ಆದರೆ ಇಲ್ಲಿ ಅಪ್ಪನ ಕನಸಿನ ಒಂದು ಅತಿ ದೊಡ್ಡ ಕಥೆ ಕೂಡ ಇದೆ ಅನ್ನೋದು ಈಗ ತಿಳಿದಿದೆ. ಬಿಸಿರಕ್ತದ ಹುಡುಗನ ಮೇಲೆ ಅಪ್ಪನ ಪ್ರೀತಿಯ ಒತ್ತಾಯದ ಚಿತ್ರಣ ಕೂಡ ನಮ್ಗೆ ತಿಳಿಯುತ್ತದೆ.
"ಪದವಿ ಪೂರ್ವ" ಒಂದು ವಿಶೇಷ ಸಿನಿಮಾ-ಭಟ್ಟರ ಶಿಷ್ಯನ ಚಿತ್ರ
ಹರಿಪ್ರಸಾದ್ ಜಯಣ್ಣ ಈ ಚಿತ್ರದ ಮೂಲಕ ಡೈರೆಕ್ಟರ್ ಆಗಿದ್ದಾರೆ. ಮೊದಲ ಸಿನಿಮಾದಲ್ಲಿಯೇ ಸಿಕ್ಸರ್ ಹೊಡೆಯೋ ಹಾಗೆ ಕಾಣುತ್ತಿದೆ. ಪೃಥ್ವಿ ಶಾಮನೂರು ಮತ್ತು ಅಂಜಲಿ ಅನೀಶ್ ಅಭಿನಯದ ಈ ಚಿತ್ರದಲ್ಲಿ ಕಾಲೇಜ್ ಕಥೆನೂ ಇದೆ. ಕಾಲೇಜ್ ಆಚೆಗಿನ ಅಪ್ಪನ ಆಸೆಯ ಚಿತ್ರಣವೂ ಇದೆ.
ಪದವಿ ಪೂರ್ಣ ಚಿತ್ರದ ಹುಡುಗರು ತಮ್ಮ ಮೊದಲ ಚಿತ್ರವನ್ನ ತುಂಬಾ ಚೆನ್ನಾಗಿಯೇ ಪ್ರಮೋಟ್ ಮಾಡುತ್ತಿದ್ದಾರೆ. ರಾಜ್ಯದ ಪ್ರಮುಖ ಜಿಲ್ಲೆಗಳೆಲ್ಲಿ ಸುತ್ತಿ ಚಿತ್ರ ನೋಡಿ ಅಂತಲೇ ಎಲ್ಲರಿಗೂ ಹೇಳುತ್ತಿದ್ದಾರೆ. ಸಿನಿಮಾ ಪ್ರೀತಿ ಅಂದ್ರೆ ಇದಲ್ವೇ ಅನ್ನೋ ಹಾಗೇನೆ ಈ ಹುಡುಗರು ಚಿತ್ರವನ್ನ ಪ್ರಮೋಟ್ ಮಾಡುತ್ತಿದ್ದಾರೆ.
ಅವತಾರ್ ಲುಕ್ ಅಲ್ಲಿ ಬಂದು ಚಿತ್ರ ನೋಡಿ ಎಂದ ಹುಡುಗರು!
ಪದವಿ ಪೂರ್ವ ಚಿತ್ರದ ಹುಡುಗರು ತಮ್ಮ ಈ ಚಿತ್ರವನ್ನ ವಿಶೇಷವಾಗಿಯೇ ಪ್ರಮೋಟ್ ಮಾಡುತ್ತಿದ್ದಾರೆ. ಹಾಲಿವುಡ್ನ ಅವತಾರ್-2 ಚಿತ್ರದ ಪಾತ್ರದ ರೀತಿಯಲ್ಲಿಯೇ ಕಾಣಿಸಿಕೊಂಡು ತಮ್ಮ ಪದವಿ ಪೂರ್ವ ಚಿತ್ರವನ್ನ ಈಗಾಗಲೇ ಪ್ರಮೋಟ್ ಮಾಡಿದ್ದಾರೆ.
ಡಿಸೆಂಬರ್-30ಕ್ಕೆ ಪದವಿ ಪೂರ್ವ ಸಿನಿಮಾ ರಿಲೀಸ್
ಪದವಿ ಪೂರ್ವ ಚಿತ್ರದಲ್ಲಿ ಹುಡುಗಿಗಾಗಿಯೇ ಕಿತ್ತಾಡೋ ಪದವಿ ಪೂರ್ವ ಹುಡುಗರ ಕಥೆ ಇದೆ. ಪೃಥ್ವಿ ಶಾಮನೂರ್ ಅದನ್ನ ಇಲ್ಲಿ ತುಂಬಾ ಚೆನ್ನಾಗಿಯೇ ಅಭಿನಯಿಸಿ ತೋರಿದ್ದಾರೆ. ಹದಿಹರೆಯದ ಪ್ರೇಮಿಯಾಗಿಯೂ ಇಲ್ಲಿ ಪೃಥ್ವಿ ಶಾಮನೂರು ಅದ್ಭುತವಾಗಿಯೇ ಕಾಣಿಸಿಕೊಂಡಿದ್ದಾರೆ.
ಪದವಿ ಪೂರ್ವ ಚಿತ್ರದ ಮೂಲಕ ಕನ್ನಡಕ್ಕೆ ಅನೇಕ ಯುವ ಕಲಾವಿದರು ಪರಿಚಯ ಆಗುತ್ತಿದ್ದಾರೆ. ಆ ಲೆಕ್ಕದಲ್ಲಿ ಈ ಚಿತ್ರದ ಮೂಲಕ ಅಂಜಲಿ ಅನೀಶ್, ಪೃಥ್ವಿ ಶಾಮನೂರು ಕನ್ನಡಕ್ಕೆ ಕಾಲಿಡುತ್ತಿದ್ದಾರೆ. ಡಿಸೆಂಬರ್-30 ರಂದು ಅದೃಷ್ಟ ಪರೀಕ್ಷೆಗೂ ಇಳಿಯುತ್ತಿದ್ದಾರೆ.
ಪದವಿ ಪೂರ್ವ ಚಿತ್ರದ ಸಂಗೀತ ನಿರ್ದೇಶಕರು ಯಾರು?
ಇನ್ನು ಸಿನಿಮಾದಲ್ಲಿ ಒಳ್ಳೆ ಹಾಡುಗಳು ಇವೆ. ಅವುಗಳನ್ನ ಮ್ಯಾಜಿಕಲ್ ಕಂಪೋಜರ್ ಅರ್ಜುನ್ ಜನ್ಯ ಕಂಪೋಜ್ ಮಾಡಿದ್ದಾರೆ. ಭಟ್ರು ತಮ್ಮ ಈ ಚಿತ್ರಕ್ಕೆ ಹಾಡುಗಳನ್ನ ಕೂಡ ಬರೆದುಕೊಟ್ಟಿದ್ದಾರೆ.
ಇದನ್ನೂ ಓದಿ: Vedha-Mohan Kumar: ವೇದ ಚಿತ್ರದ ಜುಂಜಪ್ಪ ಹಾಡುಗಾರ ಯಾರು ಗೊತ್ತೇ?
ಪದವಿ ಪೂರ್ವ ಚಿತ್ರದಲ್ಲಿ ಶರತ್ ಲೋಹಿತಾಶ್ವ ಅಭಿನಯಿಸಿದ್ದಾರೆ. ಕನ್ನಡದ ಇತರ ಹೆಸರಾಂತ ಕಲಾವಿದರೂ ಈ ಸಿನಿಮಾದಲ್ಲಿ ನಟಿಸಿದ್ದಾರೆ. ವಿಶೇಷ ಪಾತ್ರದಲ್ಲೂ ಕೆಲವು ಖ್ಯಾತ ಕಲಾವಿದರೂ ಅಭಿನಯಿಸಿದ್ದಾರೆ. ಒಟ್ಟಾರೆ, ಪದವಿ ಪೂರ್ವ ಸಿನಿಮಾ ವಿಶೇಷವಾಗಿಯೇ ಇದೆ. ಟ್ರೈಲರ್ ರಿಲೀಸ್ ಮಾಡೋ ಮೂಲಕ ಸಿನಿಮಾ ತಂಡ ಈಗ ಚಿತ್ರದ ಬಗ್ಗೆ ಇನ್ನಷ್ಟು ಕುತೂಹಲ ಹೆಚ್ಚಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ