ಡಾಲಿ ಧನಂಜಯ್ ಅಭಿನಯದ Once Upon a Time in Jamaaligudda ಸಿನಿಮಾ ವಿಶೇಷವಾಗಿಯೇ ಇರೋ ಹಾಗೆ ಕಾಣುತ್ತಿದೆ. ಚಿತ್ರದ ಪಾತ್ರಗಳ ಪರಿಚಯದ (Jamaaligudda Trailer Review) ಟ್ರೈಲರ್ ಎಲ್ಲರ ಹೃದಯದಲ್ಲಿ ಹೊಸ ಕಥೆಯ ಭರವಸೆ ಮೂಡಿಸಿವೆ. ಸಿನಿಮಾ ಜರ್ನಿಯಲ್ಲಿ ಡಾಲಿ (Dhananjaya) ಧನಂಜಯ್ ಅವರಿಗೆ ಬೇರೆ ಲೆವಲ್ನ ಫ್ಯಾನ್ ಫಾಲೋಯಿಂಗ್ ಕೂಡ ಈ ಚಿತ್ರದಿಂದಲೇ ಹುಟ್ಟಬಹುದೇನೋ. ಹಾಗೆಯೇ ಸಿನಿಮಾದ (New Movie. Trailer) ಟ್ರೈಲರ್ ನೋಡಿದಾಗ ಯಾರಿಗಾದ್ರೂ ಈ ಫೀಲಿಂಗ್ ಬಂದೇ ಬರುತ್ತದೆ. ಹಾಗೇನೆ ಈ ಸಿನಿಮಾದಲ್ಲಿ ಹೊಸದೇನೋ ಇರೋ ಹಾಗೆ ಕಾಣುತ್ತಿದೆ. ಸಿನಿಮಾದ ಟ್ರೈಲರ್ ಹೊಸ ರೀತಿಯ ನಿರೀಕ್ಷೆಯನ್ನೂ ಹುಟ್ಟುಹಾಕಿದೆ. ಇದರ ಸುತ್ತ ಇನ್ನೊಂದಿಷ್ಟು ಮಾಹಿತಿ ಇರೋ ಸ್ಟೋರಿ ಇಲ್ಲಿದೆ ಓದಿ
ಜಮಾಲಿಗುಡ್ಡದಲ್ಲಿ ಕೃಷ್ಣ-ರುಕ್ಮಿಣಿ ಕಥೆ-ವ್ಯಥೆ
ಜಮಾಲಿಗುಡ್ಡದ ಡೈರೆಕ್ಟರ್ ಕುಶಾಲ್ ಗೌಡ ಪಾತ್ರಗಳನ್ನ ತುಂಬಾ ಚೆನ್ನಾಗಿಯೇ ಡಿಸೈನ್ ಮಾಡಿದ್ದಾರೆ. ಪ್ರತಿ ಪಾತ್ರಕ್ಕೂ ಅದರದ್ದೇ ಆದ ಫೀಲಿಂಗ್ಸ್ ಇವೆ. ಅದರದ್ದೇ ಆದ ಕಥೆಗಳೂ ಇವೆ. ಆ ಕಥೆಯ ಝಲಕ್ ನಿಮಗೆ ಟ್ರೈಲರ್ ನಲ್ಲಿಯೇ ಸಿಗುತ್ತದೆ.
ಡಾಲಿ ಧನಂಜಯ್ ಈ ಹಿಂದಿನ ಚಿತ್ರದಲ್ಲಿ ಎಂದೂ ಕರ್ಲಿ ಹೇರ್ ಲುಕ್ ನಲ್ಲಿ ಕಾಣಿಸಿಕೊಂಡಿರಲಿಲ್ಲ. ಆದರೆ ಡಾಲಿ ಧನಂಜಯ್ ಈ ಚಿತ್ರದಲ್ಲಿ ಕರ್ಲಿ ಹೇರ್ ಲುಕ್ನಲ್ಲಿಯೇ ಕಾಣಿಸಿಕೊಂಡಿದ್ದಾರೆ. ಕೃಷ್ಣ ಅನ್ನೋ ಹೆಸರಿನ ಪಾತ್ರವನ್ನೇ ಮಾಡಿದ್ದಾರೆ.
ಕೃಷ್ಣನಿಗೆ ರುಕ್ಮಿಣಿ ಯಾಗಿ ಅದಿತಿ ಪ್ರಭುದೇವ ಅಭಿನಯ
Once Upon a Time in Jamaaligudda ಚಿತ್ರದಲ್ಲಿ ಕೃಷ್ಣ-ರುಕ್ಮಿಣಿ ಕಥೆ ಕೂಡ ಇದೆ. ರುಕ್ಮಿಣಿ ಪಾತ್ರದಲ್ಲಿ ಅದಿತಿ ಪ್ರಭುದೇವ ಅಭಿನಯಿಸಿದ್ದಾರೆ. ಈ ಪಾತ್ರದಲ್ಲೂ ಅದಿತಿ ಪ್ರಭುದೇವ ವಿಶೇಷವಾಗಿಯೇ ಕಾಣಿಸಿಕೊಂಡಿದ್ದು, ಬೋಲ್ಡ್ ಆಗಿ ನಟಿಸಿ ಗಮನ ಸೆಳೆದಿದ್ದಾರೆ.
ಕೃಷ್ಣ-ರುಕ್ಮಿಣಿಯ ಕಥೆಯಲ್ಲಿ ಜೈಲು ಇದೆ, ಲವ್ವು ಇದೆ. ಇದೇ ಚಿತ್ರದಲ್ಲಿ ನಟ ಯಶ್ ಶೆಟ್ಟಿ ಕೂಡ ಇದ್ದಾರೆ. ಇವರ ಪಾತ್ರದ ಖದರ್ ಕೂಡ ವಿಶೇಷವಾಗಿಯೇ ಇದೆ. ನಾಗಾಸಾಕಿ ಅನ್ನೋ ಹೆಸರಿನ ಪಾತ್ರವನ್ನೇ ಇಲ್ಲಿ ನಿರ್ವಹಿಸಿದ್ದಾರೆ.
ಹೀರೋಸಿಮಾ-ನಾಗಾಸಾಕಿ ಪಾತ್ರದ ವಿಶೇಷವೇನು?
ಡಾಲಿ ಧನಂಜಯ್ ಈ ಚಿತ್ರದಲ್ಲಿ ಹೀರೋಸಿಮಾ ಅಂತಲೂ ಕರೆಸಿಕೊಂಡಿದ್ದಾರೆ. ಯಶ್ ಶೆಟ್ಟಿ ನಾಗಾಸಾಕಿ ಪಾತ್ರದ ಮೂಲಕವೇ ಡಾಲಿಗೆ ಜೈಲಿನಲ್ಲಿ ಜೋಡಿಯಾಗಿದ್ದಾರೆ.
ಸಿನಿಮಾದಲ್ಲಿ ಭಾವನಾ ರಾಮಣ್ಣ ಬೋಲ್ಡ್ ಪಾತ್ರವನ್ನೇ ಮಾಡಿದ್ದಾರೆ. ಬಾಲ ನಟಿ ಪ್ರಾಣ್ಯ ರಾವ್ ಈ ಚಿತ್ರದಲ್ಲಿ ಚುಕ್ಕಿ ಆಗಿಯೇ ಅಭಿನಯಿಸಿದ್ದಾರೆ. ಭಾವನಾತ್ಮಕವಾಗಿಯೇ ಕಾಣಿಸಿಕೊಂಡಿದ್ದಾರೆ.
ಜಮಾಲಿಗುಡ್ಡ ಚಿತ್ರಕ್ಕೆ ಇಬ್ಬರು ಸಂಗೀತ ನಿರ್ದೇಶಕರು
ಜಮಾಲಿಗುಡ್ಡ ಚಿತ್ರಕ್ಕೆ ಇಬ್ಬರು ಸಂಗೀತದ ನಿರ್ದೇಶಕರು ಇರೋದು ವಿಶೇಷ. ಹೆಸರಾಂತ ನಿರ್ದೇಶಕ ಅರ್ಜುನ್ ಜನ್ಯ ಹಾಡುಗಳಿಗೆ ಸಂಗೀತ ಕೊಟ್ಟಿದ್ದಾರೆ. ಅನೂಪ್ ಸೀಳಿನ್ ಚಿತ್ರಕ್ಕೆ ಹಿನ್ನೆಲೆ ಸಂಗೀತ ಕೊಟ್ಟಿರೋದು ಇನ್ನೂ ಒಂದು ವಿಶೇಷವೇ ಸರಿ.
ಜಮಾಲಿಗುಡ್ಡ ಚಿತ್ರದಲ್ಲಿ ಸಾಕಷ್ಟು ಪಾತ್ರಗಳು ಇವೆ. ಈ ಎಲ್ಲಾ ಪಾತ್ರಗಳ ಕಥೆ ಬೇರೆಯಾಗಿ ಕಂಡರೂ, ಒಂದೇ ಕಥೆಗೆ ಕನೆಕ್ಟ್ ಆಗುತ್ತವೆಯೇ ಅನ್ನೋ ಪ್ರಶ್ನೆ ಇದೆ. ಕುತೂಹಲವೂ ಮೂಡಿದೆ.
ಜಮಾಲಿಗುಡ್ಡ ಸಿನಿಮಾದಲ್ಲಿ ಹೊಸ ಕಥೆಯೊಂದು ಇದೆ. ಈ ಹಿನ್ನೆಲೆಯಲ್ಲಿಯೇ ಹಾಗೆ ಬರುವ ಕಥೆಗಳ ಬಗ್ಗೆ ಹೆಚ್ಚಿಗೆ ಹೇಳದೇಯೇ, ನೇರವಾಗಿಯೇ ಥಿಯೇಟರ್ಗೆ ಬಂದ್ರೆ ಸಿನಿಮಾ ಖಂಡಿತಾ ಗೆಲ್ಲುತ್ತವೆ ಅನ್ನೋ ನಂಬಿಕೆ ಕೂಡ ಸಿನಿಮಾ ತಂಡದಲ್ಲಿ ಇದ್ದೇ ಇದೆ.
ಇದನ್ನೂ ಓದಿ: Bigg Boss Kannada: ಹೀರೋ, ವಿಲನ್ ಎರಡೂ ಸುದೀಪ್! 300 ಕೋಟಿ ಬಜೆಟ್ನಲ್ಲಿ ಗುರೂಜಿ ಸಿನಿಮಾ!
ಇನ್ನು ಸಿನಿಮಾ ಇದೇ ಡಿಸೆಂಬರ್-30 ರಂದು ಎಲ್ಲೆಡೆ ರಿಲೀಸ್ ಆಗುತ್ತಿದೆ. ಸಿನಿಮಾ ತಂಡಕ್ಕೂ ಚಿತ್ರದ ಗೆಲುವಿನ ಬಗ್ಗೆ ಒಂದು ನಿರೀಕ್ಷೆ ಇದೆ. ಆ ನಿಟ್ಟಿನಲ್ಲಿಯೇ ಚಿತ್ರದ ಪ್ರಚಾರದಲ್ಲೂ ಸಿನಿಮಾ ತಂಡ ತೊಡಗಿಕೊಂಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ