• Home
 • »
 • News
 • »
 • entertainment
 • »
 • Nagarahavu Completes 50 Years: 50 ವರ್ಷ ಪೂರೈಸಿದ ವಿಷ್ಣುವರ್ಧನ್‌ 'ನಾಗರಹಾವು', 'ರಾಮಾಚಾರಿ'ಯನ್ನು ಮರೆಯುತ್ತೀವಾ ನಾವು?

Nagarahavu Completes 50 Years: 50 ವರ್ಷ ಪೂರೈಸಿದ ವಿಷ್ಣುವರ್ಧನ್‌ 'ನಾಗರಹಾವು', 'ರಾಮಾಚಾರಿ'ಯನ್ನು ಮರೆಯುತ್ತೀವಾ ನಾವು?

ಕನ್ನಡದ ಕ್ಲಾಸಿಕ್ ಚಿತ್ರಕ್ಕೆ 50 ವರ್ಷ ಪೂರ್ಣ

ಕನ್ನಡದ ಕ್ಲಾಸಿಕ್ ಚಿತ್ರಕ್ಕೆ 50 ವರ್ಷ ಪೂರ್ಣ

ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸ ಬರೆದಿದ್ದ 'ನಾಗರಹಾವು' ಸಿನಿಮಾ 1972, ಡಿಸೆಂಬರ್​ 29ರಂದು ರಿಲೀಸ್ ಆಗಿತ್ತು. ಆ ಲೆಕ್ಕದಂತೆ ಈಗ ಈ ಚಿತ್ರ ಇದೇ ಡಿಸೆಂಬರ್​ 29ಕ್ಕೆ 50 ವರ್ಷ ಆಗಿದೆ. ಪುಟ್ಟಣ್ಣ ಕಣಗಾಲ್‌ರ ಈ ಮಾಸ್ಟರ್ ಪೀಸ್ ಎಂದಿಗೂ ಅಜರಾಮರ, 50 ವರ್ಷವಾದರೂ 'ರಾಮಾಚಾರಿ'ಯನ್ನ ಮಾತ್ರ ಜನ ಮರೆತಿಲ್ಲ!

ಮುಂದೆ ಓದಿ ...
 • News18 Kannada
 • 4-MIN READ
 • Last Updated :
 • Bangalore [Bangalore], India
 • Share this:

ಕನ್ನಡ ಚಿತ್ರರಂಗದ ಕ್ಲಾಸಿಕ್ ಚಿತ್ರಗಳಲ್ಲಿ ನಾಗರಹಾವು ಸಿನಿಮಾ ಕೂಡ ಇದೆ. ಈ ಚಿತ್ರದ ಕಲಾವಿದರ ಆಯ್ಕೆನೂ ಅಷ್ಟೇ ರೋಚಕವಾಗಿಯೇ ಇದೆ. ಆದರೂ ನಾಗರಹಾವು ಚಿತ್ರ ಇಡೀ ಕನ್ನಡ (Kannada Movie Nagarahavu) ಚಿತ್ರರಂಗದಲ್ಲಿ ಒಂದು ಹೊಸ ಅಲೆಯನ್ನೆ ಎಬ್ಬಿಸಿತ್ತು. ಸಿನಿಮಾರಂಗದಕ್ಕೆ ಈ ಚಿತ್ರದ ಮೂಲಕವೇ ಇಬ್ಬರು ಸ್ಟಾರ್​​ಗಳು ಪರಿಚಯ ಕೂಡ ಆಯಿತು. ಆ ಇಬ್ಬರ ಭವಿಷ್ಯವನ್ನ ಚಿತ್ರದ ನಿರ್ದೇಶಕರಾದ (Director Puttanna Kanagal) ಪುಟ್ಟಣ್ಣ ಕಣಗಾಲ್ ಅವರು ಆಗಲೇ ಹೇಳಿ ಬಿಟ್ಟಿದ್ದರು. ಅವರು ಹೇಳಿದಂತೆ, ಆ ಇಬ್ಬರು ಕಲಾವಿದರು ಸೂಪರ್ ಸ್ಟಾರ್​​ಗಳೇ ಆದರು. ಹಾಗೇ ನಾಗರಹಾವು ಸಿನಿಮಾ ಕನ್ನಡ (Kannada Film Industry) ಚಿತ್ರರಂಗದಲ್ಲಿ ಮೈಲುಗಲ್ಲನ್ನೆ ಸಾಧಿಸಿದ್ದು, ಈಗ ಬರೋಬ್ಬರಿ-50 ವರ್ಷ ಪೂರ್ಣಗೊಳಿಸಿದೆ. 


ಕನ್ನಡದ ಕ್ಲಾಸಿಕ್ ಚಿತ್ರಕ್ಕೆ ಈಗ 50 ವರ್ಷ ಪೂರ್ಣ
ಸಾಹಸಸಿಂಹ ವಿಷ್ಣುವರ್ಧನ್ ಮತ್ತು ರೆಬಲ್ ಸ್ಟಾರ್ ಅಂಬರೀಶ್ ಈ ಚಿತ್ರದ ಮೂಲಕವೇ ಕನ್ನಡ ಇಂಡಸ್ಟ್ರೀಯಲ್ಲಿ ಹೊಸ ಅಲೆ ಎಬ್ಬಿಸಿದರು. ಕನ್ನಡ ಸಿನಿಮಾರಂಗಕ್ಕೆ ಈ ಮೂಲಕವೇ ಕಾಲಿಟ್ಟ ಈ ಪ್ರತಿಭಾವಂತ ಕಲಾವಿದರು, ಪುಟ್ಟಣ್ಣ ಹೇಳಿದಂತೆ ಕನ್ನಡ ಇಂಡಸ್ಟ್ರೀಯಲ್ಲಿ ಹೊಸ ಅಧ್ಯಾಯಗಳನ್ನೆ ಬರೆದರು.


Kannada Film Nagarahavu Completed 50 years
ಪುಟ್ಟಣ್ಣನವರ ಆಡಿಷನ್​ ನಲ್ಲಿ ಪಾಸ್ ಆದ ವಿಷ್ಣು-ಅಂಬಿ


ಸಾಹಸಸಿಂಹ ವಿಷ್ಣುವರ್ಧನ್ ಈ ಚಿತ್ರದ ಮೂಲಕವೇ ರಾಮಾಚಾರಿಯಾದರು. ಈ ರಾಮಾಚಾರಿ ಇಡೀ ಚಿತ್ರರಂಗಕ್ಕೆ ಒಂದು ಸ್ಪೂರ್ತಿಯ ಪಾತ್ರವೇ ಆಯಿತು. ಈಗಲೂ ರಾಮಾಚಾರಿ ಅಂತ ಬಂದ್ರೆ, ಮೊದಲು ಬರುವ ಹೆಸರೇ ಸಾಹಸಸಿಂಹ ವಿಷ್ಣುವರ್ಧನ್ ಅವರದ್ದೇ ಅಂತಲೇ ಹೇಳಬಹುದು.
ರಾಮಾಚಾರಿ ಸ್ಪೂರ್ತಿದಾಯಕ ಪಾತ್ರವೇ ಆಗಿದೆ
ಪುಟ್ಟಣ್ಣ ಕಣಗಾಲರ ಈ ರಾಮಾಚಾರಿ ಇಡೀ ಕನ್ನಡ ನಾಡಿನ ರಾಮಾಚಾರಿನೇ ಆದರು. ಕನ್ನಡ ಚಿತ್ರರಂಗದಲ್ಲಿ ಅಲ್ಲಿವರೆಗೂ ಆ್ಯಂಗ್ರಿ ಯಂಗ್​ಮ್ಯಾನ್ ಪಾತ್ರವೇ ಬಂದಿರಲಿಲ್ಲ. ಆದರೆ ರಾಮಾಚಾರಿ ಪಾತ್ರದ ಮೂಲಕ ವಿಷ್ಣುವರ್ಧನ್ ಪರಿಚಯ ಆದರು. ಆ್ಯಂಗ್ರಿ ಯಂಗ್​​ಮ್ಯಾನ್ ಆಗಿಯೇ ಗುರುತಿಸಿಕೊಂಡ್ರು.


ಮುಂದೆ ಇದೇ ರಾಮಾಚಾರಿ, ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಅಭಿನಯದ ಮಿಸ್ಟರ್ ಆ್ಯಂಡ್ ಮಿಸಸ್ ರಾಮಾಚಾರಿಗೂ ಸ್ಪೂರ್ತಿ ಆದರು. ಇಷ್ಟೇ ಯಾಕೆ ಕಿರುತೆರೆಯಲ್ಲೂ ರಾಮಾಚಾರಿ ಹೆಸರಿನ ಸೀರಿಯಲ್ ಈಗಲೂ ಬರ್ತಿದೆ.


ನಾಗರಹಾವು ಸಿನಿಮಾದ ಮೂಲಕ ಜಲೀಲ ಪರಿಚಯ
ಕನ್ನಡ ಚಿತ್ರರಂಗದ ಈ ನಾಗರಹಾವು ಸಿನಿಮಾ ಕನ್ನಡ ಇಂಡಸ್ಟ್ರೀಗೆ ಇನ್ನೂ ಒಬ್ಬ ಹೀರೋನನ್ನ ಕೊಟ್ಟಿದೆ. ಅವರೇ ರೆಬಲ್ ಸ್ಟಾರ್ ಅಂಬರೀಶ್ ಅಂತ ಎಲ್ಲರಿಗೂ ಗೊತ್ತಿದೆ. ಚಿತ್ರದಲ್ಲಿ ಜಲೀಲ ಪಾತ್ರ ಮಾಡೋ ಮೂಲಕ ಅಂಬರೀಶ್ ಅವರು ಎಲ್ಲರ ಹೃದಯ ಕದ್ದರು. ಚಿಕ್ಕ ಪಾತ್ರ ಇದಾಗಿದ್ದರೂ ಸಹ, ಅಂಬರೀಶ್ ಮೊದಲ ಚಿತ್ರದಲ್ಲಿಯೇ ಭಾರೀ ಮಿಂಚಿ ಬಿಟ್ಟರು.


ಜಲೀಲ ಪಾತ್ರ ಮತ್ತು ರಾಮಾಚಾರಿ ಪಾತ್ರಗಳು ಸಿನಿ ಪ್ರೇಮಿಗಳ ಮನದಲ್ಲಿ ಈಗಲೂ ಇವೆ. ಆದರೆ ಇವುಗಳ ಆಯ್ಕೆ ಮಾತ್ರ ವಿಶೇಷವಾಗಿಯೇ ಆಗಿದೆ. ರೆಬಲ್ ಸ್ಟಾರ್ ಅಂಬರೀಶ್ ಅವ್ರು ಸಿನಿಮಾರಂಗದಿಂದ ದೂರವೇ ಇದ್ದರು. ಸಾಹಸಸಿಂಹ ವಿಷ್ಣುವರ್ಧನ್ ಅವ್ರು ಸಿನಿಮಾರಂಗಕ್ಕೆ ಬರಬೇಕು ಅಂತಲೇ ಪ್ರಯತ್ನ ಮಾಡುತ್ತಿದ್ದರು.


ಪುಟ್ಟಣ್ಣನವರ ಆಡಿಷನ್​ ನಲ್ಲಿ ಪಾಸ್ ಆದ ವಿಷ್ಣು-ಅಂಬಿ
ನಿರ್ದೇಶಕ ಪುಟ್ಟಣ್ಣ ಅವರು ನಾಗರಹಾವು ಚಿತ್ರಕ್ಕೆ ಕಲಾವಿದರ ಆಯ್ಕೆಗೆ ಆಡಿಷನ್ ಮಾಡುತ್ತಿದ್ದರು. ಆ ಆಡಿಷನ್​ನಲ್ಲಿ ವಿಷ್ಣು ಕೂಡ ರಾಮಾಚಾರಿ ಪಾತ್ರಕ್ಕೆ ಆಡಿಷನ್ ಕೊಟ್ಟಿದ್ದರು. ಹಾಗೆ ವಿಷ್ಣುವರ್ಧನ್ ಎದುರು ಅಭಿನಯಿಸೋಕೆ ಜಲೀಲ ಪಾತ್ರಕ್ಕೂ ಆಡಿಷನ್​ ನಡೆದಿತ್ತು. ಅದಕ್ಕೆ ಹಲವು ಕಲಾವಿದರು ಟ್ರೈ ಮಾಡಿದ್ದರು. ಆದರೆ ಯಾರೂ ಆಯ್ಕೆ ಆಗಿರಲಿಲ್ಲ.


Kannada Film Nagarahavu Completed 50 years
ವಿಷ್ಣು-ಅಂಬಿ ಬಗ್ಗೆ ಭವಿಷ್ಯ ನುಡಿದ ಪುಟ್ಟಣ್ಣ


ಹೀಗಿರೋವಾಗಲೇ, ಲಾಸ್ಟ್​ ಅಲ್ಲಿ ಗೆಳೆಯರ ಪ್ರೀತಿಯ ಒತ್ತಾಯಕ್ಕೆ ನಾಗರಹಾವು ಚಿತ್ರಕ್ಕೆ ಅಂಬರೀಶ್ ಆಡಿಷನ್ ಕೊಟ್ರು. ಆ ಕೂಡಲೇ ಅಂಬರೀಶ್ ಸ್ಟೈಲ್​ ನೋಡಿಯೇ ಪುಟ್ಟಣ್ಣ ಅವರು ನೀನೇ ನನ್ನ ಜಲೀಲ ಅಂತಲೇ ಹೇಳಿದ್ರು. ಹೇಳಿದಂತೆ ಸೆಲೆಕ್ಟ್ ಕೂಡ ಮಾಡಿದರು.


ವಿಷ್ಣು-ಅಂಬಿ ಬಗ್ಗೆ ಭವಿಷ್ಯ ನುಡಿದ ಪುಟ್ಟಣ್ಣ
ಅಂಬರೀಶ್ ಮತ್ತು ವಿಷ್ಣು ಒಂದು ದಿನ ಚಿತ್ರೀಕರಣ ಮುಗಿಸಿ ಕಾರ್​ ನಲ್ಲಿ ಚಿತ್ರದುರ್ಗದ ಊರೊಳಗೆ ಹೋಗ್ತಾಯಿದ್ದರು. ಆಗಲೇ ಪುಟ್ಟಣ್ಣ ನೀವು ಇಬ್ಬರು ಮುಂದೊಂದಿನ ಸ್ಟಾರ್ ಆಗ್ತೀರಾ ಅಂತಲೇ ಹೇಳಿದ್ದರು. ಅವರು ಹೇಳಿದಂತೆ ವಿಷ್ಣು ಮತ್ತು ಅಂಬಿ ಸ್ಟಾರ್ ಆದರು. ಕನ್ನಡಿಗರ ಹೃದಯದಲ್ಲಿ ಈಗಲೂ ಇದ್ದಾರೆ.


ಇದನ್ನೂ ಓದಿ: Ponniyin Selvan Part-2: ಪೊನ್ನಿಯಿನ್ ಸೆಲ್ವನ್ ಸೀಕ್ವೆಲ್ 2 ರಿಲೀಸ್ ಡೇಟ್ ಫಿಕ್ಸ್; ಇದರ ಮಾಹಿತಿ ಇಲ್ಲಿದೆ ನೋಡಿ!


ಹೀಗೆ ಇತಿಹಾಸ ಬರೆದ ನಾಗರಹಾವು ಸಿನಿಮಾ 1972 ಡಿಸೆಂಬರ್​-29 ರಂದು ರಿಲೀಸ್ ಆಗಿತ್ತು. ಆ ಲೆಕ್ಕದಂತೆ ಈಗ ಈ ಚಿತ್ರ ಇದೇ ಡಿಸೆಂಬರ್​-29 ಕ್ಕೆ 50 ವರ್ಷ ಪೂರ್ಣಗೊಳಿಸಿದೆ. ಇನ್ನು ರವಿಚಂದ್ರನ್ ತಂದೆ ವೀರಸ್ವಾಮಿ ಅವರ ನಿರ್ಮಾಣದ ಈ ಚಿತ್ರವನ್ನ ಅವರ ಎರಡನೇ ಪುತ್ರ ಬಾಲಾಜಿ ಕಲರ್ ರೂಪದಲ್ಲೂ ತಂದಿದ್ದರು. ಹಾಗೆ ಬಂದ ಈ ಚಿತ್ರಕ್ಕೂ ಒಳ್ಳೆ ರೆಸ್ಪಾನ್ಸ್ ಬಂದಿದೆ.

First published: