ಕನ್ನಡ ನಾಡಿನ ಜೋಗತಿ ಮಂಜಮ್ಮ ಯಾರಿಗೆ ಗೊತ್ತಿಲ್ಲ ಹೇಳಿ? ಇಡೀ ನಾಡಿನ ಮಹಿಳೆಯರಿಗೂ (Manjamma Jogathi) ಸ್ಪೂರ್ತಿಯಾದ ಜೋಗತಿ ಮಂಜಮ್ಮ ಈಗೊಂದು ಸಿನಿಮಾ ಮಾಡಿದ್ದಾರೆ. ಈ ಸಿನಿಮಾದಲ್ಲಿ ಇವರದ್ದೇ ಪ್ರಮುಖ ಪಾತ್ರ ಇದೆ. ಇದನ್ನ (Kannada Film Kubusa) ನೋಡಿದ ಸೆನ್ಸಾರ್ ಮಂಡಳಿ ಚಿತ್ರಕ್ಕೆ ಯು ಪ್ರಮಾಣ ಪತ್ರ ಕೊಟ್ಟಿದೆ. ಸಹ ಕುಟುಂಬ ಸಮೇತ ಈ ಚಿತ್ರ ನೋಡಬಹುದು ಅನ್ನೋದೇ ಈ ಯು ಪ್ರಮಾಣ ಪಾತ್ರದ ಸಿಂಬಲ್ ಆಗಿದೆ. ಎಲ್ಲರೂ (Kubusa Kannada Film) ನೋಡಬಹುದಾದ ಈ ಚಿತ್ರದಲ್ಲಿ ಒಂದು ಅದ್ಭುತ ಕಥೆ ಇದೆ. ಈ ಕಥೆಯನ್ನ ಕುಂ.ವೀರಭದ್ರಪ್ಪ ಬರೆದಿದ್ದಾರೆ. ಅದನ್ನ ಆಧರಿಸಿಯೇ ಈ (Manjamma Jogathi Movie) ಚಿತ್ರ ಮಾಡಲಾಗಿದೆ. ಇದರ ಇನ್ನಷ್ಟು ಇಂಟ್ರಸ್ಟಿಂಗ್ ಮಾಹಿತಿ ಇಲ್ಲಿದೆ ಓದಿ.
ಜೋಗತಿ ಮಂಜಮ್ಮ ಅಭಿನಯದ ಚಿತ್ರದ ಹೆಸರು "ಕುಬುಸ"
ಕುಬುಸ ಚಿತ್ರದಲ್ಲಿ ಒಂದು ಅದ್ಭುತ ಕಥೆ ಇದೆ. ಎಂದೂ ಕುಬುಸ ತೊಡದ ಅಮ್ಮನ ಚಿತ್ರಣವೇ ಇದೆ. ಪುತ್ರ ನೌಕರಿ ಹಿಡಿದು ಸಿಟಿಗೆ ಬಂದ್ಮೇಲೆ, ಕುಬುಸವನ್ನ ಧರಿಸದ ಅಮ್ಮನನ್ನ ನಗರಕ್ಕೆ ಕರೆದುಕೊಂಡು ಬರುತ್ತಾನೆ. ಆಗ ಅಮ್ಮ ಎದುರಿಸೋ ಹತ್ತು ಹಲವು ಸಮಸ್ಯೆಗಳೇ ಇಡೀ ಚಿತ್ರದ ಜೀವಾಳವೇ ಆಗಿದೆ.
ಇಂತಹ ಕಥೆಯಲ್ಲಿ ಜೋಗತಿ ಮಂಜಮ್ಮ ಅಭಿನಯಿಸಿದ್ದಾರೆ. ಆದರೆ ಇಲ್ಲಿ ಜೋಗಿ ಅಮ್ಮನಾಗಿಯೇ ಅಭಿನಯಿಸಿದ್ದಾರಾ? ಅಂತ ಕೇಳಬೇಡಿ. ಕುಬುಸ ಧರಿಸದೇ ಇರೋ ಆ ಅಮ್ಮ ಬೇರೆ ಇದ್ದಾರೆ.
ಕುಬುಸ ಧರಿಸದ ಅಮ್ಮನ ಕಥೆಯಲ್ಲಿ ಜೋಗತಿ ಮಂಜಮ್ಮ
ಅದರ ಬಗ್ಗೆನೂ ಹೇಳುತ್ತೇನೆ. ಆದರೆ ಇಲ್ಲಿ ಜೋಗತಿ ಮಂಜಮ್ಮ ಇಡೀ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರವನ್ನೆ ಮಾಡಿದ್ದಾರೆ. ಅದುವೇ ಈ ಚಿತ್ರದ ಹೈಲೈಟ್ಗಳಲ್ಲಿ ಒಂದಾಗಿದೆ.
ಹೌದು, ಜೋಗತಿ ಮಂಜಮ್ಮ ಅಭಿನಯದ ಈ ಚಿತ್ರದಲ್ಲಿ ಹಳ್ಳಿಯಲ್ಲಿ ಹುಟ್ಟಿ ಹಳ್ಳಿಯಲ್ಲಿಯೇ ಬೆಳೆದ ಅಮ್ಮನ ಪಾತ್ರವನ್ನ ರಂಗಭೂಮಿ ಕಲಾವಿದೆ ಹನುಮಕ್ಕ ಮರಿಯಮ್ಮನಹಳ್ಳಿ ನಿರ್ವಹಿಸಿದ್ದಾರೆ.
ಮಕ್ಕಳ ಕಲ್ಯಾಣ ರಾಜ್ಯ ಪ್ರಶಸ್ತಿ ಪುರಸ್ಕೃತ ಗುಂಡಿ ರಮೇಶ್ ಹಾಗೂ ಅವರ ಪತ್ನಿ ಗುಂಡಿ ಭಾರತಿ ಈ ಚಿತ್ರದ ವಿಶೇಷ ಪಾತ್ರದಲ್ಲಿಯೇ ಅಭಿನಯಿಸಿದ್ದಾರೆ.
ಇನ್ನು ಚಿತ್ರದಲ್ಲಿ ರಾಮಾ ರಾಮಾ ರೇ ಚಿತ್ರ ಖ್ಯಾತಿಯ ನಟರಾಜ್ ಎಸ್.ಭಟ್ ಮಗನ ಪಾತ್ರದಲ್ಲಿಯೆ ಅಭಿನಯಿಸಿದ್ದು ಎರಡು ಶೇರ್ ನಲ್ಲಿಯೇ ಕಾಣಿಸಿಕೊಂಡಿದ್ದಾರೆ ಅಮ್ಮ-ಮಗನ ಈ ಕಥೆಯಲ್ಲಿ ಸಾಕಷ್ಟು ವಿಷಯಗಳಿವೆ. ಅವುಗಳನ್ನ ಇಲ್ಲಿ ನಿರ್ದೇಶಕ ರಘು ರಾಮಚರಣ್ ಹೂವಿನ ಹಡಗಲಿ ನಿರ್ದೇಶನದ ಮಾಡಿದ್ದಾರೆ.
ಆರ್ ಚಂದ್ರು ಶಿಷ್ಯ ಈ ರಘು ರಾಮಚರಣ್ ಹೂವಿನ ಹಡಗಲಿ
ಕುಬುಸ ಚಿತ್ರವನ್ನ ನಿರ್ದೇಶನ ಮಾಡಿರೋ ರಘು ರಾಮಚರಣ್ ಹೂವಿನ ಹಡಗಲಿ ಈ ಮೊದಲು ಆರ್.ಚಂದ್ರು ಬಳಿ ಕೆಲಸ ಮಾಡಿದ್ದಾರೆ. ಟಿ.ಎಸ್.ನಾಗಾಭರಣ, ಜೋಗಿ ಪ್ರೇಮ್, ಸತ್ಯ ಪ್ರಕಾಶ್ ಅವರ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಕಲಾವಿದರಾಗಿಯೂ ಗುರುತಿಸಿಕೊಂಡಿದ್ದಾರೆ.
ಈ ಮೂಲಕ ನಿರ್ದೇಶಕರಾಗಿರೋ ರಘು ರಾಮಚರಣ್ ಹೂವಿನ ಹಡಗಲಿ, ತಮ್ಮ ಈ ಮೊದಲ ಚಿತ್ರಕ್ಕೇನೆ ಕುಂ. ವೀರಭದ್ರಪ್ಪನವರ ಕಥೆಯನ್ನ ಆಯ್ಕೆ ಮಾಡಿಕೊಂಡು ಚಿತ್ರ ಮಾಡಿದ್ದಾರೆ. ಈ ಚಿತ್ರಕ್ಕೆ ಈಗ ಯು ಪ್ರಮಾಣ ಪತ್ರ ಕೂಡ ಬಂದಿದೆ.
ಜನವರಿ ಕೊನೆಯಲ್ಲಿ ಕನ್ನಡದ ಕುಬುಸ ಚಿತ್ರ ರಿಲೀಸ್
ಕುಬುಸ ಸಿನಿಮಾ ಮುಂದಿನ ವರ್ಷ ರಿಲೀಸ್ ಆಗುತ್ತಿದೆ. ಅತಿ ಶೀಘ್ರದಲ್ಲಿಯೇ ಸಿನಿಮಾದ ಟೀಸರ್ ಕೂಡ ರಿಲೀಸ್ ಆಗುತ್ತಿದೆ. ಅದಕ್ಕೂ ಮೊದಲೇ ಸಿನಿಮಾ ತಂಡ ಚಿತ್ರವನ್ನ ಸೆನ್ಸಾರ್ಗೆ ಕಳಿಸಿತ್ತು.
ಸೆನ್ಸಾರ್ ಮಂಡಳಿಯ ಸದಸ್ಯರು ಚಿತ್ರವನ್ನ ವೀಕ್ಷಿಸಿ ಯು ಪ್ರಮಾಣ ಪತ್ರ ಕೊಟ್ಟಿದ್ದಾರೆ. ಉಳಿದಂತೆ ಟೀಸರ್ ರಿಲೀಸ್ ಮಾಡಲು ಸಿನಿಮಾ ತಂಡ ಈಗ ತಯಾರಿ ನಡೆಸಿದೆ.
ಇದನ್ನೂ ಓದಿ: Jamaaligudda Trailer: ಜಮಾಲಿಗುಡ್ಡದಲ್ಲಿ ಹೊಸ ಕಥೆ ಹೊಸ ಜಗತ್ತು, ಇಲ್ಲಿ ಎಲ್ಲವೂ ಭಿನ್ನ-ವಿಭಿನ್ನ!
ಚಿತ್ರದಲ್ಲಿರೋ ನಾಲ್ಕು ಬಿಟ್ ಸಾಂಗ್ಗಳಲ್ಲಿ ವಾಸುಕಿ ವೈಭವ್, ಜೋಗಿ ಪ್ರೇಮ್ ತಲಾ ಒಂದೊಂದು ಹಾಡಿಗೆ ಧ್ವನಿ ಕೂಡ ಆಗಿದ್ದಾರೆ. ಪ್ರದೀಪ್ ಚಂದ್ರ ಸಂಗೀತ ಕೊಟ್ಟಿದ್ದಾರೆ. ಇತರ ವಿಭಾಗದಲ್ಲಿ ನುರಿತು ಟೆಕ್ನಿಷನ್ಗಳೇ ಇದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ