RIP Anekal Balaraj: ರಸ್ತೆ ಅಪಘಾತದಲ್ಲಿ ‘ಕರಿಯ' ಚಿತ್ರದ ನಿರ್ಮಾಪಕ ಆನೇಕಲ್ ಬಾಲರಾಜ್ ನಿಧನ

ಸ್ಯಾಂಡಲ್‌ವುಡ್‌ ನಿರ್ಮಾಪಕ ಆನೇಕಲ್ ಬಾಲರಾಜ್ ಇಂದು ನಿಧನರಾಗಿದ್ದಾರೆ. ಕನ್ನಡದ ಬ್ಲಾಕ್​ ಬಸ್ಟರ್ ‘ಕರಿಯ‘ ಚಿತ್ರವನ್ನು ಬಾಲ್​ರಾಜ್ ಅವರು ನಿರ್ಮಿಸಿದ್ದರು.

ನಿರ್ಮಾಪಕ ಆನೇಕಲ್ ಬಾಲರಾಜ್

ನಿರ್ಮಾಪಕ ಆನೇಕಲ್ ಬಾಲರಾಜ್

  • Share this:
ಸ್ಯಾಂಡಲ್‌ವುಡ್‌ (Sandalwood)ನಿರ್ಮಾಪಕ ಆನೇಕಲ್ ಬಾಲರಾಜ್ (Anekal Balaraj) ಇಂದು ನಿಧನರಾಗಿದ್ದಾರೆ. ಕನ್ನಡದ ಬ್ಲಾಕ್​ ಬಸ್ಟರ್ ‘ಕರಿಯ‘ (Kariya) ಚಿತ್ರವನ್ನು ಬಾಲ್​ರಾಜ್ ಅವರು ನಿರ್ಮಿಸಿದ್ದರು. ಈ ಚಿತ್ರದ ಮೂಲಕ ಆನೇಕಲ್ ಬಾಲರಾಜ್ ಕನ್ನಡ ಸಿನಿರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಇದಾದ ಬಳಿಕ ಅನೇಕ ಕನ್ನಡ ಸಿನಿಮಾಗಳಿಗೆ ಬಂಡವಾಳ ಹೂಡುವ ಮೂಲಕ ಆನೇಕಲ್ ಬಾಲರಾಜ್ ಕನ್ನಡದ ಮಟ್ಟಿಗೆ ಓರ್ವ ಉತ್ತಮ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದರು, ಇದೀಗ ಕನ್ನಡ ಸಿನಿರಂಗ ಓರ್ವ ಉತ್ತಮ ನಿರ್ಮಾಪಕನನ್ನು ಕಳೆದುಕೊಂಡಿದೆ. ಇಂದು (ಮೇ 15) ಜೆಪಿ ನಗರದಲ್ಲಿ ನಡೆದ ರಸ್ತೆ ಅಪಘಾತದಲ್ಲಿ (Road Accidents) ಆನೇಕಲ್ ಬಾಲರಾಜ್ ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಅವರು ಬದುಕುಳಿಯಲಿಲ್ಲ. ಅವರಿಗೆ 58 ವರ್ಷ ವಯಸ್ಸಾಗಿತ್ತು. ಆನೇಕಲ್ ಬಾಲರಾಜ್ ನಿಧನಕ್ಕೆ ಚಿತ್ರರಂಗದ ಗಣ್ಯರು ಸೇರಿಂದತೆ ಅನೇಕ ಕಲಾವಿದರುಗಳು ಸಂತಾಪ ಸೂಚಿಸಿದ್ದಾರೆ.

ಬಾಲ್​ರಾಜ್ ಅವರಿಗೆ ಅಪಘಾತ ಹೇಗಾಯ್ತು?:

ಜೆಪಿ ನಗರದ ತಮ್ಮ ನಿವಾಸದ ಬಳಿ ಬಾಲರಾಜ್ ಅವರು ವಾಕಿಂಗ್ ಮಾಡುವಾಗ ಇಂದು ಅಪಘಾತವಾಗಿದೆ ಎಂದು ತಿಳಿದುಬಂದಿದೆ. ಅಪಘಾತವಾದ ತಕ್ಷಣ ಅವರನ್ನು ಅಲ್ಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ, ತಲೆಗೆ ಬಲವಾದ ಪೆಟ್ಟು ಬಿದ್ದ ಪರಿಣಾಮ, ಚಿಕಿತ್ಸೆ ಫಲಕಾರಿಯಾಗದೇ ಆನೇಕಲ್ ಬಾಲರಾಜ್ ಅವರು ಕೊನೆಯುಸಿರೆಳೆದಿದ್ದಾರೆ.

'ಕರಿಯ' ಚಿತ್ರದ ಮೂಲಕ ನಿರ್ಮಾಪಕರಾದ ಬಾಲರಾಜ್:

ಇನ್ನು, ಆನೇಕಲ್ ಬಾಲ​ರಾಜ್ ಅವರು 2003ರಲ್ಲಿ ತೆರೆಕಂಡ 'ಕರಿಯ' ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಈ ಚಿತ್ರ ಬಾಲರಾಜ್ ಮತ್ತು ನಿರ್ದೇಶಕ ಜೋಗಿ ಪ್ರೇಮ್​ ಅವರಿಗೆ ಚೊಚ್ಚಲ ಸಿನಿಮಾಗಿತ್ತು. ಆ ಸಮಯದಲ್ಲಿ ಕನ್ನಡದಲ್ಲಿ ದೊಡ್ಡ ಮಟ್ಟದಲ್ಲಿ ಹಿಟ್ ಆದ ಈ ಚಿತ್ರವನ್ನು ಬಾಲರಾಜ್ ನಿರ್ಮಿಸಿದ್ದರು.

ಇದನ್ನೂ ಓದಿ: Gichi Giligili: ಗಿಚ್ಚಿ ಗಿಲಿಗಿಲಿ ಶೋನಿಂದ ಹೊರಬಂದ ಮಂಜು ಪಾವಗಡ, ಶೋ ಮುಗಿಯೋವರಗೂ ನಾನು ಸಿಂಗಲ್ ಎಂದ ನಿರಂಜನ್

ಕರಿಯ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಅಭಿನಯಶ್ರೀ ನಟಿಸಿದ್ದರು. ಚಿತ್ರವು ಬರೋಬ್ಬರಿ ವರ್ಷಗಳ ಕಾಲ ಯಶಸ್ವಿ ಪ್ರದರ್ಶನ ಕಾಣುವ ಮೂಲಕ ಇಂಡಸ್ಟ್ರಿ ಹಿಟ್ ಎನಿಸಿಕೊಂಡಿತ್ತು. ಇನ್ನು, ಈ ಚಿತ್ರದಲ್ಲಿ ರಿಯಲ್ ರೌಡಿಗಳು ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು. ಅಂಡರ್‌ವರ್ಲ್ಡ್‌ ಸಬ್ಜೆಕ್ಟ್ ಹೊಂದಿದ್ದ 'ಕರಿಯ' ಚಿತ್ರಕ್ಕೆ ಗುರುಕಿರಣ್ ಸಂಗೀತ ನಿರ್ದೇಶನ ಮಾಡಿದ್ದರು. ಅಲ್ಲದೇ ಹಾಡುಗಳೂ ಸಹ ಸೂಪರ್ ಹಿಟ್ ಆಗಿದ್ದವು.

ಇನ್ನು, ಈ ಚಿತ್ರವು ಬೆಂಗಳೂರಿನ ಕಪಾಲಿ ಚಿತ್ರಮಂದಿರದಲ್ಲಿ ಮೊದಲು ತೆರೆಕಂಡಾಗ ಕೇವಲ 56 ದಿನ ಪ್ರದರ್ಶನ ಕಂಡಿತ್ತು. ಆದರೆ ನಂತದರಲ್ಲಿ ಕರಯ ನ ಮ್ಯಾಜಿಕ್​ಗೆ ಪ್ರೇಕಕರು ಮಾರುಹೋಗಿ ಪ್ರೇಕ್ಷಕರ ಒತ್ತಾಯದ ಮೇರೆಗೆ ಮತ್ತೆ ಬಿಡುಗಡೆ ಮಾಡಲಾಗಿತ್ತು. ಆಗ ಈ ಸಿನಿಮಾ 100 ದಿನ ಪ್ರದರ್ಶನ ಕಂಡಿತ್ತು. ಅದಲ್ಲದೇ ಹಲವು ಬಾರಿ ಈ ಸಿನಿಮಾ ಮರುಬಿಡುಗಡೆಗೊಂಡು ಸ್ಯಾಂಡಲ್​ವುಡ್​ ನಲ್ಲಿ ಹೊಸ ದಾಖಲೆಯನ್ನೇ ಬರೆದಿತ್ತು.

ಇದನ್ನೂ ಓದಿ:  ಹಾಲಿವುಡ್​ ರೇಂಜ್​ನಲ್ಲಿ ಇರುತ್ತಂತೆ KGF 3, ವಿಜಯ್ ಕಿರಗಂದೂರು ಹೇಳೋದನ್ನ ಕೇಳಿದ್ರೆ ಶಾಕ್ ಆಗ್ತಿರಾ ನೀವು!

ನಿರ್ಮಾಪಕ ಬಾಲರಾಜ್ ಪುತ್ರ ಸಹ ಹೀರೋ:

ಆನೇಕಲ್ ಬಾಲರಾಜ್ ಪುತ್ರ ಸಂತೋಷ್ ಕೂಡ ಇದೀಗ ಕನ್ನಡ ಚಿತ್ರರಂಗದಲ್ಲಿ ಹೀರೋ ಆಗಿ ಗುರುತಿಸಿಕೊಂಡಿದ್ದಾರೆ. ತಮ್ಮ ಪುತ್ರನಿಗಾಗಿ 'ಕೆಂಪ', 'ಜನ್ಮ', 'ಗಣಪ' ಸಿನಿಮಾಗಳನ್ನು ಆನೇಕಲ್ ಬಾಲರಾಜ್ ಸ್ವತಃ ನಿರ್ಮಾಣ ಮಾಡಿದ್ದಾರೆ. ಇನ್ನು, ಗಣಪ ಸಿನಿಮಾದಿಂದ ಸಂತೋಷ್ ಕರಿಯರ್‌ಗೆ ದೊಡ್ಡ ಬ್ರೇಕ್ ನೀಡಿತು. ಅಲ್ಲದೆ, ಪುತ್ರ ಸಂತೋಷ್ ನಾಯಕತ್ವದಲ್ಲಿ 'ಕರಿಯ 2' ಸಿನಿಮಾವನ್ನು ಆನೇಕಲ್ ಬಾಲರಾಜ್ ನಿರ್ಮಾಣ ಮಾಡಿದ್ದರು. ಇನ್ನೂ ಸ್ಯಾಂಡಲ್‌ವುಡ್‌ನಲ್ಲಿ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡುವ ಆಸೆಯಲ್ಲಿದ್ದ ಆನೇಕಲ್‌ ಬಾಲರಾಜ್ ಅವರ ಆಕಾಲಿಕ ಮರಣ ಇದೀಗ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿ ಪರಿಣಮಿಸಿದೆ ಎಂದರೂ ತಪ್ಪಾಗಲಾರದು.
Published by:shrikrishna bhat
First published: