• Home
  • »
  • News
  • »
  • entertainment
  • »
  • Kantara In Indonesia: ಇಂಡೋನೇಷ್ಯಾದಲ್ಲಿ ಇಂದು ಕಾಂತಾರ ರಿಲೀಸ್! ವಿಯಟ್ನಾಂನಲ್ಲೂ ರಿಷಬ್ ಸಿನಿಮಾ ಮೋಡಿ

Kantara In Indonesia: ಇಂಡೋನೇಷ್ಯಾದಲ್ಲಿ ಇಂದು ಕಾಂತಾರ ರಿಲೀಸ್! ವಿಯಟ್ನಾಂನಲ್ಲೂ ರಿಷಬ್ ಸಿನಿಮಾ ಮೋಡಿ

ವಿಯಟ್ನಾಂದಲ್ಲೂ ಕನ್ನಡ ಕಾಂತಾರ ಆಗುತ್ತೆ ರಿಲೀಸ್!

ವಿಯಟ್ನಾಂದಲ್ಲೂ ಕನ್ನಡ ಕಾಂತಾರ ಆಗುತ್ತೆ ರಿಲೀಸ್!

ಕಾಂತಾರ ಸಿನಿಮಾ ವಿಯಟ್ನಾಂ ನಲ್ಲೂ ತೆರೆಗೆ ಬರಲಿದೆ. ಅಧಿಕೃತವಾಗಿ ಈ ವಿಷಯವನ್ನ ಕಾಂತಾರ ಚಿತ್ರ ನಿರ್ಮಿಸಿದ ಹೊಂಬಾಳೆ ಸಂಸ್ಥೆ ಕೂಡ ಹೇಳಿಕೊಂಡಿದೆ. ತನ್ನ ಅಧಿಕೃತ ಪೇಜ್​ ನಲ್ಲೂ ಈ ವಿಷಯದ ಬಗ್ಗೆ ಬರೆದುಕೊಂಡಿದೆ.

  • News18 Kannada
  • Last Updated :
  • Bangalore [Bangalore], India
  • Share this:

ಕನ್ನಡದ ಕಾಂತಾರ ಸಿನಿಮಾ (Kantaa Cinema) ಬ್ಲಾಕ್ ಬಸ್ಟರ್ ಹಿಟ್ ಆಗಿದೆ. ಡಿವೈನ್ ಹಿಟ್ ಆಗಿ ದೈವಿ ಭಕ್ತಿಯನ್ನು ಹೆಚ್ಚಿಸಿದೆ. ಸಿನಿಮಾ ಪ್ರೇಮಿಗಳಲ್ಲಿ ತುಳುನಾಡ ದೈವದ ಕಥೆಯನ್ನು ಪರಿಚಯಿಸಿದೆ. ತುಳುನಾಡಿಗೆ (Tulu language) ಮಾತ್ರ ಸೀಮಿತವಾಗಿದ್ದ ದೈವಾರಾಧನೆಯ ವಿಷಯ, ಈಗ ಎಲ್ಲರಿಗೂ ತಿಳಿದು ಬಿಟ್ಟಿದೆ. ದೇಶ-ವಿದೇಶದಲ್ಲೂ ಕನ್ನಡದ ಕಾಂತಾರ ಸದ್ದು ಮಾಡುತ್ತಿದೆ. ಇಲ್ಲಿವರೆಗೂ (Release) ರಿಲೀಸ್ ಆಗದೇ ಇರೋ ದೇಶದಲ್ಲೂ ಕಾಂತಾರ (Kantara Release) ಚಿತ್ರ ರಿಲೀಸ್ ಆಗಿದೆ. ಕನ್ನಡಿಗರೆಲ್ಲ ಹೆಮ್ಮೆ ಪಡುವಂತೆ ಮಾಡಿದೆ. ಇಲ್ಲಿವರೆಗೂ ಇಂಡೋನೇಷ್ಯಾದಲ್ಲಿ ಕನ್ನಡ ಸಿನಿಮಾನೇ ಬಂದಿರಲಿಲ್ಲ. ಆದರೆ ಕಾಂತಾರ ಅಲ್ಲಿ ರಿಲೀಸ್ ಆಗೋ ಮೂಲಕ ಹೊಸ ಹಾದಿಯನ್ನೂ ತೋರಿದೆ ನೋಡಿ.


ಕನ್ನಡದ ಕಾಂತಾರ ಸಿನಿಮಾದ ಹೊಸ ಕ್ರಾಂತಿ
ಕನ್ನಡದ ಕಾಂತಾರ ಸಿನಿಮಾ ಹೊಸ ಹಾದಿಯನ್ನ ತೆರೆಯುತ್ತಿದೆ. ಕೆಜಿಎಫ್ ಸಿನಿಮಾ ಪ್ಯಾನ್ ಇಂಡಿಯಾ ದಾರಿಯನ್ನ ಇಡೀ ಕನ್ನಡ ಇಂಡಸ್ಟ್ರಿಗೆ ಪರಿಚಯ ಮಾಡಿದೆ. ಇದೇ ರೀತಿ ಕನ್ನಡದ ಕಾಂತಾರ ಇಲ್ಲಿವರೆಗೂ ರಿಲೀಸ್ ಆಗದೇ ಇರೋ ದೇಶದಲ್ಲೂ ರಿಲೀಸ್ ಆಗಿದೆ.


ಹೌದು, ಕಾಂತಾರ ಸಿನಿಮಾದ ದೈವ ಸಿನಿಮಾವನ್ನ ಎಲ್ಲೆಲ್ಲೋ ತೆಗೆದುಕೊಂಡು ಹೋಗುತ್ತಿದೆ. ಯಾರು ನಿರೀಕ್ಷೆ ಮಾಡದೇ ಇರೋ ದೇಶದಲ್ಲೂ ರಿಲೀಸ್ ಮಾಡುವಂತೆ ಮಾಡಿದೆ. ಇದು ದೈವದ ಕೃಪೆ ಅನ್ನೋರೇ ಹೆಚ್ಚು.


ಇದನ್ನೂ ಓದಿ: Kareena Kapoor: ಕರೀನಾ ಅವರ ಫೇಮಸ್ ಡೈಲಾಗ್ ಹೇಳಿ ಹಣ ಸಂಪಾದಿಸ್ತಾರೆ ಈ ನಟಿ!


ದೈವದ ಕಥೆ ಇರದೆ ಇದ್ರೆ, ಕಾಂತಾರ ಒಂದು ಸಾಮಾನ್ಯ ಸಿನಿಮಾ ಆಗುತ್ತಿತ್ತೋ ಏನೋ. ಆದರೆ ತುಳುನಾಡಿನ ಸಂಸ್ಕೃತಿಯನ್ನ ಒಳಗೊಂಡಿದೆ. ಅದರಲ್ಲೂ ದೈವಾರಾಧನೆಯ ನೈಜ ವಿಷಯವನ್ನ ಅದ್ಭುತವಾಗಿಯೇ ಕಟ್ಟಿಕೊಟ್ಟಿದೆ.


ಇಂಡೋನೇಷ್ಯಾದಲ್ಲಿ ಪ್ರಥಮ ಬಾರಿಗೆ ಎರಡು ಜಾಗದಲ್ಲಿ ರಿಲೀಸ್
ಕಾಂತಾರ ಸಿನಿಮಾ ಖ್ಯಾತಿ ದೇಶಕ್ಕೆ ಮಾತ್ರ ಸೀಮಿತಗೊಂಡಿಲ್ಲ.ಈಗ ವಿದೇಶಕ್ಕೂ ಕಾಲಿಟ್ಟಿದೆ. ಅಲ್ಲಿಯ ಕನ್ನಡಿಗರು, ಹಿಂದಿ ಭಾಷಾ ಪ್ರೇಮಿಗಳು ತೆಲುಗು, ತಮಿಳು ಭಾಷಾ ಪ್ರೇಮಿಗಳು ತಮಗಿಷ್ಟವಾದ ಭಾಷೆಯಲ್ಲಿಯೇ ಸಿನಿಮಾ ನೋಡುತ್ತಿದ್ದಾರೆ.


ಅದರಂತೆ ಕನ್ನಡದ ಕಾಂತಾರ ಈಗ ಇಂಡೋನೇಷ್ಯಾದಲ್ಲಿ ರಿಲೀಸ್ ಆಗುತ್ತಿದೆ. ಇಲ್ಲಿಯ ಎರಡು ಜಾಗದಲ್ಲಿ ಕನ್ನಡದ ಕಾಂತಾರ ಸಿನಿಮಾ ಬಿಡುಗಡೆ ಆಗಿದೆ. ಇದು ಪ್ರಥಮ ಭಾರಿ ಅನ್ನೋದು ಅಷ್ಟೇ ಸತ್ಯ. ಕನ್ನಡದ ಸಿನಿಮಾಗಳು ಇಂಡೋನೇಷ್ಯಾದಲ್ಲಿ ಬರೋದು ಅಪರೂಪವೇ ಸರಿ.


Kannada Film Kantara will be screened in Ho Chi Minh City Vietnam soon
ಕನ್ನಡದ ಕಾಂತಾರ ಸಿನಿಮಾದ ಹೊಸ ಕ್ರಾಂತಿ


ಆದರೆ ಕಾಂತಾರ ಸಿನಿಮಾ ಇಲ್ಲಿ ರಿಲೀಸ್ ಆಗಿದೆ. ಇಲ್ಲಿಯ ಸುವರ್ಣ ಕನ್ನಡ ಬಳಗ ಈ ಒಂದು ಕೆಲಸ ಮಾಡಿದೆ. ಕನ್ನಡದ ಕಾಂತಾರ ಸಿನಿಮಾವನ್ನ ಇಂಡೋನೇಷ್ಯಾದ ಕನ್ನಡಿಗರಿಗೆ ತೋರಿಸೋ ಕೆಲಸ ಮಾಡಿದೆ.


ಅಕ್ಟೋಬರ್-22 ರಂದು ಇಂದು ಇಂಡೋಷ್ಯಾದಲ್ಲಿ ರಿಲೀಸ್
ಕನ್ನಡದ ಕಾಂತಾರ ಸಿನಿಮಾ ಇಂಡೋನೇಷ್ಯಾ ಎರಡು ಕಡೆಗೆ ಇಂದು ರಿಲೀಸ್ ಆಗಿದೆ. ಅವಿನಾಶ್ (ಭಾರತೀ ಪುತ್ರ) ಅನ್ನೋರು ಈ ಚಿತ್ರದ ಪೋಸ್ಟರ್ ಅನ್ನ ತಮ್ಮ ಟ್ವಿಟರ್ ಅಕೌಂಟ್​ ನಲ್ಲೂ ಶೇರ್ ಮಾಡಿಕೊಂಡು ಹೆಮ್ಮೆಪಟ್ಟುಕೊಂಡಿದ್ದಾರೆ.


ವಿಯಟ್ನಾಂನಲ್ಲೂ ಕಾಂತಾರ ಸಿನಿಮಾ ರಿಲೀಸ್
ಕಾಂತಾರ ಸಿನಿಮಾ ವಿಯಟ್ನಾಂ ನಲ್ಲೂ ತೆರೆಗೆ ಬರಲಿದೆ. ಅಧಿಕೃತವಾಗಿ ಈ ವಿಷಯವನ್ನ ಕಾಂತಾರ ಚಿತ್ರ ನಿರ್ಮಿಸಿದ ಹೊಂಬಾಳೆ ಸಂಸ್ಥೆ ಕೂಡ ಹೇಳಿಕೊಂಡಿದೆ. ತನ್ನ ಅಧಿಕೃತ ಪೇಜ್​ ನಲ್ಲೂ ಈ ವಿಷಯದ ಬಗ್ಗೆ ಬರೆದುಕೊಂಡಿದೆ.


ವಿಯಟ್ನಾಂನ ಹೋ ಚಿ ಮಿನ್ಹ್ ನಗರದಲ್ಲಿ ಕಾಂತಾರ ಸಿನಿಮಾ ರಿಲೀಸ್ ಆಗುತ್ತಿದೆ. ಕನ್ನಡದ ಮಟ್ಟಿಗೆ ಇದೇ ಮೊದಲು ಕನ್ನಡ ಸಿನಿಮಾ ಇಲ್ಲಿ ರಿಲೀಸ್ ಆಗುತ್ತಿದೆ. ಈ ಒಂದು ಖ್ಯಾತಿನೂ ಈಗ ಕನ್ನಡದ ಕಾಂತಾರ ಚಿತ್ರಕ್ಕೆ ಸಲ್ಲುತ್ತದೆ.


ಇದನ್ನೂ ಓದಿ: Kantara-Sapthami Gowda: ನನಗಾಗಿ ಒಂದು ಲವ್ ಸ್ಟೋರಿ ಬರೆಯಿರಿ ಎಂದ ಕಾಂತಾರ ಚೆಲುವೆ! ಲೀಲಾ ಹೀಗ್ಯಾಕೆ ಹೇಳಿದ್ರು?


ಒಟ್ನಲ್ಲಿ ದೇಶ-ವಿದೇಶದಲ್ಲಿ ಕನ್ನಡದ ಕಾಂತಾರ ಸಿನಿಮಾ ತನ್ನ ಯಶಸ್ವಿ ಪ್ರದರ್ಶನ ಮುಂದುವರೆಸಿದೆ. ವಿದೇಶದಲ್ಲಿ ಕನ್ನಡದ ಕಾಂತಾರ ರಿಲೀಸ್ ಮಾಡ್ತಿರೋ ಸುವರ್ಣ ಕನ್ನಡ ಬಳಗ ಈಗ ಸದ್ಯಕ್ಕೆ ಇಂಡೋನೇಷ್ಯಾದಲ್ಲಿ ಕಾಂತಾರ ಚಿತ್ರ ರಿಲೀಸ್ ಮಾಡಿದೆ.


ವಿಯಟ್ನಾಂ ನಲ್ಲಿ ರಿಲೀಸ್ ಪ್ಲಾನಿಂಗ್ ನಡೀತಿದೆ. ಇನ್ನೇನು ಅದು ಕೂಡ ಶೀಘ್ರದಲ್ಲಿಯೆ ಅನೌನ್ಸ್ ಆಗುತ್ತದೆ. ಉಳಿದಂತೆ ಕಾಂತಾರ ತನ್ನ ಸಕ್ಸಸ್ ಯಾತ್ರೆಯನ್ನ ಮುಂದುವರೆಸಿದೆ.

First published: