• Home
  • »
  • News
  • »
  • entertainment
  • »
  • Kantara in Indonesia: ಇಂಡೋನೇಷ್ಯಾದಲ್ಲೂ ಕಾಂತಾರದ ಗೆಲುವಿನ ಓಟ! ಅಲ್ಲಿನ ಕನ್ನಡಿಗರಿಗೆ ರಿಷಬ್ ಶೆಟ್ಟಿ ಹೀಗೆ ಹೇಳಿದ್ಯಾಕೆ?

Kantara in Indonesia: ಇಂಡೋನೇಷ್ಯಾದಲ್ಲೂ ಕಾಂತಾರದ ಗೆಲುವಿನ ಓಟ! ಅಲ್ಲಿನ ಕನ್ನಡಿಗರಿಗೆ ರಿಷಬ್ ಶೆಟ್ಟಿ ಹೀಗೆ ಹೇಳಿದ್ಯಾಕೆ?

ಇಂಡೋನೇಷ್ಯಾದಲ್ಲೂ ಕನ್ನಡದ ಕಾಂತಾರ ಸೂಪರ್ ಹಿಟ್

ಇಂಡೋನೇಷ್ಯಾದಲ್ಲೂ ಕನ್ನಡದ ಕಾಂತಾರ ಸೂಪರ್ ಹಿಟ್

ಕನ್ನಡದ ಕಾಂತಾರ ಸಿನಿಮಾ ಇಂಡೋನೇಷ್ಯಾದಲ್ಲೂ ಹೌಸ್ ಫುಲ್ ಓಡುತ್ತಿದೆ. ಮೊಟ್ಟ ಮೊದಲ ಬಾರಿಗೆ ಇಲ್ಲಿ ರಿಲೀಸ್ ಆಗಿದೆ. ಈ ಮೂಲಕ ಕನ್ನಡ ನಿರ್ಮಾಪಕರಿಗೆ ಹೊಸ ಹಾದಿಯನ್ನು ತೋರಿದೆ. ಆದರೂ ರಿಷಬ್ ಶೆಟ್ಟಿ ಇಂಡೋನೇಷ್ಯಾದ ಕನ್ನಡಿಗರಿಗೆ ಹಾಗೆ ಹೇಳಿದ್ಯಾಕೆ?

  • News18 Kannada
  • Last Updated :
  • Bangalore [Bangalore], India
  • Share this:

ಕನ್ನಡದ ಕಾಂತಾರ (Kantara Film) ಗಡಿದಾಟಿ ಹೋಗಿದೆ. ರಾಜ್ಯದ ಗಡಿ ದಾಟಿ ಹೋಗಿ 30 ದಿನಗಳೇ ಉರುಳಿವೆ. ದೇಶ-ವಿದೇಶದಲ್ಲೂ ಕಾಂತಾರ ಓಡ್ತಿದೆ. ವಿಶೇಷವಾಗಿ ಇಂಡೋನೇಷ್ಯಾದಲ್ಲಿ (Indonesia) ಕಾಂತಾರ ಸಿನಿಮಾ ರಿಲೀಸ್ ಆಗಿದೆ. ಮೊದಲ ಬಾರಿಗೆ ಈ ಪ್ರಯೋಗ ಕಾಂತಾರದ ಮೂಲಕವೇ ಶುರು ಆಗಿದೆ. ಸುವರ್ಣ ಕನ್ನಡ ಸಂಘ (Suvarna Kannada Sangha) ಈ ಒಂದ ಸಾಧನೆ ಮಾಡಿದೆ. ಒಂದಲ್ಲ, ಎರಡಲ್ಲ ನಾಲ್ಕು ನಾಲ್ಕು ಶೋಗಳು ಇಲ್ಲಿ ಪ್ರದರ್ಶನ ಆಗುತ್ತಿವೆ. ಜೊತೆಗೆ ಎಲ್ಲ ಶೋ ಗಳು ಹೌಸ್ (House Full) ಫುಲ್ ಆಗಿವೆ. ಇದು ಕಾಂತಾರ ಸಿನಿಮಾ ಹುಟ್ಟುಹಾಕಿರೋ ಕ್ರೇಜ್ ಆಗಿದೆ. ಇದರ ಹೊರತಾಗಿ ಇಲ್ಲಿಯ ಕನ್ನಡಿಗರಿಗೆ ಈಗೊಂದು ಮೆಸೇಜ್ ಪಾಸ್ ಆಗಿದೆ. ಅದನ್ನ ವೀಡಿಯೋ ಮೂಲಕವೇ ನಟ-ನಿರ್ದೇಶಕ ರಿಷಬ್ ಶೆಟ್ಟಿ ಇಂಡೋನೇಷಿಯಾ ಕನ್ನಡಗರಿಗೆ ಕೊಟ್ಟಿದ್ದಾರೆ. ಅದರ ಸುತ್ತದ ಇನ್ನಷ್ಟು ಡಿಟೈಲ್ ಇಲ್ಲಿದೆ.


ನಿಲ್ಲದ ಓಟ-ಮುಗಿಯದ ಕುತೂಹಲ-ಕಾಂತಾರ ರನ್ನಿಂಗ್
ಕಾಂತಾರ ಸಿನಿಮಾದ ಓಟ ನಿಲ್ತಾನೇ ಇಲ್ಲ ಬಿಡಿ. ಈ ಚಿತ್ರದ ಸಕ್ಸಸ್ ಗೆ ಬಾಲಿವುಡ್​ ನಂತಹ ಬಾಲಿವುಡ್ ನಲುಗಿ ಹೋಗಿದೆ. ಕನ್ನಡದ ಬಾಕ್ಸ್​ ಆಫೀಸ್ ಪಂಡಿತರು ವಾರೇ ವ್ಹಾ ಅಂತಲೇ ಹೇಳುತ್ತಿದ್ದಾರೆ. ಬಾಲಿವುಡ್ ವಿಶ್ಲೇಷಕರ ಲೆಕ್ಕ ಪಕ್ಕಾ ಆಗಿದೆ.


ಕಾಂತಾರ ಸಿನಿಮಾದ ಕ್ರೇಜ್ ಇನ್ನು ನಿಲ್ಲೋದಿಲ್ಲ ಅನ್ನೋ ಅಂದಾಜು ಕೂಡ ಇದೆ. ದಿನಗಳದಂತೆ ಕಾಂತಾರಾ ಅಲೆ ಕುಗ್ಗ ಬಹುದು ಎಂದವ್ರಿಗೆ ಲೆಕ್ಕಾಚಾರ ಮೇಲೆ-ಕೆಳಗೆ ಆಗಿದೆ. ಆದರೂ ಧೈರ್ಯ ಮಾಡಿ ಕಾಂತಾರ ಮುಂದೆ ಬಂದವ್ರು ಮಕಾಡೆ ಮಲಗಿದ್ದು ಇದೆ.


ಕಾಂತಾರ ಸಿನಿಮಾದ ದೈವಿ ಶಕ್ತಿಯಿಂದ ಇಡೀ ಸಿನಿಮಾ ರಾಜ್ಯವಷ್ಟೇ ಅಲ್ಲ, ದೇಶ-ವಿದೇಶದಲ್ಲೂ ತನ್ನ ಡಿವೈನ್ ಪವರ್ ಪಸರಿಸುತ್ತಿದೆ. ಅದೇ ಲೆಕ್ಕದಂತೆ ಕನ್ನಡದ ಕಾಂತಾರ ಸಿನಿಮಾ ಇಂಡೋನೇಷ್ಯಾದಲ್ಲೂ ರಿಲೀಸ್ ಆಗಿದೆ.


Kannada Film Kantara Released in Indonesia and Running House Full Show
ಇಂಡೋನೇಷ್ಯಾ ಕನ್ನಡಿಗರಿಗೆ ರಿಷಬ್ ಶೆಟ್ಟಿ ಧನ್ಯವಾದ ಹೇಳಿದ್ಯಾಕೆ?


ಇಂಡೋನೇಷ್ಯಾದಲ್ಲೂ ಕನ್ನಡದ ಕಾಂತಾರ ಸೂಪರ್ ಹಿಟ್
ಕನ್ನಡ ಸಿನಿಮಾಗಳ ವಿಚಾರದಲ್ಲಿ ಇದು ನಿಜಕ್ಕೂ ಮೊದಲ ಪ್ರಯೋಗ ಅಂತಲೇ ಹೇಳಬಹುದು. ಇಲ್ಲಿವರೆಗೂ ಕನ್ನಡದ ಬೇರೆ ಸಿನಿಮಾಗಳು ಬೇರೆ ದೇಶಗಳಲ್ಲಿ ರಿಲೀಸ್ ಆಗಿವೆ. ಆದರೆ ಇಂಡೋನೇಷ್ಯಾದಲ್ಲಿ ರಿಲೀಸ್ ಆಗಿದ್ದೇ ಇಲ್ಲ. ಕಾಂತಾರ ಇಲ್ಲಿ ಹೊಸ ಖಾತೆ ತೆರೆದಿದೆ.


ಇದನ್ನೂ ಓದಿ: Ramya Krishna: ಕಪ್ಪು ಸೀರೆಯಲ್ಲಿ ರಮ್ಯಾ ಕೃಷ್ಣ! ಮುಂದಿನ ಜನ್ಮದಲ್ಲಿ ನೀವೇ ನನ್ನ ಹೆಂಡ್ತಿಯಾಗಿ ಎಂದ ಅಭಿಮಾನಿ


ಇಂಡೋನೇಷ್ಯಾದ ಕನ್ನಡಿಗರೆಲ್ಲ ಕನ್ನಡದ ಕಾಂತಾರ ಸಿನಿಮಾ ಅಲ್ಲೂ ಗೆಲ್ಲಿಸಿದ್ದಾರೆ. ಪ್ರದರ್ಶಿಸಿದ ನಾಲ್ಕು ಶೋಗಳು ಇಲ್ಲಿ ಹೌಸ್ ಫುಲ್ ಆಗಿವೆ. ಇದನ್ನ ಯಾರೆ ಕಂಡ್ರೂ ಅಷ್ಟೇನೆ, ಹೆಮ್ಮಯಿಂದಲೇ ಎಲ್ಲವನ್ನೂ ಹೇಳಿಕೊಳ್ಳುತ್ತಾರೆ.


ಸುವರ್ಣ ಕನ್ನಡ ಸಂಘದ ಪ್ರಯತ್ನಕ್ಕೆ ಪ್ರಶಂಸೆಯ ಸುರಿಮಳೆ
ಇಂಡೋನೇಷ್ಯಾದಂತಹ ದೇಶದಲ್ಲಿ ಕನ್ನಡ ಸಿನಿಮಾ ಪ್ರದರ್ಶನ ಆಗಲಿಕ್ಕೆ ಕಾರಣ ಒಂದೆ ಆಗಿದೆ. ಅದುವೇ ಸುವರ್ಣ ಕನ್ನಡ ಸಂಘ, ಹೌದು, ಈ ಸಂಘದ ಪ್ರಯತ್ನದಿಂದಲೇ ಇದು ಸಾಧ್ಯವಾಗಿದೆ. ಕನ್ನಡ ಸಂಘ ಮುಂದೆ ಬಂದು ಕನ್ನಡದ ಕಾಂತಾರ ಸಿನಿಮಾವನ್ನ ಇಂಡೋನೇಷ್ಯಾದಲ್ಲಿ ಪ್ರದರ್ಶನ ಮಾಡಿದೆ.


ಇಂಡೋನೇಷ್ಯಾ ಕನ್ನಡಿಗರಿಗೆ ರಿಷಬ್ ಶೆಟ್ಟಿ ಧನ್ಯವಾದ ಹೇಳಿದ್ಯಾಕೆ?
ಇದರಿಂದ ಕನ್ನಡ ಕಾಂತಾರ ಚಿತ್ರವನ್ನ ಇಂಡೋನೇಷ್ಯಾ ಕನ್ನಡಿಗರು ಕೂಡ ನೋಡಿ ಖುಷಿ ಪಟ್ಟಿದ್ದಾರೆ. ಈ ಖುಷಿಯನ್ನ ಕಂಡ ನಟ-ನಿರ್ದೇಶಕ ರಿಷಬ್ ಶೆಟ್ಟಿ ಏನಂದ್ರು ಗೊತ್ತೇ? ನಿಜ, ರಿಷಬ್ ಶೆಟ್ಟಿ ಇಂಡೋನೇಷಿಯಾ ಕನ್ನಡಿಗರಿಗೆ ಧನ್ಯವಾದ ತಿಳಿಸಿದ್ದಾರೆ.ಕನ್ನಡ ಸಿನಿಮಾ ನೋಡಿ ಪ್ರೋತ್ಸಾಹಿಸುತ್ತಿದ್ದೀರಿ. ಸಿನಿಮಾವನ್ನ ಮತ್ತೆ ಮತ್ತೆ ಬಂದು ನೋಡ್ತಿದ್ದಿರಿ. ನಿಮ್ಮ ಪ್ರೋತ್ಸಾಹ ಹೀಗೆ ಇರಲಿ ಎಂದು ರಿಷಬ್ ಶೆಟ್ಟಿ ವೀಡಿಯೋ ಮೂಲಕ ಇಂಡೋನೇಷ್ಯಾ ಕನ್ನಡಿಗರಿಗೆ ತಿಳಿಸಿದ್ದಾರೆ.


ಕನ್ನಡ ನಿರ್ಮಾಪಕರಿಗೆ ಹೊಸ ಹಾದಿ ತೋರಿದ ಕನ್ನಡದ ಕಾಂತಾರ
ಇಂಡೋನೇಷ್ಯಾದ ಸುವರ್ಣ ಕನ್ನಡ ಸಂಘ ರಿಷಬ್ ಶೆಟ್ಟಿ ವೀಡಿಯೋ ಬೈಟ್​ಗೆ ತುಂಬಾ ಖುಷಿಪಟ್ಟಿದೆ. ನಿರೀಕ್ಷೆ ಮಟ್ಟವನ್ನ ಮೀರಿ ಜನ ಇಲ್ಲಿ ಸಿನಿಮಾ ನೋಡುತ್ತಿದ್ದಾರೆ.


ಇದನ್ನೂ ಓದಿ: Ramya-Dhananjay: ಡಾಲಿಗೆ ಜೋಡಿಯಾಗ್ತಿದ್ದಾರೆ ಕ್ವೀನ್ ರಮ್ಯಾ!


ಇನ್ನು ಕೇಕ್ ಮೇಲೆ ಚರ್ರಿ ಇಟ್ಟ ರೀತಿ ರಿಷಬ್ ಶೆಟ್ಟಿ ಅವರ ವೀಡಿಯೋ ಬೈಟ್ ಖುಷಿಕೊಟ್ಟಿದೆ ಎಂದು ಸುವರ್ಣ ಕನ್ನಡ ಸಂಘದ ಭಾರತೀ ಪುತ್ರ ಅವಿನಾಶ್ ಹೇಳಿದ್ದಾರೆ.
ಈ ಮೂಲಕ ಕಾಂತಾರ ಸಿನಿಮಾ ಹೊಸ ಹಾದಿಯನ್ನ ತೋರಿಸಿದೆ. ಇಂಡೋನೇಷ್ಯಾ ದೇಶದಲ್ಲೂ ಕನ್ನಡ ಸಿನಿಮಾ ನೋಡುವ ಕನ್ನಡಿಗರು ಇದ್ದಾರೆ ಎಂದು ಕಾಂತಾರ ಸಿನಿಮಾ ತೋರಿಸಿಕೊಟ್ಟಿದೆ.


ವೀಡಿಯೋ ಬೈಟ್ ಮೂಲಕ ರಿಷಬ್ ಶೆಟ್ಟಿ ಧನ್ಯವಾದ ಹೇಳಿ ಅಲ್ಲಿಯ ಕನ್ನಡಿಗರ ಮನಸಿನಲ್ಲೂ ವಿಶೇಷ ಜಾಗ ಮಾಡಿಕೊಂಡಿದ್ದಾರೆ.

First published: