• Home
  • »
  • News
  • »
  • entertainment
  • »
  • Kantara Hindi Release: ಬಾಲಿವುಡ್ ಅಂಗಳಕ್ಕೆ ಕಾಲಿಟ್ಟ ರಿಷಬ್ ಶೆಟ್ಟಿ! ಹಿಂದಿ ರಿಲೀಸ್ ಡೇಟ್ ಫಿಕ್ಸ್

Kantara Hindi Release: ಬಾಲಿವುಡ್ ಅಂಗಳಕ್ಕೆ ಕಾಲಿಟ್ಟ ರಿಷಬ್ ಶೆಟ್ಟಿ! ಹಿಂದಿ ರಿಲೀಸ್ ಡೇಟ್ ಫಿಕ್ಸ್

ಇದೇ ಶುಕ್ರವಾರ 14 ರಂದು ಹಿಂದಿ ಕಾಂತಾರ ರಿಲೀಸ್

ಇದೇ ಶುಕ್ರವಾರ 14 ರಂದು ಹಿಂದಿ ಕಾಂತಾರ ರಿಲೀಸ್

ಈ ಮೂಲಕ ತುಳುನಾಡ ಹೀರೋ ರಿಷಬ್ ಶೆಟ್ಟಿ ಈಗ ಬಾಲಿವುಡ್​​ಗೂ ಕಾಲಿಡುತ್ತಿದ್ದಾರೆ. ಕನ್ನಡದಲ್ಲಿ ಮೋಡಿ ಮಾಡಿದ ರೀತಿನೇ, ಹಿಂದಿ ಸಿನಿ ಪ್ರೇಮಿಗಳ ಮನಸನ್ನ ಕದಿಯಲು ರೆಡಿ ಆಗಿದ್ದಾರೆ.

  • News18 Kannada
  • Last Updated :
  • Bangalore [Bangalore], India
  • Share this:

ಸ್ಯಾಂಡಲ್​​ವುಡ್ ನಲ್ಲಿ ಕಾಂತಾರ (Kantara Hindi Release) ಹವಾ ಸಿಕ್ಕಾಪಟ್ಟೆ ಇದೆ. ತುಳುನಾಡಿನ ದೈವದ ದಂತ ಕಥೆಯನ್ನ ಹೇಳುವ ಈ ಚಿತ್ರ ಈಗ ಬೇರೆ ಲೆವಲ್​ಗೆನೇ ಇದೆ. ನಿರೀಕ್ಷೆ ಮಾಡದೇ ಇರೋ ಮಟ್ಟಕ್ಕೇನೆ ಇಡೀ ಸಿನಿಮಾದ ಸಕ್ಸಸ್ ಆಗಿದೆ. ಪಕ್ಕದ ಪರ ಭಾಷೆಯ ಜನ ಕೂಡ ಕನ್ನಡದ ಕಾಂತಾರ (Kantara Cinema) ಚಿತ್ರವನ್ನ ವೀಕ್ಷಿಸಲು ಕಾತರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕನ್ನಡದ ಕಾಂತಾರವನ್ನ (Bollywood) ಬಾಲಿವುಡ್​ ನಲ್ಲೂ ರಿಲೀಸ್ ಮಾಡಲು ಹೊಂಬಾಳೆ ಪ್ರೋಡಕ್ಷನ್ ಪ್ಲಾನ್ ಮಾಡಿದೆ. ಆ ಪ್ಲಾನ್ ಪ್ರಕಾರ ಇದೇ ಶುಕ್ರುವಾರ ಹಿಂದಿ ಭಾಷೆಯಲ್ಲಿಯೇ ಕಾಂತಾರ ರಿಲೀಸ್ ಆಗುತ್ತಿದೆ. ಅತ್ಯಧಿಕ ಸಂಖ್ಯೆಯಲ್ಲಿಯೇ ಕಾಂತಾರ ಸಿನಿಮಾ ಬಿಡುಗಡೆ ಆಗುತ್ತಿದೆ. ಈ ಬಗೆಗಿನ ಇನ್ನಷ್ಟು ಮಾಹಿತಿ ಇಲ್ಲಿದೆ.


ಹಿಂದಿ ಚಿತ್ರರಂಗಕ್ಕೆ ಕಾಲಿಡ್ತಿರೋ ರಿಷಬ್ ಶೆಟ್ಟಿ
ಕಾಂತಾರ ಸಿನಿಮಾ ಬಾಲಿವುಡ್​ ಗೂ ಕಾಲಿಡುತ್ತಿದೆ. ಇದೇ ಶುಕ್ರವಾರ ಕನ್ನಡದ ಕಾಂತಾರ ಹಿಂದಿ ಚಿತ್ರರಂಗದ ಥಿಯೇಟರ್​ಗಳಿಗೂ ಲಗ್ಗೆ ಇಡುತ್ತಿದೆ. ಕನ್ನಡದಲ್ಲಿ ಭಾರೀ ಹಿಟ್ ಆಗಿರೋ ಕಾಂತಾರ ಇನ್ನು ಮುನ್ನುಗ್ಗುತ್ತಲೇ ಇದೆ.


ಈ ಮೂಲಕ ತುಳುನಾಡ ಹೀರೋ ರಿಷಬ್ ಶೆಟ್ಟಿ ಈಗ ಬಾಲಿವುಡ್​ ಗೂ ಕಾಲಿಡುತ್ತಿದ್ದಾರೆ. ಕನ್ನಡದಲ್ಲಿ ಮೋಡಿ ಮಾಡಿದ ರೀತಿನೇ ಹಿಂದಿ ಸಿನಿ ಪ್ರೇಮಿಗಳ ಮನಸನ್ನ ಕದಿಯಲು ರೆಡಿ ಆಗಿದ್ದಾರೆ.


Kannada Film Kantara Now Dubbed in Hindi. it's Going to Release this week on 14th October
ಇದೇ ಶುಕ್ರವಾರ 14 ರಂದು ಹಿಂದಿ ಕಾಂತಾರ ರಿಲೀಸ್


ಕಾಂತಾರ ಸಿನಿಮಾ ತುಳುನಾಡಿನ ದಂತಕಥೆನೇ ಆಗಿದೆ. ದೈವದ ಶಕ್ತಿ ಏನೂ ಅನ್ನೋದು ಇಲ್ಲಿ ತಿಳಿಯುತ್ತದೆ. ದೈವಾರಾಧನೆ ಹಾಗೂ ಕಮರ್ಷಿಯಲ್ ಟಚ್ ಇರೋ ಈ ಚಿತ್ರವನ್ನ ಕನ್ನಡದ ಎಲ್ಲ ವರ್ಗದ ಪ್ರೇಕ್ಷಕರು ಈಗಾಗಲೇ ಸ್ವೀಕರಿಸಿದ್ದಾರೆ.


ಕಾಂತಾರ ಹಿಟ್-ಸಿನಿಮಾದ ಸುತ್ತ ಹಲವು ಇಂಟ್ರಸ್ಟಿಂಗ್ ನ್ಯೂಸ್
ಕಾಂತಾರ ಸಿನಿಮಾದ ರಿಲೀಸ್ ಆಗಿದ್ದೇ ತಡ, ಸಿನಿಮಾದ ಬಗೆಗಿನ ಒಂದೊಂದೆ ಇಂಟ್ರಸ್ಟಿಂಗ್ ಫ್ಯಾಕ್ಟ್ ಹೊರ ಬಂದವು. ಆ ಮೂಲಕ ಭಾರೀ ಸೌಂಡ್ ಕೂಡ ಮಾಡ್ತಾನೇ ಇವೆ. ಇಂತಹ ಕಾಂತಾರ ಸಿನಿಮಾ ಈಗ ಎಲ್ಲೆಡೆ ಹೌಸ್ ಫುಲ್ ಆಗಿಯೇ ಓಡುತ್ತಿದೆ.


ಇದನ್ನೂ ಓದಿ: Kantara Movie: ರಿಷಬ್ ಶೆಟ್ಟಿ ದಂಪತಿ ಜೊತೆ ಕಾಂತಾರ ನಟಿಯ ಸ್ಪೆಷಲ್ ಪೋಸ್ಟ್


ಕಾಂತಾರ ಸಿನಿಮಾವನ್ನ ಹಿಂದಿ ಭಾಷೆಯಲ್ಲೂ ರಿಲೀಸ್ ಮಾಡಲಾಗುತ್ತಿದೆ. ಈಗಾಗಲೇ ಹಿಂದಿ ಟ್ರೈಲರ್ ಸೌಂಡ್ ಮಾಡಿದೆ. 3 ಮಿಲಿಯನ್ ವೀವ್ಸ್ ಕೂಡ ಈ ಒಂದೇ ಒಂದು ಟ್ರೈಲರ್ ಗೆ ಬಂದಿರೋದು ತಂಬಾ ವಿಶೇಷನೇ ಅಲ್ವೇ.


2500 ಸ್ಕ್ರೀನ್​​ನಲ್ಲಿ ಹಿಂದಿ ಕಾಂತಾರ ರಿಲೀಸ್
ಕಾಂತಾರ ಸಿನಿಮಾದ ಕ್ರೇಜ್ ದೊಡ್ಡಮಟ್ಟದಲ್ಲಿಯೇ ಇದೆ. ಈ ಚಿತ್ರವನ್ನ ಹೊಂಬಾಳೆ ನಿರ್ಮಾಣ ಸಂಸ್ಥೆ ದೊಡ್ಡಮಟ್ಟದಲ್ಲಿಯೇ ರಿಲೀಸ್ ಮಾಡುತ್ತಿದೆ. ಇದಕ್ಕಾಗಿಯೇ ಎಲ್ಲ ರೀತಿಯ ಸಿದ್ದತೆನೂ ಆಗಿದೆ.




ಕನ್ನಡದ ಕಾಂತಾರ ಸಿನಿಮಾವನ್ನ ಬಾಲಿವುಡ್​​ನ 2500 ಕ್ಕೂ ಹೆಚ್ಚು ಸ್ಕ್ರೀನ್​​ನಲ್ಲಿ ಪ್ರದರ್ಶನ ಮಾಡಲಾಗುತ್ತಿದೆ. ಇಷ್ಟು ದೊಡ್ಡಮಟ್ಟದಲ್ಲಿಯೇ ಕಾಂತಾರ ರಿಲೀಸ್ ಆಗುತ್ತಿರೋದು ಕನ್ನಡ ಸಿನಿ ಪ್ರೇಮಿಗಳಿಗೆ, ಕನ್ನಡ ಸಿನಿಮಾ ಮೇಕರ್​ಗಳಿಗೆ ಒಂದು ದೊಡ್ಡ ಹೆಮ್ಮೆನೆ ಆಗಿದೆ.


ಕಳೆ ತಿಂಗಳ 30 ರಂದು ಕನ್ನಡದಲ್ಲಿ ಕಾಂತಾರ ರಿಲೀಸ್
ಕಳೆದ ತಿಂಗಳ 30 ರಂದು ಕಾಂತಾರ ಸಿನಿಮಾ ಕರ್ನಾಟಕದಲ್ಲಿ ರಿಲೀಸ್ ಆಗಿತ್ತು. ಕರಾವಳಿ ಭಾಗದ ಸಂಸ್ಕೃತಿ ಮತ್ತು ದೈವಾರಾಧನೆಯ ಅಸಲಿ ಸತ್ಯವನ್ನ ಹೇಳುವ ಈ ಸಿನಿಮಾ, ಎಲ್ಲರ ಹೃದಯ ಗೆದ್ದು ಬಿಟ್ಟಿದೆ. ಅಂದಿನಿಂದ ಇಂದಿನವರೆಗೂ ಚಿತ್ರ ಓಡ್ತಾನೆ ಇದೆ.


ರಿಷಬ್ ಶೆಟ್ಟಿ-ಸಪ್ತಮಿ ಗೌಡ, ಪ್ರಮೋದ್ ಶೆಟ್ಟಿ ಹೀಗೆ ಇನ್ನೂ ಅನೇಕ
ಅದ್ಭುತ ಕಲಾವಿದರ ಈ ಚಿತ್ರ, ಎಲ್ಲರಿಗೂ ದೈವಾರಾಧನೆಯ ಹೊಸದೊಂದು ಅನುಭವವನ್ನೆ ಕಟ್ಟಿಕೊಟ್ಟಿದೆ. ಇಂತಹ ಈ ಸಿನಿಮಾವನ್ನ ಸ್ವತಃ ರಿಷಬ್ ಶೆಟ್ಟಿ ನಿರ್ದೇಶನ ಮಾಡಿದ್ದರು. ದೈವರೂಪ ತಾಳುವ ಮೂಲಕ ಪ್ರೇಕ್ಷಕರನ್ನ ರಂಜಿಸಿದರು.


Kannada Film Kantara Now Dubbed in Hindi. it's Going to Release this week on 14th October
ಇದೇ 14 ರಂದು ಹಿಂದಿ ಕಾಂತಾರ ರಿಲೀಸ್


ಅಕ್ಟೋಬರ್-14 ರಂದು ಹಿಂದಿ ಕಾಂತಾರ ರಿಲೀಸ್
ಹಿಂದಿ ಭಾಷೆಯ ಕಾಂತಾರ ಸಿನಿಮಾ ಇದೇ ವಾರವೇ ರಿಲೀಸ್ ಆಗುತ್ತಿದೆ. ಹಿಂದಿಯಲ್ಲೂ ಇದು ಮೋಡಿ ಮಾಡುತ್ತದೆ ಅನ್ನೋ ಭರವಸೆ ಕೂಡ ಇದೆ. ಹಿಂದಿ ಮಾರ್ಕೆಟ್​ ಲೆಕ್ಕವೇ ಬೇರೆ ಇದೆ. ಇಲ್ಲಿ ಹಿಟ್ ಅನ್ನೋದು ಅಷ್ಟು ಸುಲಭವೂ ಅಲ್ಲ. ಸರಳವೂ ಅಲ್ಲ.


ಆದರೆ ಕಾಂತಾರ ಎಲ್ಲವನ್ನೂ ಮೀರಿಸೋ ಭರವಸೆಯೊಂದಿಗೆ ಬಾಲಿವುಡ್ ಅಂಗಳಕ್ಕೆ ಇದೇ ವಾರ 14 ರಂದು ಕಾಲಿಡುತ್ತಿದೆ.


ಕನ್ನಡದ ಕಾಂತಾರ ಚಿತ್ರದ ಮೋಡಿ ಇನ್ನೂ ಇದೆ ನೋಡಿ
ಕಳೆದ ಎರಡು ವಾರದಿಂದಲೂ ಕನ್ನಡದಲ್ಲಿ ಹೇಳಿಕೊಳ್ಳುವ ಸಿನಿಮಾ ಕೂಡ ಬಂದಿರಲಿಲ್ಲ. ಈ ಗ್ಯಾಪ್​​ ನಲ್ಲಿಯೇ ಕನ್ನಡ ಪ್ರೇಕ್ಷಕರು, ಕನ್ನಡದ ಕಾಂತಾರವನ್ನ ವೀಕ್ಷಿಸಿದರು. ಮೆಚ್ಚಿಕೊಂಡು ಸಕ್ಸಸ್ ಕೊಟ್ಟೇ ಬಿಟ್ಟರು.


ಇದನ್ನೂ ಓದಿ: OTT Movies: ಒಟಿಟಿಯಲ್ಲಿ ಬಿಡುಗಡೆಯಾದ ಬೆಸ್ಟ್ ಚಿತ್ರಗಳನ್ನು ಹುಡುಕುತ್ತಿದ್ದೀರಾ? ಹಾಗಾದರೆ ಇಲ್ಲಿದೆ ಮೂವಿ ಲಿಸ್ಟ್


ಅಲ್ಲಿಗೆ ಸಕ್ಸಸ್ ಫುಲ್ ಕಾಂತಾರ ಈಗ ಬಾಲಿವುಡ್ ಅಂಗಳಕ್ಕೂ ಲಗ್ಗೆ ಇಡುತ್ತಿದೆ. ಇಲ್ಲೂ ಒಂದು ಹೊಸ ರೀತಿಯ ಹವಾ ಕ್ರಿಯೇಟ್ ಮಾಡುತ್ತದೆ ಅಂತಲೇ ಹೇಳಬಹುದು. ಇನ್ನು ಬಾಲಿವುಡ್​ ನಲ್ಲಿ ಒಳ್ಳೆ ಕಂಟೆಂಟ್​ನ ಚಿತ್ರಗಳು ಬರ್ತಾನೇ ಇಲ್ಲ. ಆ ಹಿನ್ನೆಲೆಯಲ್ಲಿ ಕಾಂತಾರ ಇಲ್ಲೂ ಹಿಟ್ ಆಗೋ ಚಾನ್ಸಸ್ ಜಾಸ್ತಿನೇ ಇದೆ.

First published: