• Home
  • »
  • News
  • »
  • entertainment
  • »
  • Kantara New Record: ಕನ್ನಡದ ಹಿಟ್ ಚಿತ್ರಗಳ ರೆಕಾರ್ಡ್ ಮುರಿದ ಕಾಂತಾರ

Kantara New Record: ಕನ್ನಡದ ಹಿಟ್ ಚಿತ್ರಗಳ ರೆಕಾರ್ಡ್ ಮುರಿದ ಕಾಂತಾರ

1 ಥಿಯೇಟರ್-30 ದಿನ,1,3500 ಕ್ಕೂ ಹೆಚ್ಚು ವೀಕ್ಷಣೆ

1 ಥಿಯೇಟರ್-30 ದಿನ,1,3500 ಕ್ಕೂ ಹೆಚ್ಚು ವೀಕ್ಷಣೆ

ಕನ್ನಡ ಚಲನ ಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷರು ಹಾಗೂ ವೀರೇಶ್ ಥಿಯೇಟರ್​ ಓನರ್ ಕೆ.ವಿ.ಚಂದ್ರಶೇಖರ್ ಅಧಿಕೃತ ಮಾಹಿತಿಯನ್ನೆ ನ್ಯೂಸ್-18 ಕನ್ನಡದ ಡಿಜಿಟಲ್​ ಗೆ ಕೊಟ್ಟಿದ್ದಾರೆ. ಇಲ್ಲಿವರೆಗೂ ಈ ರೀತಿಯ ದಾಖಲೆ ಯಾವ ಸಿನಿಮಾ ಮಾಡಿಲ್ಲ ಅಂತಲೂ ಹೇಳಿದ್ದಾರೆ.

  • News18 Kannada
  • Last Updated :
  • Bangalore [Bangalore], India
  • Share this:

ಕನ್ನಡದ ಕಾಂತಾರ (Kantara New Record) ಹೊಸ ದಾಖಲೆ ಮಾಡಿದೆ. ದೇಶ-ವಿದೇಶದಲ್ಲಿ ಕಾಂತಾರ ಮುನ್ನುಗ್ಗುತ್ತಿದೆ. ಕನ್ನಡದ ಮಟ್ಟಿಗೆ ಇದು ಹೆಮ್ಮೆಯ ವಿಷಯವೇ ಆಗಿದೆ. ಇಲ್ಲಿವರೆಗೂ ಕನ್ನಡದ ಕಾಂತಾರ ಹತ್ತು ಹಲವು ದಾಖಲೆಗಳನ್ನ ಮಾಡ್ತಾನೆ ಬಂದಿದೆ. ರಿಷಬ್ (Rishab Shetty) ಶೆಟ್ಟಿ ಚಿತ್ರ ಜೀವನದಲ್ಲಿ ಹೊಸದೊಂದು ಮೈಲುಗಲನ್ನೆ ಸಾಧಿಸಲು ಕಾಂತಾರ ಹೆಲ್ಪ್ ಆಗಿದೆ. ದೈವದ ಕೃಪೆಯಿಂದಲೇ ಕಾಂತಾರ (Kantara Cinema Release) ಸಿನಿಮಾದ ರಿಲೀಸ್ ಆಗಿ ಒಂದು ತಿಂಗಳಾದ್ರು ಇನ್ನೂ ಓಡ್ತಾಯಿದೆ. ಈ ನಡುವೆ ಅನೇಕ ಸಿನಿಮಾಗಳು ಬಂದಿವೆ. ಆದರೂ ಯಾವುದೇ ಚಿತ್ರದ ರಿಲೀಸ್​ಗೂ ಹಿಂಜರಿದಿಲ್ಲ. ಅದು ನುಗ್ಗುತ್ತಲೇ ಇದೆ. ಇದರ ನಡುವೆ ಕನ್ನಡದ ಕಾಂತಾರ ಕನ್ನಡ ಸಿನಿಮಾಗಳ ಆ ಒಂದು ದಾಖಲೆ ಮುರಿದಿದೆ. ಯಾರೂ ಟಚ್ ಮಾಡೋಕೆ ಆಗದೇ ಇರೋ ದಾಖಲೆಯನ್ನ ಈಗ ಮಾಡಿದೆ. ಅದರ ಡಿಟೈಲ್ಸ್ ಇಲ್ಲಿದೆ.


ಕಾಂತಾರ ಸಿನಿಮಾದ ಆ ಒಂದ ದಾಖಲೆ ಏನು?
ಕನ್ನಡದ ಕಾಂತಾರ ಸಿನಿಮಾ ಅತಿ ವೀಕ್ಷಿಸಲ್ಪಟ್ಟ ಕನ್ನಡ ಸಿನಿಮಾ ಅಂತ ಗೊತ್ತಿದೆ. ಕರ್ನಾಟಕದಲ್ಲಿ ಈ ಸಿನಿಮಾವನ್ನ ಜನ ಸಾಕಷ್ಟು ವೀಕ್ಷಿಸಿದ್ದಾರೆ. ಪ್ರೇಕ್ಷಕರ ಮನ ಗೆಲ್ಲುತ್ತದೇ ಇರೋ ಕಾಂತಾರ ತನ್ನ ಯಶಸ್ವಿ ಪಯಣವನ್ನ ಈಗಲೇ ಏನೂ ಮುಗಿಸೋದಿಲ್ಲ ಬಿಡಿ.


ರಾಜ್ಯದ ತುಂಬೆಲ್ಲ ಕಾಂತಾರ ರಿಲೀಸ್ ಆಗಿದೆ. ವೀಕೆಂಡ್​ ನಲ್ಲಿ ಈಗ ಯಾವುದೇ ಥಿಯೇಟರ್​​ಗೆ ನೀವು ಹೋದ್ರು ಅಷ್ಟೇನೆ, ಸಿನಿ ಪ್ರೇಮಿಗಳು ಸಾಗರೋಪಾದಿಯಲ್ಲಿಯೇ ಥಿಯೇಟ್​ ಬರ್ತಿದ್ದಾರೆ. ಇದು ಕಾಂತಾರ ಹುಟ್ಟುಹಾಕಿದ ಸಂಚಲನವೇ ಸರಿ.


ಕನ್ನಡದ ಕಾಂತಾರದ ಆ ಹೊಸ ದಾಖಲೆ ಏನೂ ಗೊತ್ತೇ?
ಈ ಹಿಂದೆ ಜೋಗಿ, ಯುವರತ್ನ ಸಿನಿಮಾಗಳು ಹೊಸ ದಾಖಲೆಯನ್ನ ಸೆಟ್ ಮಾಡಿ ಆಗಿದೆ. ಆದರೆ ಕಾಂತಾರ ಈ ಚಿತ್ರಗಳ ಆ ದಾಖಲೆಯನ್ನೂ ಬ್ರೇಕ್ ಮಾಡಿದೆ. ತನ್ನದೇ ಹೊಸ ದಾಖಲೆಯನ್ನ ಬರೆದು ಬಿಟ್ಟಿದೆ.


Kannada Film Kantara Create New Record in Kannada Industry
ಕಡಿಮೆ ಸಮಯದಲ್ಲಿ ಅತಿ ಹೆಚ್ಚು ಜನರಿಂದ ಕಾಂತಾರ ವೀಕ್ಷಣೆ


ಹೌದು, ಕಾಂತಾರ ಬರೆದ ಆ ದಾಖಲೆ ನಿಜಕ್ಕೂ ಕನ್ನಡಿಗರು ಹೆಮ್ಮೆ ಪಡುವೆ ವಿಷಯವೇ ಆಗಿದೆ. ಇಲ್ಲಿವರೆಗೂ ಯಾವುದೇ ಸಿನಿಮಾಗಳು ಈ ಒಂದು ದಾಖಲೆ ಮಾಡಿಯೇ ಇಲ್ಲ ಅಂದ್ರೆ ಯಾರೂ ಬೇಸರ ಮಾಡಿಕೊಳ್ಳೋದಿಲ್ಲ. ಕಾಂತಾರ ಮಾಡಿರೋ ಆ ದಾಖಲೆಯಾದ್ರೂ ಏನೂ? ಇಲ್ಲಿದೆ ನೋಡಿ.


1 ಥಿಯೇಟರ್-30 ದಿನ, 1,3500 ಕ್ಕೂ ಹೆಚ್ಚು ವೀಕ್ಷಣೆ
ನಿಜ, ಈ ದಾಖಲೆ ಬಗ್ಗೇನೆ ನಾವು ಇಲ್ಲಿವರೆಗೂ ಹೇಳಿರೋದು. ಬೆಂಗಳೂರಿನ ಹೆಸಾಂತರ ಥಿಯೇಟರ್​​ ನಲ್ಲಿ ಕಾಂತಾರ ಸಿನಿಮಾ ಚೆನ್ನಾಗಿಯೇ ಹೋಗುತ್ತಿದೆ. ಈ ಥಿಯೇಟರ್ ನಲ್ಲಿ ಕೇವಲ 30 ದಿನಗಳದಲ್ಲಿ ಈ ಸಿನಿಮಾ ಮಾಡಿರೋ ಈ ದಾಖಲೆ ವಿಶೇಷ ದಾಖಲೆನೆ ಆಗಿದೆ.


ಈ ಬಗ್ಗೆ ಕನ್ನಡ ಚಲನ ಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷರು ಹಾಗೂ ವೀರೇಶ್ ಥಿಯೇಟರ್​ ಓನರ್ ಕೆ.ವಿ.ಚಂದ್ರಶೇಖರ್ ಅಧಿಕೃತ ಮಾಹಿತಿಯನ್ನೆ ನ್ಯೂಸ್-18 ಕನ್ನಡದ ಡಿಜಿಟಲ್​ ಗೆ ಕೊಟ್ಟಿದ್ದಾರೆ. ಇಲ್ಲಿವರೆಗೂ ಈ ರೀತಿಯ ದಾಖಲೆ ಯಾವ ಸಿನಿಮಾ ಮಾಡಿಲ್ಲ ಅಂತಲೂ ಹೇಳಿದ್ದಾರೆ.


ಇದನ್ನೂ ಓದಿ: BBK Season 09: ಒಟಿಟಿಯಿಂದ ಬಂದವರಿಂದ ಡೀಲ್! ಕಳಪೆ, ನಾಮಿನೇಟ್ ಮಾಡಬಾರದೆಂದು ನಡೆದಿತ್ತಾ ಒಪ್ಪಂದ?


ಕಾಂತಾರ ಸಿನಿಮಾದ ಎಲ್ಲ ಶೋಗಳು ಫುಲ್ ಆಗುತ್ತಿವೆ. ರಿಲೀಸ್ ಆದ ಮೊದಲ ದಿನದಿಂದ ಹಿಡಿದು, ಇಲ್ಲಿವರೆಗೂ ಕಾಂತಾರ ಓಡ್ತಾನೇ ಇದೆ. ಒಂದು ಶೋಗೆ 924 ಜನ ನಮ್ಮ ಥಿಯೇಟರ್​ ನಲ್ಲಿ ಚಿತ್ರ ವೀಕ್ಷಿಸಬಹುದು.ಈ ಲೆಕ್ಕದಂತೆ ಕಾಂತಾರದ ಅಷ್ಟೂ ಶೋಗಳು ಫುಲ್ ಆಗ್ತಾನೇ ಬಂದಿವೆ.


ಕಡಿಮೆ ಸಮಯದಲ್ಲಿ ಅತಿ ಹೆಚ್ಚು ಜನರಿಂದ ಕಾಂತಾರ ವೀಕ್ಷಣೆ
ಎಲ್ಲ ಶೋಗಳ ಒಟ್ಟು ಲೆಕ್ಕದಂತೆ 25 ದಿನಗಳಲ್ಲಿ 1,25000 ಜನ ಕಾಂತಾರ ಚಿತ್ರವನ್ನ ನಮ್ಮ ಥಿಯೇಟರ್ ನಲ್ಲಿ ವೀಕ್ಷಿಸಿದ್ದಾರೆ. ಈಗ 30 ದಿನ ಆಗಿದೆ. ಅಲ್ಲಿಗೆ ಈ ಲೆಕ್ಕ 1,3500ಕ್ಕೂ ಅಧಿಕ ಆಗಿದೆ. ಇಲ್ಲಿವರೆಗೂ ಈ ಒಂದು ದಾಖಲೆಯನ್ನ ಯಾವ ಸಿನಿಮಾ ಕೂಡ ಮಾಡಿಲ್ಲ ಅಂತಲೇ ಕೆ.ವಿ.ಚಂದ್ರಶೇಖರ್ ಹೇಳಿದ್ದಾರೆ.


Kannada Film Kantara Create New Record in Kannada Industry
ಕಾಂತಾರ ಸಿನಿಮಾದ ಆ ಒಂದ ದಾಖಲೆ ಏನು?


ಕನ್ನಡದ ಈ ಹಿಂದಿನ ಸಿನಿಮಾಗಳನ್ನ ಕೂಡ ಲಕ್ಷ ಲಕ್ಷ ಜನ ನಮ್ಮ ಥಿಯೇಟ್​ ನಲ್ಲಿ ವೀಕ್ಷಿಸಿದ್ದಾರೆ. ಆದರೆ ಅದೆಲ್ಲ 50 ದಿನಕ್ಕೋ, 75 ದಿನಕ್ಕೋ, 100 ದಿನದ ಲೆಕ್ಕವೇ ಆಗಿದೆ. ಕಾಂತಾರ ಕೇವಲ 25 ದಿನಕ್ಕೇನೆ 1,25000 ಜನ ವೀಕ್ಷಿಸುವಂತೆ ಮಾಡಿರೋದು ನಿಜಕ್ಕೂ ಹೆಮ್ಮೆಯ ವಿಷಯವೇ ಆಗಿದೆ.


30 ವರ್ಷಕೊಮ್ಮೆ ಇಂತಹ ಹೊಸ ಅಲೆ ಬೀಸುತ್ತದೆ
ವೀರೇಶ್ ಚಿತ್ರಮಂದರಿದ ಮಾಲೀಕರಾದ ಕೆ.ವಿ.ಚಂದ್ರಶೇಖರ್ ಕೂಡ ಕಾಂತಾರ ಸಿನಿಮಾ ನೋಡಿದ್ದಾರೆ. ಎಳೆ ಮಕ್ಕಳಿಂದ ಹಿಡಿದು ವಯೋವೃದ್ಧರ ವರೆಗೂ ಕಾಂತಾರ ಸಿನಿಮಾ ನೋಡುಬಹುದು. ಅಂತಹ ಕ್ವಾಲಿಟಿ ಇರೋ ಫ್ಯಾಮಿಲಿ ಸಿನಿಮಾ ಇದಾಗಿದೆ ಎಂದು ಹೇಳುತ್ತಾರೆ.


ಇದನ್ನೂ ಓದಿ: Rishab Shetty: ಕಾಂತಾರ ಬಳಿಕ ಬದಲಾಯ್ತು ರಿಷಬ್ ಲಕ್; ಪ್ರೈವೇಟ್ ಜೆಟ್​ನಲ್ಲಿ ಶೆಟ್ರ ರೌಂಡ್ಸ್!


ಪ್ರೇಕ್ಷಕರು ಬದಲಾಗುತ್ತಲೇ ಇರುತ್ತಾರೆ. ಜನರೇಷನ್ ಟು ಜನರೇಷನ್ ಎಲ್ಲ ಅಭಿರುಚಿ ಬದಲಾಗುತ್ತದೆ. ಅದರಂತೆ 30 ವರ್ಷಕೊಮ್ಮೆ ಇಂತಹ ಒಂದು ಮ್ಯಾಜಿಕ್ ಆಗುತ್ತಲೇ ಇರುತ್ತದೆ. ಈ ಸಲ ಕಾಂತಾರ ಅಂತ ಒಂದು ಮ್ಯಾಜಿಕ್ ಮಾಡಿದೆ ಅನ್ನೋ ಅಭಿಪ್ರಾಯವನ್ನೂ ಕೆ.ವಿ.ಚಂದ್ರಶೇಖರ್ ವ್ಯಕ್ತಪಡಿಸಿದ್ದಾರೆ.

First published: