• Home
  • »
  • News
  • »
  • entertainment
  • »
  • Kamblihula New Movie: ಕಾಂತಾರ ಬಳಿಕ ಮತ್ತೊಂದು 'ಕ' ಅಕ್ಷರದ ಸಿನಿಮಾದ ಕ್ರೇಜ್

Kamblihula New Movie: ಕಾಂತಾರ ಬಳಿಕ ಮತ್ತೊಂದು 'ಕ' ಅಕ್ಷರದ ಸಿನಿಮಾದ ಕ್ರೇಜ್

ಕಂಬ್ಳಿಹುಳ ಕೂಡ ಮತ್ತೊಂದು ಮುಂಗಾರು ಮಳೆ ಆಗುತ್ತಾ?

ಕಂಬ್ಳಿಹುಳ ಕೂಡ ಮತ್ತೊಂದು ಮುಂಗಾರು ಮಳೆ ಆಗುತ್ತಾ?

ಕನ್ನಡದ ಸೂಪರ್ ಹಿಟ್ ಸಿನಿಮಾ ಲೇಟ್ ಆಗಿಯೇ ಜನಕ್ಕೆ ಗೊತ್ತಾಗಿವೆ. ಮುಂಗಾರು ಮಳೆ, ರಂಗಿತರಂಗ ಎರಡನೇ ವಾರಕ್ಕೋ ಮೂರನೇ ವಾರಕ್ಕೆ ಜನಕ್ಕೆ ತಿಳಿದಿದೆ. ಈಗ ಕಂಬ್ಳಿಹುಳ ಚಿತ್ರವೂ ಎರಡನೇ ವಾರಕ್ಕೆ ಜನರನ್ನ ಸೆಳೆಯಲು ಆರಂಭಿಸಿದೆ.

  • News18 Kannada
  • Last Updated :
  • Bangalore [Bangalore], India
  • Share this:

    ಕನ್ನಡದಲ್ಲಿ ಕಾಂತಾರ (Kantara Record) ದಾಖಲೆ ಬರೆದಿದೆ. ಹಲವು ಮೈಲುಗಲ್ಲುಗಳನ್ನ ಸಾಧಿಸಿದೆ. ಕನ್ನಡ ಚಿತ್ರರಂಗದ ಹೆಸರನ್ನು ವಿಶ್ವದೆಲ್ಲೆಡೆ ತೆಗೆದುಕೊಂಡು ಹೋಗಿದೆ. ಹೆಚ್ಚು ಕಡಿಮೆ ಒಂದು ತಿಂಗಳವರೆಗೂ ಇಡೀ ನಾಡಿನ ಜನರನ್ನ ರಂಜಿಸಿದೆ. ಥಿಯೇಟರ್​​​ಗೆ (Theater) ಮತ್ತೆ ಮತ್ತೆ ಬಂದು ಚಿತ್ರ ನೋಡುವಂತೆ ಮಾಡಿದೆ. ಕಾಂತಾರ ಸಿನಿಮಾ ಆದ್ಮೇಲೆ ಮುಂದೇನು? ಜನ ಥಿಯೇಟರ್​ಗೆ ಬಂದು ಸಿನಿಮಾ ನೋಡ್ತಾರಾ? ಈ ಎಲ್ಲ ಪ್ರಶ್ನೆಗಳಿಗೆ ಮತ್ತೊಂದು ಸಿನಿಮಾ ಈಗ ಉತ್ತರ (Kamblihula) ರೂಪದಲ್ಲಿಯೇ ಇದೆ. ಇದು ಕೂಡ "ಕ" ಅಕ್ಷರದಿಂದಲೇ ಶುರು ಆಗುತ್ತದೆ. ಕಳೆದ ವಾರವೇ ಈ ಸಿನಿಮಾ ರಿಲೀಸ್ ಆಗಿದೆ. ಆದರೆ ಕಂಬ್ಳಿಹುಳದ ಚಲನೆಯಂತೇನೆ ಈ ಚಿತ್ರ ಈಗ ಶೃತಿ ಹಿಡಿದೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ.


    ಒಳ್ಳೆ ಸಿನಿಮಾ ಲೇಟ್ ಆಗಿಯೇ ಕ್ಲಿಕ್ ಆಗುತ್ತವೆ


    ಕನ್ನಡದಲ್ಲಿ ಸಾಕಷ್ಟು ಒಳ್ಳೆ ಸಿನಿಮಾ ಬಂದಿವೆ. ಆದರೆ ಎಲ್ಲವೂ ಥಿಯೇಟರ್​​ನಲ್ಲಿ ಓಡಿಲ್ಲ. ಅವು ಟಿವಿಗಳಲ್ಲಿಯೇ ಓಡುತ್ತವೆ. ಅಂತಹ ಸಿನಿಮಾಗಳ ಪಟ್ಟಿ ಇಲ್ಲಿ ದೊಡ್ಡಮಟ್ಟದಲ್ಲಿಯೇ ಇದೆ. ಆದರೂ ಲಕ್ ಚೆನ್ನಾಗಿದ್ರೆ, ಎರಡನೇ ವಾರಕ್ಕೋ ಮೂರನೇ ವಾರಕ್ಕೋ ಚಿತ್ರ ಕ್ಲಿಕ್ ಆಗಿರೋದಕ್ಕೆ ಉದಾಹರಣೆಗಳಿವೆ.


    ಮುಂಗಾರು ಮಳೆ ಮೊದಲ ವಾರ ಓಡಲೇ ಇಲ್ಲ


    ಹೌದು, ಮುಂಗಾರು ಮಳೆ ಸೂಪರ್ ಹಿಟ್ ಸಿನಿಮಾನೇ ಆಗಿದೆ. ಕನ್ನಡದ ಇತಿಹಾಸ ಬರೆದ ಸಿನಿಮಾಗಳ ಲಿಸ್ಟ್​ ನಲ್ಲಿ ಇದು ಕೂಡ ಇದೆ. ಇದು ಕೂಡ ಕನ್ನಡ ಚಿತ್ರರಂಗದ ಅಭಿರುಚಿಯನ್ನ ಬದಲಿಸಿದ ಚಿತ್ರವೂ ಆಗಿದೆ.


    Kannada Film Kamblihula Now got Recognized after one week
    ಕವಿರಾಜ್ ಕಂಡ ಕಂಬ್ಳಿಹುಳ ಸಿನಿಮಾ


    ಆದರೆ ಈ ಸಿನಿಮಾ ಮೊದಲನೇ ವಾರ ಓಡಲಿಲ್ಲ. ಇನ್ನೇನೂ ಸಿನಿಮಾವನ್ನ ಥಿಯೇಟರ್​ನಿಂದ ತೆಗೆದು ಹಾಕಬೇಕು ಅನ್ನೋ ಹೊತ್ತಿಗೆ ಸಿನಿಮಾ ಶೃತಿ ಹಿಡಿಯಿತು. ಅದರಂತೆ ಕನ್ನಡದ ರಂಗಿತರಂಗ ಕೂಡ ಲೇಟ್ ಆಗಿಯೇ ಜನಕ್ಕೆ ಗೊತ್ತಾಯಿತು. ಲೇಟ್ ಆಗಿಯೇ ಜನ ಥಿಯೇಟರ್​​ಗೆ ಬಂದ್ರು.


    ಕಂಬ್ಳಿಹುಳ ಕೂಡ ಮತ್ತೊಂದು ಮುಂಗಾರು ಮಳೆ ಆಗುತ್ತಾ?


    ಕಂಪ್ಲೀಟ್ ಹೊಸಬರ ಸಿನಿಮಾ ಕಂಬ್ಳಿಹುಳ. ಈ ಚಿತ್ರ ಕೂಡ ಒಳ್ಳೆ ಕಂಟೆಂಟ್ ಹೊಂದಿದೆ. ಹೊಸಬರು ಸಿನಿಮಾವನ್ನ ಚೆನ್ನಾಗಿಯೇ ತೆಗೆದಿದ್ದಾರೆ. ಇವರ ಈ ಸಿನಿಮಾ ಕಳೆದ ವಾರ ನವೆಂಬರ್-04 ರಂದು ರಿಲೀಸ್ ಆಗಿದೆ.


    Pramod Maravanthe: ಕಾಂತಾರ ಸಿಂಗಾರ ಸಿರಿಯೇ ಲಿರಿಕ್​ ರೈಟರ್ ಬರೆದರು ಮತ್ತೊಂದು ಹಾಡು; ಇದು ಕೂಡ ಸಖತ್


    ಕಾಂತಾರ ಚಿತ್ರದ ಅಬ್ಬರ ಇತರ ಸಿನಿಮಾಗಳ ರಿಲೀಸ್ ಕೂಡ ಇತ್ತು. ಇವುಗಳ ಮಧ್ಯೆ ಕಂಬ್ಳಿಹುಳ ಚಿತ್ರದತ್ತ ಯಾರ ಚಿತ್ತವೂ ಹೊರಳಲೇ ಇಲ್ಲ. ಆದರೆ ಈಗ ಕನ್ನಡದಲ್ಲಿ ಕಂಬ್ಳಿಹುಳ ಸಿನಿಮಾ ನಿಧಾನಕ್ಕೆ ಜನರನ್ನ ಸೆಳೆಯುತ್ತಿದೆ. ಅದಕ್ಕೂ ಮೊದಲು ಸೆಲೆಬ್ರಿಟಿಗಳನ್ನ ಈ ಚಿತ್ರ ಸೆಳೆದು ಬಿಟ್ಟಿದೆ.


    ಕಂಬ್ಳಿಹುಳ ಚಿತ್ರದ ಬಗ್ಗೆ ಸೆಲೆಬ್ರಿಟಿಗಳು ಏನಂದ್ರು?


    ಕಂಬ್ಳಿಹುಳ ಸಿನಿಮಾ ಜನರ ಮನಸನ್ನ ತನ್ನತ್ತ ನಿಧಾನಕ್ಕೆ ಸೆಳೆಯುತ್ತಿದೆ. ಗಾಂಧಿನಗರದಲ್ಲೂ ಇದು ಒಳ್ಳೆ ಸಿನಿಮಾ ಅನ್ನೋ ಟಾಕ್ ಶುರು ಆಗಿದೆ. ಇದರ ಮಧ್ಯೆ ಸೆಲೆಬ್ರಿಟಿಗಳು ಕನ್ನಡದ ಈ ಚಿತ್ರವನ್ನ ನೋಡ್ತಾಯಿದ್ದಾರೆ. ಮನಸಾರೆ ಕೊಂಡಾಡಿದ್ದಾರೆ.


    ಕವಿರಾಜ್ ಕಂಡ ಕಂಬ್ಳಿಹುಳ ಸಿನಿಮಾ
    ಕನ್ನಡದ ಹೆಸರಾಂತ ಲಿರಿಕ್ ರೈಟರ್ ಕವಿರಾಜ್ ಕೂಡ ಕಂಬ್ಳಿಹುಳ ಸಿನಿಮಾ ನೋಡಿದ್ದಾರೆ. ಇದು ಒಳ್ಳೆ ಸಿನಿಮಾ ಆಗಿದೆ. ಇದನ್ನ ಥಿಯೇಟರ್​ಗೆ ಹೋಗಿಯೇ ನೋಡಿ. ಓಟಿಟಿಗೆ ಬರೋದನ್ನ ಕಾಯಬೇಡಿ ಎಂದು ಹೇಳಿದ್ದಾರೆ.


    Kannada Film Kamblihula Now got Recognized after one week
    ನಾಯಕಿ ನಟಿ ಅದಿತಿ ಪ್ರಭುದೇವ ಏನಂದ್ರು?


    ನಾಯಕಿ ನಟಿ ಅದಿತಿ ಪ್ರಭುದೇವ ಏನಂದ್ರು ?


    ಕಂಬ್ಳಿಹುಳ ಸಿನಿಮಾ ಕಂಡ ಅದಿತಿ ಪ್ರಭುದೇವ ಹೊಸ ಪ್ರತಿಭೆಗಳ ಒಂದ್ ಒಳ್ಳೆ ಸಿನಿಮಾ. ನಿಮ್ಮೆಲ್ಲರ ಪ್ರೀತಿಯನ್ನ ಈ ಚಿತ್ರಕ್ಕೆ ನೀಡಿ ಎಂದು ಮನವಿ ಮಾಡಿದ್ದಾರೆ.


    ಉಡಾಳ್ ಬಾಬು ಖ್ಯಾತಿಯ ನಟ ಪ್ರಮೋದ್ ಏನಂತಾರೆ?
    ಒಳ್ಳೆ ಸಿನಿಮಾವನ್ನ ಗೆಲ್ಲಿಸಿ, ಮತ್ತಷ್ಟು ಒಳ್ಳೆ ಸಿನಿಮಾಗಳು ಬರುತ್ತವೆ. ಈ ಚಿತ್ರದ ಬಗ್ಗೆ ಯಾರು ನೆಗೆಟಿವ್ ಹೇಳಿಲ್ಲ. ಥಿಯೇಟರ್​​ಗೆ ಹೋಗಿ ನೋಡಿ ಎಂದು ಪ್ರಮೋದ್ ಹೇಳಿದ್ದಾರೆ.


    ಕಂಬ್ಳಿಹುಳ ಚಿತ್ರದ ಬಗ್ಗೆ ನವೀನ್ ಕೃಷ್ಣ ಏನಂತಾರೆ?
    ಕಂಬ್ಳಿಹುಳ ಶೀರ್ಷಿಕೆಯೇ ವಿರಳ. ಪಾತ್ರಗಳು~ಪಾತ್ರಧಾರಿಗಳು ಸರಳ. ಸ್ನೇಹಪ್ರೀತಿ ಸಂಬಂಧಗಳ ರಸಗವಳ. ನಿರ್ದೇಶಕನ ಜಾಣ್ಮೆ ನಟನಟಿಯರ ಪರಕಾಯ ಪ್ರವೇಶ ಭರ್ಜರಿ ಊಟದ ನಂತರ ತೃಪ್ತಿಯ ತಾಂಬೂಲ. ನೈಜ ಪ್ರತಿಭೆಗಳ ಕಂಬ್ಳಿಹುಳ. ಇಂದೇ ನೋಡಿ. ತಪ್ಪದೇ ನೋಡಿ. ನೀಡಿ ಬೆಂಬಲ ಎಂದು ಪ್ರಾಸಬದ್ಧವಾಗಿಯೇ ನವೀನ್ ಕೃಷ್ಣ ಹೇಳಿಕೊಂಡಿದ್ದಾರೆ.


    ಇದನ್ನೂ ಓದಿ: Divya Uruduga: ದಿವ್ಯಾ ಉರುಡುಗ ಮತ್ತು ಅರವಿಂದ್ ಅವರದ್ದು 'ಅರ್ಧಂಬರ್ಧ ಪ್ರೇಮ ಕಥೆ'ಯಾ?


    ಯೋಗರಾಜ್ ಭಟ್, ಸಿಂಪಲ್ ಸುನಿ, ಜಯತೀರ್ಥ, ಚಾರ್ಲಿ ಡೈರೆಕ್ಟರ್ ಕಿರಣ್ ರಾಜ್ ಎಲ್ಲರೂ ಸಿನಿಮಾ ನೋಡಿದ್ದಾರೆ. ಸಿನಿಮಾ ನೋಡಿ ಅಂತಲೂ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.


    ರಿಷಬ್ ಶೆಟ್ಟಿ, ಡಾಲಿ ಧನಂಜಯ್, ಧನ್ವೀರ್, ರಕ್ಷಿತ್ ಶೆಟ್ಟಿ, ಪ್ರಮೋದ್ ಶೆಟ್ಟಿ ಎಲ್ಲರೂ ಚಿತ್ರಕ್ಕೆ ಸಪೋರ್ಟ್ ಮಾಡಿದ್ದಾರೆ. ಶೀಘ್ರದಲ್ಲಿಯೇ ಚಿತ್ರ ನೋಡೋದಾಗಿಯೂ ತಿಳಿಸಿದ್ದಾರೆ.


    ಉತ್ತರ ಕರ್ನಾಟಕ ಭಾಗದಲ್ಲಿ ಕಂಬ್ಳಿಹುಳ ಇನ್ನು ಬಂದೇ ಇಲ್ಲ !
    ನವ ನಾಯಕ ಅಂಜನ್ ನಾಗೇಂದ್ರ ಹಾಗೂ ಅಶ್ವಿತಾ ಆರ್. ಹೆಗಡೆ ಅಭಿನಯದ ಈ ಇನ್ನು ಉತ್ತರ ಕರ್ನಾಟಕದ ಕಡೆಗೆ ರಿಲೀಸ್ ಆಗಿಯೇ ಇಲ್ಲ. ನವ ನಿರ್ದೇಶಕ ನವನ್ ಶ್ರೀನಿವಾಸ್ ನಿರ್ದೇಶನದ ಈ ಚಿತ್ರ ಲಿಮಿಟೆಡ್ ಆಗಿಯೇ ರಿಲೀಸ್ ಆಗಿದೆ.


    ಮುಂದಿನ ದಿನಗಳಲ್ಲಿ ಉತ್ತರ ಕರ್ನಾಟಕದ ಕಡೆಗೂ ಕಂಬ್ಳಿಹುಳ ಸಿನಿಮಾ ರಿಲೀಸ್ ಆಗೋ ಸಾಧ್ಯತೆನೂ ಇದೆ. ಈಗಾಗಲೇ ಈ ಸಿನಿಮಾದ ಕ್ರೇಜ್ ನಿಧಾನಕ್ಕೆ ಶೃತಿ ಹಿಡಿಯುತ್ತಿದೆ.

    First published: