• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Kannada Movies: ಸ್ಯಾಂಡಲ್​ವುಡ್ ಕಷ್ಟದಲ್ಲಿದ್ದಾಗ ಮರು ಜೀವ ನೀಡಿದ ಸಿನಿಮಾ ಯಾವುದು ಗೊತ್ತಾ?

Kannada Movies: ಸ್ಯಾಂಡಲ್​ವುಡ್ ಕಷ್ಟದಲ್ಲಿದ್ದಾಗ ಮರು ಜೀವ ನೀಡಿದ ಸಿನಿಮಾ ಯಾವುದು ಗೊತ್ತಾ?

ಕನ್ನಡ ಚಿತ್ರರಂಗಕ್ಕೆ ಮರು ಜೀವ ಕೊಟ್ಟ ಸಿನಿಮಾ

ಕನ್ನಡ ಚಿತ್ರರಂಗಕ್ಕೆ ಮರು ಜೀವ ಕೊಟ್ಟ ಸಿನಿಮಾ

1960 ಸಮಯದಲ್ಲಿಯೇ ಆನೆ ಜೊತೆಗೆ ಒಂದು ಫೈಟ್ ಸೀನ್ ಕೂಡ ಕಂಪೋಜ್ ಮಾಡಲಾಗಿತ್ತು. ರಣಧೀರ ಕಂಠೀರವ ಪಾತ್ರ ಮಾಡಿದ್ದ ರಾಜ್‌ಕುಮಾರ್ ಆನೆ ಜೊತೆಗ ಫೈಟ್ ಮಾಡೋ ದೃಶ್ಯ ಈಗಲೂ ಎಲ್ಲರ ಗಮನ ಸೆಳೆಯುತ್ತದೆ. ರಾಜ್‌ ಕುಮಾರ್ ಫ್ಯಾನ್ಸ್ ಟ್ವಿಟರ್ ಪೇಜ್ ಅಲ್ಲಿ ಈಗಲೂ ಈ ದೃಶ್ಯ ಶೇರ್ ಆಗುತ್ತಿದೆ.

  • News18 Kannada
  • 3-MIN READ
  • Last Updated :
  • Bangalore, India
  • Share this:

ಕನ್ನಡ ಸಿನಿಮಾರಂಗದಲ್ಲಿ ಎಲ್ಲವೂ (Ranadheera Kanteerava Movie) ಆಗ ಚೆನ್ನಾಗಿರಲಿಲ್ಲ. ಸಿನಿಮಾ ಮಾಡೋಕೆ ಯಾವ ನಿರ್ಮಾಪಕರೂ ಮುಂದೆ ಬರಲಿಲ್ಲ. ಕಲಾವಿದರು ರಂಗಭೂಮಿಯನ್ನ ನಂಬಿಕೊಂಡಿದ್ದರು. ಒಂದು (First Blockbuster Cinema) ವೇಳೆ ಇದು ಹೀಗೆ ಸಾಗಿದ್ದರೇ, (Cinema Unknown Facts) ಕನ್ನಡ ಇಂಡಸ್ಟ್ರಿ ಆಗಲೇ ಮುಗಿದು ಹೋಗ್ತಾ ಇತ್ತು. ಆದರೆ ಕಲಾದೇವಿಯನ್ನ ನಂಬಿದ ಕಲಾವಿದರು ಅದಕ್ಕೆ ಅವಕಾಶ ಕೊಡಲಿಲ್ಲ. ಬಣ್ಣವನ್ನೆ ನಂಬಿ ಬದುಕಿದ್ದ ಕಲಾವಿದರು ಒಂದು ನಿರ್ಧಾರ ಮಾಡಿದರು. ಆ ನಿರ್ಧಾರ ಫಲವೇ ರಣಧೀರ ಕಂಠೀರವ ಸಿನಿಮಾ ಆಯಿತು. ಈ ಸಿನಿಮಾ ಅಷ್ಟು ಸುಲಭಕ್ಕೆ ನಿರ್ಮಾಣ ಆಗಿಲ್ಲ ಬಿಡಿ. ಆಗ ಈ ಚಿತ್ರ ನಿರ್ಮಿಸಲು ನಾಲ್ಕೈದು ಕಲಾವಿದರು ಜೊತೆಯಾದರು. ಅವರಲ್ಲಿ ಡಾಕ್ಟರ್ ರಾಜ್‌ ಕುಮಾರ್, ನರಸಿಂಹ ರಾಜು, ಬಾಲಕೃಷ್ಣ ಮತ್ತು ಜಿ.ವಿ. ಅಯ್ಯರ್ ಪ್ರಮುಖರಾಗಿದ್ದರು.


ರಣಧೀರ ಕಂಠೀರವ ಚಿತ್ರಕ್ಕೆ ಕಲಾವಿದರೇ ಪ್ರೋಡ್ಯೂಸರ್ಸ್!


ಕನ್ನಡದ ಈ ಕಣ್ಮಣಿಗಳೆಲ್ಲ ಸೇರಿ ಅಂದು ಒಂದು ಸಂಘ ಹುಟ್ಟುಹಾಕಿದ್ದರು. ಆ ಸಂಘಕ್ಕೆ ಕನ್ನಡ ಚಲನಚಿತ್ರ ಕಲಾವಿದರ ಸಂಘ ಅಂತ ಹೆಸರಿಟ್ಟರು. ಆ ಸಂಘದಿಂದಲೇ ರಣಧೀರ ಕಂಠೀರವ ಸಿನಿಮಾ ರೆಡಿ ಆಯಿತು.


Kannada Film Industry First Blockbuster Cinema Unknown Facts Story
ಕನ್ನಡದ ಮೊದಲ Blockbuster ಸಿನಿಮಾ


ಕನ್ನಡದ ಮೊಟ್ಟ ಮೊಲದ ಬ್ಲಾಕ್‌ ಬಸ್ಟರ್ ಸಿನಿಮಾ


ಎಲ್ಲರೂ ತಮ್ಮ ತಮ್ಮ ದುಡ್ಡನ್ನ ಈ ಚಿತ್ರಕ್ಕೆ ಹಾಕಿದ್ದರು. ಅದೇ ದುಡ್ಡಿನಲ್ಲಿಯೇ ರಣಧೀರ ಕಂಠೀರವ ಸಿನಿಮಾ ರೆಡಿ ಆಯಿತು. ಜಿ.ವಿ.ಅಯ್ಯರ್ ಅವರು ಚಿತ್ರಕ್ಕೆ ಕಥೆ-ಚಿತ್ರಕಥೆ ಹೀಗೆ ಎಲ್ಲವನ್ನೂ ಮಾಡಿದರು. ಆದರೆ ನಿರ್ದೇಶನದ ಜವಾಬದ್ದಾರಿಯನ್ನ ಮಾತ್ರ ಎನ್.ಸಿ.ರಾಜನ್‌ ಅವರಿಗೆ ಕೊಟ್ಟಿದ್ರು




ರಣಧೀರ ಕಂಠೀರವ ಅಧಿಕೃತ ಐತಿಹಾಸಿಕ ಸಿನಿಮಾ


ರಣಧೀರ ಕಂಠೀರವ ಸಿನಿಮಾ ಅದ್ಭುತ ಸಿನಿಮಾ ಆಗಿತ್ತು. ಮೈಸೂರು ರಾಜವಂಶದ ಅಸಲಿ ದಾಖಲೆಯನ್ನ ಇಟ್ಟುಕೊಂಡೇ ಕಠೀರವ ನರಸರಾಜ-1 ಅವರನ್ನ ಕಥೆಯನ್ನ ಇಲ್ಲಿ ಮಾಡಲಾಗಿತ್ತು. ಅದಕ್ಕೆ ರಣಧೀರ ಕಂಠೀರವ ಅಂತ ಹೆಸರಿಟ್ಟಿದ್ದರು.




ರಣಧೀರ ಕಂಠೀರವ ಸಿನಿಮಾದಲ್ಲಿ ಕಲಾವಿದರ ದಂಡೇ ಇತ್ತು. ರಾಜ್‌ ಕುಮಾರ್, ಲೀಲಾವತಿ, ಸಂಧ್ಯಾ, ಬಾಲಕೃಷ್ಣ, ನರಸಿಂಹರಾಜು ಇವರೆಲ್ಲ ಇದ್ದರು. ಇವರ ಈ ಚಿತ್ರದಲ್ಲಿ ಬಳಸಿದ್ದ ಆ ಸಾಹಸ ನಿಜಕ್ಕೂ ಈಗಲೂ ಅದ್ಭುತ ಅನಿಸುತ್ತದೆ.


ರಣಧೀರ ಕಂಠೀರವ ಚಿತ್ರದಲ್ಲಿ ಆನೆ ಜೊತೆಗೆ ಫೈಟ್
1960 ಸಮಯದಲ್ಲಿ ಆನೆ ಜೊತೆಗೆ ಒಂದು ಫೈಟ್ ಸೀನ್ ಕೂಡ ಕಂಪೋಜ್ ಮಾಡಲಾಗಿತ್ತು. ರಣಧೀರ ಕಂಠೀರವ ಪಾತ್ರ ಮಾಡಿದ್ದ ರಾಜ್‌ಕುಮಾರ್ ಆನೆ ಜೊತೆಗ ಫೈಟ್ ಮಾಡೋ ದೃಶ್ಯ ಈಗಲೂ ಎಲ್ಲರ ಗಮನ ಸೆಳೆಯುತ್ತದೆ. ರಾಜ್‌ ಕುಮಾರ್ ಫ್ಯಾನ್ಸ್ ಟ್ವಿಟರ್ ಪೇಜ್ ಅಲ್ಲಿ ಈಗಲೂ ಈ ದೃಶ್ಯ ಶೇರ್ ಆಗುತ್ತಿದೆ.


ಮೈಸೂರು ರಾಜವಂಶದ ವೀರತ್ವದ ಕಥೆ ಹೇಳಿದ್ದ ಈ ಚಿತ್ರ ರೆಡಿ ಏನೋ ಆಯಿತು. ಆದರೆ ಯಾರಂದ್ರೆ ಯಾರೂ ಈ ಚಿತ್ರದ ವಿತರಣೆಗೆ ಅಂದು ಬರಲೇ ಇಲ್ಲ. ಆದರೆ ಹಾಗೋ ಹೀಗೆ ಈ ಚಿತ್ರ ಬೆಂಗಳೂರಿನ ಭಾರತ್ ಥಿಯೇಟರ್‌ನಲ್ಲಿ ಫೆಬ್ರವರಿ-10,1960 ರಲ್ಲಿ ರಿಲೀಸ್ ಆಯಿತು.


ಕನ್ನಡದ ಮೊದಲ Blockbuster ಸಿನಿಮಾ


ರಣಧೀರ ಕಂಠೀರವ ಸಿನಿಮಾ ರಿಲೀಸ್ ಆದ್ಮೇಲೆ ಚಿತ್ರದ ಬಗ್ಗೆ ಟಾಕ್ ಶುರು ಆಯಿತು. ಅತ್ಯದ್ಭುತ ಸಿನಿಮಾ ಅನ್ನುವ ಸತ್ಯ ತಿಳಿದ ಜನ ಈ ಚಿತ್ರವನ್ನ ಗೆಲ್ಲಿಸಿಯೇ ಬಿಟ್ಟರು. ಕಲಾವಿದರೇ ನಿರ್ಮಿಸಿದ್ದ ಈ ಚಿತ್ರದ ಮೂಲಕ ರಾಜ್‌ ಕೂಡ ನಿರ್ಮಾಪಕರಾಗಿದ್ದರು.


Kannada Film Industry First Blockbuster Cinema Unknown Facts Story
ರಣಧೀರ ಕಂಠೀರವ ಚಿತ್ರದಲ್ಲಿ ಆನೆ ಜೊತೆಗೆ ಫೈಟ್


ಅತಿ ಹೆಚ್ಚು ಕಲೆಕ್ಷನ್ ಮಾಡಿರೋ ಕನ್ನಡದ ಸಿನಿಮಾ ಎಂಬ ಹೆಗ್ಗಳಿಕೆಗೂ ಈ ಚಿತ್ರ ಪಾತ್ರವಾಯಿತು. ಕನ್ನಡದ ಮೊಟ್ಟ ಮೊದಲ blockbuster ಸಿನಿಮಾ ಅಂತಲೂ ಕರೆಸಿಕೊಂಡಿತ್ತು.


ಕನ್ನಡ ಚಿತ್ರರಂಗಕ್ಕೆ ಮರು ಜೀವ ಕೊಟ್ಟ ಸಿನಿಮಾ


ನರಸರಾಜ ಒಡೆಯರ್ ಕಥೆ ಹೇಳಿದ್ದ ಈ ಚಿತ್ರ ಅಧಿಕೃತ ಐತಿಹಾಸಿಕ ಸಿನಿಮಾ ಅಂತಲೂ ಕರೆಸಿಕೊಂಡಿತ್ತು. ಜಿ.ವಿ.ಅಯ್ಯರ್ ಈ ರೀತಿ ಸಿನಿಮಾದ ಸ್ಕ್ರಿಪ್ಟ್ ಮಾಡೋವಲ್ಲಿ ತುಂಬಾನೇ ನುರಿತಿದ್ದರು.


ಇದನ್ನೂ ಓದಿ: Bhagya Lakshmi: ಶ್ರೇಷ್ಠಾ ಮನೆಯಲ್ಲಿ ಭಾಗ್ಯ, ಒಲ್ಲದ ಮದುವೆ ಬಗ್ಗೆ ವಿವರಣೆ!


ಇವರ ಈ ಒಂದು ಸ್ಕ್ರಿಪ್ಟ್‌ನ ಸಿನಿಮಾ ಅಂದು ಕನ್ನಡ ಸಿನಿಮಾರಂಗಕ್ಕೆ ಮರುಜೀವನ ನೀಡಿತ್ತು. ಇತಿಹಾಸ ಪುಟದಲ್ಲಿ ಹೊಸ ದಾಖಲೆಯನ್ನೆ ಬರೆದು ಈಗಲೂ ತನ್ನ ಸೆಳೆತವನ್ನ ಉಳಿಸಿಕೊಂಡಿದೆ.

top videos
    First published: