• Home
  • »
  • News
  • »
  • entertainment
  • »
  • Kantara: ಕಾಂತಾರ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಕಿಡ್ನಾಪ್!

Kantara: ಕಾಂತಾರ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಕಿಡ್ನಾಪ್!

ಅಜನೀಶ್ ಕಿಡ್ನಾಪ್ ಆದ ಫೋಟೋ ಸಿಕ್ಕಾಪಟ್ಟೆ ವೈರಲ್

ಅಜನೀಶ್ ಕಿಡ್ನಾಪ್ ಆದ ಫೋಟೋ ಸಿಕ್ಕಾಪಟ್ಟೆ ವೈರಲ್

ಕನ್ನಡದಲ್ಲಿ "ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ" ಸಿನಿಮಾ ಬರುತ್ತಿದೆ.ಈ ಸಿನಿಮಾದ ಪ್ರಚಾರ ಕೂಡ ಅಷ್ಟೇ ಭರ್ಜರಿಯಾಗಿ ಆಗಿದೆ. ಇತ್ತೀಚಿಗೆ ಸ್ಯಾಂಡಲ್​​ವುಡ್​ ಕ್ವೀನ್ ರಮ್ಯಾ ಕೂಡ ಈ ಚಿತ್ರಕ್ಕೆ ಸಪೋರ್ಟ್ ಮಾಡಿದ್ದರು. ಚಿತ್ರದ ಪ್ರಮೋಷ್ನಲ್ ವೀಡಿಯೋದಲ್ಲೂ ಕಾಣಿಸಿಕೊಂಡಿದ್ದರು.

  • News18 Kannada
  • Last Updated :
  • Bangalore [Bangalore], India
  • Share this:

ಕನ್ನಡದ ಕಾಂತಾರ ಸಿನಿಮಾ (Kantara Craze) ಕ್ರೇಜ್ ಇನ್ನೂ ಇದೆ. ಈ ಚಿತ್ರದ ಸಂಗೀತಕ್ಕೂ ಅದರದ್ದೇ ಫ್ಯಾನ್ (Fan Following) ಫಾಲೋಯಿಂಗ್ ಇದೆ. ಯಾರನ್ನೇ ಕೇಳಿದ್ರೂ ಅಷ್ಟೆ, ಸಿನಿಮಾದ ಹಾಡನ್ನ ಈಗಲೂ ಗುನುಗುತ್ತಿದ್ದಾರೆ. ಹೀಗಿರೋವಾಗ ಕನ್ನಡದ (Kannada Kantara) ಕಾಂತಾರ ಚಿತ್ರದ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್​ ಅವರಿಗೂ ಭಾರೀ ಬೇಡಿಕೆ ಬಂದಿದೆ. ಎಲ್ಲರೂ ಇವರಿಂದ ತಮ್ಮ ತಮ್ಮ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿಸಲು ರೆಡಿ ಆಗಿದ್ದಾರೆ. ಇದರಿಂದ ಭಾರೀ ಬ್ಯುಸಿ ಇರೋ ಅಜನೀಶ್ ಲೋಕನಾಥ್ ಈಗ ಕಿಡ್ನಾಪ್ ಆಗಿ ಬಿಟ್ಟಿದ್ದಾರೆ. ಇವರು (Kidnapped) ಕಿಡ್ನಾಪ್ ಆಗಿರೋದು ನಿಜವೇ? ಅಂದ್ಹಾಗೆ ಇವರನ್ನ ಕಿಡ್ನಾಪ್ ಮಾಡಿದ್ದು ಯಾರು? ಇದನ್ನೆಲ್ಲ ತಿಳಿಯೋಕೆ ಇಲ್ಲಿದೆ ನೋಡಿ ಕೆಲವು ಮಾಹಿತಿ.


ಕಾಂತಾರ ಅಜನೀಶ್ ಲೋಕನಾಥ್ ಕಿಡ್ನಾಪ್
ಹೌದು, ಇಡೀ ಕನ್ನಡ ಇಂಡಸ್ಟ್ರೀಯಲ್ಲಿ ಈಗ ಇದೇ ಮಾತು. ಕಾಂತಾರ ಸಿನಿಮಾದ ಮ್ಯೂಸಿಕ್ ಡೈರೆಕ್ಟರ್ ಅಜನೀಶ್ ಲೋಕನಾಥ್ ಕಿಡ್ನಾಪ್ ಆಗಿದ್ದಾರೆ. ಇದು ನಿಜವೇ? ನಿಜ ಆಗಿದ್ದರೇ, ಯಾರು ಮಾಡಿಸಿರೋದು? ಏನ್ ಇದರ ಹಿಂದಿನ ರಹಸ್ಯ? ಈ ಎಲ್ಲ ಪ್ರಶ್ನೆಗಳು ಸದ್ಯ ಹುಟ್ಟಿಕೊಂಡಿವೆ.


Kannada Film Hostel Hudugaru Bekagiddare Creating Buzz
ಚಿತ್ರದ ಪ್ರಚಾರಕ್ಕೆ ಕಿಡ್ನಾಪ್ ಆದ ಅಜನೀಶ್ ಲೋಕನಾಥ್


ಅಜನೀಶ್ ಲೋಕನಾಥ್ ಅವರನ್ನ ಕಿಡ್ನಾಪ್ ಮಾಡಿರೋದು ಹೊರಗಿನವರು ಅಲ್ವೇ ಅಲ್ಲ. ಕನ್ನಡ ಇಂಡಸ್ಟ್ರೀಯವರೇ ಈ ಕೆಲಸ ಮಾಡಿದ್ದಾರೆ. ಒಂದಲ್ಲ ಎರಡಲ್ಲ ಇಡೀ ಯುವಕರ ಗುಂಪೊಂದು ಈ ಕೆಲಸ ಮಾಡಿದೆ. ಇದರಿಂದ ಈಗ ಎಲ್ಲೆಡೆ ಸಂಚಲನ ಮೂಡಿದೆ.


ಅಜನೀಶ್ ಕಿಡ್ನಾಪ್ ಆದ ಫೋಟೋ ಸಿಕ್ಕಾಪಟ್ಟೆ ವೈರಲ್
ಅಜನೀಶ್ ಲೋಕನಾಥ್ ಕಿಡ್ನಾಪ್ ಆಗಿರೋದು ನಿಜ, ಕಿಡ್ನಾಪ್ ಮಾಡಿದೋರು ಯಾರು ಅನ್ನೋದು ತಿಳಿದಿದೆ. ಕಾರಣ, ಅಜನೀಶ್ ಪೋಟೋವನ್ನ ಅವರೇ ಈಗ ಮೀಡಿಯಾಗೆ ಕೊಟ್ಟಿದ್ದಾರೆ. ಆ ಫೋಟೋನೇ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.




ನಿಜ, ಈ ಕಿಡ್ನಾಪರ್ಸ್ ಬೇರೆ ಯಾರೋ ಅಲ್ಲ. ಕನ್ನಡ ಇಂಡಸ್ಟ್ರೀಯ ಹಾಸ್ಟೆಲ್ ಹುಡುಗರು, ಇತ್ತೀಚಿಗೆ ಸ್ಯಾಂಡಲ್​ವುಡ್ ಕ್ವೀನ್ ರಮ್ಯಾ ಅವರ ಮನೆ ಮುಂದೆ ಪ್ರೋಟೆಸ್ಟ್ ಮಾಡಿದ ಅದೇ ಹುಡುಗರೇ ಅಜನೀಶ್ ಲೋಕನಾಥ್ ಕಿಡ್ನಾಪ್ ಮಾಡಿದ್ದಾರೆ.


ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ-ಹೊಸ ಥರ ಪ್ರಮೋಷನ್!
ಕನ್ನಡದಲ್ಲಿ "ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ" ಸಿನಿಮಾ ಬರುತ್ತಿದೆ.ಈ ಸಿನಿಮಾದ ಪ್ರಚಾರ ಕೂಡ ಅಷ್ಟೇ ಭರ್ಜರಿಯಾಗಿ ಆಗಿದೆ. ಇತ್ತೀಚಿಗೆ ಸ್ಯಾಂಡಲ್​​ವುಡ್​ ಕ್ವೀನ್ ರಮ್ಯಾ ಕೂಡ ಈ ಚಿತ್ರಕ್ಕೆ ಸಪೋರ್ಟ್ ಮಾಡಿದ್ದರು. ಚಿತ್ರದ ಪ್ರಮೋಷ್ನಲ್ ವೀಡಿಯೋದಲ್ಲೂ ಕಾಣಿಸಿಕೊಂಡಿದ್ದರು.


Kannada Film Hostel Hudugaru Bekagiddare Creating Buzz
ಅಜನೀಶ್ ಲೋಕನಾಥ್ ಕಿಡ್ನಾಪ್-ಏನ್ ಇದು? ನಿಜವೇ?


ಚಿತ್ರದ ಪ್ರಚಾರಕ್ಕೆ ಕಿಡ್ನಾಪ್ ಆದ ಅಜನೀಶ್ ಲೋಕನಾಥ್
ಅದೇ ರೀತಿನೇ ಈಗ ಅಜನೀಶ್ ಲೋಕನಾಥ್ ಕೂಡ ಈ ಚಿತ್ರಕ್ಕೆ ಸಪೋರ್ಟ್ ಮಾಡಿದ್ದಾರೆ. ಸಿನಿಮಾ ತಂಡದ ಪ್ರಮೋಷ್ನಲ್ ಕಿಡ್ನಾಪ್ ಪ್ಲಾನಿಂಗ್ ನಲ್ಲಿ ಭಾಗಿ ಆಗಿದ್ದಾರೆ. ಪ್ರಮೋಷನ್​​ಗಾಗಿಯೇ ಮಾಡಿರೋ ಕಿಡ್ನಾಪ್ ತೇಟ್ ರಿಯಲ್ ಆಗಿಯೇ ಇದೆ.


"ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ" ಸಿನಿಮಾ ಪ್ರಚಾರ ಜೋರಾಗಿಯೇ ಇದೆ. ಅದಕ್ಕೂ ಹೆಚ್ಚಾಗಿ ಈ ಸಿನಿಮಾವನ್ನ ಚಿತ್ರ ತಂಡದವರು ಭಾರೀ ವಿಶೇಷವಾಗಿ ಕ್ರಿಯೇಟಿವ್ ಆಗಿಯೇ ಪ್ರಚಾರ ಮಾಡುತ್ತಿದ್ದಾರೆ.


ಇದನ್ನೂ ಓದಿ: Weekend Planner: ರೈಡರ್ ವರ್ಸಸ್ ರೇಮೊ, ಸಿನಿಪ್ರಿಯರಿಗೆ ಈ ವಾರ ಡಬಲ್ ರಸದೌತಣ!


ನಿತಿನ್ ಕೃಷ್ಣಮೂರ್ತಿ ನಿರ್ದೆಶನದ ಈ ಚಿತ್ರವನ್ನ ಗುಲ್ಮೋರ್ ಫಿಲ್ಮ್ಸ್​ ಮತ್ತು ವರುಣ್ ಸ್ಟುಡಿಯೋಸ್ ನಿರ್ಮಾಣ ಮಾಡುತ್ತಿದೆ. ರಮ್ಯಾ, ರಕ್ಷಿತ್, ಶೈನ್ ಶೆಟ್ಟಿ, ಪವನ್ ಕುಮಾರ್ ಕ್ಯಾಮಿಯೋ ರೋಲ್ ಮಾಡಿದ್ದಾರೆ.


ಅಜನೀಶ್ ಲೋಕನಾಥ್ ಈ ಚಿತ್ರಕ್ಕೂ ಸಂಗೀತ ಕೊಟ್ಟಿದ್ದಾರೆ. ಇನ್ನೇನೂ ಸಿನಿಮಾ ತಂಡ ರಿಲೀಸ್ ಡೇಟ್ ಕೂಡ ಅನೌನ್ಸ್ ಮಾಡಲಿದೆ.

First published: