• Home
  • »
  • News
  • »
  • entertainment
  • »
  • Head Bush Censor Board Review: ಹೆಡ್ ಬುಷ್ ಚಿತ್ರ ರಿಲೀಸ್ ಮುಂಚೇನೆ ರಿವ್ಯೂ,ಸಾಗರೋತ್ತರ ಸೆನ್ಸಾರ್ ಮಂಡಳಿ ಸದಸ್ಯ ಕೊಟ್ಟ ಸಖತ್ ರಿಪೋರ್ಟ್ !

Head Bush Censor Board Review: ಹೆಡ್ ಬುಷ್ ಚಿತ್ರ ರಿಲೀಸ್ ಮುಂಚೇನೆ ರಿವ್ಯೂ,ಸಾಗರೋತ್ತರ ಸೆನ್ಸಾರ್ ಮಂಡಳಿ ಸದಸ್ಯ ಕೊಟ್ಟ ಸಖತ್ ರಿಪೋರ್ಟ್ !

ಸಾಗರೋತ್ತರ ಸೆನ್ಸಾರ್ ಮಂಡಳಿ ಸದಸ್ಯ ಕೊಟ್ಟ ಸಖತ್ ರಿಪೋರ್ಟ್ !

ಸಾಗರೋತ್ತರ ಸೆನ್ಸಾರ್ ಮಂಡಳಿ ಸದಸ್ಯ ಕೊಟ್ಟ ಸಖತ್ ರಿಪೋರ್ಟ್ !

"ಹೆಡ್ ಬುಷ್ ಸಿನಿಮಾ ಒಂದು ಪೈಸಾ ವಸೂಲ್ ಡೈರೆಕ್ಷನ್ ಇರೋ ಸಿನಿಮಾ. ಈ ಚಿತ್ರ ಅದ್ಭುತವಾಗಿಯೇ ಬಂದಿದೆ. ಅತ್ಯದ್ಭುತ ಥ್ರಿಲ್ಲಿಂಗ್ ಸಿನಿಮಾ ಕೂಡ ಇದಾಗಿದೆ. ನಟ ಧನಂಜಯ್ ಅಭಿನಯದ ಎಲ್ಲರ ಹೃದಯ ಕದಿಯೋವಂತೇನೆ ಇದೆ. ಹಿಡಿದು ಕೂಡಿಸುವ ಕಥೆ ಇದಾಗಿದೆ. ಹಿನ್ನೆಲೆ ಸಂಗೀತ ಕೂಡ ರಾಕಿಂಗ್ ಆಗಿದೆ" -ಉಮೈರ್ ಸಂಧು

ಮುಂದೆ ಓದಿ ...
  • News18 Kannada
  • Last Updated :
  • Bangalore [Bangalore], India
  • Share this:

ಕನ್ನಡದ ಹೆಡ್ ಬುಷ್ (Head Bush) ಸಿನಿಮಾ ರಿಲೀಸ್​​ಗೆ ಕ್ಷಣಗಣನೆ ಶುರು ಆಗಿದೆ. ಮೊದಲೇ ಪ್ಲಾನ್ (Plan) ಆದಂತೆ ಇದೇ ತಿಂಗಳು ಅಕ್ಟೋಬರ್​-21 ರಂದು ಸಿನಿಮಾ ರಾಜ್ಯಾದ್ಯಂತ (Cinema Release) ರಿಲೀಸ್ ಆಗುತ್ತಿದೆ. ಸಿನಿಮಾ ರಿಲೀಸ್ ಮುಂಚೇನೆ ಪೇಡ್ (Paid Premier) ಪ್ರಿಮಿಯರ್ ಶೋ ಕೂಡ ಪ್ಲಾನ್ ಆಗಿವೆ. ಅದಕ್ಕೂ ಮೊದಲೇ ಹೆಡ್ ಬುಷ್ ಚಿತ್ರದ ಬಗ್ಗೆ ಒಳ್ಳೆ ಅಭಿಪ್ರಾಯ ಬರ್ತಿದೆ. ಸಾಗರೋತ್ತರ (Overseas Censor Board Member) ಸೆನ್ಸಾರ್ ಮಂಡಳಿಯ ಸದಸ್ಯ ಹಾಗೂ ಸಿನಿಮಾ ಕ್ರಿಟಿಕ್ ಉಮೈರ್ ಸಂಧು ಈಗಾಗಲೇ ಈ ಸಿನಿಮಾ ನೋಡಿದ್ದಾರೆ. ಚಿತ್ರದ ಬಗ್ಗೆ ಅದ್ಭುತವಾಗಿಯೇ ರಿವ್ಯೂ ಕೂಡ ಮಾಡಿದ್ದಾರೆ. ಸಿನಿಮಾದ ಎಲ್ಲ ವಿಭಾಗವನ್ನೂ ಕೊಂಡಾಡಿದ್ದಾರೆ. ಸಿನಿಮಾದಲ್ಲಿ ಏನಿದೆ ? ಇರೋದೆಲ್ಲ ಹೇಗಿದೆ? ಎಲ್ಲವನ್ನೂ ಈಗಲೇ ಹೇಳಿಕೊಂಡು ಕನ್ನಡ ಸಿನಿಪ್ರೇಮಿಗಳಲ್ಲಿ ಕುತೂಹಲವನ್ನೂ ಹುಟ್ಟುಹಾಕಿದ್ದಾರೆ.


ಹೆಡ್ ಬುಷ್ ಸಿನಿಮಾ ಹೇಗಿದೆ ? ಹೊರ ಬಿತ್ತು ಸೆನ್ಸಾರ್ ರಿಪೋರ್ಟ್
ಹೆಡ್ ಬುಷ್ ಸಿನಿಮಾದ ಬಗ್ಗೆ ಒಂದು ನಿರೀಕ್ಷೆ ಇದೆ. ಬೆಂಗಳೂರು ಡಾನ್ ಜಯರಾಜ್ ಅಸಲಿ ಕಥೆಯನ್ನೆ ಇದು ಹೇಳುತ್ತಿದೆ. ಅಗ್ನಿಶ್ರೀಧರ್ ಬರೆದ ದಾದಾಗಿರಿ ದಿನಗಳ ಪುಸ್ತಕದ ಅಸಲಿ ವಿಷಯವನ್ನ ಈ ಸಿನಿಮಾ ಆಧರಿಸಿದೆ. ವಿಶೇಷವಾಗಿ ಸಿನಿಮಾಗೆ ಇವರೇ ಸ್ಕ್ರಿಪ್ಟ್ ಮಾಡಿದ್ದಾರೆ.


ಹೆಡ್ ಬುಷ್ ಸಿನಿಮಾದಲ್ಲಿ ಡಾನ್ ಜಯರಾಜ್ ಅಸಲಿ ಕಥೆ
ಶೂನ್ಯ ಅನ್ನೋ ಹೊಸ ಹುಡುಗ ಈ ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ. ಅಸಲಿ ಕಥೆಗೆ ಸಿನಿಮ್ಯಾಟಿಕ್ ಟಚ್ ಕೂಡ ಬಂದಿದೆ. ಅಗ್ನಿಶ್ರೀಧರ್ ತಮ್ಮ ಈ ಕಥೆ ಚೆನ್ನಾಗಿ ಬಂದಿದೆ ಅಂತೂ ಹೇಳಿದ್ದಾರೆ. ಅದರಲ್ಲೂ ಲೂಸ್ ಮಾದ ಯೋಗಿ ನಿರ್ವಹಿಸಿದ ಗಂಗಾ ಪಾತ್ರದ ಬಗ್ಗೆನೂ ಅಗ್ನಿಶ್ರೀಧರ್ ಮೆಚ್ಚುಗೆಯ ಮಾತು ಆಡಿದ್ದಾರೆ.


Kannada Film Head Bush Film Overseas Censor Board Member Umair Sandhu First Review
ಹೆಡ್ ಬುಷ್ ಸಿನಿಮಾ ಹೇಗಿದೆ ? ಹೊರ ಬಿತ್ತು ಸೆನ್ಸಾರ್ ರಿಪೋರ್ಟ್


ಡಾಲಿ ಧನಂಜಯ್ ಈ ಚಿತ್ರದಲ್ಲಿ ಡಾನ್ ಜಯರಾಜ್ ಪಾತ್ರ ನಿರ್ವಹಿಸಿದ್ದಾರೆ. ಈಗಾಗಲೇ ಈ ಚಿತ್ರದ ದೇವರಾಜ್ ಪಾತ್ರ, ಶೃತಿ ಹರಿಹರನ್ ಪಾತ್ರ, ರಘು ಮುಖರ್ಜಿ ಪಾತ್ರದ ಪರಿಚಯ ಟ್ರೈಲರ್ ನಲ್ಲಿ ಆಗಿದೆ.


ಇದನ್ನೂ ಓದಿ: Lakshana: ಕತ್ತಲೆ ಕೋಣೆಯಲ್ಲಿದೆ ದುರದೃಷ್ಟದ ಗುಟ್ಟು!


ಚಿತ್ರ ನೋಡಿ ಸಾಗರೋತ್ತರ ಸೆನ್ಸಾರ್ ಮಂಡಳಿ ಸದಸ್ಯ  ಹೇಳಿದ್ದೇನು?


ಈಗಾಗಲೇ ಪ್ಲಾನ ಆದಂತೆ ಇದೇ ತಿಂಗಳ 21 ರಂದು ಅಂದ್ರೆ ಶುಕ್ರವಾರ ಸಿನಿಮಾ ರಿಲೀಸ್ ಆಗುತ್ತಿದೆ. ಅದಕ್ಕೂ ಮೊದಲೇ ಸಿನಿಮಾ ಕ್ರಿಟಿಕ್ ಹಾಗೂ ಸಾಗರೋತ್ತರ ಸೆನ್ಸಾರ್ ಮಂಡಳಿಯ ಸದಸ್ಯ ಉಮೈರ್ ಸಂಧು ಈ ಚಿತ್ರವನ್ನ ನೋಡಿದ್ದಾರೆ. ನೋಡಿದ ಬಳಿಕ ತಮ್ಮದೇ ಅಭಿಪ್ರಾಯವನ್ನ ಹಂಚಿಕೊಂಡಿದ್ದಾರೆ.


ಹೆಡ್ ಬುಷ್ ಉಮೈರ್ ಸಂಧು ರಿವ್ಯೂ ಹೀಗಿದೆ ಓದಿ


"ಹೆಡ್ ಬುಷ್ ಸಿನಿಮಾ ಒಂದು ಪೈಸಾ ವಸೂಲ್ ಡೈರೆಕ್ಷನ್ ಇರೋ ಸಿನಿಮಾ. ಈ ಚಿತ್ರ ಅದ್ಭುತವಾಗಿಯೇ ಬಂದಿದೆ. ಅತ್ಯದ್ಭುತ ಥ್ರಿಲ್ಲಿಂಗ್ ಸಿನಿಮಾ ಕೂಡ ಇದಾಗಿದೆ. ನಟ ಧನಂಜಯ್ ಅಭಿನಯದ ಎಲ್ಲರ ಹೃದಯ ಕದಿಯೋವಂತೇನೆ ಇದೆ. ಹಿಡಿದು ಕೂಡಿಸುವ ಕಥೆ ಇದಾಗಿದೆ. ಹಿನ್ನೆಲೆ ಸಂಗೀತ ಕೂಡ ರಾಕಿಂಗ್​ ಆಗಿದೆ"


ಉಮೈರ್ ಸಂಧು ಕನ್ನಡದ ಹೆಡ್ ಬುಷ್ ಚಿತ್ರವನ್ನ ಕೊಂಡಾಡಿದ್ದಾರೆ. ತಮ್ಮ ರಿವ್ಯೂ ಸೆನ್ಸಾರ್ ಬೋರ್ಡ್​ನಿಂದ ಬಂದ ಮೊದಲ ರಿವ್ಯೂ ಅಂತಲೂ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲೂ ಬರೆದುಕೊಂಡಿದ್ದಾರೆ.


Kannada Film Head Bush Film Overseas Censor Board Member Umair Sandhu First Review
ಹೆಡ್ ಬುಷ್ -21 ರಂದು ವಿದೇಶದಲ್ಲೂ ರಿಲೀಸ್


ಇನ್ನು ಬೆಂಗಳೂರು ಭೂಗತ ಜಗತ್ತಿನ ಅಸಲಿ ಕಥೆ ಇದಾಗಿದ್ದು, ಒಂದು ಕುತೂಹಲವೂ ಇದೆ. ಅಷ್ಟೇ ಅದ್ಭುತವಾಗಿ ಮತ್ತು ಥ್ರಿಲ್ಲಿಂಗ್ ಆಗಿಯೇ ಕಥೆ ಇರುತ್ತದೆ ಅನ್ನೋ ನಂಬಿಕೆ ಕೂಡ ಈಗಲೇ ಹುಟ್ಟುಕೊಂಡಿದೆ. ಈಗಾಗಲೇ ಸಿನಿಮಾ ಪೇಡ್ ಪ್ರಿಮಿಯರ್ ಓಪನ್ ಆಗಿದೆ.


ಅಕ್ಟೋಬರ್-20 ಇಂದು ಸಂಜೆಯಿಂದಲೇ ಪೇಡ್ ಪ್ರಿಮಿಯರ್ ಶೋ
ಬೆಂಗಳೂರು, ಮೈಸೂರು, ದಾವಣಗೆರೆ, ಶಿವಮೊಗ್ಗ,ಹೀಗೆ ರಾಜ್ಯದ ಪ್ರಮುಖ ನಗರದಲ್ಲಿ ಪೇಡ್ ಪ್ರಿಮಿಯರ್ ಶೋ ಪ್ಲಾನ್ ಆಗಿದೆ. ಸಿನಿಮಾ ಪ್ರೇಮಿಗಳಿಗೆ ಒಂದು ದಿನ ಮುಂಚೇನೆ ಪ್ರಿಮಿಯರ್ ಶೋ ಆಯೋಜನೆ ಆಗಿದೆ. ಆದರೆ ಇದು ಪೇಡ್ ಅನ್ನೋದು ಕೂಡ ಅಷ್ಟೇ ಸತ್ಯ.


ಇದನ್ನೂ ಓದಿ: No Problem, Shubra Come Back: ಟಾಲ್ ಹುಡುಗಿ-ವಜ್ರಕಾಯದ ಬೆಡಗಿ-ಮತ್ತೆ ಬಂದ್ರು "ನೋ ಪ್ರಾಬ್ಲಂ" ಶುಭ್ರಾ ಅಯ್ಯಪ್ಪ


ನಾಳೆ ಬೆಳಗ್ಗೆ ರಾಜ್ಯದಲ್ಲೆಡೆ ಸಿನಿಮಾ ರಿಲೀಸ್ ಆಗುತ್ತಿದೆ. ಆದರೆ, ಅದಕ್ಕೂ ಮೊದಲೇ ಇಂದು ಸಂಜೆ ಪೇಡ್ 6.30 ರಿಂದಲೇ ಪೇಡ್ ಪ್ರಿಮಿಯರ್ ಶೋದಲ್ಲಿ ಹೆಡ್ ಬುಷ್ ಸಿನಿಮಾ ಪ್ರದರ್ಶನ ಆಗುತ್ತಿದೆ.


ಹೆಡ್ ಬುಷ್ -21 ರಂದು ವಿದೇಶದಲ್ಲೂ ರಿಲೀಸ್
ಇನ್ನು ಅಕ್ಟೋಬರ್-21 ರಂದು ಹೆಡ್ ಬುಷ್ ವಿದೇಶದಲ್ಲೂ ಇದೇ ದಿನೇ ರಿಲೀಸ್ ಆಗುತ್ತಿದೆ. ಆ ಹಿನ್ನೆಲೆಯಲ್ಲಿಯೇ ಸಿನಿಮಾ ಟೀಮ್ ಹೆಡ್ ಬುಷ್ ಸಾಗರೋತ್ತರ ಸೆನ್ನಾರ್​​ಗೂ ಕಳಿಸಿತ್ತು.


ಆಗಲೇ ಸಾಗರೋತ್ತರ ಸೆನ್ಸಾರ್ ಬೋರ್ಡ್ ಸದಸ್ಯ ಉಮೈರ್ ಸಂಧು ಕನ್ನಡದ ಹೆಡ್ ಬುಷ್ ಸಿನಿಮಾ ನೋಡಿದ್ದಾರೆ. ಈಗ ಅದರ ರಿವ್ಯೂ ಕೂಡ ಮಾಡಿ ಮತ್ತಷ್ಟು ಕುತೂಹಲ ಕೆರಳಿಸಿದ್ದಾರೆ.

First published: