• Home
  • »
  • News
  • »
  • entertainment
  • »
  • Gaalipata-2 New Record: ಒಟಿಟಿಯಲ್ಲಿ ಗಾಳಿಪಟ-2 ಸಖತ್ ಹಾರಾಟ,10 ಕೋಟಿ ಸ್ಟ್ರೀಮಿಂಗ್ ಮಿನಿಟ್ ದಾಖಲೆ ಬರೆದ ಕನ್ನಡ ಸಿನಿಮಾ

Gaalipata-2 New Record: ಒಟಿಟಿಯಲ್ಲಿ ಗಾಳಿಪಟ-2 ಸಖತ್ ಹಾರಾಟ,10 ಕೋಟಿ ಸ್ಟ್ರೀಮಿಂಗ್ ಮಿನಿಟ್ ದಾಖಲೆ ಬರೆದ ಕನ್ನಡ ಸಿನಿಮಾ

10 ಕೋಟಿ ಸ್ಟ್ರೀಮಿಂಗ್ ಮಿನಿಟ್ ದಾಖಲೆ ಬರೆದ ಕನ್ನಡ ಸಿನಿಮಾ

10 ಕೋಟಿ ಸ್ಟ್ರೀಮಿಂಗ್ ಮಿನಿಟ್ ದಾಖಲೆ ಬರೆದ ಕನ್ನಡ ಸಿನಿಮಾ

ಗಾಳಿಪಟ-2 ವನ್ನ ಹಬ್ಬದ ಲೆಕ್ಕಾಚಾರ ಇಟ್ಟುಕೊಂಡೇ ಒಟಿಟಿಯಲ್ಲಿ ಪ್ರದರ್ಶನ ಮಾಡೋ ಪ್ಲಾನ್ ಮಾಡಲಾಗಿತ್ತು. ಆ ಲೆಕ್ಕಾಚಾರ ಈಗ ವರ್ಕೌಟ್ ಆಗಿದೆ.

  • Share this:

ಇಂದು ನಿರ್ದೇಶಕ ಯೋಗರಾಜ್ ಭಟ್ ಬರ್ತ್​ಡೇ. ಈ ಸಂದರ್ಭ ಅವರಿಗೆ ಗುಡ್ ನ್ಯೂಸ್ ಕೂಡಾ ಸಿಕ್ಕಿದೆ. ಹೌದು. ಯೋಗರಾಜ್ ಭಟ್ ಅವರ ಗಾಳಿಪಟ 2 ಸಿನಿಮಾ ಒಟಿಟಿಯಲ್ಲಿ ಸೂಪರ್ ಹಿಟ್ ಆಗಿದೆ. ಗೋಲ್ಡನ್ ಸ್ಟಾರ್ ಗಣೇಶ್, (Golden Star Ganesh) ದೂದ್ ಪೇಡ ದಿಗಂತ್ (Diganth), ಡೈರೆಕ್ಟರ್ ಪವನ್ ಕುಮಾರ್ (Pawan Kumar)ಅಭಿನಯದ ಗಾಳಿಪಟ-2 ಸಿನಿಮಾ ಥಿಯೇಟರ್​ ನಲ್ಲಿ ಒಂದು ರೀತಿ ಹವಾ ಮಾಡಿದೆ. ಸಿನಿಪ್ರೇಮಿಗಳಿಗೆ ತನ್ನದೇ ರೀತಿಯಲ್ಲಿ ಹೊಸ ರೀತಿ ಮನರಂಜನೆ ಕೊಟ್ಟಿದೆ. ಚಿತ್ರ ವೀಕ್ಷಿಸಿದ ಸಿನಿರಸಿಕರು ಗಾಳಿಪಟ-2 (Gaalipata-2) ಚಿತ್ರಕ್ಕೆ ತಮ್ಮದೇ ರೀತಿಯಲ್ಲಿ ರೆಸ್ಪಾನ್ಸ್ ಕೂಡ ಕೊಟ್ಟರು. ಅದೇ ಗಾಳಿಪಟ-2 ಈಗ ಒಟಿಟಿಯಲ್ಲೂ ಪ್ರದರ್ಶನ ಕಂಡಿದೆ. ಇದೇನೋ ಸರಿ, ಆದರೆ ಇದೇ ಸಿನಿಮಾ ಒಟಿಟಿಯಲ್ಲಿ ಏನೆಲ್ಲ ಮಾಡಿದ ಅಂತಲೇ ಪ್ರಶ್ನೆ ಇದೆ. ಅದಕ್ಕೆ ಉತ್ತರ ಈಗ ಸಿಕ್ಕಿದೆ. ಅದು ಅಷ್ಟೇ ಇಂಟ್ರಸ್ಟಿಂಗ್ ಆಗಿಯೇ ಇದೆ. ಅದರ ವಿವರ ಇಲ್ಲಿದೆ.


ಒಟಿಟಿಯಲ್ಲಿ ಸಖತ್ ಹಾರಾಡಿದ ಭಟ್ಟರ ಗಾಳಿಪಟ-2
ಗಾಳಿಪಟ-2 ಸಿನಿಮಾ ಕಳೆದ ಆಗಸ್ಟ್ ತಿಂಗಳ 12 ರಂದು ರಿಲೀಸ್ ಆಗಿತ್ತು.ರಾಜ್ಯದೆಲೆಡೆ ಈ ಸಿನಿಮಾ ತನ್ನದೇ ರೀತಿಯಲ್ಲಿ ಗಮನ ಸೆಳೆದಿತ್ತು. ಪ್ರೇಕ್ಷಕರನ್ನ ವಿಶೇಷವಾಗಿಯೇ ರಂಜಿಸಿತ್ತು.
ಗಾಳಿಪಟ-2 ಸಿನಿಮಾದ ಕಥೆ ಮಜವಾಗಿಯೇ ಇತ್ತು. ಡೈರೆಕ್ಟರ್ ಯೋಗರಾಜ್ ಭಟ್ ಈ ಮೂಲಕ ಈ ಹಿಂದಿನ ಕಥೆಯನ್ನೆ ಇಲ್ಲಿ ಮುಂದುವರೆಸಿರಲಿಲ್ಲ. ಗಾಳಿಪಟ-2 ಚಿತ್ರಕ್ಕಾಗಿ ಹೊಸದೊಂದು ಕಥೆಯನ್ನೆ ಬರೆದುಕೊಂಡಿದ್ದರು.


ದಸರಾ ಹಬ್ಬಕ್ಕೆ ಒಟಿಟಿಯಲ್ಲಿ ಗಾಳಿಪಟ-2 ಪ್ರದರ್ಶನ
ಗಾಳಿಪಟ-2 ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್, ದೂದ್ ಪೇಡಾ ದಿಗಂತ್, ಅನಂತ್​ ನಾಗ್, ಸುಧಾ ಬೆಳವಾಡಿ, ರಂಗಾಯಣ ರಘು, ಪದ್ಮಜಾ ರಾವ್ ಮಾತ್ರ ಮುಂದುವರೆದಿದ್ದರು. ಗಾಳಿಪಟ ಭಾಗ-1 ರಲ್ಲಿದ್ದ ಮತ್ಯಾರು ಇಲ್ಲಿ ಕಾಣಲೇ ಇಲ್ಲ.


Kannada Film Gaalipata-2 Cinema Make Record on OTT Plat Form
ಒಟಿಟಿಯಲ್ಲಿ ಗಾಳಿಪಟ-2 ಸಖತ್ ಹಾರಾಟ


ಗಾಳಿಪಟ-2 ಸಿನಿಮಾ ಮೊನ್ನೆ ದಸರಾ ಹಬ್ಬಕ್ಕೆ ಒಟಿಟಿಯಲ್ಲಿ ರಿಲೀಸ್ ಆಗಿತ್ತು. ಅಂದು ರಿಲೀಸ್ ಆಗಿದ್ದ ಈ ಗಾಳಿಪಟ-2 ಈಗ ಭಾರೀ ದಾಖಲೆಯನ್ನೆ ಮಾಡಿದೆ. ಕೇವಲ 48 ಗಂಟೆಯಲ್ಲಿ ಗಾಳಿಪಟ-2 ನಿರೀಕ್ಷೆ ಮಟ್ಟವನ್ನ ಮೀರಿ ರೆಸ್ಪಾನ್ಸ್ ಪಡೆದಿದೆ.


ಥಿಯೇಟರ್ ಲೆಕ್ಕ ಬೇರೆ-ಒಟಿಟಿ ಲೆಕ್ಕ ಬೇರೆ
ಹೌದು, ಥಿಯೇಟರ್​ಗೆ ಬಂದ ಸಿನಿಮಾಗಳ ಸಕ್ಸಸ್ ಲೆಕ್ಕ ಕಲೆಕ್ಷನ್ ಮೇಲೆ ನಿಂತಿರುತ್ತದೆ. ಇದರ ಮೇಲೆನೆ ಇಡೀ ಲೆಕ್ಕಾಚಾರ ಇರುತ್ತದೆ. ಇದು ಥಿಯೇಟರ್​ಗೆ ಬಂದ ಸಿನಿಮಾಗಳ ಲೆಕ್ಕಾಚಾರ ನೋಡಿ.


ಇದನ್ನೂ ಓದಿ:  Kantara-Sapthami Gowda: ಕಾಂತಾರ ಸೆಟ್​ನಿಂದ ಫಾರೆಸ್ಟ್​ ಗಾರ್ಡ್ ಲೀಲಾ ಯುನಿಫಾರ್ಮ್ ಮನೆಗೆ ತಂದ ಸಪ್ತಮಿ


ಆದರೆ ಒಟಿಟಿ ಲೆಕ್ಕ ಬೇರೆನೆ ಇದೆ. ಇಲ್ಲಿ ಸ್ಟ್ರೀಮಿಂಗ್ ಲೆಕ್ಕವೇ ಕೌಂಟ್​ಗೆ ಬರುತ್ತದೆ. ಎಷ್ಟು ಹೊತ್ತು ಸ್ಟ್ರೀಮ್ ಆಗಿಯಿತು ಅನ್ನೋದೇ ಒಟಿಟಿಯ ಲೆಕ್ಕಾಚಾರ ಅಂತಲೇ ಹೇಳಬಹುದು.


ಒಟಿಟಿಯಲ್ಲಿ ಕನ್ನಡದ ಗಾಳಿಪಟ-2 ಫುಲ್ ಹವಾ
ಇಂತಹ ಈ ಹೊಸ ಲೆಕ್ಕಾಚಾರದಲ್ಲಿ ಗಾಳಿಪಟ-2 ಸಿನಿಮಾ ಭಾರೀ ದಾಖಲೆಯನ್ನೆ ಮಾಡಿದೆ. ಕೇವಲ ಎರಡು ದಿನಗಳಲ್ಲಿಯೇ ಒಟಿಟಿಯಲ್ಲಿ ಬೇಜಾನ್ ಸ್ಟ್ರೀಮಿಂಗ್ ಸೌಂಡ್ ಮಾಡಿದೆ ಕನ್ನಡದ ಈ ಗಾಳಿಪಟ-2 ಸಿನಿಮಾ.


ನಿಜ, ಗಾಳಿಪಟ-2 ಸಿನಿಮಾ ಒಟಿಟಿಯಲ್ಲಿ ಭರ್ಜರಿಯಾಗಿಯೇ ಸ್ಟ್ರೀಮಿಂಗ್ ಆಗಿದೆ. ಇದರ ಲೆಕ್ಕ 10 ಕೋಟಿ ಸ್ಟ್ರೀಮೀಂಗ್ ಮಿನಿಟ್ ಕಂಡಿದೆ. ಇದು ನಿಜಕ್ಕೂ ಒಂದು ವಿಶೇಷವೇ ಆಗಿದೆ.
ಗಾಳಿಪಟ-2 ಸಿನಿಮಾ 10 ಕೋಟಿ ಸ್ಟ್ರೀಮಿಂಗ್ ಮಿನಿಟ್ ಬಗ್ಗೆ ಅಧಿಕೃತವಾಗಿಯೇ ಒಟಿಟಿಯವರೇ ಹೇಳಿಕೊಂಡಿದ್ದಾರೆ.


ಈ ಮೂಲಕ ಗಾಳಿಪಟ-2 ಹಬ್ಬಕ್ಕೆ ಒಟಿಟಿಯಲ್ಲಿ ಪ್ರದರ್ಶನ ಕಂಡು ಈಗ ಭಾರೀ ಸುದ್ದಿನೇ ಮಾಡಿದೆ.


ಇದನ್ನೂ ಓದಿ: Big Boss Anupama Gowda: ಪ್ರ್ಯಾಂಕ್ ರಾಣಿ ಅನುಪಮಾ ಗೌಡ - ಇದು ಸೀಕ್ರೆಟ್ ಟಾಸ್ಕಾ ಇಲ್ಲ ಇದೂ ನಕಲಿಯಾ?


ಗಾಳಿಪಟ-2 ಚಿತ್ರವನ್ನ ಹಬ್ಬದ ಲೆಕ್ಕಾಚಾರ ಇಟ್ಟುಕೊಂಡೇ ಒಟಿಟಿಯಲ್ಲಿ ಪ್ರದರ್ಶನ ಮಾಡೋ ಪ್ಲಾನ್ ಮಾಡಲಾಗಿತ್ತು. ಆ ಲೆಕ್ಕಾಚಾರ ಈಗ ವರ್ಕೌಟ್ ಆಗಿದೆ.


ಹಬ್ಬದ ಖುಷಿಯಲ್ಲಿದ್ದೋರು, ಹಬ್ಬದ ರಜವನ್ನ ಎಂಜಾಯ್ ಮಾಡಿದೋರು, ಗಾಳಿಪಟ-2 ಸಿನಿಮಾ ನೋಡಿದ್ದಾರೆ ಅಂತ ಹೇಳೋಕೆ, 10 ಕೋಟಿ ಸ್ಟ್ರೀಮಿಂಗ್ ಮಿನಿಟ್ ಕಾರಣ ಅಂತಲೇ ಹೇಳಹುದು. ಏನಂತೀರ?

First published: