• Home
  • »
  • News
  • »
  • entertainment
  • »
  • Yogaraj Bhat Film: ಯೋಗರಾಜ್ ಭಟ್ಟರ ಪದವಿಪೂರ್ವ ಕಾಲೇಜ್ ಡಿಸೆಂಬರ್​​ 30ಕ್ಕೆ ಓಪನ್!

Yogaraj Bhat Film: ಯೋಗರಾಜ್ ಭಟ್ಟರ ಪದವಿಪೂರ್ವ ಕಾಲೇಜ್ ಡಿಸೆಂಬರ್​​ 30ಕ್ಕೆ ಓಪನ್!

ಡಿಸೆಂಬರ್-30 ರಂದು ಪದವಿಪೂರ್ವ ಕಾಲೇಜ್ ಓಪನ್

ಡಿಸೆಂಬರ್-30 ರಂದು ಪದವಿಪೂರ್ವ ಕಾಲೇಜ್ ಓಪನ್

ಹೊಸಬರ ಈ ಚಿತ್ರದಲ್ಲಿ ಹೊಸದೊಂದು ಕಥೆ ಅರಳಿದೆ. ಅದು ಪದವಿಪೂರ್ವ ಕಾಲೇಜಿನಲ್ಲಿಯೇ ಅನ್ನೋದು ವಿಶೇಷ. ಯೋಗರಾಜ್ ಭಟ್ಟರ ಶಿಷ್ಯ ಹರಿಪ್ರಸಾದ್ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ. ಹೊಸ ಉತ್ಸಾಹ ಹೊಸ ಕನಸಿನ ಈ ಚಿತ್ರದ ರಿಲೀಸ್ ಡೇಟ್ ಕೂಡ ಈಗ ಫಿಕ್ಸ್ ಆಗಿದೆ.

  • News18 Kannada
  • Last Updated :
  • Bangalore [Bangalore], India
  • Share this:

ಕನ್ನಡದ ವಿಕಟಕವಿ ಯೋಗರಾಜ್ (Yogaraj Bhat) ಭಟ್ಟರು ಈಗೊಂದು ಸಿನಿಮಾ ನಿರ್ಮಿಸಿದ್ದಾರೆ. ತಮ್ಮ ಶಿಷ್ಯ ಹರಿಪ್ರಸಾದ್ (Hariprasad) ಜಯಣ್ಣ ಜೊತೆಗೂಡಿ ಈ ಚಿತ್ರ ಪ್ರೊಡ್ಯೂಸ್ ಮಾಡಿದ್ದಾರೆ. ಈ ಚಿತ್ರದಲ್ಲಿ ಹೊಸಬರೇ ಇರೋದು ವಿಶೇಷ. ಯೋಗರಾಜ್ ಭಟ್ ಸೇರಿದಂತೆ ಹೆಸರು ಮಾಡಿರೋ ಕೆಲವು ಕಲಾವಿದರೂ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರ ಈಗಾಗಲೇ Song ಮೂಲಕ ಗಮನ ಸೆಳೆದಿದೆ. ಈಗ ಈ ಚಿತ್ರದ ರಿಲೀಸ್ (Release Date Fix) ಡೇಟ್ ಕೂಡ ಅನೌನ್ಸ್ ಆಗಿದೆ. ಈ ಚಿತ್ರಕ್ಕೂ ಸಂಬಂಧಿಸಿದಂತೆ ಭಟ್ಟರು ಕೆಲವು ದಿನಗಳ ಹಿಂದೆ ರಾಘವೇಂದ್ರ ಹುಣಸೂರು ವಿರುದ್ಧ ಸಿಟ್ಟು ಹೊರ ಹಾಕಿದ್ದರು. ಅದರ ಹೊರತಾಗಿ ಈ ಚಿತ್ರ ಈಗಾಗಲೇ ರಿಲೀಸ್​​ಗೆ ರೆಡಿ ಆಗುತ್ತಿದೆ. ಇದರ ಸುತ್ತ ಇನ್ನಷ್ಟು ಮಾಹಿತಿ ಇಲ್ಲಿದೆ.


ಪದವಿಪೂರ್ವ ಸಿನಿಮಾದ ಫ್ರೆಂಡ್ಸ್​ ಶಿಪ್ ಹಾಡು ಹಿಟ್


ಪದವಿಪೂರ್ವ ಸಿನಿಮಾ ಈಗಾಗಲೇ ಟೈಟಲ್ ಮತ್ತು ಫ್ರೆಂಡ್ಸ್ ಶಿಪ್​ ಮೇಲಿನ ಹಾಡಿನ ಮೂಲಕ ಸೆಳೆದು ಬಿಟ್ಟಿದೆ. ಗೆಳೆತನದ ಮಹತ್ವ ಸಾರೋ ಈ ಗೀತೆಯನ್ನ ಈ ಚಿತ್ರಕ್ಕಾಗಿ ಯೋಗರಾಜ್ ಭಟ್ಟರೇ ಬರೆದಿದ್ದಾರೆ. ಗೆಳೆಯರ ದಿನದಂದು ಇದು ರಿಲೀಸ್​ ಆಗಿ ಹೊಸ ಫೀಲ್ ಕೂಡ ಕೊಟ್ಟಿದೆ.


ಇಂಡಸ್ಟ್ರಿಯಲ್ಲಿರೋ ಗೆಳೆಯರೆಲ್ಲ ಈ ಒಂದು ಹಾಡಿನಲ್ಲಿಯೆ ಫೋಟೋ ಸಮೇತ ತೋರಿಸಿರೋದು ವಿಶೇಷವೆ ಆಗಿದೆ. ಇಂತಹ ಈ ಹಾಡನ್ನ ವಿಜಯ್ ಪ್ರಕಾಶ್ ಹಾಡಿದ್ದರು. ಅರ್ಜುನ್ ಜನ್ಯ ಸಂಗೀತ ಕೊಟ್ಟಿದ್ದಾರೆ.


Kannada Film Director Yogaraj Bhat Produced Padavipoorva Ready to Release Soon
ಸಿನಿಮಾದಲ್ಲಿ ಇನ್ನೂ ಯಾರೆಲ್ಲ ಇದ್ದಾರೆ ಗೊತ್ತೇ?


ಪದವಿಪೂರ್ವ ಸಿನಿಮಾದಲ್ಲಿ ಹೊಸಬರ ಹೊಸ ಹೊಳಪು
ಪದವಿಪೂರ್ವ ಸಿನಿಮಾದ ಮೂಲಕ ಪೃಥ್ವಿ ಶಾಮನೂರು ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಈ ಯುವ ನಟನ ಜೊತೆಗೆ ಅಂಜಲಿ ಅನೀಶ್ ಸೇರಿದಂತೆ ಇನ್ನು ಕೆಲವು ಯುವ ನಟ-ನಟಿಯರು ಪರಿಚಯ ಆಗುತ್ತಿದ್ದಾರೆ.


ಹೊಸಬರ ಈ ಚಿತ್ರದಲ್ಲಿ ಹೊಸದೊಂದು ಕಥೆ ಅರಳಿದೆ. ಅದು ಪದವಿಪೂರ್ವ ಕಾಲೇಜಿನಲ್ಲಿಯೇ ಅನ್ನೋದು ವಿಶೇಷ. ಯೋಗರಾಜ್ ಭಟ್ಟರ ಶಿಷ್ಯ ಹರಿಪ್ರಸಾದ್ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ. ಹೊಸ ಉತ್ಸಾಹ ಹೊಸ ಕನಸಿನ ಈ ಚಿತ್ರದ ರಿಲೀಸ್ ಡೇಟ್ ಕೂಡ ಈಗ ಫಿಕ್ಸ್ ಆಗಿದೆ.




ಡಿಸೆಂಬರ್-30 ರಂದು ಪದವಿಪೂರ್ವ ಕಾಲೇಜ್ ಓಪನ್
ಹೊಸಬರು ಮತ್ತು ಹಳಬರ ಈ ಸಿನಿಮಾದಲ್ಲಿ ಸುಮಾರು ವಿಶೇಷತೆ ಇದೆ ಅನಿಸುತ್ತದೆ. ಈಗಾಗಲೇ ನೀವು ನೋಡಿದಂತೆ, ಗೆಳೆತನದ ಹಾಡು ಇಲ್ಲಿದ್ದು ಗೆಳೆತನದ ಮಹತ್ವವನ್ನೂ ಸಾರುವಂತಿದೆ. ಪ್ರೀತಿ-ಪ್ರೇಮದ ಹೊಸ ಕಥೆಯನ್ನೆ ಹೇಳೋಕೆ ಹೊರಟಿದೆ ಅಂತಲೇ ಅನಿಸುತ್ತದೆ.


ಪದವಿಪೂರ್ವ ಸಿನಿಮಾದಲ್ಲಿ ಅತಿಥಿ ಪಾತ್ರಗಳೂ ಇವೆ. ಅವುಗಳನ್ನ ಕನ್ನಡದ ಹೆಸರಾಂತ ಕಲಾವಿದರೇ ಮಾಡಿದ್ದಾರೆ. ಅವರಲ್ಲಿ ಯೋಗರಾಜ್ ಭಟ್ಟರು ಇದ್ದಾರೆ. ಬಿಗ್ ಬಾಸ್ ಖ್ಯಾತಿಯ ದಿವ್ಯಾ ಉರುಡುಗ, ಆದಿತಿ ಪ್ರಭುದೇವ, ಪ್ರಭು ಮುಂದ್​​ಕುರ್, ಶ್ರೀ ಮಹದೇವ್ ಅತಿಥಿ ಪಾತ್ರದಲ್ಲಿಯೇ ಇಲ್ಲಿ ಕಾಣಿಸಿಕೊಂಡಿದ್ದಾರೆ.




ಸಿನಿಮಾದಲ್ಲಿ ಇನ್ನೂ ಯಾರೆಲ್ಲ ಇದ್ದಾರೆ ಗೊತ್ತೇ?
ಪದವಿಪೂರ್ವ ಸಿನಿಮಾದಲ್ಲಿ ರಾಮಾ ರಾಮಾ ರೇ ಸಿನಿಮಾದ ನಟರಾಜ್ ಅಭಿನಯಿಸಿದ್ದಾರೆ. ರಂಗಾಯಣ ರಘು, ಶರತ್ ಲೋಹಿತಾಶ್ವ ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿಯೇ ನಟಿಸಿದ್ದಾರೆ.


ಪದವಿಪೂರ್ವ ಸಿನಿಮಾದ ಹಿಂದಿನ ಟೆಕ್ನಿಷನ್​ಗಳಾರು ಗೊತ್ತೇ?
ಅರ್ಜುನ್ ಜನ್ಯ ಚಿತ್ರಕ್ಕೆ ಸಂಗೀತ ಕೊಟ್ಟಿದ್ದಾರೆ. ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಮಾಡಿದ್ದಾರೆ. ಮಧು ತುಂಬಕೆರೆ ಚಿತ್ರದ ಸಂಕಲನ ಮಾಡಿದ್ದಾರೆ.


ಇದನ್ನೂ ಓದಿ: Naga Chaitanya: ಯುವ ನಟಿ ಜೊತೆ ನಾಗಚೈತನ್ಯ ಡೇಟಿಂಗ್! ರೂಮರ್ಸ್‌ಗೆ ಸಿಕ್ಕೇ ಬಿಡ್ತಾ ಸಾಕ್ಷ್ಯ?


ಯೋಗಾಜ್ ಭಟ್ಟರು ಹಾಗೂ ಡೈರೆಕ್ಟರ್ ಹರಿಪ್ರಸಾದ್ ಈ ಚಿತ್ರವನ್ನ ಜಂಟಿಯಾಗಿಯೇ ನಿರ್ಮಿಸಿದ್ದಾರೆ. ಇದೇ 30ಕ್ಕೆ ಚಿತ್ರವನ್ನ ರಾಜ್ಯಾದ್ಯಂತ ರಿಲೀಸ್​ಗೆ ಪಕ್ಕಾ ಪ್ಲಾನ್ ಕೂಡ ಮಾಡಿಕೊಂಡಿದ್ದಾರೆ.

First published: