‘ಐ ಯಾಮ್ ಗಾಡ್’ ಚಿತ್ರದ ಈ ಹಾಡು ನಿರ್ದೇಶಕರ ನಾಡಗೀತೆಯಾಗಬೇಕು: ಭಗವಾನ್

ತೆರೆಯ ಮರೆಯಲ್ಲಿದ್ದುಕೊಂಡು ಒಂದು ಚಿತ್ರವನ್ನು ಅಚ್ಚುಕಟ್ಟಾಗಿ ತಯಾರಿಸುವ ನಿರ್ದೇಶಕರ ಪರಿಶ್ರಮವನ್ನು ಗುರುತಿಸುವುದು ಕಡಿಮೆ. ಈ ಹಿನ್ನೆಲೆಯಲ್ಲಿ ಐ ಯಾಮ್ ಗಾಡ್ ಚಿತ್ರದಲ್ಲಿ ನಿರ್ದೇಶಕರ ಬಗ್ಗೆ ಇರುವ ಹಾಡು ಶ್ಲಾಘನೀಯ ಎಂದು ದೊರೆ-ಭಗವಾನ್ ಜೋಡಿಯ ನಿರ್ದೇಶಕ ಎಸ್.ಕೆ. ಭಗವಾನ್ ಅಭಿಪ್ರಾಯಪಟ್ಟಿದ್ಧಾರೆ.

ನಟ ರಾಕೇಶ್ ಜೊತೆ ನಿರ್ದೇಶಕ ಭಗವಾನ

ನಟ ರಾಕೇಶ್ ಜೊತೆ ನಿರ್ದೇಶಕ ಭಗವಾನ

  • Share this:
ದೊಡ್ಡಬಳ್ಳಾಪುರ: ಸಿನೆಮಾ, ಸಾಹಿತ್ಯ, ನಿರ್ದೆಶನ, ಕಲಾವಿದ ಅಂದರೆ ಹಾಗೆ, ಒಬ್ಬರಿಂದ ಒಬ್ಬರು ಒಂದೇ ಬಳ್ಳಿಯ ಹೂವುಗಳು ಇದ್ದಂತೆ. ಎಲ್ಲರೂ ಹಿನ್ನೆಲೆ ಗಾಯಕ, ನಟ, ನಟಿ, ಕಲಾವಿದರ ಬಗ್ಗೆ ಮಾತನಾಡ್ತಾರೆ, ಗುರುತಿಸ್ತಾರೆ. ಆದ್ರೆ ಕ್ಯಾಮೆರಾ ಹಿಂದೆ ನಿಂತು ಇಂಚಿಂಚು ಪರಿಪಕ್ವತೆ, ಶ್ರದ್ದೆ, ನಿಷ್ಠೆಯಿಂದ ಶ್ರಮವಹಿಸಿ ದೊಡ್ಡ ಪರದೆ ಮೇಲೆ ಬಣ್ಣದ ಲೋಕವನ್ನೇ ತೆರೆದಿಡುವ ನಿರ್ದೇಶಕ ಯಾರ ಕಣ್ಣಿಗೂ ಕಾಣದೆ ಇದ್ದರೂ ಅದೆಷ್ಟೋ ಪ್ರತಿಭೆಗಳಿಗೆ ಜೀವ ನೀಡುತ್ತಾರೆ. ಈ ನಿರ್ದೆಶಕನ ಬಗೆಗಿನ ಹಾಡು ನಿರ್ದೆಶಕರ ನಾಡ ಗೀತೆ ಆಗಬೇಕು ಎಂದು ಹಿರಿಯ ಖ್ಯಾತ ನಿರ್ದೇಶಕ ಭಗವಾನ್ ಅಭಿಪ್ರಾಯಪಟ್ಟಿದ್ದಾರೆ.

ರಾಕೇಶ್ ಎಂಬ ಯುವ ಕಲಾವಿದ ಅಭಿನಯದ ‘ಐ ಆಮ್ ಗಾಡ್’ ಚಿತ್ರದ ‘ಕಣ್ಣಿಗೆ ಕಾಣದ ನಿರ್ದೇಶಕನ ಪಾತ್ರದಲ್ಲಿ ನಾವೆಲ್ಲಾ ತಲ್ಲೀನ’ ಎಂಬ ಹಾಡನ್ನ ಲೋಕಾರ್ಪಣೆ ಮಾಡಿದ ಬಳಿಕ ನ್ಯೂಸ್18 ಜೊತೆ ಮಾತನಾಡಿದ (ದೊರೆ) ಭಗವಾನ್ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

ಯುವ ಪ್ರತಿಭೆಗಳು ಸಿನಿಮಾ ಕ್ಷೇತ್ರಕ್ಕೆ ಅತ್ಯವಶ್ಯಕವಾಗಿದ್ದು, ಕನ್ನಡ ನಾಡು, ನುಡಿ, ಸೊಬಗಿನ ಅನಾವಾರಣ ಮಾಡುವ ಹಳ್ಳಿಗಾಡಿನ ಯುವ ಪ್ರತಿಭೆಗಳು ಬೆಳಕಿಗೆ ಬಂದಾಗ ಮಾತ್ರ ಕನ್ನಡ ಸಿನಿಮಾ ರಂಗದ ಮೌಲ್ಯ, ಶ್ರೀಮಂತಿಕೆ ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಲು ಸಾದ್ಯ. ನಮ್ಮ ರಾಜ್ಯದಲ್ಲಿ ಹತ್ತಾರು ಭಾಷೆಗಳ ಸಿನೆಮಾಗಳು ಬೆಳ್ಳಿ ಪರದೆಗೆ ಅಪ್ಪಳಿಸುತ್ತಿವೆ. ನಮ್ಮವರೆ ನಮ್ಮ ಬಾಷೆ, ಜಲ, ನಾಡು ನುಡಿ ಬಗ್ಗೆ ಅಸಡ್ಡೆ ತೋರುತ್ತಿದ್ದಾರೆ. ಪರಭಾಷೆ ಚಿತ್ರಗಳನ್ನ ನೋಡಿ ಬೇಡ ಎನ್ನುವುದಿಲ್ಲ. ನಮ್ಮ ಭಾಷೆ ನಮ್ಮ ಅಸ್ತಿತ್ವದ ಬಗ್ಗೆಯೂ ಗಮನ ಹರಿಸಿ ನಮ್ಮವರನ್ನ ಬೆಳೆಸಬೇಕಿದೆ. ಇದರಲ್ಲಿ ಯುವ ಪೀಳಿಗೆ ಪಾತ್ರ ಹೆಚ್ಚಾಗಿದೆ ಎಂದು ಹಿರಿಯ ನಿರ್ದೇಶಕರು ಹೇಳಿದ್ದಾರೆ.

ಇದನ್ನೂ ಓದಿ: ‘ಹಾಳುಮೂಳು ತಿನ್ನೋರಿಗೆ ಇಡ್ಲಿ ಟೇಸ್ಟ್ ಏನು ಗೊತ್ತು?’ - ಬ್ರಿಟನ್ ಪ್ರೊಪೆಸರ್​ಗೆ ಬಿಡದಿ ಹೋಟೆಲ್ ಮಾಲೀಕ ತಿರುಗೇಟು

ಇನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ಕನ್ನಡ ಚಿತ್ರರಂಗಕ್ಕೆ ನೀಡಿರುವ ಕೊಡುಗೆ ಯಾರಿಂದಲೂ ಮರೆಯಲಾಗಲ್ಲ. ಚಿತ್ರರಂಗಕ್ಕೆ ಹತ್ತು ಹಲವು ಪ್ರತಿಭೆಗಳನ್ನ ನೀಡಿದೆ, ಆರ್ಥಿಕ ಸಂಕಷ್ಟದಲ್ಲಿ ನೆರವಾಗಿದೆ, ಕೆ.ಸಿ.ಎನ್. ಮೂವೀಸ್​ನಂಥ ಮಹಾನ್ ಬ್ಯಾನರ್ ಇಲ್ಲವಾಗಿದ್ದರೆ ಕನ್ನಡ ಸಿನೆಮಾ ರಂಗದ ಅದೆಷ್ಟೋ ಪ್ರತಿಭೆಗಳು ಬೆಳಕಿಗೆ ಬರುತ್ತಲೇ ಇರಲಿಲ್ಲ. ‘ಬಂಗಾರದ ಮನುಷ್ಯ’, ‘ಸತ್ಯ ಹರಿಶ್ಚಂದ್ರ’, ‘ದಾರಿ ತಪ್ಪಿದ ಮಗ’, ‘ಸಂಪತ್ತಿಗೆ ಸವಾಲ್’ ಸಿನೆಮಾಗಳು ಇಲ್ಲೇ ಚಿತ್ರೀಕರಣ ಆಗಿದ್ದು. ರಾಜಘಟ್ಟ ಕೆರೆ, ಮರಳೇನಹಳ್ಳಿ, ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಸ್ಥಾನ, ಮಾಕಳಿ ಬೆಟ್ಟ, ನಂದಿ ಗಿರಿದಾಮ ಗಳಲ್ಲಿ ಚಿತ್ರೀಕರಣ ನಡೆದಿದ್ದು. ಇವೆಲ್ಲಾ ನಮ್ಮ ಕಾಲದ ಚಿತ್ರೀಕರಣದ ಮೊದಲ ಆಯ್ಕೆ ಆಗಿರ್ತಿತ್ತು. ಈಗಿನವರು ವಿದೇಶಗಳಿಗೆ ಗೋಗ್ತಾರೆ, ನಮ್ಮ ಸೊಬಗು ಇಲ್ಲೇ ಇದೆ. ನಮ್ಮ ರಾಜ್ಯವು ಕಲೆ, ಸಂಸ್ಕೃತಿ, ಸಾಹಿತ್ಯದ, ಅಸಾಮಾನ್ಯ ಕಲಾವಿದರ ತವರೂರು ಎಂದು ಹಿರಿಯ ನಿರ್ದೆಶಕ ಭಗವಾನ್ ಸಂತಸ ವ್ಯಕ್ತಪಡಿಸಿದ್ದಾರೆ.

I am God Kannada movie team
ಐ ಯಾಮ್ ಗಾಡ್ ಚಿತ್ರದ ತಂಡ. ಪೂರ್ಣ ಎಡಗಡೆ ಇರುವವರು ನಟ ರಾಕೇಶ್


‘ಐ ಆಮ್ ಗಾಡ್’ ಎಂಬ ಹೊಸ ಚಿತ್ರದ ಮೂಲಕ ಬೆಳ್ಳಿ ಪರದೆ ಹಂಚಿಕೊಳ್ಳುತ್ತಿರುವ ರಾಕೇಶ್ ಇದೇ ತಾಲ್ಲೂಕಿನ ಪುಟ್ಟ ಹಳ್ಳಿಯವನಾಗಿದ್ದು ಉತ್ತಮ ಭವಿಷ್ಯವಿದೆ ಎಂದು ಹಾರೈಸಿದ ಅವರು, ಇವರ ಸಿನಿಮಾದಲ್ಲಿರುವ "ಕಣ್ಣಿಗೆ ಕಾಣದ ನಿರ್ದೇಶಕನ ಪಾತ್ರದಲ್ಲಿ ನಾವೆಲ್ಲಾ ತಲ್ಲೀನ" ಹಾಡು ನಿರ್ದೇಶಕರ ಕಾರ್ಯಕ್ರಮಗಳಲ್ಲಿ ಸ್ವಾಗತ ಗೀತೆಯಾಗಬೇಕು ಎಂದಿದ್ದಾರೆ.

ಇದನ್ನೂ ಓದಿ: Rajan: ಕನ್ನಡದ ಹಿರಿಯ ಸಂಗೀತ ನಿರ್ದೇಶಕ ರಾಜನ್​ ಹೃದಯಾಘಾತದಿಂದ ನಿಧನ

ಸಂಗೀತ ಕ್ಷೇತ್ರದಲ್ಲಿ ರಾಜನ್-ನಾಗೇಂದ್ರರಂತೆ ಬಿ. ದುರೈರಾಜ್ ಮತ್ತು ಎಸ್.ಕೆ. ಭಗವಾನ್ ಅವರು ನಿರ್ದೇಶಕ ದ್ವಯರಾಗಿದ್ದಾರೆ. ದೊರೆ-ಭಗವಾನ್ ಎಂದು ಜೋಡಿ ಹೆಸರಿನ ಇವರು ಕನ್ನಡ ಚಿತ್ರರಂಗ ಕಂಡ ಅತ್ಯುತ್ತಮ ನಿರ್ದೇಶಕರಲ್ಲಿ ಅಗ್ರಗಣ್ಯರು. ಬಿ. ದುರೈರಾಜ್ ಅವರು ಇಹಲೋಕದಲ್ಲಿಲ್ಲ. 87 ವರ್ಷದ ಎಸ್.ಕೆ. ಭಗವಾನ್ ಅವರು ನಿರ್ದೇಶನದಲ್ಲಿ ಸಕ್ರಿಯವಾಗಿಲ್ಲವಾದರೂ ಆದರ್ಶ ಫಿಲಂ ಇನ್ಸ್​ಟಿಟ್ಯೂಟ್​ನ ಮುಖ್ಯಸ್ಥರಾಗಿ ಚಿತ್ರರಂಗಕ್ಕೆ ಎಳೆ ಪ್ರತಿಭೆಗಳನ್ನ ಎಳೆದು ತರುವ ಕಾಯಕದಲ್ಲಿದ್ಧಾರೆ.

ವರದಿ: ನವೀನ್ ಕುಮಾರ್
Published by:Vijayasarthy SN
First published: