ಡೈರೆಕ್ಟರ್ ಜೋಗಿ ಪ್ರೇಮ್ ತಮ್ಮ (Action Prince Dhruva Sarja New Movie) ಸಿನಿಮಾದ ವಿಷಯವನ್ನ ಅಷ್ಟು ಸಲೀಸಾಗಿಯೇ ಬಿಟ್ಟುಕೊಡೋದಿಲ್ಲ. ಹಾಗೆ ಒಂದು ವೇಳೇ ಬಿಟ್ಟರೂ ಕೂಡ ಎಲ್ಲವನ್ನೂ (Jogi Prem KD Film) ಹೇಳಿರೋದಿಲ್ಲ. ಅದರಲ್ಲಿ ಒಂದಷ್ಟು ಕ್ಯೂರಿಯಾಸಿಟಿ ಉಳಿಸಿರುತ್ತಾರೆ. ಅದೇ ರೀತಿ ಈಗ ತಮ್ಮ ಬಹು ನಿರೀಕ್ಷಿತ KD (KD Film Updates) ಚಿತ್ರದ ಒಂದು ಹೊಸ ಅಪ್ಡೇಟ್ ಕೊಟ್ಟಿದ್ದಾರೆ. ಇಲ್ಲಿವರೆಗೂ ಏನನ್ನೂ ಹೇಳದ ಜೋಗಿ ಪ್ರೇಮ್, ಹೊಸ (KD Movie Poster) ವರ್ಷಕ್ಕೆ ಹೊಸದೇನೋ ರಿವೀಲ್ ಮಾಡುತ್ತಿದ್ದಾರೆ. ಅದನ್ನ ಹೇಳಲಿಕ್ಕೆ ಒಂದು ವಿಶೇಷ ಪೋಸ್ಟರ್ ಅನ್ನೂ ಮಾಡಿಸಿದ್ದಾರೆ. ಇದರಲ್ಲಿಯೇ ಒಂದಷ್ಟು ಮಾಹಿತಿಯನ್ನ ಕೂಡ ಕೊಟ್ಟಿದ್ದಾರೆ. ಆ ವಿವರಣೆ ಇಲ್ಲಿದೆ ಓದಿ.
ಹೊಸ ವರ್ಷಕ್ಕೆ ಜೋಗಿ ಪ್ರೇಮ್ "KD" ಚಿತ್ರದ ಹೊಸ ಮ್ಯಾಟರ್
ಜೋಗಿ ಪ್ರೇಮ್ ಮತ್ತು ಆ್ಯಕ್ಷನ್ ಪ್ರಿನ್ಸ್ ಜೊತೆಗೂಡಿ ಒಂದು ಸಿನಿಮಾ ಮಾಡ್ತಿದ್ದಾರೆ. ಈ ವಿಷಯ ಎಲ್ಲರಿಗೂ ಗೊತ್ತಿದೆ. ಚಿತ್ರದ ಮೊದಲ ಟೈಟಲ್ ಟೀಸರ್ ಆ ವಿಷಯವನ್ನ ಸಾಕಷ್ಟು ಇಂಟ್ರಸ್ಟಿಂಗ್ ಆಗಿಯೇ ಹೇಳಿದೆ.
ಇದರ ಹೊರತಾಗಿ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಪಾತ್ರ ಹೇಗಿರುತ್ತದೆ ಅನ್ನೋ ವಿಷಯ ಕೂಡ ತಿಳಿದಿದೆ. ಇದರ ಹೊರತಾಗಿ ಈ ಚಿತ್ರದ ಮಾಹಿತಿ ಇನ್ನೂ ಎಲ್ಲೂ ಹೊರಗೆ ಬಿದ್ದಿಲ್ಲ. ಆದರೆ ಜೋಗಿ ಪ್ರೇಮ್ ಮುಂದಿನ ವರ್ಷ 2023ರ ಮೊದಲ ದಿನವೇ ಹೊಸ ವಿಷಯ ರಿವೀಲ್ ಮಾಡುತ್ತಿದ್ದಾರೆ.
ಭಟ್ರ ಸ್ಟೈಲ್ನಲ್ಲಿ ಹೇಳೋದಾದ್ರೆ ಹೊಸ ವರ್ಷಕ್ಕೆ ಹೊಸಾದು!
ಜೋಗಿ ಪ್ರೇಮ್ ಏನೇ ಮಾಡಿದ್ರು ಅಲ್ಲಿ ಕ್ಯೂರಿಯೋಸಿಟಿ ಹುಟ್ಟಿಸುತ್ತಾರೆ. ಸಿನಿಮಾದ ಟೈಟಲ್ ಟೀಸರ್ ರಿಲೀಸ್ ಮಾಡೋ ಸಮಯದಲ್ಲೂ ಕ್ಯೂರಿಯೋಸಿಟಿ ಹುಟ್ಟುಹಾಕಿದ್ದರು. ಅದೇ ರೀತಿನೇ ಈಗ ಹೊಸ ವರ್ಷಕ್ಕೆ ಚಿತ್ರದ ಒಂದು ವಿಷಯವನ್ನ ರಿವೀಲ್ ಮಾಡುತ್ತಿದ್ದಾರೆ. ಅದಕ್ಕೆ ಟೈಮ್ ಕೂಡ ಫಿಕ್ಸ್ ಮಾಡಿದ್ದಾರೆ.
ಜೋಗಿ ಪ್ರೇಮ್ ತಮ್ಮ KD ಚಿತ್ರಕ್ಕೆ ಸಂಬಂಧಿಸಿದ ಒಂದು ಮ್ಯಾಟರ್ ಅನ್ನ ರಿವೀಲ್ ಮಾಡೋಕೆ ಪ್ಲಾನ್ ಮಾಡಿದ್ದಾರೆ. ಈ ಒಂದು ವಿಷಯವನ್ನ ತಿಳಿಸೋಕೆ ಒಂದು ವಿಶೇಷ ಪೋಸ್ಟರ್ ಅನ್ನ ಕೂಡ ಈಗ ರಿಲೀಸ್ ಮಾಡಿದ್ದಾರೆ.
KD ಚಿತ್ರದ ಈಗಿನ ಈ ಪೋಸ್ಟರ್ ನಲ್ಲಿ ಏನಿದೆ?
KD ಸಿನಿಮಾದ ಈಗೀನ ಈ ಪೋಸ್ಟರ್ ನಲ್ಲಿ ಒಂದು ವಿಶೇಷ ಕಾಣುತ್ತಿದೆ. ನಿಜ, ಪೋಸ್ಟರ್ ನಲ್ಲಿ ವಿಭೂತಿ ಇದೆ. ಅದರ ಮೇಲೆ Annayyappa will make a stylish entry into KD’s Battlefield ಅಂತಲೂ ಬರೆಯಲಾಗಿದೆ. ಈ Annayyappa ಯಾರು? ಈ ಒಂದು ಪ್ರಶ್ನೆ ಈಗ ಹುಟ್ಟಿಕೊಂಡಿದೆ.
ಇದರ ಜೊತೆಗೆ ಈಗ ನೀವು ಓದಿರೋ ವಿಷಯವನ್ನ ಅಧಿಕೃತವಾಗಿ ಹೇಳಲು ಒಂದು ಟೈಮ್ ಕೂಡ ಫಿಕ್ಸ್ ಆಗಿದೆ. ನಿಜ, Annayyappa ನ ಸ್ಟೈಲಿಶ್ ಎಂಟ್ರಿ ಇತರ ಮಾಹಿತಿಯನ್ನ ಸಂಜೆ ನಾಲ್ಕು ಗಂಟೆಗೆ ರಿವೀಲ್ ಮಾಡಲಿದ್ದಾರೆ. ಅದನ್ನ ಈಗ ಬಿಟ್ಟಿರೋ ಪೋಸ್ಟರ್ ನಲ್ಲೂ ಜೋಗಿ ಪ್ರೇಮ್ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Kannada Movies: ಹೊಸ ವರ್ಷದಲ್ಲಿ ತೆರೆ ಕಾಣಲಿರುವ ಬಹುನಿರೀಕ್ಷಿತ ಕನ್ನಡ ಸಿನಿಮಾಗಳಿವು
KD ಚಿತ್ರದ ಶೂಟಿಂಗ್ ಕೆಲಸ ಎಲ್ಲಿಗೆ ಬಂತು?
ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಈ ಚಿತ್ರದ ಚಿತ್ರೀಕರಣ ಶುರು ಆಗಿದೆ. ಈಗಾಗಲೇ ಅಂದುಕೊಂಡತೇನೆ ಎಲ್ಲ ಚಿತ್ರೀಕರಣ ಕೂಡ ನಡೆಯುತ್ತಿದೆ. ಇದರ ಮಧ್ಯ ಸಿನಿಮಾ ಲೇಟೆಸ್ಟ್ ಮಾಹಿತಿ ಹಂಚಿಕೊಳ್ಳಲು ಜೋಗಿ ಪ್ರೇಮ್ ಪ್ಲಾನ್ ಮಾಡಿಕೊಂಡಿದ್ದಾರೆ.
ಹೊಸ ವರ್ಷದ ಮೊದಲ ದಿನದ ಸಂಜೆ ತಮ್ಮ ಈ ಚಿತ್ರದ ಹೊಸ ಮಾಹಿತಿ ಹಂಚಿಕೊಳ್ಳಲಿದ್ದಾರೆ. ಇನ್ನು ಚಿತ್ರದ ಬಗ್ಗೆ ಭಾರೀ ನೀರಿಕ್ಷೆ ಈಗಲೇ ಹುಟ್ಟಿಕೊಂಡಿದೆ. ಧ್ರುವ ಸರ್ಜಾ ಫ್ಯಾನ್ಸ್ ಹಾಗೂ ಸಿನಿ ಪ್ರೇಮಿಗಳು ಈ ಚಿತ್ರದ ಪ್ರತಿ ಅಪ್ಡೇಟ್ ಬಗ್ಗೆನೂ ಕುತೂಹಲ ಹೊಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ