ಕನ್ನಡದಲ್ಲಿ ಒಳ್ಳೆ ಸಿನಿಮಾಗಳೇ (Good Cinema) ರೆಡಿ ಆಗುತ್ತಿವೆ. ಈ ಒಂದು ಮಾತನ್ನ ಈಗ ನಾವು ಎದೆ ತಟ್ಟಿ ಹೇಳಬಹುದು. ಕಂಟೆಂಟ್ ಬೇಸ್ ಸಿನಿಮಾಗಳು ಅಂದ್ರೆ ಹೀಗಿರಬೇಕು ಅನ್ನೋ ಮಟ್ಟಿಗೆ ಅದ್ಭುತ (Very Good Stories) ಕಥೆ ಚಿತ್ರಗಳು ಬರುತ್ತಿವೆ. ಅದರಲ್ಲೂ ಬದುಕಿನ ಅಸಲಿ ಸತ್ಯಗಳನ್ನ ಕಟ್ಟಿಕೊಡುವ ಚಿತ್ರಗಳಿಗೆ ಏನೂ ಕೊರತೆ ಇಲ್ಲ. ಈ ಶುಕ್ರವಾರ ತೆರೆ ಕಂಡ "ಧರಣಿ ಮಂಡಲ ಮಧ್ಯದೊಳಗೆ" ಸಿನಿಮಾ ಕೂಡ ಮತ್ತೊಂದು ದುನಿಯಾ ಸಿನಿಮಾವನ್ನೇ ಕಣ್ಣಿಗೆ ಕಟ್ಟಿಕೊಡುತ್ತದೆ. ನೈಜ (Real Roles) ಪಾತ್ರಗಳ ನೈಜ ಕಥೆಯನ್ನೆ ಇದು ತೋರುತ್ತಿದೆ. ಧರಣಿ ಮಂಡಲ ಮಧ್ಯದೊಳಗೆ ಎಲ್ಲರ ಕಥೆನೂ ಮೇಲೆ ಕೆಳಗೆ ಅನ್ನೋ ಅರ್ಥ ಪೂರ್ಣ ಲೈನ್ ಇಡೀ ಚಿತ್ರದ ಜೀವಂತಿಕೆಯನ್ನ ಕಟ್ಟಿಕೊಡುತ್ತದೆ. ಈ ಚಿತ್ರದ ಸಂಪೂರ್ಣ (Film Review) ವಿಶ್ಲೇಷಣೆ ಇಲ್ಲಿದೆ ಓದಿ.
ಧರಣಿ ಮಂಡಲ ಮಧ್ಯದೊಳಗೆ ನಮ್ಮದೆ ಕಥೆ ಚಿತ್ರಣ
ಕನ್ನಡದಲ್ಲಿ ಅದ್ಭುತ ಸಿನಿಮಾಗಳೂ ಬರ್ತಿವೆ. ಧರಣಿ ಮಂಡಲ ಮಧ್ಯದೊಳಗೆ ಕೂಡ ಒಂದು ಒಳ್ಳೆ ಸಿನಿಮಾನೇ ಆಗಿದೆ. ಬದುಕಿನ ಅಸಲಿ ಸತ್ಯಗಳನ್ನ ಹೇಳುವ ಈ ಚಿತ್ರದಲ್ಲಿ ನಿರ್ದೇಶಕರ ಜಾಣ್ಮೆ ಎದ್ದು ಕಾಣುತ್ತೆ. ಆ ವಿಷಯದಲ್ಲಿ ನಿರ್ದೇಶಕ ಶ್ರೀಧರ್ ಶಿಕಾರಿಪುರ ಅವರನ್ನ ಕೊಂಡಾಡಲೇ ಬೇಕಾಗುತ್ತದೆ.
ಸಿನಿಮಾದ ಪಾತ್ರಗಳಿಗೆ ಬಣ್ಣದ ಸ್ಪರ್ಶವೇ ಇಲ್ಲ. ಎಲ್ಲ ಪಾತ್ರಧಾರಿಗಳು ನೈಜ ರೂಪದಲ್ಲಿ ಅಭಿನಯಿಸಿದಂತೆ ಕಾಣುತ್ತದೆ. ಬಣ್ಣವೇ ಹಚ್ಚದೇ ನೈಜವಾಗಿಯೇ ಇಲ್ಲಿ ಎಲ್ಲ ಕಲಾವಿದರು ಕಾಣಿಸುತ್ತಾರೆ.
ನಮ್ಮ ನಡುವಿನ ಪಾತ್ರಗಳು ಇಲ್ಲಿ ಜೀವ ಪಡದಂತಿದೆ!
ನಮ್ಮ ಓಣಿಯ ಗ್ಯಾರೇಜ್ ಮ್ಯಾನ್, ನಮ್ಮೂರಲ್ಲಿರೋ ಒಬ್ಬ ಬಾಕ್ಸರ್, ನಶೆಯಲ್ಲಿ ತೇಲಾಡೋ ಶ್ರೀಮಂತರ ಮಗಳು, ದೂರದ ಹಳ್ಳಿಯಿಂದ ಬಂದ ಅಪ್ಪ ಅಮ್ಮ, ಎಲ್ಲರೂ ನಮ್ಗೆ ಈ ಒಂದು ಧರಣಿ ಮಂಡಲ ಮಧ್ಯದೊಳಗೆ ಸಿಗ್ತಾರೆ. ಸಿನಿಮಾ ನೋಡ್ತಾ ನೋಡ್ತಾ ಎಲ್ಲರೂ ನಮ್ಮವರೇ ನಮ್ಮೊಳಗಿನ ಕಥೆನೆ ಅನಿಸೋಕೆ ಶುರು ಆಗುತ್ತದೆ.
ಧರಣಿ ಮಂಡಲ ಮಧ್ಯದೊಳಗೆ ಎಲ್ಲರ ಕಥೆನೂ ಮೇಲೆ ಕೆಳಗೆ. ಹೌದು, ಈ ಮಾತಂತೂ ಇಡೀ ಚಿತ್ರಕ್ಕೆ ತುಂಬಾ ಸೂಕ್ತವಾಗಿಯೇ ಇದೆ. ಈ ಚಿತ್ರದ ಕಥೆಯ ಪಾತ್ರಗಳು ಅಂತಹ ಕಥೆಗೆ ಸಿಲುಕಿರುತ್ತವೆ.
ಸಮಯ ಸಂದರ್ಭಕ್ಕೆ ಮುಖಾ-ಮುಖಿ ಆಗೋ ಪಾತ್ರಗಳು!
ಒಂದೊಂದು ಪಾತ್ರವೂ ಇಲ್ಲಿ ಒಂದಕ್ಕೊಂದು ಲಿಂಕ್ ಇರೋದೇ ಇಲ್ಲ. ಆದರೆ ಸಂದರ್ಭ ಮತ್ತು ಸನ್ನಿವೇಶಗಳು ಮುಖಾ-ಮುಖಿ ಆಗೋ ಹಾಗೆ ಮಾಡುತ್ತವೆ. ಅದುವೇ ಬದುಕಿನ ಸತ್ಯ ಅನ್ನೋದನ್ನ ಪಾತ್ರಗಳ ಮೂಲಕ ಡೈರೆಕ್ಟರ್ ಶ್ರೀಧರ್ ಶಿಕಾರಿಪುರ ಹೇಳ್ತಾ ಹೋಗ್ತಾರೆ.
ಧರಣಿ ಮಂಡಲ ಮಧ್ಯದೊಳಗೆ ಸಿನಿಮಾದಲ್ಲಿ ಯುವ ನಟ ನವೀನ್ ಶಂಕರ ಅದ್ಭುತವಾಗಿಯೇ ಅಭಿನಯಿಸಿದ್ದಾರೆ. ಒಬ್ಬ ಬಾಕ್ಸರ್ ಪಾತ್ರದಲ್ಲಿ ನವೀನ್ ಕಾಣಿಸಿಕೊಂಡು ಅದ್ಭುತವಾಗಿಯೂ ನೈಜ ಫೈಟ್ಗಳನ್ನ ಮಾಡಿ ರೋಮಾಂಚನಗೊಳಿಸಿದ್ದಾರೆ.
ನಶೆಯ ರಾಣಿಯಂತೆ ಕಂಡ ನಾಯಕಿ ಐಶಾನಿ ಶೆಟ್ಟಿ
ಐಶಾನಿ ಶೆಟ್ಟಿ ಅಂತೂ ನಶೆಯ ರಾಣಿಯಂತೆ ಕಾಣಿಸಿಕೊಂಡಿದ್ದಾರೆ. ಪ್ರಾಮಾಣಿಕ ಪ್ರೇಮಿಯಾಗಿಯೂ ಹೊಳೆಯುತ್ತಾರೆ. ವಿಭಿನ್ನವಾಗಿಯೆ ಕಾಣಿಸಿಕೊಂಡು ಗಮನ ಸೆಳೆಯುತ್ತಾರೆ. ಯಶ್ ಶೆಟ್ಟಿ ಅಂತಲೂ ಸಾಮಾನ್ಯ ಮೆಕಾನಿಕ್ ರೂಪದಲ್ಲಿ ನಿಮ್ಮ ಗಮನ ಸೆಳೆಯುತ್ತಾರೆ. ಹಳ್ಳಿಯಿಂದ ಬಂದ ಅಪ್ಪ-ಅಮ್ಮನಿಗಾಗಿ ಹುಡುಕಾಡೋ ಮಗನಾಗಿ ಹತ್ತಿರವಾಗುತ್ತಾರೆ.
ಇದನ್ನೂ ಓದಿ: Varaha Roopam-Rishab Shetty: ವರಾಹ ರೂಪಂ ವಿವಾದ ಬಗ್ಗೆ ರಿಷಬ್ ಪ್ರತಿಕ್ರಿಯೆ
ಹೀಗೆ ಹತ್ತು ಹಲವು ಪಾತ್ರಗಳ ಈ ಚಿತ್ರಕ್ಕೆ ಒಂದು ಸೂಪರ್ ಎಂಡಿಂಗ್ ಇದೆ. ಅದನ್ನ ತೆರೆ ಮೇಲೆ ನೋಡಿದ್ರೇನೆ ಅದು ಇನ್ನಷ್ಟು ಹತ್ತಿರವಾಗುತ್ತದೆ. ಕಾರ್ತಿಕ್ ಚನ್ನೋಜಿ ರಾವ್ ಸಂಗೀತವೂ ಇಡೀ ಚಿತ್ರಕ್ಕೆ ಮತ್ತೊಂದು ಜೀವಂತಿಕೆ ತಂದು ಕೊಟ್ಟಿದೆ. ಕತ್ತಲ ರಾತ್ರಿಯಲ್ಲಿಯೇ ನಡೆಯೋ ಈ ಚಿತ್ರ ಬೆಂಗಳೂರಿನ ಅಸಲಿ ಸತ್ಯವನ್ನೂ ತೋರಿಸೋ ಕೆಲಸ ಮಾಡುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ