Kalai Master: ಕೊರೋನಾ ಕಾಟ-ನೃತ್ಯ ನಿರ್ದೇಶಕರ ಪರದಾಟ! ಕಲೈ ಮಾಸ್ಟರ್ ಹೇಳಿದ ಅಸಲಿ ಸತ್ಯ

ಕನ್ನಡ ಚಿತ್ರರಂಗ ಕೋವಿಡ್ ನಿಂದ ನಲುಗಿ ಹೋಗಿದೆ. ಕಳೆದ ಮೂರು ವರ್ಷದಿಂದ ಕೆಲಸವೇ ಇಲ್ಲದೆ ಎಲ್ಲರೂ ಪರದಾಡಿದ್ದಾರೆ ಸಿನಿಮಾರಂಗದಲ್ಲಿ ಅನೇಕ ವಿಭಾಗಗಳಿವೆ. ಅವುಗಳಲ್ಲಿ ನೃತ್ಯ ಕಲಾವಿದರ ಬದುಕು ಇದೆ. ಅವರೂ ಕೊರೋನಾದಿಂದ ಪರದಾಡಿದ್ದರು.

ಕನ್ನಡ ನೃತ್ಯ ನಿರ್ದೇಶಕ ಕಲೈ ಮಾಸ್ಟರ್

ಕನ್ನಡ ನೃತ್ಯ ನಿರ್ದೇಶಕ ಕಲೈ ಮಾಸ್ಟರ್

  • Share this:
ಕನ್ನಡ ಚಿತ್ರರಂಗ ಕೋವಿಡ್ (Corona) ನಿಂದ ನಲುಗಿ ಹೋಗಿದೆ. ಕಳೆದ ಮೂರು ವರ್ಷದಿಂದ ಕೆಲಸವೇ ಇಲ್ಲದೆ ಎಲ್ಲರೂ ಪರದಾಡಿದ್ದಾರೆ. ಸಿನಿಮಾರಂಗದಲ್ಲಿ (Film Industry) ಅನೇಕ ವಿಭಾಗಗಳಿವೆ. ಅವುಗಳಲ್ಲಿ ನೃತ್ಯ ಕಲಾವಿದರ ಬದುಕು ಇದೆ. ಸಿನಿಮಾಗಳಲ್ಲಿ ಕೆಲಸವೇ ಇಲ್ಲದಿದ್ದಾಗ, ನೃತ್ಯ ನಿರ್ದೇಶಕರ (Choreographer) ಬದುಕು ಸಂಕಷ್ಟದಲ್ಲಿಯೇ ಇತ್ತು. ಈಗ ಟೈಮ್ ಬದಲಾಗುತ್ತಿದೆ. ನೃತ್ಯ ನಿರ್ದೇಶಕರ ಕೈಯಲ್ಲೂ ಈಗ ಕೆಲಸ ಇದೆ. ಸಿನಿಮಾ ಪ್ರೇಮಿಗಳು ನಾಯಕ,ನಾಯಕಿ ಮಸ್ತ್ ಆಗಿಯೇ ಕುಣಿಯೋ ದೃಶ್ಯಗಳನ್ನ ಕಂಡು ಖುಷಿಪಡುತ್ತಾರೆ. ಅಂತಹ ನೃತ್ಯಗಳ ಹಿಂದೆ ಒಬ್ಬ ನೃತ್ಯ ನಿರ್ದೇಶಕನ ಕಲ್ಪನೆ ಇರುತ್ತದೆ ಅನ್ನೋದು ಬಹುತೇಕರಿಗೆ ಗೊತ್ತೇ ಇದೆ. ಸಿನಿಮಾ ತಂಡಗಳು ಮೇಕಿಂಗ್ ವೀಡಿಯೋಗಳನ್ನ ಬಿಡುಗಡೆ ಮಾಡೊದರಿಂದ ಜನಕ್ಕೆ ಎಲ್ಲವೂ ತಿಳಿದು ಬಿಡುತ್ತದೆ.

ಹೌದು, ಇಂತಹದ್ದೇ ಒಬ್ಬ ನೃತ್ಯ ನಿರ್ದೇಶಕರ ಬಗ್ಗೆ ಇವತ್ತು ನಾವು ಹೇಳುತ್ತಿದ್ದೇವೆ. ಇವರು ಬಹು ಭಾಷೆಯ ನೃತ್ಯ ನಿರ್ದೇಶಕರೇ ಆಗಿದ್ದಾರೆ. ಕನ್ನಡ, ತಮಿಳು, ತೆಲುಗು, ಮಲೆಯಾಳಂ ಅಷ್ಟೇ ಯಾಕೆ, ಮರಾಠಿ ಭಾಷೆಯ ಸಿನಿಮಾ ಕೂಡ ಮಾಡಿ ಬಂದಿದ್ದಾರೆ.

Kannada Film Choreographer Kalai Master Talks About his New Projects
ಕಬ್ಜ ಸಿನಿಮಾ ರಿಯಲ್ ಸ್ಟಾರ್ ಉಪ್ಪಿ ಇಂಟ್ರಡಕ್ಷನ್ ಸಾಂಗ್ ಗೆ ಕಲೈ ಮಾಸ್ಟರ್ ಕೋರಿಯೋಗ್ರಾಫಿ


ಅವರೇ ನೃತ್ಯ ನಿರ್ದೇಶಕ ಕಲೈ ಮಾಸ್ಟರ್, ಕಲೈ ಮಾಸ್ಟರ್ ನೃತ್ಯ ನಿರ್ದೇಶನದ ಹಾಡುಗಳು ಯಾವವು ಅಂತ ನೀವೂ ಕೇಳಿದರೆ, ಅಲ್ಲಿ 250 ಕ್ಕೂ ಹೆಚ್ಚು ಹಾಡುಗಳ ಪಟ್ಟಿ ತೆರೆದುಕೊಳ್ಳುತ್ತದೆ. ಅವುಗಳಲ್ಲಿಯೇ ಒಂದಷ್ಟು ಹಾಡುಗಳನ್ನ ನಾವು ನಿಮಗೆ ಎಕ್ಸಾಂಪಲ್ ಆಗಿ ಕೊಡ್ತಿವಿ ಓದಿ.

ಮುಂಗಾರು ಮಳೆ-2 ಸಿನಿಮಾದ ಒಂಟೆ ಸಾಂಗ್
ನಿಜ,ಮುಂಗಾರು ಮಳೆ-2 ಸಿನಿಮಾದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ನಾಯಕಿ ನೇಹಾ ಶೆಟ್ಟಿ ಒಂಟೆ ರೀತಿ ಸ್ಟೆಪ್ ಒಂದನ್ನ ಹಾಕ್ತಾರಲ್ಲವೇ ? ಆ ಸ್ಟೆಪ್ ಹಿಂದೆ ಇರೋದು ಇದೇ ಕಲೈ ಮಾಸ್ಟರ್ ಕಲ್ಪನೆ.

ಇದನ್ನ ನೋಡಿದ ಅದೆಷ್ಟೋ ಜನ ಖುಷಿಪಟ್ಟಿದ್ದಾರೆ. ಮರಳುಗಾಡಿನಲ್ಲಿ ಸುಂದರ ಸರಳ ನೃತ್ಯದ ಈ ಹಾಡು ನೋಡುಗರಲ್ಲಿ ಉಲ್ಲಾಸ ಮೂಡಿಸಿತ್ತು. ಇಂತಹ ಹಾಡು ಕೊಟ್ಟ ಕಲೈ ಮಾಸ್ಟರ್, ಇಂಡಸ್ಟ್ರೀಗೆ ಬಂದು 22 ವರ್ಷಗಳೇ ಉರುಳಿ ಹೋಗಿವೆ. ಇದರಲ್ಲಿ 10 ವರ್ಷ ಒಬ್ಬ ನೃತ್ಯಗಾರನಾಗಿಯೇ ಕೆಲಸ ಮಾಡಿದ್ದಾರೆ.

ಇದನ್ನೂ ಓದಿ: God Father: ಪ್ರಮುಖ OTT ಕಂಪನಿಯ ಕೈ ಸೇರಿದೆ ಚಿರಂಜೀವಿ ಅಭಿನಯದ ಗಾಡ್ ಫಾದರ್ ಡಿಜಿಟಲ್ ಹಕ್ಕು!

ಮಾಣಿಕ್ಯನಿಗೂ ಹೆಜ್ಜೆ ಹೇಳಿಕೊಟ್ಟ ಕಲೈ ಮಾಸ್ಟರ್
ಈಗ 12 ವರ್ಷದಿಂದ ಸ್ವತಂತ್ರವಾಗಿಯೇ ನೃತ್ಯಗಳನ್ನ ನಿರ್ದೇಶನ ಮಾಡುತ್ತಿದ್ದಾರೆ. ಹಾಗೆ ಇವರ ಈ ಸಿನಿಮಾ ಪಯಣದಲ್ಲಿ ಕಿಚ್ಚ ಸುದೀಪ್ ಅಭಿನಯದ ಮಾಣಿಕ್ಯ ಸಿನಿಮಾದ ಹಾಡು ಕೂಡ ಇದೆ. ಜೀವಾ ಜೀವಾ ಅಂತಲೇ ಸಾಗೋ ಹಾಡಿಗೂ ಕಲೈ ಮಾಸ್ಟರ್ ಕಲ್ಪನೆಯ ಹೆಜ್ಜೆಗಳು ಇವೆ.

ಕಲೈ ಮಾಸ್ಟರ್ ನೃತ್ಯ ನಿರ್ದೇಶನದ ಹಾಡುಗಳಲ್ಲಿ ಲೂಸ್ ಮಾದ ಯೋಗಿ ಅಭಿನಯದ ಅಲೆಮಾರಿ ಸಿನಿಮಾ ವಿಶೇಷವಾಗಿಯೇ ನಿಲ್ಲುತ್ತದೆ. ಈ ಸಿನಿಮಾದ ಮರೀಬೇಕು ನಿನ್ನ ಹಾಡು ವಿಶೇಷವಾದ ಫೀಲ್ ಅನ್ನೇ ಕೊಟ್ಟಿತ್ತು. ಒಂದೇ ಶಾಟ್ ನಲ್ಲಿಯೇ ಇಡೀ ಹಾಡನ್ನ ತೆಗೆದಿರೋದು ಕಲೈ ಮಾಸ್ಟರ್ ಸಾಧನೆಗಳಲ್ಲಿ ಒಂದು ಅಂದ್ರೆ ತಪ್ಪಿಲ್ಲ ಬಿಡಿ.

Kannada Film Choreographer Kalai Master Talks About his New Projects
ಕನ್ನಡ ಚಿತ್ರರಂಗದ ನೃತ್ಯ ನಿರ್ದೇಶಕ ಕಲೈ ಮಾಸ್ಟರ್


ರಿಯಲ್ ಸ್ಟಾರ್ ಕಬ್ಜ ಚಿತ್ರದ ನಾಯಕ ಇಂಟ್ರಡಕ್ಷನ್ ಹಾಡಿಗೆ ಕಲೈ ಕಲ್ಪನೆ
ಉಪೇಂದ್ರ ಅಭಿನಯದ ಕಬ್ಜ ಚಿತ್ರದ ನಾಯಕನ ಇಂಟ್ರಡಕ್ಷನ್ ಹಾಡನ್ನ ಕಲೈ ಮಾಡಿದ್ದಾರೆ. ಆ ದಿನಗಳ ಈ ಹಾಡನ್ನ ಕಲೈ ಮಾಸ್ಟರ್ ವಿಶೇಷವಾಗಿಯೇ ತೆಗೆದುಕೊಟ್ಟಿದ್ದಾರೆ. ಈ ಹಿಂದಿನ ಉಪ್ಪಿ ಅಭಿನಯದ ಕಾಂಚನಾ ಚಿತ್ರಕ್ಕೂ ಕಲೈ ಮಾಸ್ಟರ್ ನೃತ್ಯ ಮಾಡಿದ್ದಾರೆ.

ಕೋವಿಡ್ ಎಲ್ಲರನ್ನೂ ಕಾಡಿದ ಕ್ಷಣ ನೆನಪಿಸಿಕೊಂಡ ಕಲೈ ಮಾಸ್ಟರ್
ಕೆಲಸವೇ ಇಲ್ಲದೇ ಸುಮ್ಮನೆ ಕೂತೀರೋದು ಇದೆ. ಕೊರೊನಾ ಅಷ್ಟು ಕಾಡಿದ ಸಮಯವನ್ನ ನೆನಪಿಸಿಕೊಳ್ಳುವ ಕಲೈ ಮಾಸ್ಟರ್, ನಿಧಾನಕ್ಕೆ ಇಂಡಸ್ಟ್ರೀಯಲ್ಲಿ ಕೆಲಸ ಸಿಗ್ತಾ ಇದೆ ಅಂತಲೂ ಹೇಳಿಕೊಳ್ಳುತ್ತಾರೆ.

ಇದನ್ನೂ ಓದಿ: Ragini Dwivedi: ರೆಡ್ ಟಾಪ್​ನಲ್ಲಿ ರಾಗಿಣಿ ಸ್ಟೈಲ್! ಅರೇಬಿಯನ್ ಕುದುರೆ ಎಂದು ಹೊಗಳಿದ ಅಭಿಮಾನಿ

ವಿಜಯ್ ರಾಘವೇಂದ್ರ ಅಭಿನಯದ ಜೋಗ್ 101 ಸಿನಿಮಾದ ಮೂರು ಹಾಡುಗಳನ್ನ ನೃತ್ಯ ನಿರ್ದೇಶನ ಮಾಡಿದ್ದಾರೆ. ಮಂಗಳೂರು, ಬೆಂಗಳೂರು, ಕನಕಪುರದಲ್ಲೂ ಹಾಡಿನ ಚಿತ್ರೀಕರಣ ಮಾಡಿದ್ದಾರೆ. ಪ್ರಜ್ವಲ್ ದೇವರಾಜ್ ಅಭಿನಯದ ಅಬ್ಬರ ಸಿನಿಮಾದ ಎರಡು ಹಾಡುಗಳನ್ನ ನೃತ್ಯ ನಿರ್ದೇಶನ ಮಾಡಿದ್ದಾರೆ.

ಭಾವಪೂರ್ಣ ಅನ್ನೋ ಇನ್ನೂ ಒಂದು ಸಿನಿಮಾಕ್ಕೂ ಕಲೈ ಕೆಲಸ ಮಾಡಿದ್ದಾರೆ. ಒಟ್ಟಾರೆ ಕೋವಿಡ್ ಬಳಿಕ ಈಗ ಲೈಫ್ ಮತ್ತೆ ಟ್ರ್ಯಾಕ್ ಗೆ ಬರುತ್ತಿದೆ ಅನ್ನೋದು ಕಲೈ ಮಾಸ್ಟರ್ ಒಟ್ಟು ಮಾತಿನ ತಾತ್ಪರ್ಯವೇ ಆಗಿದೆ.
First published: