• Home
  • »
  • News
  • »
  • entertainment
  • »
  • Banaras Cinema: ಕನ್ನಡದ ಬನಾರಸ್ ಟ್ರೈಲರ್ ರಿಲೀಸ್​ಗಾಗಿ ಬರ್ತಿದ್ದಾರೆ ಬಾಲಿವುಡ್ ನಟ

Banaras Cinema: ಕನ್ನಡದ ಬನಾರಸ್ ಟ್ರೈಲರ್ ರಿಲೀಸ್​ಗಾಗಿ ಬರ್ತಿದ್ದಾರೆ ಬಾಲಿವುಡ್ ನಟ

ಬನಾರಸ್ ಟ್ರೈಲರ್ ರಿಲೀಸ್​ ಗೆ ರವಿಚಂದ್ರನ್-ಅರ್ಬಾಜ್

ಬನಾರಸ್ ಟ್ರೈಲರ್ ರಿಲೀಸ್​ ಗೆ ರವಿಚಂದ್ರನ್-ಅರ್ಬಾಜ್

ಕ್ರೇಜಿ ಸ್ಟಾರ್ ರವಿಚಂದ್ರನ್ ಅಂದ್ರೆ ಲಕ್ಕಿ ಮ್ಯಾನ್ ಅನ್ನೋ ನಂಬಿಕೆ ಇದೆ. ರವಿಚಂದ್ರನ್ ಕ್ಲಾಪ್ ಮಾಡಿರೋ ಚಿತ್ರಗಳು ಹಿಟ್ ಆಗಿರೋದೇ ಹೆಚ್ಚು. ಅಂತಹ ಲಕ್ಕಿ ಮ್ಯಾನ್ ಕ್ರೇಜಿ ಸ್ಟಾರ್ ರವಿಚಂದ್ರನ್, ಜಹೀದ್ ಖಾನ್ ಅಭಿನಯದ ಬನಾರಸ್ ಚಿತ್ರದ ಟ್ರೈಲರ್ ರಿಲೀಸ್ ಗೆ ಗೆಸ್ಟ್ ಆಗಿ ಬರ್ತಾ ಇದ್ದಾರೆ.

ಮುಂದೆ ಓದಿ ...
  • Share this:

ಒಲವೇ ಮಂದಾರ ಸಿನಿಮಾದ ಡೈರೆಕ್ಟರ್ ಜಯತೀರ್ಥ (Director Jayatheertha Cinema) ಅವರ ಬನಾರಸ್ (Banaras Cinema)
ಸಿನಿಮಾ ಈಗ ಪ್ಯಾನ್ ಲೆವಲ್ ಗೆ ರಿಲೀಸ್ ಆಗುತ್ತಿದೆ. ಬಹು ಭಾಷೆಯಲ್ಲಿ ನವ ನಾಯಕ ನಟ ಜಹೀದ್ ಖಾನ್ ಅಭಿನಯದ ಈ ಸಿನಿಮಾ ರಿಲೀಸ್ ಆಗುತ್ತಿದೆ. ಬಹು ಭಾಷೆಯ ಟ್ರೈಲರ್ ಕೂಡ ​ಅದ್ಧೂರಿಯಾಗಿಯೇ ರಿಲೀಸ್ ಆಗುತ್ತಿದೆ. ಈ ಒಂದು ಟ್ರೈಲರ್ ರಿಲೀಸ್​ಗೆ ಬಾಲಿವುಡ್​ ಹೆಸರಾಂತ ನಟರೊಬ್ಬರು ಬರ್ತಾಯಿದ್ದಾರೆ. ಕನ್ನಡದ ಸೂಪರ್ ಸ್ಟಾರ್​ (Super Star) ಕೂಡ ಈ ಒಂದು ಪ್ಯಾನ್​ ಇಂಡಿಯಾ ಟ್ರೈಲರ್ (Trailer Release) ರಿಲೀಸ್​ ಗೆ ಬರ್ತಿದ್ದಾರೆ. ಕನ್ನಡ, ತೆಲುಗು, ತಮಿಳು, ಹಿಂದಿ, ಮಲೆಯಾಳಂ ಹೀಗೆ ಬಹು ಭಾಷೆಯಲ್ಲಿಯೆ ಬರ್ತಿರೊ ಕನ್ನಡದ ಬನಾರಸ್ ಸಿನಿಮಾ ತನ್ನದೇ ರೀತಿಯಲ್ಲಿಯೇ ಈಗಲೇ ಸೌಂಡ್ ಮಾಡುತ್ತಿದೆ.


ಬನಾರಸ್ ಚಿತ್ರದ ನಿರ್ದೇಶಕ ಜಯತೀರ್ಥ ಅವರ ಸಿನಿಮಾ ಪ್ರೀತಿ ಬೇರೆ ರೀತಿನೇ ಇದೆ. ಅವರ ಈ ಹಿಂದಿನ ಬೆಲ್ ಬಾಟಂ ಸಿನಿಮಾ ತೆಗೆದುಕೊಂಡ್ರೆ, ಅಲ್ಲಿ ಎಲ್ಲವೂ ಇರೋದು ವಿಶೇಷ ಅನಿಸಿಬಿಡುತ್ತದೆ. ಈ ಚಿತ್ರ ನೋಡಿದ ಪ್ರೇಕ್ಷಕರು ಫುಲ್ ಖುಷ್ ಆಗಿದ್ದರು. ಹರಿಪ್ರಿಯಾ ಹಾಗೂ ರಿಷಬ್ ಶೆಟ್ಟಿ ಅವರ ಪಾತ್ರಗಳನ್ನ ಕಂಡು ಬೇಜಾನ್ ಸಂತೋಷ ಪಟ್ಟಿದ್ದರು.


ಬೆಲ್ ಬಾಟಂ ಡೈರೆಕ್ಟರ್ ಬನಾರಸ್ ಚಿತ್ರ ಹೇಗಿರುತ್ತೇ?
ಇಂತಹ ಚಿತ್ರ ಕೊಟ್ಟ ನಿರ್ದೇಶಕ ಜಯತೀರ್ಥ ಬ್ಯೂಟಿಫುಲ್ ಮನಸ್ಸು ಸಿನಿಮಾ ಕೂಡ ರಿಯಲಿಸ್ಟಿಕ್ ಆಗಿಯೇ ಇತ್ತು. ಬುಲೆಟ್ ಬಸ್ಯಾ ಕೊಂಚ ವಿಭಿನ್ನವಾಗಿಯೇ ಹಾಸ್ಯದ ರಸದೌತಣ ನೀಡಿತ್ತು. ಅದರಂತೆ ಇವರ ಒಲವೇ ಮಂದಾರ ಸಿನಿಮಾ ಈಗಲೂ ಬಹುತೇಕರನ್ನ ಕಾಡುತ್ತದೆ.


Kannada Film Banaras Going to Release On this November-04
ನವೆಂಬರ್-04 ರಂದು ಬನಾರಸ್ ಸಿನಿಮಾ ರಿಲೀಸ್


ನೈಜತೆಯನ್ನೇ ಸಿನಿಮಾ ಚೌಕಟ್ಟಿಗೆ ತರೋ ಡೈರೆಕ್ಟರ್ ಜಯತೀರ್ಥ ಅವರ ಬನಾರಸ್ ಕೂಡ ಹೆಚ್ಚು ಗಮನ ಸೆಳೆಯುತ್ತಿದೆ. ಬನಾರಸ್​ ನಲ್ಲಿಯೆ ಬಹುತೇಕ ಚಿತ್ರೀಕರಣ ಆಗಿರೊ ಈ ಚಿತ್ರದ ಮೂಲಕವೇ ಯುವ ನಟ ಜಹೀದ್ ಖಾನ್ ಚಂದನವನಕ್ಕೆ ಕಾಲಿಡುತ್ತಿದ್ದಾರೆ.


ಇದನ್ನೂ ಓದಿ: Ramachari: ಚಾರು ಕಾಪಾಡೋಕೆ ಸಿಡಿದೆದ್ದು ಬಂದ ರಾಮಾಚಾರಿ, ಹನುಮ ಭಕ್ತನ ಮುಂದೆ ರೌಡಿಗಳು ಉಡೀಸ್!


ಬಹು ಭಾಷೆಯಲ್ಲಿಯೇ ಕನ್ನಡದ ಬನಾರಸ್ ಚಿತ್ರ ರಿಲೀಸ್
ಪ್ರೀತಿ-ಪ್ರೇಮದ ಕಥೆಯ್ನನೇ ಹೇಳ್ತಿರೋ ಈ ಚಿತ್ರದ ಹಾಡು ಗಮನ ಸೆಳೆದಿವೆ. ನಾಯಕ ನಟ ಜಹೀದ್ ಖಾನ್ ಅಭಿನಯದ ಈ ಸಿನಿಮಾದಲ್ಲಿ ಸೋನಲ್ ಸಾಥ್ ಕೊಟ್ಟಿದ್ದಾರೆ. ಇಂತಹ ಸಿನಿಮಾದ ಕೆಲಸ ಬಹುತೇಕ ಪೂರ್ಣಗೊಂಡಿದೆ. ಅಜನೀಶ್ ಲೋಕನಾಥ್ ಸಂಗೀತದ ಹಾಡುಗಳು ಗಮನ ಸೆಳೆಯುತ್ತಿವೆ.


Kannada Film Banaras Going to Release On this November-04
ಬನಾರಸ್ ಸಿನಿಮಾ ಡೈರೆಕ್ಟರ್ ಜಯತೀರ್ಥ


ಹೌದು, ಕನ್ನಡದಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಮ್ಮ ಚಿತ್ರ ರಿಲೀಸ್ ಆಗಬೇಕು ಅನ್ನೋ ಕನಸನ್ನ ಎಲ್ಲರೂ ಕಾಣುತ್ತಿದ್ದಾರೆ. ಕೆಜಿಎಫ್ ಸಿನಿಮಾ ಆದ್ಮೇಲೆ ಎಲ್ಲರೂ ಅದನ್ನೇ ಫಾಲೋ ಮಾಡುತ್ತಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಕಬ್ಜ ಚಿತ್ರ ಎಲ್ಲ ಭಾಷೆಯಲ್ಲು ಬರುತ್ತಿದೆ. ಜಹೀದ್ ಖಾನ್ ಅಭಿಯದ ಬನಾರಸ್ ಸಿನಿಮಾ ಕೂಡ ಪ್ಯಾನ್ ಇಂಡಿಯಾ ಮಟ್ಟದಲ್ಲಿಯೇ ರಿಲೀಸ್ ಆಗುತ್ತಿದೆ.


ಬನಾರಸ್ ಚಿತ್ರಕ್ಕಾಗಿಯೇ ಪ್ಯಾನ್ ಇಂಡಿಯಾ ಪ್ರೆಸ್ ಮೀಟ್
ಬನಾರಸ್ ಸಿನಿಮಾದ ಪ್ರೆಸ್ ಮೀಟ್ 26.09.22 ರಂದು ಸಂಜೆ 6 ಗಂಟೆಗೆ ನಡೆಯುತ್ತಿದೆ. ಕನ್ನಡ,ತೆಲುಗು,ತಮಿಳು, ಮಲೆಯಾಳಂ, ಹಿಂದಿ ಹೀಗೆ ಎಲ್ಲ ಭಾಷೆಯ ಟ್ರೈಲರ್ ಕೂಡ ರಿಲೀಸ್ ಆಗುತ್ತಿದೆ. ಈ ಒಂದು ಟ್ರೈಲರ್ ರಿಲೀಸ್ ಇವೆಂಟ್​ಗೆ ಹೈದ್ರಾಬಾದ್, ಚೆನ್ನೈ, ಮುಂಬೈ ಹೀಗೆ ಎಲ್ಲೆಡೆಯಿಂದಲೂ ಪತ್ರಕರ್ತರು ಬರುತ್ತಿದ್ದಾರೆ.


ಇದನ್ನೂ ಓದಿ: Ganesh In Kenya Market: ಆಫ್ರಿಕಾ ದೇಶದ ಕೀನ್ಯಾ ಮಾರ್ಕೆಟ್​ ನಲ್ಲಿ ಗೋಲ್ಡನ್ ಗಣಿ ಸಖತ್ ರೋಮಿಂಗೋ ರೋಮಿಂಗ್


ಬನಾರಸ್ ಟ್ರೈಲರ್ ರಿಲೀಸ್​ಗೆ ಕನ್ನಡದ ಕ್ರೇಜಿ ಸ್ಟಾರ್ ಗೆಸ್ಟ್
ಕ್ರೇಜಿ ಸ್ಟಾರ್ ರವಿಚಂದ್ರನ್ ಅಂದ್ರೆ ಲಕ್ಕಿ ಮ್ಯಾನ್ ಅನ್ನೋ ನಂಬಿಕೆ ಇದೆ. ರವಿಚಂದ್ರನ್ ಕ್ಲಾಪ್ ಮಾಡಿರೋ ಚಿತ್ರಗಳು ಹಿಟ್ ಆಗಿರೋದೇ ಹೆಚ್ಚು. ಅಂತಹ ಲಕ್ಕಿ ಮ್ಯಾನ್ ಕ್ರೇಜಿ ಸ್ಟಾರ್ ರವಿಚಂದ್ರನ್, ಜಹೀದ್ ಖಾನ್ ಅಭಿನಯದ ಬನಾರಸ್ ಚಿತ್ರದ ಟ್ರೈಲರ್ ರಿಲೀಸ್ ಗೆ ಗೆಸ್ಟ್ ಆಗಿ ಬರ್ತಾ ಇದ್ದಾರೆ.


ಬನಾರಸ್​ಗಾಗಿ ಬಾಲಿವುಡ್​ ನಿಂದ ಬರ್ತಿದ್ದಾರೆ ಸಲ್ಮಾನ್ ಸಹೋದರ
ನವ ನಾಯಕ ನಟ ಜಹೀದ್ ಖಾನ್ ಅಭಿನಯದ ಬನಾರಸ್ ಸಿನಿಮಾದ ಟ್ರೈಲರ್ ರಿಲೀಸ್​ಗೆ ಸಲ್ಮಾನ್ ಸಹೋದರ ಅರ್ಬಾಜ್ ಖಾನ್ ಗೆಸ್ಟ್ ಆಗಿಯೇ ಬರ್ತಿದ್ದಾರೆ. ಇಡೀ ಟೀಮ್​ ಗೆ ಮನಸಾರೆ ಶುಭ ಹಾರೈಕೆ ಮಾಡಲಿದ್ದಾರೆ.


ಬಹು ಭಾಷೆಯಲ್ಲಿ ತೆರೆಗೆ ಬರಲು ರೆಡಿ ಆಗಿರೋ ಬನಾರಸ್ ಸಿನಿಮಾ ಇದೆ ವರ್ಷ ರಿಲೀಸ್ ಆಗುತ್ತಿದೆ. ನವೆಂಬರ್-04 ರಂದು ಎಲ್ಲೆಡೆ ಸಿನಿಮಾವನ್ನ ತೆರೆಗೆ ತರೋಕೆ ಪ್ಲಾನ್ ಆಗಿದೆ. ಆ ಪ್ಲಾನ್ ನಂತೇನೆ ಇದೇ ದಿನವೇ ಸಿನಿಮಾ ರಿಲೀಸ್ ಆಗುತ್ತಿದೆ.

First published: