• Home
  • »
  • News
  • »
  • entertainment
  • »
  • Actress Chandini: ನಾನೇ ಬೇಕು ಎಂದು ನನ್ನೇ ಸೆಲೆಕ್ಟ್ ಮಾಡಿದ್ರು ಉಪ್ಪಿ! ಆ ದಿನಗಳನ್ನು ನೆನಪಿಸಿಕೊಂಡ್ರು ಚಾಂದಿನಿ!

Actress Chandini: ನಾನೇ ಬೇಕು ಎಂದು ನನ್ನೇ ಸೆಲೆಕ್ಟ್ ಮಾಡಿದ್ರು ಉಪ್ಪಿ! ಆ ದಿನಗಳನ್ನು ನೆನಪಿಸಿಕೊಂಡ್ರು ಚಾಂದಿನಿ!

ನಾನೇ ಬೇಕು ಎಂದು ನನ್ನೇ ಸೆಲೆಕ್ಟ್ ಮಾಡಿದ್ರು ಉಪ್ಪಿ!

ನಾನೇ ಬೇಕು ಎಂದು ನನ್ನೇ ಸೆಲೆಕ್ಟ್ ಮಾಡಿದ್ರು ಉಪ್ಪಿ!

ನಟಿ ಚಾಂದಿನಿ ತಮ್ಮ ಅಭಿನಯದ A ಚಿತ್ರದ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿದ್ದಾರೆ. ತಮ್ಮ ಮೊದಲ ಸಿನಿಮಾ ಅನ್ನೋ ಪ್ರೀತಿ ಈಗಲೂ ಹಾಗೆ ಇದೆ. ಚಾಂದಿನಿ ಈ ಮೂಲಕ ಕನ್ನಡ ನಾಡಿನ ಜನತೆಗೆ ಈಗಲೂ ಧನ್ಯವಾದ ಹೇಳುತ್ತಾರೆ.

  • News18 Kannada
  • Last Updated :
  • Bangalore [Bangalore], India
  • Share this:

ರಿಯಲ್ ಸ್ಟಾರ್ ಉಪೇಂದ್ರ (Real Star Upendra) ಅಭಿನಯದ A ಸಿನಿಮಾ ಈಗ 25 ವರ್ಷ ಪೂರ್ಣಗೊಳಿಸಿದೆ. ಕನ್ನಡ ಸಿನಿಮಾರಂಗದಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದ ಈ ಚಿತ್ರ (Reverse Screenplay) ಚಿತ್ರಕಥೆಯಿಂದಲೂ ಹೊಸ ಅಲೆಯನ್ನೇ ಎಬ್ಬಿಸಿತ್ತು. ಈ ಚಿತ್ರದಲ್ಲಿ ಸಾಕಷ್ಟು ವಿಶೇಷತೆಗಳಿವೆ. ಚಿತ್ರದ ಮೇಕಿಂಗ್ (A Film Making) ಸಮಯದಲ್ಲೂ ಸ್ಪೆಷಲ್ ಅನುಭವ ಚಿತ್ರ ತಂಡಕ್ಕೆ ಆಗಿವೆ. ಆದರೆ ಈ ಚಿತ್ರದ ನಾಯಕಿಯ ಆಯ್ಕೆ ಕೂಡ ಅಷ್ಟೇ ರೋಚಕವಾಗಿಯೇ ಇದೆ. ಚಿತ್ರದ ನಾಯಕಿಯ ಪಾತ್ರಕ್ಕೆ ರಿಯಲ್ ಸ್ಟಾರ್ ಉಪೇಂದ್ರ ಸಾಕಷ್ಟು ಆಡಿಷನ್ ಮಾಡಿದ್ದರು. ಆದರೆ ಕೊನೆಗೆ ಕಣ್ಣಿಗೆ ಬಿದ್ದ (Actress Chandini) ಚಾಂದನಿ ಈ ಚಿತ್ರದ ನಾಯಕಿ ಆಗಿ ಆಯ್ಕೆ ಬಿಟ್ಟರು. ಆ ಕ್ಷಣದ ಒಂದಷ್ಟು ವಿಷಯಗಳನ್ನ  ಚಾಂದಿನಿ ನ್ಯೂಸ್-18 ಕನ್ನಡ ಡಿಜಿಟಲ್​ಗೆ ಹಂಚಿಕೊಂಡಿದ್ದಾರೆ.


ಅಮೆರಿಕದಲ್ಲಿದ್ದ ಚಾಂದಿನಿ ಸೆಲೆಕ್ಟ್ ಆಗಿದ್ದು ಹೇಗೆ?
ಕನ್ನಡದ A ಚಿತ್ರಕ್ಕೆ ನಟಿ ಚಾಂದಿನಿ ಆಯ್ಕೆ ನಿಜಕ್ಕೂ ವಿಶೇಷವಾಗಿತ್ತು. ಎರಡೇ ಎರಡು ಫೋಟೋವನ್ನ ನೋಡಿದ್ದ ನಟ-ನಿರ್ದೇಶಕ ರಿಯಲ್ ಸ್ಟಾರ್ ಉಪೇಂದ್ರ ಒಮ್ಮೆಲೆ ಓಕೆ ಅಂದು ಬಿಟ್ಟರು. ಇವರೇ ನಮ್ಮ ಸಿನಿಮಾದ ಹೀರೋಯಿನ್ ಅಂತಲೇ ಉಪ್ಪಿ ಫೈನಲ್ ಮಾಡಿದ್ದರು.


Kannada Film Actress Chandini talk about Kannada A Movie
ಅಮೆರಿಕಾದಿಂದ ನೇರವಾಗಿ ಸೆಟ್​ಗೆ ಬಂದಿದ್ದ ಚಾಂದಿನಿ


ದೂರದ ಅಮೆರಿಕಾದಲ್ಲಿ ಆಗ ಚಾಂದಿನಿ ನೆಲೆಸಿದ್ದರು. ಅಲ್ಲಿಂದಲೇ ಈ ಚಿತ್ರಕ್ಕೆ ಅದ್ಯಾರೋ ಫೋಟೋ ಕಳಿಸಿಕೊಟ್ಟಿದ್ದರು. ಅದನ್ನ ರಿಯಲ್ ಸ್ಟಾರ್ ಉಪೇಂದ್ರ ನೋಡಿದ್ದರು. ಫೋಟೋ ನೋಡಿಯೇ ಚಾಂದಿನಿಯನ್ನ ಉಪ್ಪಿ ಸೆಲೆಕ್ಟ್ ಮಾಡಿದ್ದರು.




ಅಮೆರಿಕಾದಿಂದ ನೇರವಾಗಿ ಸೆಟ್​ಗೆ ಬಂದಿದ್ದ ಚಾಂದಿನಿ
ನಟಿ ಚಾಂದಿನಿ ಲಕ್ ಚೆನ್ನಾಗಿತ್ತು. ರಿಯಲ್ ಸ್ಟಾರ್ ಉಪ್ಪಿ ಕಣ್ಣಿಗೆ ಬಿದ್ದಿದ್ದರು. ಅದರಿಂದ ಚಾಂದಿನಿ ಲೈಫ್ ಚೇಂಜ್ ಆಗಿ ಬಿಡ್ತು ನೋಡಿ. ಉಪ್ಪಿಯ A ಸಿನಿಮಾ ಹಿಟ್ ಆಗಿದ್ದೇ ಬಂತು, ಚಾಂದಿನಿ ಕನ್ನಡ ಸಿನಿಪ್ರೇಮಿಗಳಿಗೆ ಚಿರಪರಿಚಿತರಾದರು.


ಚಾಂದಿನಿ ಸಿನಿಮಾ ಬಗ್ಗೆ ಹೆಚ್ಚೇನೂ ತಿಳಿದುಕೊಂಡವರಲ್ಲ. ಈ ಚಿತ್ರದ ಮೂಲಕವೇ ಬಣ್ಣದ ಪ್ರಪಂಚವನ್ನ ನೋಡಿದ್ದರು. ಮೊದಲ ಸಿನಿಮಾದಲ್ಲಿ ವಿಭಿನ್ನವಾಗಿ ಕಾಣಿಸಿಕೊಂಡು ಸಿನಿ ಪ್ರೇಮಿಗಳ ದಿಲ್ ಕದ್ದು ಬಿಟ್ಟಿದ್ದರು.


ನಾನೇ ಬೇಕು ಎಂದು ನನ್ನೇ ಸೆಲೆಕ್ಟ್ ಮಾಡಿದ್ರು ಉಪ್ಪಿ!
A ಸಿನಿಮಾದ ನಾಯಕಿಯ ಪಾತ್ರಕ್ಕೆ ಉಪೇಂದ್ರ 500 ಯುವತಿಯರ ಆಡಿಷನ್ ಮಾಡಿದ್ದರು. ಆದರೆ ನನ್ನ ಎರಡೇ ಎರಡು ಫೋಟೋವನ್ನ ನೋಡಿಯೇ ನನ್ನ ಸೆಲೆಕ್ಟ್ ಮಾಡಿದ್ದರು. ನಿಜಕ್ಕೂ ನಾನು ಧನ್ಯ ಅಂತಲೇ ನಟಿ ಚಾಂದಿನಿ ಆ ದಿನಗಳನ್ನ ನೆನಪಿಸಿಕೊಳ್ಳುತ್ತಾರೆ.


ರಿಯಲ್ ಸ್ಟಾರ್ ಉಪ್ಪಿಗೆ ತಮ್ಮ ಚಿತ್ರದ ನಾಯಕಿ ಹೀಗೇ ಇರಬೇಕು ಅನ್ನೋ ಸ್ಪಷ್ಟ ಕಲ್ಪನೆ ಇತ್ತು. ಆ ಹಿನ್ನೆಲೆಯಲ್ಲಿ ನನ್ನ ಫೋಟೋ ನೋಡಿದಾಕ್ಷಣ ಅವರು ನನ್ನ ಸೆಲೆಕ್ಟ್ ಮಾಡಿದರು ಅಂತಲೂ ಚಾಂದಿನಿ ಹೇಳುತ್ತಾರೆ.


ನಾನು ಈಗಲೂ A ಚಿತ್ರದಿಂದಲೇ ಗುರುಸಿಕೊಳ್ಳುತ್ತೇನೆ!
ನಟಿ ಚಾಂದಿನಿ ತಮ್ಮ ಅಭಿನಯದ A ಚಿತ್ರದ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿದ್ದಾರೆ. ತಮ್ಮ ಮೊದಲ ಸಿನಿಮಾ ಅನ್ನೋ ಪ್ರೀತಿ ಈಗಲೂ ಹಾಗೆ ಇದೆ. ಚಾಂದಿನಿ ಈ ಮೂಲಕ ಕನ್ನಡ ನಾಡಿನ ಜನತೆಗೆ ಈಗಲೂ ಧನ್ಯವಾದ ಹೇಳುತ್ತಾರೆ.


ಕನ್ನಡದ A ಚಿತ್ರದಲ್ಲಿ ರಿವರ್ಸ್ ಸ್ಕ್ರೀನ್ ಪ್ಲೇ ಇತ್ತು. ಅದು ಅಂದಿಗೆ ನಿಜಕ್ಕೂ ಭಾರೀ ವಿಶೇಷ ಪ್ರಯೋಗವೇ ಆಗಿತ್ತು. ಅದನ್ನ ನೋಡಿರೋ ಅದೆಷ್ಟೋ ಜನ ಈಗಲೂ ನೆನಪಿಸಿಕೊಳ್ಳುತ್ತಾರೆ. ಕೇರಳ, ಜಪಾನ್ ಹೀಗೆ ಎಲ್ಲೆಡೆ ಈ ಚಿತ್ರವನ್ನು ನೋಡಿ ಖುಷಿಪಟ್ಟಿದ್ದರು.


Kannada Film Actress Chandini talk about Kannada A Movie
ನಾನು ಈಗಲೂ A ಚಿತ್ರದಿಂದಲೇ ಗುರುಸಿಕೊಳ್ಳುತ್ತೇನೆ!


ನನ್ನನ್ನ ಜನ ಈಗಲೂ A ಚಿತ್ರದಿಂದಲೇ ಗುರುತಿಸುತ್ತಾರೆ. ಎಲ್ಲೆ ಹೋದರೂ ಸರಿ, ನನ್ನ ಜೊತೆಗೆ A ಸಿನಿಮಾದ ರಿವರ್ಸ್ ಸ್ಕ್ರೀನ್​​ ಪ್ಲೇ ಕುರಿತು ಚರ್ಚೆ ಮಾಡುತ್ತಾರೆ. ಅಂತಹ ಈ ಚಿತ್ರ ರಿಲೀಸ್ ಆಗಿ 25 ವರ್ಷ ಆಗಿದೆ ಅನ್ನುವುದು ನಿಜಕ್ಕೂ ಹೆಮ್ಮೆಯ ವಿಷಯವೇ ಆಗಿದೆ ಎಂದು ಚಾಂದಿನಿ ಹೇಳುತ್ತಾರೆ.


ಇದನ್ನೂ ಓದಿ: Kantara Movie: ರೀಲ್ ಅಲ್ಲ ರಿಯಲ್, ಕಾಂತಾರ ತಂಡ ಹರಕೆ ತೀರಿಸಿದ ಕ್ಷಣ ಹೀಗಿತ್ತು


ಚಾಂದಿನಿ ಚೆನ್ನೈಯಲ್ಲಿ ನೆಲೆಸಿದ್ದಾರೆ. ಬೆಂಗಳೂರು ಟಚ್ ಇನ್ನು ಬಿಟ್ಟು ಹೋಗಿಲ್ಲ. ಆಗಾಗ ಮುಂಬೈಗೂ ಹೋಗಿ ಬರುತ್ತಾರೆ. ಕನ್ನಡದಲ್ಲಿ ಮತ್ತೆ ಸಿನಿಮಾ ಮಾಡಬೇಕು ಎನ್ನುವ ಆಸೆಯನ್ನು ನ್ಯೂಸ್-18 ಕನ್ನಡ ಡಿಜಿಟಲ್​ ಜೊತೆಗೆ ಚಾಂದಿನಿ ಶೇರ್ ಮಾಡಿಕೊಂಡಿದ್ದಾರೆ.

First published: