Rishi Actor: ಸ್ಪೆಷಲ್ ಆಗಿ ಓಟ್ ಕೇಳಿದ ಕವಲುದಾರಿ ಹೀರೋ!

ಸ್ಪೆಷಲ್ ಆಗಿಯೇ ಓಟ್ ಕೇಳಿದ ಕವಲುದಾರಿ ಹೀರೋ!

ಸ್ಪೆಷಲ್ ಆಗಿಯೇ ಓಟ್ ಕೇಳಿದ ಕವಲುದಾರಿ ಹೀರೋ!

ಕನ್ನಡ ಕವಲುದಾರಿ ಸಿನಿಮಾ ನಟ ರಿಷಿ ಎಲೆಕ್ಷನ್ ನಿಲ್ಲುತ್ತಿದ್ದಾರೆ. ಇದಕ್ಕಾಗಿ ಒಂದು ಸ್ಪೆಷಲ್ ವಿಡಿಯೊ ಮಾಡಿದ್ದಾರೆ. ಇದು ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ ನೋಡಿ.

  • News18 Kannada
  • 2-MIN READ
  • Last Updated :
  • Bangalore [Bangalore], India
  • Share this:
  • published by :

ಕನ್ನಡದ ನಾಯಕ ನಟ ರಿಷಿ ಹೊಸದೊಂದು (Kavaludaari Rishi Video viral) ಪ್ರಯೋಗ ಮಾಡಿದ್ದಾರೆ. ತಮ್ಮ ಈ ಒಂದು ಪ್ರಯೋಗದಲ್ಲಿ ಎಲೆಕ್ಷನ್ ಕುರಿತು ಮಾತನಾಡಿದ್ದಾರೆ. ಮತದಾನ ಮಾಡುವವರಿಗೂ (Rishi Special Video Viral) ವಿಡಂಭನಾತ್ಮಕವಾಗಿಯೇ ಒಂದಷ್ಟು ಸಲಹೆ ಕೊಟ್ಟಿದ್ದಾರೆ. ಸಾಮಾನ್ಯವಾಗಿ ಸೆಲೆಬ್ರಿಟಿಗಳು ಎಲ್ಲರೂ ಓಟ್ ಮಾಡಿ ಅಂತ ಹೇಳ್ತಾರೆ. ಇಲ್ಲವೇ ನಿಮ್ಮ ಅಮೂಲ್ಯವಾದ (Kannada Film Hero Rishi) ಮತವನ್ನ ಹಾಳು ಮಾಡಬೇಡಿ ಅಂತಲೂ ಸಲಹೆ ಕೊಡ್ತಾರೆ. ಆದರೆ ಕವಲುದಾರಿ ಚಿತ್ರದ ನಾಯಕ ನಟ ರಿಷಿ ಹಾಗೆ ಹೇಳಿಯೇ ಇಲ್ಲ. ರಾಮನ ಅವತಾರ ಸಿನಿಮಾದ ಪಾತ್ರದ ಮೂಲಕ ವಿಶೇಷವಾಗಿಯೇ ಮತದಾನ ಮತ್ತು ಚುನಾವಣೆ ಕುರಿತು (Rishi Video On Voting) ಜಾಗೃತಿ ಮೂಡಿಸಿದ್ದಾರೆ.


ನನಗೆ ಓಟ ಮಾಡಿ-ನಾನು ನಿಮ್ಮ ಸಾಲ ತೀರಿಸುವೆ


ಕವಲುದಾರಿ ಚಿತ್ರದ ನಾಯಕ ನಟ ರಿಷಿ ವಿಶೇಷ ಚಿತ್ರಗಳನ್ನೆ ಮಾಡುತ್ತಾ ಬಂದಿದ್ದಾರೆ. ಕವಲುದಾರಿ ಚಿತ್ರದ ಅದಕ್ಕೆ ಒಳ್ಳೆ ಉದಾಹರಣೆ ಆಗಿದೆ. ಅಲಮೇಲಮ್ಮ ಸಿನಿಮಾ ಕೂಡ ಸ್ಪೆಷಲ್ ಆಗಿತ್ತು. ರಾಮನ ಅವತಾರ ಅನ್ನೋ ಇನ್ನೊಂದು ಚಿತ್ರವನ್ನ ರಿಷಿ ಮಾಡಿದ್ದಾರೆ.


Kannada Film Actor Rishi Video on Voting got Viral
ನಾನು ನಿಮ್ಮ ಸಾಲ ತೀರಿಸುವೆ ಎಂದ ನಾಯಕ ರಿಷಿ


ನಾನು ನಿಮ್ಮ ಸಾಲ ತೀರಿಸುವೆ ಎಂದ ನಾಯಕ ರಿಷಿ


ಈ ಚಿತ್ರದಲ್ಲಿ ರಾಮಕೃಷ್ಣ ಅನ್ನುವ ಪಾತ್ರದಲ್ಲಿ ರಿಷಿ ಅಭಿನಯಿಸಿದ್ದಾರೆ. ಈ ಪಾತ್ರವಾಗಿಯೇ ರಿಷಿ ಒಂದಷ್ಟು ವಿಷಯವನ್ನ ಹೇಳಿಕೊಂಡಿದ್ದಾರೆ. ರಾಜಕೀಯದ ಒಟ್ಟು ಒಳ ಸುಳಿಗಳನ್ನ ಇಲ್ಲಿ ಮಾತಿನ ಮೂಲಕವೇ ಹೇಳಿಕೊಂಡಿದ್ದಾರೆ.




ನನಗೆ ಓಟ್ ಮಾಡಿದ್ರೆ ನಾನು ನಿಮ್ಮ ಸಾಲವನ್ನ ತೀರಿಸುತ್ತೇನೆ. ಅದಕ್ಕಾಗಿಯೇ ನಾನು ವಿಧಾನ ಸೌಧ ಮಾರುತ್ತೇನೆ. ಓಟ್ ಮಾಡಿ ಓಟ್ ಮಾಡಿ ಅಂತಲೇ ಹೇಳುತ್ತಾರೆ.


ಸ್ಪೆಷಲ್ ಆಗಿಯೇ ಓಟ್ ಕೇಳಿದ ಕವಲುದಾರಿ ಹೀರೋ!


ಆದರೆ ಇಲ್ಲಿವರೆಗೂ ಯಾವುದೇ ಸೆಲೆಬ್ರಿಟಿ ಈ ರೀತಿ ಓಟ ಕೇಳಿದ್ದು ಇಲ್ವೇ ಇಲ್ಲ. ಪಾತ್ರವಾಗಿ ಎಲ್ಲೂ ಈ ರೀತಿ ಶ್ರೀಸಾಮಾನ್ಯರಿಗೆ ಮತದಾನದ ಮಹತ್ವ ತಿಳಿಸಿದ್ದು ಇಲ್ವೇನೋ. ಆ ರೀತಿಯಲ್ಲಿಯೇ ರಿಷಿ ಇಲ್ಲಿ ಮತದಾನದ ಮಹತ್ವವನ್ನ ತಿಳಿಸಿದ್ದಾರೆ.









View this post on Instagram






A post shared by Rishi (@rishi_actor)





ರಿಷಿ ತುಂಬಾನೇ ಕ್ರಿಯೇಟಿವ್ ಆಗಿದ್ದಾರೆ ಅನ್ನೋದಕ್ಕೆ ಈ ಒಂದು ವಿಡಿಯೋ ಸಾಕ್ಷಿ ಆಗುತ್ತದೆ. ಅದರ ಬೆನ್ನಲ್ಲಿಯೇ ಮತದಾನದ ಬಗ್ಗೆ ಜಾಗೃತಿ ಮೂಡಿಸ್ತಿರೋದು ಕೂಡ ತುಂಬಾ ವಿಶೇಷವಾಗಿಯೇ ಕಾಣಿಸುತ್ತದೆ. ಇದನ್ನ ಇನ್ನೂ ಒಂದು ರೀತಿಯಲ್ಲಿ ಹೇಳೋದಾದ್ರೆ, ಮತದಾನದ ಬಗ್ಗೆ ಜಾಗೃತಿ ಆಯಿತು. ಸಿನಿಮಾದ ಪ್ರಚಾರವೂ ಆಯಿತು ಅಂತಲೂ ಹೇಳಬಹುದೇನೋ.


ರಾಮನ ಅವತಾರ ನಟ ರಿಷಿಯ ಮತದಾನದ ಜಾಗೃತಿ


ರಾಮನ ಅವತಾರ ಸಿನಿಮಾದಲ್ಲಿ ರಾಮನ ರೂಪದಲ್ಲಿಯೇ ರಿಷಿ ಕಾಣಿಸಿಕೊಂಡಿದ್ದಾರೆ. ಮೊನ್ನೆ ಶ್ರೀರಾಮ ನವಮಿ ದಿನ ಚಿತ್ರದ ಒಂದು ಪೋಸ್ಟರ್ ಕೂಡ ರಿಲೀಸ್ ಆಗಿದೆ. ಆದರೆ ಈಗ ಚುನಾವಣೆ ಬಂತಲ್ವೇ ಹಾಗಾಗಿಯೇ ರಿಷಿ ತಮ್ಮ ಚಿತ್ರದ ಕುರಿತು ಸ್ಪೆಷಲ್ ವಿಡಿಯೋ ಮೂಲಕ ತಿಳಿಸಿದ್ದಾರೆ.


Kannada Film Actor Rishi Video on Voting got Viral
ರಾಮನ ಅವತಾರ ನಟ ರಿಷಿಯ ಮತದಾನದ ಜಾಗೃತಿ


ರಿಷಿ ಅಭಿನಯದ ಈ ಸಿನಿಮಾ ಅಲ್ಲದೇ ಇನ್ನೂ ಕೆಲವು ಸಿನಿಮಾಗಳನ್ನ ರಿಷಿ ಒಪ್ಪಿಕೊಂಡಿದ್ದಾರೆ. ಆ ಚಿತ್ರಗಳ ಕೆಲಸ ಕೂಡ ನಡೆಯುತ್ತಿದೆ. ಅಷ್ಟರಲ್ಲಿಯೇ ಚುನಾವಣೆ ಸಮಯದಲ್ಲಿ ಈ ಒಂದು ಜಾಗೃತಿ ವಿಡಿಯೋ ಮಾಡುವ ಮುಖಾಂತರ ರಿಷಿ ಎಲ್ಲರ ಗಮನ ಸೆಳೆದಿದ್ದಾರೆ.


ಸೋಷಿಯಲ್ ಮೀಡಿಯಾದ ತಮ್ಮ ಪೇಜ್ ಅಲ್ಲಿ ರಿಷಿ ಈ ಒಂದು ವಿಡಿಯೋ ಹಂಚಿಕೊಂಡಿದ್ದಾರೆ. ತಮ್ಮ ಪಾತ್ರದ ಹೆಸರು ಮತ್ತು ತಮ್ಮನ್ನ ಜನ ಏನಂತಾ ಕರೆಯುತ್ತಾರೆ ಅನ್ನೋದನ್ನ ಕೂಡ ಹೇಳಿಕೊಂಡಿದ್ದಾರೆ.


ಇದನ್ನೂ ಓದಿ: Rashmika Mandanna: ಹೊಸ ರೀತಿಯ ಸಿನಿಮಾ ಮಾಡಲು ಸಜ್ಜಾದ ರಶ್ಮಿಕಾ ಮಂದಣ್ಣ, ಈ ಬಾರಿ ಇರುತ್ತೆ ಭಾರೀ ವಿಶೇಷತೆ!

top videos


    ಆದರೆ ಇದೆಲ್ಲವೂ ಒಂದು ಪಾತ್ರವಾಗಿಯೇ ರಿಷಿ ಇಲ್ಲಿ ತಿಳಿಸಿದ್ದಾರೆ. ಇವರ ಈ ಒಂದು ವಿಡಿಯೋವನ್ನ ನೋಡಿದ್ರೆ ರಾಜಕಾಣಿಗಳ ಮನಸ್ಥಿತಿ ಮತ್ತು ಭ್ರಷ್ಟಾಚಾರದ ಸಣ್ಣ ವಿಡಂಭನೆ ಕೂಡ ಇಲ್ಲಿ ಎದ್ದು ಕಾಣುತ್ತದೆ.

    First published: