• Home
  • »
  • News
  • »
  • entertainment
  • »
  • Prashanth Neel: ಕೆಜಿಎಫ್ ಪ್ರಶಾಂತ್ ನೀಲ್ ಚಿತ್ರದಲ್ಲಿ ಉಡಾಳ್ ಬಾಬು; ನ್ಯೂಸ್​18 ಕನ್ನಡ ಡಿಜಿಟಲ್​ಗೆ ನಟ ಪ್ರಮೋದ್ ಪಂಜು ಹೇಳಿದ್ದೇನು?

Prashanth Neel: ಕೆಜಿಎಫ್ ಪ್ರಶಾಂತ್ ನೀಲ್ ಚಿತ್ರದಲ್ಲಿ ಉಡಾಳ್ ಬಾಬು; ನ್ಯೂಸ್​18 ಕನ್ನಡ ಡಿಜಿಟಲ್​ಗೆ ನಟ ಪ್ರಮೋದ್ ಪಂಜು ಹೇಳಿದ್ದೇನು?

ನಟ ಪ್ರಮೋದ್ ಪಂಜು New-18 ಕನ್ನಡ ಡಿಜಿಟಲ್​ಗೆ ಹೇಳಿದ್ದೇನು?

ನಟ ಪ್ರಮೋದ್ ಪಂಜು New-18 ಕನ್ನಡ ಡಿಜಿಟಲ್​ಗೆ ಹೇಳಿದ್ದೇನು?

ನಟ ಪ್ರಮೋದ್ ಪಂಜು ನ್ಯೂಸ್-18 ಕನ್ನಡ ಡಿಜಿಟಿಲ್​ಗೆ ಈ ವಿಷಯಕ್ಕೆ ಸಂಬಂಧಿಸಿದಂತೆ ರಿಯಾಕ್ಟ್ ಮಾಡಿದ್ದಾರೆ. ಸದ್ಯ ಹರಿದಾಡುತ್ತಿರೋದು Just A News ಅಷ್ಟೆ. ಪ್ರೋಡಕ್ಷನ್ ಹೌಸ್​ ನಿಂದ ಯಾವುದು ಇನ್ನು ಕನ್ಫರ್ಮ್​ ಆಗಿಲ್ಲ. ಆದ ಕೂಡಲೇ ಅಧಿಕೃತ ಮಾಹಿತಿ ಕೊಡೋದಾಗಿ ಹೇಳಿದ್ದಾರೆ.

  • News18 Kannada
  • Last Updated :
  • Bangalore [Bangalore], India
  • Share this:

ಸ್ಯಾಂಡಲ್​​ವುಡ್ ಡೈರೆಕ್ಟರ್ (Prashanth Neel) ಪ್ರಶಾಂತ್ ನೀಲ್ ಸಿನಿಮಾಗಳು ಭಾರೀ ಸದ್ದು ಮಾಡುತ್ತವೆ. ಆದರೆ ರಿಲೀಸ್ ಮುಂಚೆ ಆ ಚಿತ್ರಗಳ ಒಂದೇ ಒಂದು ವಿಷಯವೂ ಹೊರಗೆ ಬೀಳೋದಿಲ್ಲ. ಅಷ್ಟು ಸ್ಟ್ರಿಕ್ಟ್ ಆಗಿಯೇ ಎಲ್ಲವೂ ನಡೆದು ಹೋಗುತ್ತದೆ. ಉಗ್ರಂ (Ugramm Cinema) ಸಿನಿಮಾ ವಿಷಯದಲ್ಲೂ ಅದೇ ಗೌಪ್ಯತೆಯನ್ನ ಪ್ರಶಾಂತ್ ನೀಲ್ ಕಾಪಾಡಿದ್ರು. ಅದು ಸೂಪರ್ ಹಿಟ್ ಆಯಿತು. ಕೆಜಿಎಫ್​ (KGF Cinema)​ ಸಿನಿಮಾ ವಿಷಯದಲ್ಲಿ ಎಲ್ಲವೂ ಗುಪ್ತ-ಗುಪ್ತವಾಗಿಯೇ ಇತ್ತು. ಇದಾದ್ಮೇಲೆ ತೆಲುಗು ಸಲಾರ್ ಸಿನಿಮಾದ ವಿಷಯದಲ್ಲೂ ಅದೇ ಗೌಪ್ಯತೆ ಕಾಪಾಡಲಾಗಿದೆ. ಆದರೂ ಸಲಾರ್ (Salar Cinema) ಸಿನಿಮಾದ ಒಂದು ನ್ಯೂಸ್ ಭಾರೀ ಕ್ಯೂರಿಯೋಸಿಟಿ ಕ್ರಿಯೇಟ್ ಮಾಡಿದೆ. ಅದೇನೂ ಅನ್ನೋದನ್ನ ಮುಂದೆ ಓದಿ.


ಕೆಜಿಎಫ್ ಪ್ರಶಾಂತ್ ನೀಲ್ ಚಿತ್ರದಲ್ಲಿ ಉಡಾಳ್ ಬಾಬು!
ಉಡಾಳ್ ಬಾಬು ಯಾರು ಅಂತ ಹೇಳೋದೇ ಬೇಡ. ರತ್ನನ್ ಪ್ರಪಂಚ ಚಿತ್ರ ವೀಕ್ಷಿಸಿ ಅದೆಷ್ಟೋ ಜನ ಈ ಪಾತ್ರವನ್ನ ಮೆಚ್ಚಿಕೊಂಡರು. ಸಿನಿಮಾ ಮುಗಿದು ಹೊರ ಬಂದ್ಮೇಲೂ ಉಡಾಳ್ ಬಾಬು ಮನಸ್ಸಿನಲ್ಲಿಯೇ ಇದ್ದರು.


ಉಡಾಳ್ ಬಾಬು ಪಾತ್ರದ ಮೂಲಕ ಅತಿ ಹೆಚ್ಚು ಜನರ ಪ್ರೀತಿ ಗಳಿಸಿರೋ ನಟ ಪ್ರಮೋದ ಪಂಜು ಅದ್ಭುತ ನಟ ಎಂದು ಎಲ್ಲರಿಗೂ ಗೊತ್ತಿದೆ. ಪ್ರಿಮಿಯರ್ ಪದ್ಮಿನಿ ಸಿನಿಮಾದಲ್ಲೂ ಪ್ರಮೋದ್ ಅದ್ಭುತವಾಗಿಯೇ ನಟಿಸಿದ್ದರು. ಅದಕ್ಕೂ ಹಿಂದಿನ ಗೀತಾ ಬ್ಯಾಂಗಲ್ಸ್​ ಸ್ಟೋರ್ಸ್ ಚಿತ್ರದಲ್ಲಿ ಪ್ರಮೋದ್ ಒಳ್ಳೆ ನಟ ಅನಿಸಿಕೊಂಡರು.


Kannada Film Actor Pramod Panju New Project Updates
ಪ್ರಶಾಂತ್ ನೀಲ್ ಚಿತ್ರದಲ್ಲಿ ಪ್ರಮೋದ್ ನಟಿಸ್ತಿರೋದು ನಿಜಾನಾ?


ಪ್ರಶಾಂತ್ ನೀಲ್ ಚಿತ್ರದಲ್ಲಿ ಪ್ರಮೋದ್ ನಟಿಸ್ತಿರೋದು ನಿಜಾನಾ?
ಪ್ರಮೋದ್ ಪಂಜು ಈಗಾಗಲೇ ಒಂದಷ್ಟು ಸಿನಿಮಾ ಒಪ್ಪಿಕೊಂಡಿದ್ದಾರೆ. ಒಪ್ಪಿರೋ ಅಷ್ಟೂ ಸಿನಿಮಾಗಳು ಹೀರೋ ಪಾತ್ರಗಳೇ ಆಗಿವೆ. ಒಂದೊಂದು ಸಿನಿಮಾನೂ ಒಂದೊಂದು ವಿಭಿನ್ನ ಪಾತ್ರವೇ ಆಗಿವೆ.




ರತ್ನನ್​ ಪ್ರಪಂಚ ಚಿತ್ರ ಬಂದ್ಮೇಲೆ ಪ್ರಮೋದ್ ಬೇಡಿಕೆ ಹೆಚ್ಚಿದೆ. ಈ ಕಾರಣಕ್ಕೇನೆ ಉಡಾಳ್ ಬಾಬು ಖ್ಯಾತಿಯ ನಟ ಪ್ರಮೊದ್ ಪಂಜು ಇಂಡಸ್ಟ್ರೀಯ ಎಲ್ಲರ ಗಮನ ಸೆಳೆದಿದ್ದಾರೆ.
ಸಲಾರ್ ಸಿನಿಮಾದಲ್ಲಿ ಪ್ರಮೋದ್ ಪಾತ್ರ ಹೇಗಿರಲಿದೆ?


ಸಲಾರ್ ಸಿನಿಮಾದ ವಿಷಯಗಳು ದಿನವೂ ಒಂದಿಲ್ಲ ಒಂದು ಇದ್ದೇ ಇರುತ್ತವೆ. ಆದರೆ ಎಲ್ಲವೂ ಅಧಿಕೃತ ಸುದ್ದಿ ಅಂತ ಹೇಳೋದು ಕಷ್ಟ. ಎಲ್ಲವೂ Just a News ಆಗಿರುತ್ತವೆ. ಪ್ರಮೋದ್ ಪಂಜು ವಿಷಯದಲ್ಲೂ ಅದು Just a News ಆಗಿದಿಯೇ? ಅದರ ಬಗ್ಗೆ ಹೇಳುತ್ತವೆ.


Kannada Film Actor Pramod Panju New Project Updates
ಸಲಾರ್ ಸಿನಿಮಾದಲ್ಲಿ ಪ್ರಮೋದ್ ಪಾತ್ರ ಹೇಗಿರಲಿದೆ?


Just a News ಬಗ್ಗೆ ಪ್ರಮೋದ್ ಪಂಜು ಹೇಳಿದ್ದೇನು?
ನಟ ಪ್ರಮೋದ್ ಪಂಜು ನ್ಯೂಸ್-18 ಕನ್ನಡ ಡಿಜಿಟಿಲ್​ಗೆ ಈ ವಿಷಯಕ್ಕೆ ಸಂಬಂಧಿಸಿದಂತೆ ರಿಯಾಕ್ಟ್ ಮಾಡಿದ್ದಾರೆ. ಸದ್ಯ ಹರಿದಾಡುತ್ತಿರೋದು Just A News ಅಷ್ಟೆ. ಪ್ರೋಡಕ್ಷನ್ ಹೌಸ್​ ನಿಂದ ಯಾವುದು ಇನ್ನು ಕನ್ಫರ್ಮ್​ ಆಗಿಲ್ಲ. ಆದ ಕೂಡಲೇ ಅಧಿಕೃತ ಮಾಹಿತಿ ಕೊಡೋದಾಗಿ ಹೇಳಿದ್ದಾರೆ.


ಪ್ರಮೋದ್ ಪಂಜು ಇಲ್ಲಿವರೆಗೂ ಹಾಗೆ ಸುಮ್ಮನೆ ಮಾತನಾಡಿದ್ದು ಕಡಿಮೇನೆ. ಸಿನಿಮಾ ಮಾಹಿತಿಯನ್ನ ಪಕ್ಕಾ ಕೊಡ್ತಾರೆ. ಗಾಸಿಪ್ ಗೆ ಹೆಚ್ಚು ತಲೆಕೆಡಿಸಿಕೊಳ್ಳೋದಿಲ್ಲ. ಅವುಗಳಿಗೆ ಸೊಪ್ಪು ಹಾಕೋದಿಲ್ಲ ಬಿಡಿ.


ಸಲಾರ್ ಸಿನಿಮಾ ಅಂದ್ಮೇಲೆ ಕೊಂಚ ಸೀರಿಯಸ್​ ವಿಷಯವೇ ಆಗಿದೆ. ಇದರ ಬಗ್ಗೆ ಹಾಗೆ ಸುಮ್ನೆ ಹೇಳೋದು ಕಷ್ಟವೇ ಸರಿ. ಅದರಲ್ಲೂ ಪ್ರಶಾಂತ್ ನೀಲ್ ಅವರ ಸಿನಿಮಾ ಅನ್ನೋದು ಒಂದು ಕಡೆ ಆಗಿದೆ. ಇನ್ನೂ ಒಂದು ಕಡೆಗೆ ಅತಿ ದೊಡ್ಡ ಪ್ರೋಡಕ್ಷನ್ ಹೌಸ್ ಎಂಬುದು ಇದೆ.


ಇದನ್ನೂ ಓದಿ: Kannada Mata Film Controversy: ಮಠ ಚಿತ್ರದ ಸುತ್ತ ವಿವಾದದ ಹುತ್ತ! ಟ್ರೈಲರ್ ನೋಡಿ ಫುಲ್ ಗರಂ ಆಗಿದ್ಯಾಕೆ ಕಾಳಿ ಸ್ವಾಮಿ?


ಪ್ರಶಾಂತ್ ನೀಲ್ ತಮ್ಮ ಈ ಚಿತ್ರದಲ್ಲಿ ಕನ್ನಡದ ಕಲಾವಿದರಿಗೂ ಚಾನ್ಸ್ ಕೊಟ್ಟಿದ್ದಾರೆ. ಆ ವಿಷಯದಲ್ಲಿ ಯಾರೆಲ್ಲ ಇದ್ದಾರೆ ಅನ್ನೋದು ಕೂಡ ಅಷ್ಟೇ ವಿಶೇಷವೆ ಆಗಿದೆ. ಇನ್ನು ಈಗ ಪ್ರಮೋದ್ ಪಂಜು ವಿಷಯ ಹರಿದಾಡುತ್ತಿದೆ ಅಷ್ಟೆ.

First published: