ಕನ್ನಡದಲ್ಲಿ ಕಾಂತಾರ (Kantara Film) ಮೋಡಿ ಇನ್ನೂ ಇದೆ. ಈ ಚಿತ್ರದ ಕ್ರೇಜ್ ಎಲ್ಲ ಕಾಲಕ್ಕೂ ಇರುತ್ತದೆಯೋ ಏನೋ. ಅಷ್ಟು ಪ್ರಭಾವ ಬೀರಿದೆ. ಸಿನಿಮಾ ಬಂದು
ಹೆಚ್ಚು ಕಡಿಮೆ ಮೂರ್ನಾಲ್ಕು ತಿಂಗಳೇ ಕಳೆದಿದೆ. ಈ ನಡುವೇನೆ ರಿಷಬ್ (Rishab Shetty) ಶೆಟ್ರ ಮುಂದಿನ ಸಿನಿಮಾ ಯಾವುದು ಅನ್ನೋ ಕುತೂಹಲದ ಕೂಡ ಇದೆ. ಅದಕ್ಕೆ ಶೀಘ್ರದಲ್ಲಿಯೇ ಉತ್ತರ ಸಿಗೋ ಸಾಧ್ಯತೆನೂ ಇದೆ. ಆದರೆ ಅದಕ್ಕೂ ಮೊದಲೇ, ಈಗೊಂದು ಸುದ್ದಿ (Hostel Hudugaru Bekagiddare) ಹೊರ ಬಿದ್ದಿದೆ. ರಿಷಬ್ ಶೆಟ್ರು ಈಗಾಗಲೇ ಒಂದು ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ರಿಷಬ್ (Kantara Director) ಶೆಟ್ರ ಜೊತೆಗೆ ಇನ್ನೂ ಒಬ್ಬ ಶೆಟ್ರು ಇದ್ದಾರೆ. ಇವರಲ್ಲದೇ ಈ ನಟರ ಜೊತೆಗೆ ಫೇಮಸ್ ಡೈರೆಕ್ಟರ್ ಒಬ್ಬರು ಅಭಿನಯಿಸಿದ್ದಾರೆ. ಈ ವಿಶೇಷ ಮಾಹಿತಿ ಇಲ್ಲಿದೆ.
ರಿಷಬ್ ಶೆಟ್ರು ಆ ಒಂದು ಸಿನಿಮಾದಲ್ಲಿ ಅಭಿನಯಿಸಿ ಆಗಿದೆ?
ಕನ್ನಡದ ಕಾಂತಾರ ಸಿನಿಮಾದ ರಿಷಬ್ ಶೆಟ್ರ ಮುಂದಿನ ಸಿನಿಮಾ ಯಾವುದು.? ಈ ಒಂದು ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.
ಅದರ ಬಗ್ಗೆ ಕುತೂಹಲ ಅಂತೂ ಜಾಸ್ತಿನೇ ಇದೆ. ಅದು ಇರೋವಾಗ್ಲೇ ಈಗೊಂದು ಸುದ್ದಿ ಹೊರ ಬಿದ್ದಿದೆ. ಬಲ್ಲ ಮೂಲಗಳ ಪ್ರಕಾರ ಈ ಮಾಹಿತಿ ಪಕ್ಕಾನೇ ಆಗಿದೆ.
ರಿಷಬ್ ಶೆಟ್ಟಿ ಅಭಿನಯದ ಚಿತ್ರದಲ್ಲಿ ಶೈನ್ ಶೆಟ್ಟಿ
ರಿಷಬ್ ಶೆಟ್ರು ಕಾಂತಾರ ಸಿನಿಮಾ ಬಳಿಕ ಒಂದು ಚಿತ್ರ ಒಪ್ಪಿಕೊಂಡಿದ್ದಾರೆ. ಆ ಚಿತ್ರದಲ್ಲಿ ಶೆಟ್ರಿಗೆ ಇನ್ನೂ ಒಬ್ಬ ಶೆಟ್ರು ಸಾಥ್ ಕೊಟ್ಟಿದ್ದಾರೆ. ಈ ಇಬ್ಬರು ಶೆಟ್ರ ನಡುವೆ ಕನ್ನಡದ ನಿರ್ದೇಶಕ ಲೂಸಿಯಾ ಪವನ್ ಕೂಡ ಇದ್ದಾರೆ.
ರಿಷಬ್ ಶೆಟ್ರ ಜೊತೆಗೆ ಶೈನ್ ಶೆಟ್ಟಿ ಕೂಡ ಕನ್ನಡದ ಈ ಒಂದು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಇವರ ಚಿತ್ರೀಕರಣ ಕೂಡ ಪೂರ್ಣ ಆಗಿದೆ. ಮೂಲಗಳ ಪ್ರಕಾರ ಇವರ ಪಾತ್ರಗಳು ವಿಶೇಷವಾಗಿಯೇ ಇವೆ.
ರಿಷಬ್-ಶೈನ್-ಪವನ್ ಪಾತ್ರಗಳು ಹೇಗಿವೆ?
ರಿಷಬ್ ಶೆಟ್ಟಿ, ಶೈನ್ ಶೆಟ್ಟಿ ಹಾಗೂ ಲೂಸಿಯಾ ಪವನ್ ಈ ಚಿತ್ರದಲ್ಲಿ ವಿಶೇಷ ಪಾತ್ರಗಳನ್ನೆ ಮಾಡಿದ್ದಾರೆ. ಈ ಪಾತ್ರಗಳನ್ನ ಕ್ಯಾಮೆಯೋ ರೋಲ್ ಅಂತಲೇ ಹೇಳಬಹುದು. ಅಂದ್ಹಾಗೆ ಆ ಚಿತ್ರ ಯಾವುದು ಅಂತಿರೋ ಇಲ್ಲಿದೆ ಓದಿ ಆ ಮಾಹಿತಿ.
ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರದಲ್ಲಿ ಕ್ಯಾಮಿಯೋ ರೋಲ್!
ಹೌದು, ಕನ್ನಡದ ಅದರಲ್ಲೂ ಹೊಸಬರ ಚಿತ್ರದಲ್ಲಿ ರಿಷಬ್ ಶೆಟ್ಟಿ ಅಭಿನಯಿಸಿದ್ದಾರೆ. ರಿಷಬ್ ಅಲ್ಲದೇ, ಶೈನ್ ಶೆಟ್ಟಿ ಮತ್ತು ಲೂಸಿಯಾ ಪವನ್ ಕೂಡ ಈ ಚಿತ್ರದಲ್ಲಿ ಕ್ಯಾಮೆಯೋ ರೋಲ್ ಮಾಡಿದ್ದಾರೆ
ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಯಾವಾಗ ರಿಲೀಸ್
ಕನ್ನಡದ ಹೊಸಬರ ಈ ಚಿತ್ರದ ಬಹುತೇಕ ಕೆಲಸ ಪೂರ್ಣ ಆಗಿದೆ. ಪ್ರಮೋಷನ್ ಕೂಡ ಶುರು ಆಗಿದೆ. ಕನ್ನಡದ ಬಹುತೇಕ ಕಲಾವಿದರು ಈ ಚಿತ್ರಕ್ಕೆ ಸಪೋರ್ಟ್ ಮಾಡಿದ್ದಾರೆ. ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಕೂಡ ಚಿತ್ರಕ್ಕೆ ಸಾಥ್ ಕೊಟ್ಟಿದ್ದಾರೆ.
ನಿತಿನ್ ಕೃಷ್ಣಮೂರ್ತಿ ನಿರ್ದೇಶನದ ಈ ಚಿತ್ರ ಶೀಘ್ರದಲ್ಲಿಯೇ ರಿಲೀಸ್ ಡೇಟ್ ಕೂಡ ಅನೌನ್ಸ್ ಆಗುತ್ತದೆ. ಗುಲ್ಮೋರ್ ಫಿಲ್ಮ್ಸ್ ಹಾಗೂ ವರುಣ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿಯೇ ಚಿತ್ರ ನಿರ್ಮಾಣಗೊಂಡಿದೆ. ಚಿತ್ರಕ್ಕೆ ವಿಭಿನ್ನ ಪ್ರಮೋಷನ್ ಮೂಲಕ ಈಗಾಗಲೇ ಗಮನ ಕೂಡ ಸೆಳೆಯುತ್ತಿದೆ.
ಇದನ್ನೂ ಓದಿ: Kannada Actress Tara: ಬೆಂಗಳೂರಿನ ಶಾರದಾ ಥಿಯೇಟರ್ ಅಂದ್ರೆ ತಾರಾಗೆ ತುಂಬಾ ಸ್ಪೆಷಲ್! ಯಾಕೆ?
ಹಾಸ್ಟೆಲ್ ಹುಡುಗರು ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ
ಹೊಸಬರ ಈ ಚಿತ್ರಕ್ಕೆ ಕಾಂತಾರ ಚಿತ್ರದ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಸಂಗೀತ ಕೊಟ್ಟಿದ್ದಾರೆ. ಹಾಗೇನೆ ಅಜನೀಶ್ ಅವರ ಬಗ್ಗೇನೂ ಸಿನಿಮಾ ತಂಡ ವಿಶೇಷವಾಗಿಯೇ ಹೇಳಿಕೊಂಡಿತ್ತು. ಆ ಒಂದು ವೀಡಿಯೋ ಕೂಡ ಅಷ್ಟೇ ವೈರಲ್ ಆಗಿತ್ತು,
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ