ಡಾಕ್ಟರ್ ರಾಜಕುಮಾರ್ (Dr Rajkumar) ಅವರ ಜೊತೆಗೆ ಇಡೀ ಚಿತ್ರ ಜೀವನದಲ್ಲಿ ಇಬ್ಬರು ಹಾಸ್ಯ ಕಲಾವಿದರು ಸಾಥ್ ಕೊಟ್ಟಿದ್ದರು. ನರಸಿಂಹ ರಾಜು ಅವರು ಇಲ್ಲದೇ ಇದ್ರೇ, ರಾಜ್ ಸಿನಿಮಾಗಳೇ ಇರುತ್ತಿರಲಿಲ್ಲವೇನೋ ಅನ್ನೋ ಮಟ್ಟಿಗೆ ರಾಜ್-ನರಸಿಂಹ ರಾಜು ಜೋಡಿ ಮೋಡಿ ಮಾಡಿತ್ತು. ಇದಕ್ಕೂ ಮೊದ್ಲು ಬಾಲಣ್ಣ (Kannada Actor Balakrishna) ಮತ್ತು ರಾಜ್ ಜೋಡಿಗೂ ಅದರದ್ದೇ ಆದ ಮಹತ್ವ ಇತ್ತು. ರಾಜ್ ಸಿನಿಮಾಗಳಲ್ಲಿ ಬಾಲಣ್ಣ ಇರಲೇಬೇಕು. ಅಷ್ಟು ಫೇಮಸ್ ಆಗಿತ್ತು ಈ ಜೋಡಿ ಕೂಡ. ಇಂತಹ ಬಾಲಣ್ಣ (Kannada Film Actor Balakrishna) ಮತ್ತು ರಾಜ್ ನಡುವೆ ಒಳ್ಳೆ ಸ್ನೇಹ ಇತ್ತು. ಅದ್ಭುತ ಅನ್ನುವ ಗುರು-ಶಿಷ್ಯರ ಬಾಂಧವ್ಯ ಇತ್ತು. ಬಾಲಣ್ಣನ ಬಗ್ಗೆ ರಾಜ್ (Rajkumar) ಮಾತಿನಲ್ಲಿಯೇ ಕೇಳಬೇಕು. ಅಷ್ಟೊಂದು ಗೌರವದಿಂದಲೇ ರಾಜ್ ಕುಮಾರ್ ಅವರು ಬಾಲಣ್ಣನ ಬಗ್ಗೆ ಹೇಳುತ್ತಿದ್ದರು.
ಬಾಲಣ್ಣ ಮತ್ತು ರಾಜ್ ಗುಬ್ಬಿ ಕಂಪನಿಯಲ್ಲಿದವ್ರು!
ಹಿರಿಯ ನಟ ಬಾಲಕೃಷ್ಣ ಅವ್ರು ಮತ್ತು ರಾಜಕುಮಾರ್ ಅವ್ರು ಒಟ್ಟಿಗೆ ಕೆಲಸ ಮಾಡಿದವ್ರು. ಒಂದೇ ನಾಟಕ ಕಂಪನಿಯಲ್ಲಿದ್ದವ್ರು. ಅಂದಿನ ಹೆಸರಾಂತ ನಾಟಕ ಕಂಪನಿ ಆಗಿದ್ದ ಗುಬ್ಬಿ ಕಂಪನಿಯಲ್ಲಿಯೇ ರಾಜ್ ಮತ್ತು ಬಾಲಣ್ಣ ಜೊತೆ ಜೊತೆಯಾಗಿಯೇ ಕೆಲಸ ಮಾಡಿದ್ದರು.
ಅಂತಹ ಬಾಲಕೃಷ್ಣ ಅವರ ಬಗ್ಗೆ ರಾಜ್ ಅವರಿಗೆ ಅಪಾರ ಗೌರ ಮತ್ತು ಪ್ರೀತಿ ಇತ್ತು. ಅದಕ್ಕೂ ಹೆಚ್ಚಾಗಿಯೇ ಗುರು ಅನ್ನುವ ಗೌರವವೂ ಇತ್ತು. ಡಾಕ್ಟರ್ ರಾಜಕುಮಾರ್ ಅವರಿಗೆ ಅಕ್ಷರ ಅಭ್ಯಾಸ ಮಾಡಿಸಿರೋದು ಬೇರೆ ಯಾರೋ ಅಲ್ಲ. ಅದೇ ಈ ಬಾಲಣ್ಣನವ್ರೇ ಅನ್ನೋದು ಅಷ್ಟೇ ಸತ್ಯ.
ಬಾಲಣ್ಣ ಮತ್ತು ರಾಜ್ ನಡುವೆ ಬಹಳ ವರ್ಷಗಳ ನಂಟು!
ಬಾಲಕೃಷ್ಣ ಅವರು ರಾಜ್ ಫ್ಯಾಮಿಲಿಗೆ ಗೊತ್ತಿರೋ ವ್ಯಕ್ತಿನೆ ಆಗಿದ್ದರು. ಈ ಹಿನ್ನೆಲೆಯಲ್ಲಿಯೇ ರಾಜ್ ಕುಮಾರ್ ಅವರಿಗೂ ಆತ್ಮೀಯ ಗುರುಗಳೇ ಆಗಿದ್ದರು. ಇವರ ಗುರು ಮತ್ತು ಶಿಷ್ಯರ ಸಂಬಂಧ ದಿನಗಳದಂತೆ ಸ್ನೇಹ ಸಂಬಂಧವಾಗಿಯೇ ಬದಲಾಯಿತು. ಹಾಗೆ ರಾಜಕುಮಾರ್ ಹಾಗೂ ಬಾಲಣ್ಣ ಆತ್ಮೀಯವಾಗಿಯೇ ಇದ್ದರು. ಇವರ ಆತ್ಮೀಯತೆ ಇರೋವರೆಗೂ ಇತ್ತು.
ವೀರ ಕೇಸರಿ ಚಿತ್ರದ ಬಾಲಣ್ಣನ ಪಾತ್ರವನ್ನ ನೆನೆದು ನಕ್ಕು ಬಿಡ್ತಾರೆ ರಾಜಕುಮಾರ್. ಹೌದು, ರಾಜಕುಮಾರ್ ಮತ್ತು ಬಾಲಣ್ಣ ಅಭಿನಯದ ವೀರ ಕೇಸರಿ ಸಿನಿಮಾದಲ್ಲಿ ಸಾಕಷ್ಟು ಹಾಸ್ಯಮಯ ಸೀನ್ಗಳಿವೆ. ಬಾಲಣ್ಣ ಈ ಚಿತ್ರದಲ್ಲಿ ಒಬ್ಬ ಯೋಧನಾಗಿ ಅಭಿನಯಿಸಿದ್ದಾರೆ.
ಬಾಲಣ್ಣನ ಪಾತ್ರಕ್ಕೆ ಬಿದ್ದು ಬಿದ್ದು ನಗ್ತಾರೆ ರಾಜ್!
ವೀರ ಕೇಸರಿ ಚಿತ್ರದ ಬಾಲಣ್ಣನ ಪಾತ್ರ ಸಿಕ್ಕಾಪಟ್ಟೆ ನಗಿಸುತ್ತದೆ. ಇದರ ಬಗ್ಗೆ ರಾಜಕುಮಾರ್ ಅಷ್ಟೇ ವಿಶೇಷವಾಗಿಯೇ ಹೇಳಿಕೊಂಡಿದ್ದರು. ಬಾಲಣ್ಣ ಯೋಧನಾಗಿದ್ದರೂ ತಮ್ಮದೇ ಶೈಲಿಯಲ್ಲಿ ನಗಿಸುತ್ತಿದ್ದರು ಅಂತಲೇ ರಾಜ್ ಹೇಳಿಕೊಂಡಿದ್ದರು.
ಮುದುಕಿ ಪಾತ್ರದಲ್ಲಿ ಬಾಲಣ್ಣ ಅಮೋಘ-ರಾಜ್
ಬಾಲಣ್ಣ ಮುದುಕಿ ಪಾತ್ರವನ್ನ ಅದ್ಭುತವಾಗಿಯೇ ಮಾಡುತ್ತಿದ್ದರು. ಗುಬ್ಬಿ ಕಂಪನಿಯಲ್ಲಿದ್ದಾಗ ಇಲ್ಲಿ ಆ ಪಾತ್ರ ನಿರ್ವಹಿಸುತ್ತಿದ್ದರು. ಇದನ್ನ ಕಣ್ಣಾರೆ ಕಂಡ ರಾಜಕುಮಾರ್ ಅವರು ಬಾಲಣ್ಣನ ಡೆಡಿಕೇಷನ್ ಅನ್ನ ಬಹುವಾಗಿಯೇ ಮೆಚ್ಚಿಕೊಂಡಿದ್ದರು.
ಬಾಲಣ್ಣನ ಅದ್ಭುತ ನಟ ಅಂತ ಎಲ್ಲರಿಗೂ ಗೊತ್ತಿದೆ. ಅದೇ ಅದ್ಭುತ ನಟ ಕಲಿಕೆಯ ವಿಷಯದಲ್ಲಿ ಎಂದು ಹಿಂದೆ ಬಿದ್ದವರಲ್ಲ. ಅಭಿನಯದಲ್ಲಿ ಸಾಕಷ್ಟು ಅನುಭವ ಇದ್ದರೂ ಕೂಡ, ಬಾಲಣ್ಣ ಇನ್ನೂ ಕಲಿಯಬೇಕು ಅನ್ನೋ ಮನಸ್ಥಿತಿಯನ್ನೆ ಹೊಂದಿದ್ದರು.
ಇಂತಹ ಬಾಲಣ್ಣ ರಂಗಭೂಮಿಯಲ್ಲಿದ್ದಾಗ ಮುದುಕಿ ಪಾತ್ರವನ್ನೂ ಮಾಡುತ್ತಿದ್ದರು.
ಅದಕ್ಕಾಗಿಯೇ ಗಂಟೆಗಟ್ಟಲೆ ರೆಡಿ ಆಗುತ್ತಿದ್ದರು. ಹಾಗೆ ಬಾಲಣ್ಣ ರೆಡಿ ಆಗಿ ಬಂದ್ರೆ ಮುಗಿತು. ಯಾರೂ ಅವರನ್ನ ಗುರುತು ಹಿಡಿಯೋಕೆ ಆಗುತ್ತಿರಲಿಲ್ಲ. ಅಷ್ಟು ಪಕ್ಕಾ ಆಗಿಯೇ ಬಾಲಣ್ಣ ಮುದುಕಿ ಪಾತ್ರವೇ ಆಗಿ ಬಿಡುತ್ತಿದ್ದರು.
ಇದನ್ನೂ ಓದಿ: Kantara: ಕಾಮಿಡಿ ಆಗೋಯ್ತಾ ಪಂಜುರ್ಲಿ ದೈವದ ಕೂಗು? ಕಾಂತಾರ ನೋಡಿದ್ಮೇಲೆ ಏನ್ ಆಗ್ತಿದೆ ಈ ಜನರಿಗೆ?
ಇಂತಹ ಬಾಲಣ್ಣ ಮತ್ತು ರಾಜ್ ಇಬ್ಬರೂ ಈಗೀಲ್ಲ. ಆದರೆ ಇವರ ನಡೆದು ಬಂದ ಹಾದಿ, ಅಭಿನಯಸಿದ ಸಿನಿಮಾಗಳು ಇನ್ನೂ ಇವೆ. ಇವರು ಮಾತಾಡಿರೋ ವೀಡಿಯೋಗಳೂ ಇನ್ನೂ ಇವೆ. ಆ ಮಾತುಗಳನ್ನ ಕೇಳ್ತಾ ಹೋದ್ರೆ, ರಾಜ್ ದಿ ಗ್ರೇಟ್ ಅಂತ ಹೇಳಲೇಬೇಕು ಅನಿಸುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ