ಸ್ಯಾಂಡಲ್ವುಡ್ನಲ್ಲಿ ಪ್ರತಿ (Sandalwood Movies) ಹಬ್ಬಕ್ಕೂ ಒಂದಿಲ್ಲ ಒಂದು ಚಿತ್ರ ಅನೌನ್ಸ್ ಆಗುತ್ತದೆ. ಇಲ್ಲವೇ ಆಯಾ ನಿರ್ಮಾಪಕರು ತಮ್ಮ ನಾಯಕನ ಮುಂದಿನ ಸಿನಿಮಾದ ಬಗ್ಗೆ ಪ್ರೋಡಕ್ಷನ್ ನಂಬರ್ ಹಾಕಿ ಚಿತ್ರದ ಕುರಿತು ಸಣ್ಣ ಮಾಹಿತಿ ಕೊಡುತ್ತಾರೆ. ಈ ವರ್ಷದ ಶಿವರಾತ್ರಿ (Shivaratri Special) ಹಬ್ಬಕ್ಕೂ ಒಂದಷ್ಟು ವಿಶೇಷ ಸುದ್ದಿ ಹೊರ ಬಿದ್ದಿವೆ. ಎಂದಿನಂತೆ ಒಂದಷ್ಟು ನಿರ್ದೇಶಕರು ಮತ್ತು ನಿರ್ಮಾಪಕರು ತಮ್ಮ ಚಿತ್ರದ ಪೋಸ್ಟರ್ ಮೂಲಕ ಶಿವರಾತ್ರಿ (Shivanna Movie) ಹಬ್ಬದ ಶುಭಾಷಯ ತಿಳಿಸಿದ್ದಾರೆ. ಆದರೆ ಶಿವರಾಜ್ ಕುಮಾರ್ ಅವರು ದೊಡ್ಡ ಅನೌನ್ಸ್ಮೆಂಟ್ವೊಂದನ್ನ ಮಾಡಿದ್ದಾರೆ. ವೀರಂ ಚಿತ್ರದ ಸಂಗೀತ ನಿರ್ದೇಶಕ ಅನೂಪ್ ಸೀಳಿನ್ (Anoop Seelin) ಶಿವನ ಮೇಲೆ ಒಂದು ಹಾಡನ್ನ ಹಾಡಿದ್ದು ಈ ಎಲ್ಲ ವಿಷಯದ ಒಟ್ಟು ಚಿತ್ರಣ ಕೊಡುವ ಸ್ಟೋರಿ ಇಲ್ಲಿದೆ.
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 126ನೇಯ ಸಿನಿಮಾ ಶಿವರಾತ್ರಿ ದಿನವೇ ಅನೌನ್ಸ್ ಆಗಿದೆ. ವಿಶೇಷವಾಗಿ ಚಿತ್ರವನ್ನ ಶಿವರಾಜ್ ಕುಮಾರ್ ಅವರ ಗೀತಾ ಪಿಕ್ಚರ್ಸ್ ಮೂಲಕವೇ ನಿರ್ಮಿಸಲಾಗುತ್ತಿದೆ.
ಭೈರತಿ ರಣಗಲ್ ಚಿತ್ರದ ಅಧಿಕೃತ ಅನೌನ್ಸ್ಮೆಂಟ್!
ಗೀತಾ ಪಿಕ್ಚರ್ಸ್ನ ಈ ಎರಡನೇ ಕಾಣಿಕೆಯನ್ನ ಮಫ್ತಿ ಡೈರಕ್ಟರ್ ನರ್ತನ್ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರಕ್ಕೆ ಭೈರತಿ ರಣಗಲ್ ಅಂತ ಶೀರ್ಷಿಕೆ ಇಡಲಾಗಿದೆ.
ವಿಶೇಷವೆಂದ್ರೆ ಈ ಚಿತ್ರ ಮಫ್ತಿ ಚಿತ್ರದ ಪ್ರಿಕ್ವೆಲ್ ಆಗಿದೆ. ಇಲ್ಲಿವರೆಗೂ ಮಫ್ತಿ-2 ಚಿತ್ರ ಬರುತ್ತದೆ ಅಂತಲೇ ಹೇಳಲಾಗಿತ್ತು. ಆದರೆ ಈಗ ಎಲ್ಲವೂ ರಿವೀಲ್ ಆಗಿದ್ದು, ಈ ವರ್ಷವೇ ಚಿತ್ರ ಆರಂಭಗೊಳ್ಳಲಿದೆ.
ಶಿವರಾತ್ರಿಗೆ ಶಿವನ ಹಾಡು ಹಾಡಿದ ಅನೂಪ್ ಸೀಳಿನ್
ಇನ್ನು ಶಿವರಾತ್ರಿ ದಿನ ವೀರಂ ಚಿತ್ರದ ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ವಿಶೇಷವಾಗಿಯೇ ಶಿವರಾತ್ರಿ ಹಬ್ಬಕ್ಕೆ ಶುಭಾಷಯ ತಿಳಿಸಿದ್ದಾರೆ. ತಮ್ಮ ಕಂಠಸಿರಿಯಲ್ಲಿ ಶಿವನ ಹಾಡನ್ನ ಹಾಡಿ ಶಿವರಾತ್ರಿ ಹಬ್ಬಕ್ಕೆ ನಾಡಿನ ಜನತೆಗೆ ಶುಭಾಶಯ ಹೇಳಿದ್ದಾರೆ.
ರಾಗಿಣಿ ಮನೆಯಲ್ಲಿ ಮಹಾದೇವನ ಮಹಾ ಪೂಜೆ!
ತುಪ್ಪದ ಹುಡುಗಿ ರಾಗಿಣಿ ದ್ವಿವೇದಿ ತಮ್ಮ ಮನೆಯಲ್ಲಿಯೇ ಶಿವರಾತ್ರಿ ಹಬ್ಬಕ್ಕೆ ವಿಶೇಷ ಹೋಮ ಮಾಡಿಸಿದ್ದಾರೆ. ರಾಗಿಣಿ ಅವರ ತಂದೆ ಕೂಡ ಈ ಒಂದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ರಾಗಿಣಿ ಕೂಡ ಈ ವೇಳೆ ತಂದೆಗೆ ಸಾಥ್ ಕೊಟ್ಟಿದ್ದಾರೆ.
ಆ್ಯಕ್ಷನ್ ಪ್ರಿನ್ಸ್ KD ಚಿತ್ರದ ಶಿವರಾತ್ರಿ ಶುಭಾಷಯ ಹೇಗಿದೆ ಗೊತ್ತೇ?
ಜೋಗಿ ಚಿತ್ರ ಖ್ಯಾತಿಯ ನಿರ್ದೇಶಕ ಜೋಗಿ ಪ್ರೇಮ್, ತಮ್ಮ ನಿರ್ದೇಶನದ ಮುಂದಿನ KD ಚಿತ್ರದ ಒಂದು ಪೋಸ್ಟರ್ ಶೇರ್ ಮಾಡಿದ್ದಾರೆ. ಈ ಮೂಲಕ ನಾಡಿನ ಜನತೆಗೆ ಶಿವರಾತ್ರಿ ಹಬ್ಬದ ಶುಭಾಶಯವನ್ನ ತಿಳಿಸಿದ್ದಾರೆ.
ರಿಯಲ್ ಸ್ಟಾರ್ ಉಪೇಂದ್ರ ಡಿಫರಂಟ್ ಶಿವರಾತ್ರಿ ಶುಭಾಶಯ
ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಯುಐ ಚಿತ್ರ ತಂಡವೂ ಸ್ಪೆಷಲ್ ಆಗಿಯೇ ಪೋಸ್ಟರ್ ಡಿಸೈನ್ ಮಾಡಿದೆ. ಈ ಮೂಲಕ ಶಿವರಾತ್ರಿ ಹಬ್ಬವನ್ನ ಸೆಲೆಬ್ರೇಟ್ ಮಾಡಿದೆ.
ಈ ಒಂದು ವಿಶೇಷ ಡಿಸೈನ್ಡ್ ಪೋಟೋವನ್ನ ರಿಯಲ್ ಸ್ಟಾರ್ ಉಪೇಂದ್ರ ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್ನಲ್ಲೂ ಹಂಚಿಕೊಂಡಿದ್ದಾರೆ.
ಶಿವರಾತ್ರಿ ದಿನವೇ ಭೈರಾದೇವಿ ಪ್ರಚಾರ ಶುರು
ರಾಧಿಕಾ ಕುಮಾರಸ್ವಾಮಿ ಅಭಿನಯದ ಭೈರಾದೇವಿ ಚಿತ್ರದ ವಿಶೇಷ ಟೀಸರ್ ಕೂಡ ಇದೇ ದಿನ ರಿಲೀಸ್ ಆಗಿದೆ. ರಾಧಿಕಾ ನಿರ್ವಹಿಸಿರೋ ಬೈರಾದೇವಿಯ ಪಾತ್ರದ ಝಲಕ್ ಇರೋ ಪುಟ್ಟ ವಿಡಿಯೋ ಈಗ ಗಮನ ಸೆಳೆಯುತ್ತಿದೆ.
ಇಂದಿನಿಂದಲೇ ಬೈರಾದೇವಿ ಚಿತ್ರ ಪ್ರಮೋಷನ್ ಕೂಡ ಶುರು ಆಗಿದೆ. ಅತಿ ಶೀಘ್ರದಲ್ಲಿ ಸಿನಿಮಾ ಕೂಡ ರಿಲೀಸ್ ಆಗುತ್ತಿದೆ.
ಇದನ್ನೂ ಓದಿ: Paavana Gowda: ಬೊಂಬೆಗಳ ಲವ್ ಚಿತ್ರ ಖ್ಯಾತಿಯ ಪಾವನಾ ಹೊಸ ಅವತಾರ್! ಗೌಳಿ ಚಿತ್ರದಲ್ಲಿ ಇವರ ಪಾತ್ರವೇನು?
ಹೀಗೆ ಕನ್ನಡದ ಸಿನಿಮಾ ತಾರೆಯರು ತಮ್ಮ ತಮ್ಮ ಚಿತ್ರಗಳ ಮೂಲಕ ಎಲ್ಲರಿಗೂ ಶಿವರಾತ್ರಿ ಹಬ್ಬದ ಶುಭಾಶಯಗಳನ್ನ ತಿಳಿಸಿದ್ದಾರೆ. ಜೊತೆಗೆ ತಮ್ಮ ಚಿತ್ರಗಳ ವಿಶೇಷತೆಗಳ ಝಲಕ್ ಕೂಡ ತೋರಿದ್ದಾರೆ ಅಂತಲೇ ಹೇಳಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ